ಮಹೀಂದ್ರಾ ಥಾರ್ 5 ಡೋರ್ ಲುಕ್ ಹೇಗಿದೆ ಗೊತ್ತಾ.?-ದರ, ವಿಶೇಷತೆ, ಬಿಡುಗಡೆ ದಿನಾಂಕ ಇಲ್ಲಿದೆ ತಿಳಿಯಿರಿ
ಭಾರತದ ವಾಹನ ತಯಾರಕ ದೈತ್ಯ ಕಂಪನಿಗಳಲ್ಲೊಂದಾದ ಮಹೀಂದ್ರಾದ ಥಾರ್ 3 ಡೋರ್ ಟ್ರಕ್ಕಿಂಗ್‌ಗೆ ಹೇಳಿ ಮಾಡಿಸಿದ ಕಾರು ಆಗಿದ್ದು, ಇದಕ್ಕೆ ಯುವಪೀಳಿಗೆಯವರು ಮನಸೋತಿದ್ದರು. ಮಾರುಕಟ್ಟೆಯಲ್ಲೂ ಇದರ ಮಾರಾಟ ದೂಳೆಬ್ಬೆಸುವ ರೀತಿಯಲ್ಲಿ ಮಾರಾಟವಾಗುತ್ತಿತ್ತು.
ಹಾಗೆಯೇ ಮುಂದಿನ ತಿಂಗಳು ಬಿಡುಗಡೆಯಾಗಲಿರುವ ಥಾರ್ 5 ಡೋರ್ ಕಾರಿನ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಹಾಗಾದರೆ ಇದರ ವಿಶೇಷತೆ, ದರಗಳ ಬಗ್ಗೆ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

ಮಹೀಂದ್ರ ಥಾರ್‌ನ ಗತ್ತಿಗೆ ಯುವಪೀಳಿಗೆಯವರು ಮನಸೋತುಬಿಟ್ಟಿದ್ದರು. ಇನ್ನು ಮುಂದಿನ ತಿಂಗಳು ಅಂದರೆ ಆಗಷ್ಟ್ 15ಕ್ಕೆ ಇದರ ಹೊಸ ಮಾದರಿ ಥಾರ್ 5 ಡೋರ್ ಬಿಡುಗಡೆಯಾಗಲಿದೆ. ಇದು ಕೂಡ ಮಾರಾಟದಲ್ಲಿ ದಾಖಲೆ ಬರೆಯುವುದರಲ್ಲಿ ಯಾವುದೇ ಅನುಮಾನವಿಲ್ಲ ಎನ್ನುವ ಮಾತುಗಳು ಕೇಳಿಬರುತ್ತಿವೆ. ಥಾರ್ 3 ಡೋರ್ ದರ 11.35 ಲಕ್ಷ ರೂಪಾಯಿನಿಂದ ಆರಂಭವಾದರೆ, ಟಾಪ್ ಎಂಡ್ ಮಾಡೆಲ್ 17 ಲಕ್ಷ ರೂಪಾಯಿವರೆಗೂ ಮಾರಟವಾಗುತ್ತಿದೆ.
ಇನ್ನು ಮುಂದಿನ ತಿಂಗಳು ಆಗಸ್ಟ್ 15ಕ್ಕೆ ಮಾರುಕಟ್ಟೆಗೆ ಲಗ್ಗೆ ಇಡಲಿರುವ ಥಾರ್ 5 ಡೋರ್‌ನ ದರ 15 ಲಕ್ಷ ರೂಪಾಯಿನಿಂದ ಆರಂಭವಾಗಲಿದ್ದು, ಇದರ ಟಾಪ್ ಎಂಡ್ ಮಾಡೆಲ್ 25 ಲಕ್ಷ ರೂಪಾಯಿವರೆಗೆ ಇರಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಮಹೀಂದ್ರಾ ಥಾರ್ 5-ಡೋರ್ (ಅರ್ಮಡಾ ಎಂದು ಹೆಸರಿಡುವ ನಿರೀಕ್ಷೆಯಿದೆ) ಅಧಿಕೃತ ಬಿಡುಗಡೆಗೂ ಮುನ್ನವೇ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸೋರಿಕೆಯಾಗಿವೆ. ಮಹೀಂದ್ರಾ ಅರ್ಮಡಾ 5-ಡೋರ್‌ನ ಸೋರಿಕೆಯಾದ ಚಿತ್ರಗಳು ಎಸ್‌ಯುವಿ ಹೇಗಿರಲಿದೆ ಎಂಬುದರ ವಿವರವಾದ ನೋಟವನ್ನು ನೀಡುತ್ತಿದೆ. ಹಾರ್ಸ್ಶೂ ಆಕಾರದ ಡಿಆರ್ಎಲ್‌ಗಳೊಂದಿಗೆ ಪರಿಷ್ಕೃತ ಹೆಡ್‌ಲೈಟ್‌ಗಳು, ಮುಂಭಾಗದ ಬಂಪರ್ ಮತ್ತು ವ್ಹೀಲ್ ಆರ್ಚ್‌ಗಳನ್ನು 3-ಡೋರ್ ಥಾರ್‌ನಂತೆ ಅಲ್ಲದೇ ಸ್ವಲ್ಪ ಬದಲಾಯಿಸಲಾಗಿದೆ. ಒಟ್ಟಾರೆ ಮಹೀಂದ್ರಾ ಆರ್ಮಡಾ ಡಿಸೈನ್ ಸಾಕಷ್ಟು ರಗಡ್ ಲುಕ್‌ನಲ್ಲಿ ಕಾಣುತ್ತಿದೆ. ಕೆಲವು ಬದಲಾವಣೆಗಳು ಹೊಸ ಆವೃತ್ತಿಯನ್ನು ಮತ್ತಷ್ಟು ಆಕರ್ಷಕವಾಗಿ ಕಾಣುವಂತೆ ಮಾಡಿವೆ.
ಥಾರ್ ಅರ್ಮಡಾ 5 ಡೋರ್, ಅದರ 3 ಡೋರ್ ಆವೃತ್ತಿಯತೆಯೇ ಮಹೀಂದ್ರಾ ಸ್ಕಾರ್ಪಿಯೋ-ಎನ್ ಪ್ಲಾಟ್ ಫಾರ್ಮ್ ರೀತಿಯಲ್ಲೇ ಇರಲಿದೆ. 3 ಡೋರ್ ಥಾರ್‌ನಲ್ಲಿ ನೀಡುವ ಅದೇ ಎಂಜಿನ್ ಆಯ್ಕೆಗಳನ್ನು ಇದಕ್ಕೂ ನೀಡಲಾಗುವುದು. ಹೆಚ್ಚಿನ ತೂಕವನ್ನು ಸರಿದೂಗಿಸಲು ಎಂಜಿನ್ ಟ್ಯೂನ್ ಮಾಡುವ ಸಾಧ್ಯತೆಯಿದ್ದು, ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್‌ಗಳು ಸ್ಕಾರ್ಪಿಯೋ-ಎನ್‌ನಂತೆಯೇ ಟ್ಯೂನ್ ಆಗುವ ನಿರೀಕ್ಷೆ ಇದೆ ಎನ್ನಲಾಗುತ್ತಿದೆ.
ಎರಡೂ ಎಂಜಿನ್‌ಗಳ ಗೇರ್ ಬಾಕ್ಸ್ ಗಳನ್ನು 6 ಸ್ಪೀಡ್ ಮ್ಯಾನುವಲ್ ಮತ್ತು ಟಾರ್ಕ್ ಆಟೋಮ್ಯಾಟಿಕ್ ಆಯ್ಕೆಗಳನ್ನು ಇದು ಹೊಂದಿರಲಿದೆ. ಲೆವೆಲ್ 2 ADAS ಜೊತೆಗೆ ಎಕ್ಸ್‌ಯುವಿ 700ನಲ್ಲಿ ಕಂಡುಬರುವ ಅನೇಕ ವೈಶಿಷ್ಟ್ಯಗಳನ್ನು ಥಾರ್ ಅರ್ಮಡಾ 5 ಡೋರ್ ಆವೃತ್ತಿ ಪಡೆಯಲಿದ್ದು, ಇದನ್ನು 2024ರ ಆಗಸ್ಟ್ 15 ಅಂದರೆ ಸ್ವಾತಂತ್ರ್ಯ ದಿನಾಚರಣೆಯಂದು ಅಧಿಕೃತವಾಗಿ ಬಿಡುಗಡೆಯಾಗಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಸೋರಿಕೆಯಾದ ಚಿತ್ರಗಳಲ್ಲಿ ಫ್ರಂಟ್ ವ್ಯೂ: ಥಾರ್ 5-ಡೋರ್ ಮುಂಭಾಗವು ಮಹೀಂದ್ರಾ ಥಾರ್ ಸರಣಿಯಂತೆಯೇ ಒರಟಾದ ನೋಟವನ್ನು ಪಡೆದಿದೆ. ಗ್ರಿಲ್ ಉದ್ದವಾದ ಸ್ಲಾಟ್‌ಗಳನ್ನು ಹೊಂದಿದ್ದು, ಹೆಚ್ಚು ಆಧುನಿಕವಾಗಿ ಕಾಣುತ್ತದೆ. ಗ್ರಿಲ್ ದೊಡ್ಡದಾಗಿರುವುದರಿಂದ ಹೆಚ್ಚು ಸ್ಪಷ್ಟತೆಯೊಂದಿಗೆ ದಿಟ್ಟ ಉಪಸ್ಥಿತಿಯನ್ನು ನೀಡುತ್ತದೆ. ವೃತ್ತಾಕಾರದ ಹೆಡ್ ಲೈಟ್‌ಗಳನ್ನು ಆಧುನಿಕ ಎಲ್‌ಇಡಿ ಡೇಟೈಮ್ ರನ್ನಿಂಗ್ ಲೈಟ್ ಗಳೊಂದಿಗೆ ಸಂಯೋಜಿಸಲಾಗಿದೆ.
ಫ್ಲೇರ್ಡ್ ವೀಲ್ ಆರ್ಚ್‌ಗಳು ಮಸ್ಕುಲರ್ ನೋಟವನ್ನು ಹೆಚ್ಚಿಸುತ್ತವೆ, ಆಲ್-ಟೆರೈನ್ ಟೈರ್‌ಗಳು ವಾಹನದ ಆಫ್-ರೋಡ್ ಸಾಮರ್ಥ್ಯಗಳನ್ನು ಹೊಂದಿರಲಿವೆ. ಸಿ-ಪಿಲ್ಲರ್ ಡಿಫೆರೆಂಟ್ ಕಿಂಕ್ ಅನ್ನು ಹೊಂದಿದ್ದು, ಇದು ಉದ್ದೇಶಪೂರ್ವಕವಾಗಿ ತೋರುವ ಮತ್ತೊಂದು ವಿನ್ಯಾಸದ ಬಿಟ್ ಆಗಿರಬಹುದು. ಈ ಎಸ್‌ಯುವಿ ಜೀಪ್ ರಾಂಗ್ಲರ್‌ನಂತೆ ಕಂಡುಬರುತ್ತದೆ. ಆದರೂ, 5 ಡೋರ್ ಥಾರ್ ಆರ್ಮಡಾ ತನ್ನದೇ ಆದ ಸಾಂಪ್ರದಾಯಿಕ ಡಿಸೈನ್ ಅನ್ನು ಹೊಂದಿರಲಿದ್ದು, ಇದು ಹೆಚ್ಚೆಚ್ಚು ಗ್ರಾಹಕರನ್ನು ಸೆಳೆಯುವುದರಲ್ಲಿ ಯಾವುದೇ ಅನುಮಾನವಿಲ್ಲ.
ಮಹೀದ್ರಾ ಥಾರ್ 5 ಡೋರ್ ಹೊಸ ಆರು ಸ್ಲ್ಯಾಟ್ ಗ್ರಿಲ್ ಮತ್ತು ಎಲ್ಇಡಿ ಪ್ರೊಜೆಕ್ಟರ್ ಹೆಡ್‌ಲೈಟ್‌ಗಳನ್ನು ವೃತ್ತಾಕಾರದ ಎಲ್ಇಡಿ ಡಿಆರ್‌ಎಲ್‌ಳನ್ನು ಹೊಂದಿರಲಿದೆ. ಡ್ಯುಯಲ್ 10.25-ಇಂಚಿನ ಸ್ಕ್ರೀನ್‌ಗಳು ಮತ್ತು ಡ್ಯುಯಲ್-ಝೋನ್ ಎಸಿಯಂತಹ ಸೌಕರ್ಯಗಳನ್ನು ಒಳಗೊಂಡಿರಲಿದೆ. ಆರು ಏರ್‌ಬ್ಯಾಗ್‌ಗಳು ಕೂಡ ಹೊಂದಿರಲಿದೆ.












Click it and Unblock the Notifications