Cow Dung: ದುಬಾರಿ ಕಾರಿಗೆ ಸಗಣಿ ಕೋಟಿಂಗ್‌ ಮಾಡಿಸಿದ ಡಾಕ್ಟರ್‌, ಕಾರಣ ಕೇಳಿ ಎಲ್ರೂ ಶಾಕ್‌

ಈಗೆಲ್ಲ ಮನೆಗೊಂದು ಕಾರು ಅನ್ನೋ ಜಮಾನ. ಹೊಸ ಕಾರು ತಂದ ಮೇಲಂತೂ ಸೆರಾಮಿಕ್‌ ಕೋಟಿಂಗ್‌, ಪಿಪಿಎಫ್‌, ಪಾಲಿಶ್‌ ಅಂತೆಲ್ಲ ಏನೇನೋ ಸಿಂಗಾರ ಮಾಡೋ ಜನ ಇದ್ದಾರೆ. ಆದರೆ ಇದೆಲ್ಲವೂ ತಮ್ಮ ಕಾರಿನ ರಕ್ಷಣೆಗಾಗಿ ಮಾಡುವ ಆಫ್ಟರ್‌ ಮಾರ್ಕೆಟ್‌ ಅಪ್ಡೇಟ್‌ಗಳು. ಕೆಲವರು ಕಾರು ಕೋಟಿಂಗ್‌ ಹೆಸರಲ್ಲಿ ಸಾವಿರಾರು ರೂಪಾಯಿ ಉಂಡೆನಾಮ ಹಾಕೋದನ್ನೂ ಸೋಶಿಯಲ್‌ ಮೀಡಿಯಾಗಳಲ್ಲಿ ನೋಡಿರುತ್ತೀವಿ. ಕೆಲವರಂತೂ ತಮ್ಮ ರಸ್ತೆಯಲ್ಲಿ ಸಗಣಿ ಇದ್ದರೆ ಅದರ ಮೇಲೆ ಕಾರು ಹತ್ತಿಸೋಕೂ ಧೈರ್ಯ ಮಾಡೋದಿಲ್ಲ. ಆದ್ರೆ ವೈದ್ಯರೊಬ್ಬರು ತನ್ನ ಮಹೀಂದ್ರಾ ಕಾರಿಗೆ ಸಗಣಿಯಿಂದಲೇ ಕೋಟಿಂಗ್‌ ಮಾಡಿಸಿ ಶಾಕ್‌ ನೀಡಿದ್ದಾರೆ.

ಸೋಶಿಯಲ್‌ ಮೀಡಿಯಾದಲ್ಲಿ ಈ ವಿಡಿಯೋ ಫುಲ್‌ ವೈರಲ್‌ ಆಗಿದೆ. ಮಹೀಂದ್ರಾ ಕಂಪನಿಯ ಕಾರುಗಳು ಮಾರುಕಟ್ಟೆಯಲ್ಲಿ ಹಾಗೂ ರಸ್ತೆಗಳಲ್ಲಿ ಸಖತ್‌ ಧೂಳೆಬ್ಬಿಸುತ್ತಿವೆ. ಈ ಬ್ರ್ಯಾಂಡ್‌ನ ಇತ್ತೀಚಿನ ಮಾಡಲ್‌ಗಳಿಗೆ ಕಾರುಪ್ರಿಯರು ಫುಲ್‌ ಫಿದಾ ಆಗಿದ್ದಾರೆ. ತನ್ನ ಫೀಚರ್ಸ್‌ನಿಂದಲೇ ಗ್ರಾಹಕರನ್ನು ಸೆಳೆಯುತ್ತಿರುವ ಮಹೀಂದ್ರಾ ಕಾರಿಗೆ ಇದೀಗ ವೈದ್ಯ ವೃತ್ತಿಯಲ್ಲಿರುವ ವ್ಯಕ್ತಿ ಸಗಣಿಯನ್ನು ಲೇಪನ ಮಾಡಿಸಿದ್ದಾರೆ. ಇದು ಮೊದಲಿಗೆ ನೋಡಿದರೆ ಕಂಪನಿಯವರು ಯಾವುದೋ ಹೊಸ ಕಲರ್‌ ಲಾಂಚ್‌ ಮಾಡಿದ್ದಾರೇನೋ ಎನ್ನುವಂತಿದೆ. ಆದರೆ ಸಗಣಿ ಮೆತ್ತುವ ಸಾಹಸ ಮಾಡಿದ್ದಾದರೂ ಏಕೆ? ಎಂಬ ಕುತೂಹಲಕಾರಿ ವಿಚಾರ ಇಲ್ಲಿ ತಿಳಿಯಿರಿ.

Doctor Applies Cow Dung Coating On Mahindra Car For Cooling Viral Video

ಮಹಾರಾಷ್ಟ್ರದ ಪಂಢರಪುರದ ಆಯುರ್ವೇದ ವೈದ್ಯರೊಬ್ಬರು ಈ ಸಾಹಸ ಮಾಡಿ ಪ್ರದರ್ಶಿಸಿದ್ದಾರೆ. ಸುಮಾರು 15 ಲಕ್ಷ ರೂಪಾಯಿ ಬೆಲೆ ಬಾಳುವ ಮಹೀಂದ್ರಾ ಎಕ್ಸ್‌ಯುವಿ 300 ಕಾರನ್ನು ಸಗಣಿಯಿಂದ ಅಲಂಕಾರ ಮಾಡಿ ಗಮನ ಸೆಳೆದಿದ್ದಾರೆ. ಇದನ್ನು ದೂರಕ್ಕೆ ನೋಡಿದರೆ ಸಗಣಿಯೇ ಅಲ್ಲ ಎನ್ನುವಂತಿದೆ. ಯಾವುದೋ ಹೊಸ ಕಲರ್‌ ಲಾಂಚ್‌ ಮಾಡಿರಬೇಕು ಎಂದೇ ಜನ ಭಾವಿಸುವುದು ಫಿಕ್ಸ್‌, ಸೆರಾಮಿಕ್‌ ಕೋಟಿಂಗ್‌ ಅನ್ನೂ ನಾಚಿಸುವಂತಹ ಸಗಣಿ ಕೋಟಿಂಗ್‌ ಕಂಡು ಜನ ಹುಬ್ಬೇರಿಸಿದ್ದಾರೆ.

ಇದಕ್ಕೆ ಕಾರಣವೂ ನೀಡಿರುವ ಅವರು, ಸದ್ಯ ತಾಪಮಾನವು 40 ಡಿಗ್ರಿ ಸೆಲ್ಸಿಯಸ್‌ಗೂ ಮೀರಿದೆ. ಇದರಿಂದ ಬಿಸಿಲು ಕೂಡ ಹೆಚ್ಚಾಗುತ್ತಿದೆ. ಹಾಗಾಗಿ ತಮ್ಮ ಕಾರನ್ನು ಕೂಲ್‌ ಆಗಿಡಬೇಕು ಎಂಬ ಉದ್ದೇಶದಿಂದ ಸಗಣಿ ಕೋಟಿಂಗ್‌ ಮಾಡಿಸಿರುವುದಾಗಿ ಹೇಳಿಕೊಂಡಿದ್ದಾರೆ. ಹಸುವಿನ ಸಗಣಿ ಮತ್ತು ಹಸುವಿನ ಮೂತ್ರದಿಂದ ಮಿಶ್ರಣ ಮಾಡಿ ಇದನ್ನು ಕಾರಿಗೆ ಲೇಪಿಸಿದ್ದಾರೆ. ಇದರ ಬಳಿಕ ಕಾರಿನ ತಾಪಮಾನ ಅರ್ಧಕ್ಕಿಂತಲೂ ಕಡಿಮೆಯಾಗಿದೆ ಎಂದು ವೈದ್ಯರು ಅಚ್ಚರಿ ಹೇಳಿಕೆ ನೀಡಿದ್ದಾರೆ.

Doctor Applies Cow Dung Coating On Mahindra Car For Cooling Viral Video

ಸಗಣಿಗೆ ಗೋಮೂತ್ರ ಮಿಕ್ಸ್‌ ಮಾಡಿ, ಅದನ್ನು ಪೇಸ್ಟ್‌ ಮಾದರಿ ಕಲೆಸಿ ಪೂರ್ತಿ ಕಾರಿಗೆ ಹಚ್ಚಿದ್ದಾರೆ. ಅಷ್ಟೇ ಅಲ್ಲದೆ ಹಸುವಿನ ಸಗಣಿ ಹಚ್ಚುವುದರಿಂದ ಕಾರಿನ ಬಣ್ಣ ಕೂಡ ಮಾಸೋದಿಲ್ಲ. ಸೂರ್ಯನ ಶಾಖದಿಂದಲೂ ಕಾರನ್ನು ರಕ್ಷಿಸಬಹುದು ಎಂದು ಕಾರಣ ನೀಡಿದ್ದಾರೆ. ಬೇರೆ ವಾಹನಗಳಿಗೆ ಹೋಲಿಸಿದರೆ ಸಗಣಿ ಹಚ್ಚಿದ ನಂತರ ತಮ್ಮ ಕಾರಿನ ಒಳಗೆ ಕೂಲ್‌ ಕೂಲ್‌ ಆಗಿದ್ದು, ತಾಪಮಾನವು ಶೇ 50 ಕಡಿಮೆಯಾಗಿದೆ ಎಂದು ವಿವರಿಸಿದ್ದಾರೆ. ಈ ವಿಡಿಯೋ ಅನ್ನು ಹಲವರು ಆನಂದ್‌ ಮಹೀಂದ್ರಾ ಅವರಿಗೆ ಟ್ಯಾಗ್‌ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+