Fathers Day 2023: ಬದುಕು ರೂಪಿಸಿ ಕೊಡುವ ಮುನ್ನವೇ ತೀರಿಹೋದ ಅಪ್ಪ, ಆದರೂ ಬಿಟ್ಟು ಹೋದ ಶಿಸ್ತಿನ ಪಾಠ

Father's day: ಕಾಲೇಜಿನಲ್ಲಿ ಪ್ರಥಮ ಪಿಯುಸಿ ಆದುತ್ತಿದ್ದ ಸಂದರ್ಭ, ವಾರ್ಷಿಕ ಪರೀಕ್ಷೆಗೆ ಹದಿನೈದು ದಿನಕ್ಕೆ ಮುನ್ನ ಅಪ್ಪ, ಅಲ್ಪಕಾಲದ ಅನಾರೋಗ್ಯದಿಂದ ತೀರಿ ಹೋದರು. ಅವರಿಗೆ 61 ವರ್ಷ, ಸಾಯುವ ವಯಸ್ಸಲ್ಲ ಎಂದರೂ ವಿಧಿ ಕೇಳಬೇಕಲ್ಲಾ.. ಹನ್ನೆರಡು ದಿನದ ಕಾರ್ಯ ಮುಗಿಯುವ ತನಕ ಮನೆಯಿಂದ ಹೊರಗೆ ಹೋಗಬಾರದು ಎನ್ನುವ ಕುಟುಂಬದ ಕಟ್ಟುಪಾಡು.

ಈ ಕಾರ್ಯಗಳನ್ನೆಲ್ಲಾ ಮುಗಿಸಿ ವಾರ್ಷಿಕ ಪರೀಕ್ಷೆ ಬರೆದು ತೇರ್ಗಡೆಯಾದ ನಂತರ, ಮುಂದಕ್ಕೆ ತೀರಾ ಅನಿವಾರ್ಯದ ಕಾರಣದಿಂದಾಗಿ ದ್ವಿತೀಯ ಪಿಯುಸಿ ಆ ವೇಳೆ ಮುಂದುವರಿಸಲಾಗಿರಲಿಲ್ಲ. ಕೆಲಸವನ್ನು ಅರಸಿ ಬೆಂಗಳೂರಿಗೆ ಬಂದ ಆರಂಭದಲ್ಲಿ ಪಟ್ಟ ಪರಿಪಾಡು ಅಷ್ಟಿಷ್ಟಲ್ಲ. ಆಕಡೆ ಮಧ್ಯಮ ವರ್ಗದ ಕುಟುಂಬವೂ ಅಲ್ಲ, ಈ ಕಡೆ ಬಡತನದ ಕುಟುಂಬವೂ ಅಲ್ಲದ ಫ್ಯಾಮಿಲಿ ನಮ್ಮದು.

Fathers Day 2023

ಜೀವನ ಎನ್ನುವುದು ಹಗ್ಗದ ಮೇಲಿನ ನಡಿಗೆ, ಎಚ್ಚರದಿಂದ ಇರಬೇಕು ಎಂದು ಅಪ್ಪ, ನನ್ನ ಇತರ ಸಹೋದರರಿಗೆ ಮತ್ತು ತಾಯಿಯ ಬಳಿ ಹೇಳುತ್ತಿದ್ದದ್ದು ನನಗೆ ಜೀವನದಲ್ಲಿ ಸ್ಪಷ್ಟತೆಯನ್ನು ಹೊಂದಲು ಸಾಧ್ಯವಾಯಿತು. ಅಪ್ಪ ಎಲ್ಲರ ಜೊತೆಗೆ ಕೂತು ಊಟ ಮಾಡುತ್ತಿದ್ದಾಗ ಪ್ರತೀ ಬಾರಿ ಅವರ ಅನುಭವದ ಮಾತುಗಳನ್ನು ಹಂಚಿ ಕೊಳ್ಳುತ್ತಿದ್ದರು. ಇದು, ನನ್ನ ಜೊತೆಗೆ ನನ್ನ ಸಹೋದರರಿಗೂ ಶಿಸ್ತಿನ ಜೀವನ ನಡೆಸಲು ಅಡಿಪಾಯ ಹಾಕಿತ್ತು.

ನನ್ನ ತಂದೆ ಮತ್ತು ತಾತ ಇಬ್ಬರೂ ಪ್ರಾಧ್ಯಾಪಕರಾಗಿದ್ದರಿಂದ ಮನುಷ್ಯನಿಗೆ ವಿದ್ಯೆಯ ಮಹತ್ವದ ಅರಿವು ಸಾಕಷ್ಟಿತ್ತು. ಹಾಗಾಗಿ, ಫಸ್ಟ್ ಪಿಯುಸಿ ಪಾಸ್ ಆದ ನಂತರ ಬೆಂಗಳೂರಿನಲ್ಲಿ ನೈಟ್ ಕಾಲೇಜಿನಲ್ಲಿ ನನ್ನ ವಿದ್ಯಾಭ್ಯಾಸ ಮುಂದುವರಿಸಿದೆ. ಪದವೀಧರನಾಗಿ ಅದರ ಮೇಲೆ ಇನ್ನಷ್ಟು ಕೋರ್ಸ್ ಗಳನ್ನು ಮಾಡಿ, ಉತ್ತಮ ಉದ್ಯೋಗ ಹೊಂದಲು ಏನೇನರ ಅವಶ್ಯಕತೆ ಇದೆಯೋ ಅದನ್ನೆಲ್ಲಾ ಮಾಡಿಕೊಂಡು ಬಂದೆ.

Fathers Day 2023

ಹಾಸಿಗೆ ಇದ್ದಷ್ಟು ಕಾಲು ಚಾಚು ಬೇಕು, ಹಣ ಎನ್ನುವುದು ಬಹಳ ಡೇಂಜರಸ್, ಮಿತವ್ಯಯ ಮತ್ತು ಉಳಿತಾಯ ಬಹಳ ಮುಖ್ಯ ಎನ್ನುವುದು ನಮ್ಮ ಅಪ್ಪ ಆವಾಗಾವಾಗ ಹೇಳುತ್ತಿದ್ದ ಇನ್ನೊಂದು ಮಾತುಗಳು. ಇದರಿಂದಾಗಿ, ಬೆಂಗಳೂರಿಗೆ ಬಂದ ಆರಂಭದ ದಿನಗಳಲ್ಲೇ ಇದರ ಅರಿವಿತ್ತು. ಸ್ಯಾಲರಿ ಎಷ್ಟು ಇದೆಯೋ ಅದರಲ್ಲಿ ಜೀವನ ಸಾಗಿಸುತ್ತಿದ್ದೆ. ಆ ದುಡ್ಡಿನಲ್ಲೇ ಡಿಗ್ರಿ ಮುಗಿಸಿದೆ ಎನ್ನುವ ಸಂತೃಪ್ತಿ ಇನ್ನೊಂದು ಕಡೆ..

ಒಂದು ಕಡೆ ಕೆಲಸ ಇನ್ನೊಂದು ಕಡೆ ನೈಟ್ ಕಾಲೇಜ್ ಈ ರೀತಿ ನಾಲ್ಕು ವರ್ಷ ಜೀವನ ಸಾಗಿದ್ದರಿಂದ ಮೆಚ್ಯೂರಿಟಿ ಎನ್ನುವುದು ಆ ದಿನಗಳಲ್ಲೇ ಬಂದಿತ್ತು ಎನ್ನುವುದನ್ನು ಹೆಮ್ಮೆಯಿಂದ ಹೇಳಿಕೊಳ್ಳಬಲ್ಲೆ. ಆರ್ಥಿಕ ವಿಚಾರದಲ್ಲಿನ ಅಪ್ಪನ ಮಾತುಗಳು ಎಷ್ಟು ಸತ್ಯ ಎನ್ನುವುದಕ್ಕೆ ಹಲವು ಲೈವ್ ಉದಾಹರಣೆಗಳನ್ನು ನೋಡಿದ್ದಿದೆ.

ವಿದ್ಯಾಭ್ಯಾಸ ಕೊಡಿಸಿ ಜೀವನ ರೂಪಿಸಿ ಕೊಡಬೇಕಾಗಿದ್ದ ಅಪ್ಪ ಬೇಗ ನಮ್ಮನ್ನು ಅಗಲಿದರು. ಆದರೆ, ಆ ವಯಸ್ಸಿನಲ್ಲಿ ಸಣ್ಣವನು ಎಂದು ನನ್ನಲ್ಲಿ ನೇರವಾಗಿ ಹೇಳದಿದ್ದರೂ, ಅಮ್ಮ ಅಕ್ಕ ಅಣ್ಣಂದಿರ ಬಳಿ ಹೇಳುತ್ತಿದ್ದ ಮಾತು ಪ್ರತೀ ಬಾರಿ ನನ್ನನ್ನು ಜಾಗೃತನನ್ನಾಗಿ ಮಾಡುತ್ತಿತ್ತು. ಇಂದು ನಾನೇನಾದರೂ ಉತ್ತಮ ಜೀವನವನ್ನು ನಡೆಸುತ್ತಿದ್ದೇನೆ ಎಂದರೆ ಅದು ಅಪ್ಪ ಕಲಿಸಿಕೊಟ್ಟ ಶಿಸ್ತಿನ ಪಾಠ. ಲವ್ ಯು, ಮಿಸ್ ಯು ಅಪ್ಪಾ..

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+