'ಬಿಜೆಪಿ ಅಧಿಕಾರಕ್ಕೆ ಬಂದ್ರೆ ಮಾತ್ರ ನಿರುದ್ಯೋಗ ಸಮಸ್ಯೆ ನಿವಾರಣೆ'

ಭಾರತದಲ್ಲಿ ಉದ್ಯೋಗಾಕಾಂಕ್ಷಿಗಳ ಸಂಖ್ಯೆ ಇಳಿಮುಖವಾದರೂ ನಿರುದ್ಯೋಗ ಪ್ರಮಾಣ ಅಧಿಕವಾಗಿದೆ ಎಂದು 'ಸೆಂಟರ್‌ ಫಾರ್‌ ಮಾನಿಟರಿಂಗ್‌ ಇಂಡಿಯನ್‌ ಎಕಾನಮಿ (ಸಿಎಂಐಇ)' ಸಂಸ್ಥೆ ನೀಡಿದ್ದ ವರದಿಯಿಂದ ಮೋದಿ ಸರ್ಕಾರಕ್ಕೆ ಹಿನ್ನಡೆಯಾಗಿದ್ದರೂ ಸಿವೋಟರ್- ಐಎಎನ್ಎಸ್ ಸಮೀಕ್ಷೆಯಲ್ಲಿ ನಿರುದ್ಯೋಗಿಗಳು ಪ್ರಧಾನಿ ಮೋದಿ ಹಾಗೂ ಮೋದಿ ಸರ್ಕಾರದ ಕೈ ಹಿಡಿದಿದ್ದಾರೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಸಿವೋಟರ್ ಹಾಗೂ ಐಎಎನ್ಎಸ್ ಸುದ್ದಿಸಂಸ್ಥೆ ನಡೆಸಿರುವ ಇತ್ತೀಚಿನ ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ಪ್ರಧಾನಿ ಮೋದಿ ಅವರು ಮತ್ತೊಮ್ಮೆ ರಾಹುಲ್ ಅವರನ್ನು ಹಿಂದಿಕ್ಕಿದ್ದಾರೆ. ಆದರೆ, ಗೃಹಿಣಿಯರ ಪೈಕಿ ರಾಹುಲ್ ಗಾಂಧಿ ಜನಪ್ರಿಯತೆ ಹೆಚ್ಚಾಗಿದ್ದು, ಕಾಂಗ್ರೆಸ್ಸಿಗರಲ್ಲಿ ಹೊಸ ಹರ್ಷ ಮೂಡಿಸಿದೆ.

ಆದರೆ, ನಿರುದ್ಯೋಗ ಸಮಸ್ಯೆ ನಿವಾರಣೆಗೆ ಮತ್ತೊಮ್ಮೆ ಮೋದಿ ಪ್ರಧಾನಿ ಪ್ರಧಾನಿಯಾಗಬೇಕು ಹಾಗೂ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಬೇಕು ಎಂದು ಸಿ ವೋಟರ್ ಐಎಎನ್ಎಸ್ ಸಂಸ್ಥೆ ನಡೆಸಿದ ಸಮೀಕ್ಷೆಯಿಂದ ತಿಳಿದು ಬಂದಿದೆ.

ಏಪ್ರಿಲ್ 11 ರಿಂದ ಮೇ 19 ರ ತನಕ ಏಳು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಮೇ 23ರಂದು ಫಲಿತಾಂಶ ಹೊರ ಬರಲಿದೆ. ಈ ಬಾರಿಯ ಚುನಾವಣೆಯಲ್ಲಿ ನಿರುದ್ಯೋಗ ಸಮಸ್ಯೆ ಬಗ್ಗೆ ಎಲ್ಲಾ ಪಕ್ಷಗಳು ಹೆಚ್ಚಿನ ಗಮನ ಹರಿಸಿದ್ದು, ಭರವಸೆಗಳ ಮಹಾಪೂರವನ್ನು ಹರಿಸಿವೆ.

ದೇಶದ ಸಮಸ್ಯೆಗಳ ಪೈಕಿ ನಿರುದ್ಯೋಗ ದೊಡ್ಡ ಸಮಸ್ಯೆ ಎಂದಿರುವ ಸಾರ್ವಜನಿಕರ ಪೈಕಿ ಶೇ 42.1 ರಷ್ಟು ಮಂದಿ ಬಿಜೆಪಿ ಅಧಿಕಾರಕ್ಕೆ ಬಂದರೆ ಸಮಸ್ಯೆಗೆ ಪರಿಹಾರ ಸಾಧ್ಯ ಎಂದು ಹೇಳಿದ್ದಾರೆ.

ನಿರುದ್ಯೋಗಿಗಳಿಗೆ ಮೋದಿ ಪ್ರಧಾನಿಯಾಗಬೇಕು

ನಿರುದ್ಯೋಗಿಗಳಿಗೆ ಮೋದಿ ಪ್ರಧಾನಿಯಾಗಬೇಕು

ಬಾಲಕೋಟ್ ನಲ್ಲಿ ಉಗ್ರರ ನೆಲೆ ಧ್ವಂಸ ಗೊಳಿಸಿದ ಬಳಿಕ ಮೋದಿ ಜನಪ್ರಿಯತೆ ಇನ್ನಷ್ಟು ಏರಿಕೆಯಾಗಿದೆ. ಈ ಬಾರಿಯ ಲೋಕಸಭಾ ಚುನಾವಣೆಯ ಪ್ರಮುಖ ಅಂಶಗಳಲ್ಲಿ ಒಂದೆನಿಸಿರುವ ನಿರುದ್ಯೋಗ ಸಮಸ್ಯೆಗೆ ಪರಿಹಾರ ನೀಡಲು ಪ್ರಧಾನಿ ಮೋದಿಗೆ ಮಾತ್ರ ಸಾಧ್ಯ, ಮುಂದಿನ ಪ್ರಧಾನಿಯಾಗಲು ಮೋದಿ ಸೂಕ್ತ ಎಂದು ಶೇ 63.6ರಷ್ಟು ನಿರುದ್ಯೋಗಿಗಳು ಮತ ಹಾಕಿದ್ದಾರೆ. ಇದೇ ವಿಭಾಗದಲ್ಲಿ ರಾಹುಲ್ ಗಾಂಧಿಗೆ ಶೇ 26ರಷ್ಟು ಮಾತ್ರ ಮತ ಸಿಕ್ಕಿದೆ.

ಬಹುಮುಖ್ಯ ಸಮಸ್ಯೆ ನಿರುದ್ಯೋಗ

ಬಹುಮುಖ್ಯ ಸಮಸ್ಯೆ ನಿರುದ್ಯೋಗ

ದೇಶದ ಬಹುಮುಖ್ಯ ಸಮಸ್ಯೆ ಎಂದರೆ ಅದು ನಿರುದ್ಯೋಗ ಎಂದು ಶೇ 34.8 ರಷ್ಟು ನಿರುದ್ಯೋಗಿಗಳು, ಶೇ 27.4ರಷ್ಟು ಖಾಸಗಿ ಸಂಸ್ಥೆ ಉದ್ಯೋಗಿಗಳು, ಶೇ 25.5 ರಷ್ಟು ಸ್ವಂತ ಉದ್ಯೋಗ ಹೊಂದಿದ್ದವರು, ಶೇ 20.5ರಷ್ಟು ಗೃಹಿಣಿಯರು ಅಭಿಪ್ರಾಯವನ್ನು ತಿಳಿಸಿದ್ದಾರೆ.

ದೇಶದ ಸುರಕ್ಷತೆ, ಉಗ್ರರ ದಾಳಿ

ದೇಶದ ಸುರಕ್ಷತೆ, ಉಗ್ರರ ದಾಳಿ

ಶೇ 10.4ರಷ್ಟು ನಿರುದ್ಯೋಗಿಗಳ ಪಾಲಿಗೆ ಉಗ್ರರ ದಾಳಿ ಪ್ರಮುಖ ಸಮಸ್ಯೆಯಾಗಿದ್ದರೆ, ಶೇ 13.6ರಷ್ಟು ಸ್ವಂತ ಜಮೀನು ಹೊಂದಿರುವ ರೈತರು ಹಾಗೂ ಶೇ 14.3ರಷ್ಟು ಸರ್ಕಾರಿ ನೌಕರರು ಇದು ದೊಡ್ಡ ಸಮಸ್ಯೆ ಎಂದಿದ್ದಾರೆ.

ಸಮೀಕ್ಷೆಯಲ್ಲಿ ವಿವಿಧ ಕ್ಷೇತ್ರದವರಿಂದ ಅಭಿಪ್ರಾಯ

ಸಮೀಕ್ಷೆಯಲ್ಲಿ ವಿವಿಧ ಕ್ಷೇತ್ರದವರಿಂದ ಅಭಿಪ್ರಾಯ

ಸಮೀಕ್ಷೆಯಲ್ಲಿ ವಿವಿಧ ಕ್ಷೇತ್ರದವರಿಂದ ಅಭಿಪ್ರಾಯ ಸಂಗ್ರಹಿಸಲಾಗಿದೆ. ನಿರುದ್ಯೋಗಿಗಳು, ಗೃಹಿಣಿಯರು ಹಾಗೂ ಜಮೀನ್ದಾರರು, ಸರ್ಕಾರಿ ನೌಕರರು, ಖಾಸಗಿ ಸಂಸ್ಥೆ ಉದ್ಯೋಗಿಗಳು, ಸ್ವಂತ ಉದ್ಯೋಗ ನಿರತರು, ಸ್ವಂತ ಭೂಮಿ ಹೊಂದಿರದ ಕೃಷಿ ಕೂಲಿಯಾಳಗಳ ಅಭಿಪ್ರಾಯವಾಗಿದೆ. ಶೇ 42.1 ಕ್ಕೂ ಅಧಿಕ ಮಂದಿ ನಿರುದ್ಯೋಗವೇ ಎಲ್ಲಕ್ಕಿಂತ ದೊಡ್ಡ ಸಮಸ್ಯೆ ಎಂದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+