ಬೇಸಿಗೆಯಲ್ಲಿ ಆರೋಗ್ಯ ವಿಚಾರದಲ್ಲಿ ನಿರ್ಲಕ್ಷ್ಯ ಬೇಡ

ನಾವು ಎಷ್ಟೇ ಜಾಗೃತರಾಗಿದ್ದರೂ ಯಾವಾಗ ಯಾವ ಕಾಯಿಲೆ ನಮಗೆ ತಗಲುತ್ತದೆ ಎಂಬುದನ್ನು ಹೇಳಲಾಗುವುದಿಲ್ಲ. ಅದರಲ್ಲೂ ಬೇಸಿಗೆ ದಿನಗಳಲ್ಲಿ ವಿವಿಧ ಕಾರ್ಯಕ್ರಮಗಳ ನಿಮಿತ್ತ ಹೊರ ಪ್ರದೇಶಗಳಿಗೆ ತೆರಳುವುದು, ಯಾವುದಾದರೂ ಕಾರ್ಯಕ್ರಮಗಳಲ್ಲಿ ಭಾಗಿಯಾಗುವುದು ಅಥವಾ ದೂರದ ಪ್ರದೇಶಗಳಿಗೆ ಪ್ರವಾಸ ತೆರಳುವುದು ಹೀಗೆ ಏನಾದರೊಂದು ಮಾಡುತ್ತಲೇ ಇರುತ್ತೇವೆ.

ಇಂತಹ ಸಂದರ್ಭಗಳಲ್ಲಿ ನಾವು ಆರೋಗ್ಯವಾಗಿದ್ದವರು ಇದ್ದಕ್ಕಿದ್ದಂತೆ ಆರೋಗ್ಯ ಹದಗೆಟ್ಟು ಆಸ್ಪತ್ರೆ ಸೇರುವ ಪರಿಸ್ಥಿತಿ ಬಂದರೂ ಅಚ್ಚರಿಪಡಬೇಕಾಗಿಲ್ಲ. ಕೆಲವೊಮ್ಮೆ ಆಸ್ಪತ್ರೆಗೆ ಸೇರಿ ಪರೀಕ್ಷೆಗಳಿಗೊಳಪಟ್ಟಾಗಲೇ ನಮಗೆ ನಿಜವಾದ ಕಾಯಿಲೆ ಏನಿದೆ ಎನ್ನುವುದು ತಿಳಿಯುವುದು. ಏಕೆಂದರೆ ಬಹಳಷ್ಟು ಸಂದರ್ಭಗಳಲ್ಲಿ ನಾವು ಸ್ವಯಂ ವೈದ್ಯ ಮಾಡಿಕೊಂಡು ನಮಗೆ ಬಂದಿರೋದು ಏನು ಕಾಯಿಲೆ ಎಂಬುದನ್ನು ತಿಳಿಯುವ ಗೋಜಿಗೆ ಹೋಗುವುದಿಲ್ಲ. ಮಾತ್ರೆಯಿಂದ ಔಷಧಿಯಿಂದ ಗುಣಪಡಿಸುವ ಪ್ರಯತ್ನ ಮುಂದುವರಿಸುತ್ತಲೇ ಇರುತ್ತೇವೆ.

ಇಷ್ಟಕ್ಕೂ ಆರೋಗ್ಯವಾಗಿರುವಾಗ ನಾವ್ಯಾರು ಆಸ್ಪತ್ರೆಯತ್ತ ಮುಖ ಮಾಡುವುದಿಲ್ಲ. ವೈದ್ಯರನ್ನು ಕಾಣುವುದಿಲ್ಲ. ಏನಾದರೂ ಚಿಕ್ಕಪುಟ್ಟ ನೋವು, ಜ್ವರ, ಶೀತ ಕಾಣಿಸಿಕೊಂಡಾಗಲೂ ಯಾವುದಾದರೂ ಮಾತ್ರೆ ಸೇವಿಸಿ ಸುಮ್ಮನಾಗಿ ಬಿಡುತ್ತೇವೆ. ಕಾಯಿಲೆ ಉಲ್ಭಣಿಸಿ ಇನ್ನೇನು ಮಾಡಲು ಸಾಧ್ಯವಿಲ್ಲ ಎಂದಾಗ ಮಾತ್ರ ಆಸ್ಪತ್ರೆಯತ್ತ ತೆರಳುತ್ತೇವೆ. ಆ ವೇಳೆಗೆ ನಮ್ಮನ್ನು ಆವರಿಸಿದ ಕಾಯಿಲೆ ಅಂತಿಮ ಘಟ್ಟಕ್ಕೆ ಬಂದು ತಲುಪಿರುತ್ತದೆ.

ನಾವು ಏನೇ ಮಾಡಬೇಕೆಂದು ಹೊರಟರೂ ಅದು ಮಾಡಲು ಸಾಧ್ಯವಾಗುವುದು ಆರೋಗ್ಯ ಇದ್ದರೆ ಮಾತ್ರ. ಆದ್ದರಿಂದ ಆರೋಗ್ಯಕ್ಕೆ ಮೊದಲ ಪ್ರಾಶಸ್ತ್ಯ ನೀಡಬೇಕು. ಒತ್ತಡದ ಕೆಲಸದ ನಡುವೆ ಆಗಾಗ್ಗೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ನಿನ್ನೆಯಂತೆ ಇವತ್ತು ಇರುತ್ತದೆ ಎನ್ನಲಾಗದು. ಹಾಗೆಯೇ ಇವತ್ತಿನಂತೆ ನಾಳೆಯೂ ಇರದು. ಆದ್ದರಿಂದ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಾ ಒಂದಷ್ಟು ಎಚ್ಚರಿಕೆಯಿಂದ ಬದುಕನ್ನು ಮುನ್ನಡೆಸಿದರೆ ಒಳ್ಳೆಯದು.

ಆಸ್ಪತ್ರೆಗೆ ಹೋಗುವುದು ಒಳಿತು

ಆಸ್ಪತ್ರೆಗೆ ಹೋಗುವುದು ಒಳಿತು

ಮೊದಲೆಲ್ಲ ಜ್ವರ ಬಂದಾಗ ಯಾವುದೋ ಒಂದು ಕಸಾಯ ಕುಡಿದರೆ, ಮಾತ್ರೆ ನುಂಗಿದರೆ ಹೋಗಿ ಬಿಡುತ್ತಿತ್ತು. ಈಗಲೂ ಹಾಗೆಯೇ ಮಾಡಲು ಹೋದರೆ ಸಾವು ಖಚಿತ. ಕಾರಣ ಇವತ್ತು ಕೊರೊನಾದಿಂದ ಮೊದಲ್ಗೊಂಡು ಡೆಂಗ್ಯೂ, ಚಿಕೂನ್ ಗುನ್ಯಾದಂತಹ ರೋಗಗಳ ವೈರಸ್‌ಗಳು ಸೊಳ್ಳೆಗಳ ಮೂಲಕ ಮನುಷ್ಯನ ದೇಹವನ್ನು ಹೊಕ್ಕಿ ಸಾವನ್ನು ತರುತ್ತಿವೆ. ಹೀಗಾಗಿ ಜ್ವರನಾ ಅದು ಮಾತ್ರೆ ತೆಗೆದುಕೊಂಡರೆ ಹೋಗುತ್ತದೆ ಎಂಬ ಲಘುವಾದ ಮಾತನ್ನು ಬಿಟ್ಟು, ಜತೆಗೆ ಸ್ವಯಂ ಔಷಧಿ ತೆಗೆದುಕೊಳ್ಳುವುದನ್ನು ದೂರಮಾಡಿ ತಕ್ಷಣ ಆಸ್ಪತ್ರೆಗೆ ಹೋಗುವುದು ಒಳಿತು.

ದೇಹದಲ್ಲಿರುವ ಕಾಯಿಲೆ ಗೊತ್ತೇ ಆಗುವುದಿಲ್ಲ

ದೇಹದಲ್ಲಿರುವ ಕಾಯಿಲೆ ಗೊತ್ತೇ ಆಗುವುದಿಲ್ಲ

ಬಹಳಷ್ಟು ಜನರ ದೇಹದಲ್ಲಿರುವ ಕಾಯಿಲೆಗಳು ಗೊತ್ತೇ ಆಗುವುದಿಲ್ಲ. ಅವರಿಗೆ ಕಾಯಿಲೆಯ ಲಕ್ಷಣವಾಗಿ ಚಿಕ್ಕಪುಟ್ಟ ತೊಂದರೆ ಕಾಣಿಸಿಕೊಂಡರೂ ಅವರು ತಲೆಕೆಡಿಸಿಕೊಳ್ಳುವುದಿಲ್ಲ. ಅದಕ್ಕೆ ತಕ್ಕ ಮಾತ್ರೆ ತೆಗೆದುಕೊಂಡು ಸುಮ್ಮನಾಗಿ ಬಿಡುತ್ತಾರೆ. ಹೆಚ್ಚಿನವರಿಗೆ ತಮಗೆ ಅಂಟಿರುವ ಕಾಯಿಲೆ ವಾಸಿ ಮಾಡದಷ್ಟರ ಮಟ್ಟಿಗೆ ಉಲ್ಭಣವಾಗಿದೆ ಎಂಬುವುದೇ ಗೊತ್ತಾಗುವುದಿಲ್ಲ. ಯಾವುದೋ ಸಂದರ್ಭದಲ್ಲಿ ಆಸ್ಪತ್ರೆಗೆ ತೆರಳಿ ಪರೀಕ್ಷೆಗೊಳಪಟ್ಟಾಗ ಮಾತ್ರ ಅರಿವಿಗೆ ಬರುತ್ತದೆ. ಆದರೆ ಅಷ್ಟರಲ್ಲಿ ಕಾಲವೂ ಕಳೆದು ಹೋಗಿರುತ್ತದೆ.

ಮಾತ್ರೆ ಸೇವಿಸುವುದು ಕೆಟ್ಟ ಅಭ್ಯಾಸ

ಮಾತ್ರೆ ಸೇವಿಸುವುದು ಕೆಟ್ಟ ಅಭ್ಯಾಸ

ಸಣ್ಣಪುಟ್ಟ ಆರೋಗ್ಯದ ಸಮಸ್ಯೆಗಳು ಕಂಡು ಬಂದಾಗಲೆಲ್ಲ ಮಾತ್ರೆ ಸೇವಿಸುವವರು ಇದ್ದಾರೆ. ಇದೊಂದು ರೀತಿಯ ಕೆಟ್ಟ ಅಭ್ಯಾಸ. ಇದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿಗಳು ಕಡಿಮೆಯಾಗುವುದಲ್ಲದೆ, ಕಿಡ್ನಿ ಮೇಲೆಯೂ ಪರಿಣಾಮ ಬೀರುತ್ತದೆ. ಆದ್ದರಿಂದ ಯಾವುದೇ ಮಾತ್ರೆಗಳನ್ನು ವೈದ್ಯರ ಸಲಹೆಯಿಲ್ಲದೆ ಸೇವಿಸುವುದು ಒಳ್ಳೆಯದಲ್ಲ. ಇದು ತಾತ್ಕಾಲಿಕ ಶಮನಕಾರಿಯಾದರೂ ಅದರಿಂದ ತೊಂದರೆ ತಪ್ಪಿದಲ್ಲ.

Recommended Video

    ಮನೆಗಳನ್ನೇ ಎತ್ತಿ ಬಿಸಾಡಿದ ರಣಭೀಕರ ಸುಂಟರಗಾಳಿ | Oneindia Kannada
    ಅವರಿವರ ಸಲಹೆ ಕೇಳುವುದು ಒಳ್ಳೆಯದಲ್ಲ

    ಅವರಿವರ ಸಲಹೆ ಕೇಳುವುದು ಒಳ್ಳೆಯದಲ್ಲ

    ಇನ್ನು ಕೆಲವರಿಗೆ ಆರೋಗ್ಯದಲ್ಲಿ ಏರುಪೇರಾದಾಗ ವೈದ್ಯರ ಬಳಿ ಹೋಗುವುದಕ್ಕಿಂತ ಹೆಚ್ಚಾಗಿ ಪಕ್ಕದವರ ಸಲಹೆ ಕೇಳುವ ಚಟ. ಅವರು ಹೇಳುವ ಮಾತುಗಳಿಗೆ ಕಟ್ಟು ಬಿದ್ದು ಯಾವುದೋ ಮಾತ್ರೆ ಸೇವಿಸುತ್ತಾರೆ. ಇದು ಬಹಳಷ್ಟು ಅಪಾಯಕಾರಿ. ಕಾಯಿಲೆಗಳು ಕಾಣಿಸಿಕೊಂಡಾಗ ಅವರಿವರಿಗೆ ಹೇಳಿ ಅವರಿಂದ ಬರುವ ನೂರಾರು ಸಲಹೆಗಳು, ಅದಕ್ಕಿಂತ ಹೆಚ್ಚಾಗಿ ಭಯಹುಟ್ಟಿಸುವ ಮಾತುಗಳಿಂದ ಆತಂಕ ಪಡುವ ಬದಲು ತಮ್ಮ ತೊಂದರೆಯನ್ನು ವೈದ್ಯರ ಬಳಿ ತಿಳಿಸಿ ಚಿಕಿತ್ಸೆ ಪಡೆಯುವುದು ಒಳ್ಳೆಯದು.

    ನಮ್ಮಲ್ಲಿ ಇವತ್ತು ಹೆಚ್ಚಿನ ಜನ ಒಂದಲ್ಲ ಒಂದು ಕಾರಣದಿಂದ ಒತ್ತಡದಲ್ಲೇ ಕೆಲಸ ಮಾಡುತ್ತಿದ್ದಾರೆ. ಹಣ ಸಂಪಾದನೆ ಮಾಡಬೇಕೆಂಬ ಹಠಕ್ಕೆ ಬಿದ್ದು ಇಲ್ಲಸಲ್ಲದ ಒತ್ತಡಗಳನ್ನು ಮೈಮೇಲೆ ಎಳೆದುಕೊಂಡು ಜೀವನ ಸಾಗಿಸುತ್ತಿದ್ದಾರೆ. ದೈಹಿಕ ಶ್ರಮವನ್ನು ನಾವು ಒಂದಷ್ಟು ವಿಶ್ರಾಂತಿ ಪಡೆದುಕೊಂಡು ಶಮನಗೊಳಿಸಬಹುದು. ಆದರೆ ಮಾನಸಿಕ ಶ್ರಮ ಹಾಗಲ್ಲ ಅದು ಸದಾ ನೆಮ್ಮದಿಯನ್ನು ಬಯಸುತ್ತದೆ. ಜತೆಗೆ ದೈಹಿಕ ಆರೋಗ್ಯದ ಮೇಲೆಯೂ ಪರಿಣಾಮ ಬೀರುತ್ತದೆ.

    Notifications
    Settings
    Clear Notifications
    Notifications
    Use the toggle to switch on notifications
    • Block for 8 hours
    • Block for 12 hours
    • Block for 24 hours
    • Don't block
    Gender
    Select your Gender
    • Male
    • Female
    • Others
    Age
    Select your Age Range
    • Under 18
    • 18 to 25
    • 26 to 35
    • 36 to 45
    • 45 to 55
    • 55+