ಗುರ್ ದಾಸ್ಪುರ್ ಅಭ್ಯರ್ಥಿ ಸನ್ನಿ ಡಿಯೋಲ್ ಆಸ್ತಿ ವಿವರ
ಪಂಜಾಬಿನ ಗುರುದಾಸಪುರ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಪಡೆದು ಸ್ಪರ್ಧಿಸುತ್ತಿರುವ ನಟ ಸನ್ನಿ ಡಿಯೋಲ್ ಅವರು ಇಂದು ನಾಮಪತ್ರ ಸಲ್ಲಿಸಿದರು. ಸನ್ನಿ ಡಿಯೋಲ್ ಆಸ್ತಿ ವಿವರ ಇಲ್ಲಿದೆ.
ಈ ಕ್ಷೇತ್ರವನ್ನು ಸಂಸದರಾಗಿ ಹಿರಿಯ ನಟ ವಿನೋದ್ ಖನ್ನಾ ಪ್ರತಿನಿಧಿಸುತ್ತಿದ್ದರು. ವಿನೋದ್ ಖನ್ನಾ ನಿಧನ ನಂತರ ನಡೆದ 2017ರ ಉಪ ಚುನಾವಣೆಯಲ್ಲಿ ಗೆದ್ದ ಕಾಂಗ್ರೆಸ್ಸಿನ ಸುನಿಲ್ ಜಖಾರ್ ಹಾಲಿ ಸಂಸದರಾಗಿದ್ದಾರೆ.
ವಿನೋಡ್ ಖನ್ನಾ ಅವರು 1998, 1999, 2004 ಹಾಗೂ 2014ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ವಿನೋದ್ ಖನ್ನಾ ಗೆಲುವು ಸಾಧಿಸಿದ್ದರು. 2017ರಲ್ಲಿ ಸುನಿಲ್ ಅವರು ಬಿಜೆಪಿ ಅಭ್ಯರ್ಥಿ ಸ್ವರನ್ ಸಲಾರಿಯಾ ಅವರನ್ನು 1,93,219 ಅಂತರರಿಂದ ಸೋಲಿಸಿದ್ದರು.
62 ವರ್ಷ ವಯಸ್ಸಿನ ಅಜಯ್ ಸಿಂಗ್ ಧರ್ಮೇಂದ್ರ ಡಿಯೋಲ್ ಅಲಿಯಾಸ್ ಸನ್ನಿ ಡಿಯೋಲ್ ಅವರು ಸೋಮವಾರ (ಏಪ್ರಿಲ್ 29) ದಂದು ನಾಮಪತ್ರ ಸಲ್ಲಿಸುವುದಕ್ಕೂ ಮುನ್ನ ಅಮೃತ್ ಸರ್ ನಲ್ಲಿರುವ ಗೋಲ್ಡನ್ ಟೆಂಪಲ್ ಗೆ ಭೇಟಿ ನೀಡಿದರು.
ನಂತರ ಅಮೃತ್ ಸರದಿಂದ 75 ಕಿ.ಮೀ ದೂರದಲ್ಲಿರುವ ಗುರ್ ದಾಸ್ಪುರ್ ಗೆ ತೆರಳಿ, ನಾಮಪತ್ರ ಸಲ್ಲಿಸಿದರು.

ಪಂಜಾಬಿನ ಗುರುದಾಸಪುರ ಕ್ಷೇತ್ರ
ಕಾಂಗ್ರೆಸ್ಸಿನ ಸುನಿಲ್ ಜಖಾರ್ ಹಾಗೂ ಆಮ್ ಆದ್ಮಿ ಪಕ್ಷದಿಂದ ಪೀಟ್ರ್ ಮಸಿಹ್ ಹಾಗೂ ಪಂಜಾಬ್ ಡೆಮೊಕ್ರಾಟಿಕ್ ಅಲೈಯನ್ಸ್ (ಪಿಡಿಎ) ನಿಂದ ಲಾಲ್ ಚಂದ್ ಅವರು ಕಣದಲ್ಲಿದ್ದಾರೆ.ಪಂಜಾಬಿನಲ್ಲಿ ಶಿರೋಮಣಿ ಅಕಾಲಿ ದಳದ ಜತೆ ಮೈತ್ರಿ ಮಾಡಿಕೊಂಡಿರುವ ಬಿಜೆಪಿ ಒಟ್ಟು 13 ಲೋಕಸಭಾ ಸ್ಥಾನಗಳ ಪೈಕಿ ಅಮೃತಸರ್, ಗುರ್ ದಾಸ್ಪುರ್, ಹೋಶಿಯಾರ್ ಪುರ್ 3 ಕ್ಷೇತ್ರಗಳಲ್ಲಿ ಮಾತ್ರ ಸ್ಪರ್ಧಿಸುತ್ತಿದೆ.

ಸನ್ನಿ ಡಿಯೋಲ್ ಹೆಸರು ಅಜಯ್ ಸಿಂಗ್
ಹೆಸರು: ಅಜಯ್ ಸಿಂಗ್ ಧರ್ಮೇಂದ್ರ ಡಿಯೋಲ್ (ಸನ್ನಿ ಡಿಯೋಲ್)
ತಂದೆ: ಧರ್ಮೇಂದ್ರ ಡಿಯೋಲ್
ವಯಸ್ಸು : 62
ವಿಳಾಸ: ಧರ್ಮೇಂದ್ರ ಹೌಸ್, ಜುಹು, ವಿಲ್ಲೆ ಪರ್ಲೆ, ಅಂಧೇರಿ, ಮುಂಬೈ.
ಮತದಾನದ ಹಕ್ಕು : 165, ಅಂಧೇರಿ ವೆಸ್ಟ್ ಮುಂಬೈ ವಿಧಾನಸಭಾ ಕ್ಷೇತ್ರದಲ್ಲಿದೆ.
* ಮ್ಯಾಕ್.ಕಾಂ ನಲ್ಲಿ ಇಮೇಲ್ ಐಡಿ, 1 ಟ್ವಿಟ್ಟರ್, 1 ಫೇಸ್ ಬುಕ್, ಒಂದು ಇನ್ಸ್ಟಾಗ್ರಾಂ ಐಡಿ ಹೊಂದಿದ್ದಾರೆ.
* ಯಾವುದೇ ಕ್ರಿಮಿನಲ್ ಮೊಕದ್ದಮೆ ಎದುರಿಸುತ್ತಿಲ್ಲ.

ನಗದು, ಚರಾಸ್ತಿ ಮೌಲ್ಯ
ನಗದು:
26,00,000 ರು ಪತ್ನಿ ಲಿಂಡಾ ಹತ್ತಿರ 16,00,000 ರು
ಚರಾಸ್ತಿ ಮೌಲ್ಯ: 60,46,83,862 ರು, ಪತ್ನಿ ಹೆಸರಿನಲ್ಲಿ 5,72,23,917 ರು

ಸ್ಥಿರಾಸ್ತಿ ಮೌಲ್ಯ
ಸ್ಥಿರಾಸ್ತಿ ಮೌಲ್ಯ:
* ನಿವೇಶನ : 5,81,500 ರು
ಸ್ವಯಾರ್ಜಿತ ಆಸ್ತಿ : 21,00,17,900 ರು

ಆದಾಯ ತೆರಿಗೆ ಬಾಕಿ ಉಳಿಸಿಕೊಂಡಿಲ್ಲ.
ಸಾಲ : 49,30,51,405ರು, ಪತ್ನಿ : 1,66,39,550 ರು
* ಆದಾಯ ತೆರಿಗೆ ಬಾಕಿ ಉಳಿಸಿಕೊಂಡಿಲ್ಲ.
* ಜಿಎಸ್ಟಿ ಬಾಕಿ 1,07,35,580 ರು ಇದೆ
* ಒಟ್ಟಾರೆ, ಸರ್ಕಾರಕ್ಕೆ 2,49,53,830 ರು ಬಾಕಿ ನೀಡಬೇಕಿದೆ.
* ನಟ, ನಿರ್ಮಾಪಕನಾಗಿದ್ದು, ಬ್ಯಾಂಕ್ ಠೇವಣಿಯಿಂದಲೂ ಆದಾಯವಿದೆ ಎಂದಿದ್ದಾರೆ












Click it and Unblock the Notifications