ತಿರುಪತಿಯಲ್ಲಿ ತಿಮ್ಮಪ್ಪನ ಪವಾಡ: ದೇವಸ್ಥಾನವನ್ನು ಆವರಿಸಿದ ಕಾಮನ ಬಿಲ್ಲು- ವಿಡಿಯೋ ವೈರಲ್

ತಿರುಪತಿ ತಿಮ್ಮಪ್ಪನ ದೇವಸ್ಥಾನದಲ್ಲಿ ಪವಾಡವೊಂದು ನಡೆದಿದೆ. ದೇವಸ್ಥಾನದ ಗೋಪುರದ ಮೇಲೆ ಕಾಮನ ಬಿಲ್ಲು ಗೋಚರಿಸಿದೆ. ಇದನ್ನು ಕಂಡು ಭಕ್ತರು ಆಶ್ಚರ್ಯಗೊಂಡಿದ್ದಾರೆ. ಗೋಪುರದ ಸುತ್ತು ವೃತ್ತಾಕಾರದಲ್ಲಿ ಕಾಮನಬಿಲ್ಲು ಗೋಚರಿಸಿದ್ದು ಭಕ್ತರು ಇದು ತಿಮ್ಮಪ್ಪನ ಪವಾಡ ಎಂದು ಕರೆದಿದ್ದಾರೆ.

ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದನ್ನು ಕೆಲವರು ದೇವಸ್ಥಾನಕ್ಕೆ ತಿಮ್ಮಪ್ಪ ನೀಡಿದ ರಕ್ಷಣೆ ಎಂದು ಕರೆದರೆ, ಇನ್ನೂ ಕೆಲವರು ಇದನ್ನು ದೇವರ ಆಶೀರ್ವಾದ ಎಂದು ಕರೆದಿದ್ದಾರೆ. ಒಂದಿಷ್ಟು ಜನ ಕಾಮನ ಬಿಲ್ಲಿನ ಮೂಲಕ ತನ್ನ ಭಕ್ತರಿಗೆ ತಿಮ್ಮಪ್ಪ ಆಶೀರ್ವಧಿಸಿದ್ದಾನೆ ಎಂದು ಭಕ್ತಿಯಿಂದ ಕೈಮುಗಿದಿದ್ದಾರೆ.

Devotees Thrilled as Rainbow Appears Over Tirupati Temple – A Divine Miracle!

ಈ ಹಿಂದೆ ಇಂತಹ ಘಟನೆ ತಿರುಪತಿ ತಿಮ್ಮಪ್ಪನ ದೇವಸ್ಥನದ ಸ್ಥಳದಲ್ಲಿ ನಡೆದಿರಲಿಲ್ಲ. ಹೀಗಾಗಿ ಭಕ್ತರು ಇದರ ಸಂಕೇತ ಎನಿರಬಹುದು ಎಂದು ಚಿಂತಿತರಾಗಿದ್ದಾರೆ. ದೇವಸ್ಥಾನ ಗೋಪುರದ ಮೇಲೆ ಬಂಗಳದಲ್ಲಿ ಅರ್ಧ ವೃತ್ತಾಕಾರದಲ್ಲಿ ಕಾಮನಬಿಲ್ಲು ಗೋಚರಿಸಿದೆ. ದೇವಸ್ಥಾನವನ್ನು ಸಂಪೂರ್ಣವಾಗಿ ಕಾಮನಬಿಲ್ಲು ಆವರಿಸಿದೆ. ಇದು ವಿಡಿಯೋದಲ್ಲಿ ತುಂಬಾ ಸ್ಪಷ್ಟವಾಗಿ ಕಾಣಿಸುತ್ತದೆ. ಭಕ್ತರು ಈ ದೃಶ್ಯವನ್ನು ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಕಾಮನಬಿಲ್ಲಿನಲ್ಲಿ ಕೆಂಪು, ಹಳದಿ, ಹಸಿರು, ನೀಲಿ ಮತ್ತು ನೇರಿಳೆ ಬಣ್ಣಗಳು ಕಾಣಿಸಿಕೊಂಡಿವೆ.

ತಿರುಮಲ ತಿರುಪತಿ ದೇವಾಲಯವನ್ನು ಹಿಂದೂ ಧರ್ಮ ಗ್ರಂಥಗಳಲ್ಲಿ ವಿಷ್ಣು ದೇವನು ಕಲಿಯುಗದಲ್ಲಿ ವಾಸಿಸುವ ಐಹಿಕ ಸ್ಥಳವೆಂದು ವಿವರಿಸಲಾಗಿದೆ. ತಿರುಪತಿ ಬಾಲಾಜಿ ಅಥವಾ ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯವು ಹಿಂದೂ ಪುರಾಣದ ಅತ್ಯಂತ ಪ್ರಮುಖ ಹೆಗ್ಗುರುತುಗಳಲ್ಲಿ ಇಂದಾಗಿದೆ. ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿ ನಾವು ಈ ಅದ್ಬುತವಾದ ಹಾಗೂ ಪ್ರಭಾವಶಾಲಿಯಾದ ದೇವಾಲಯವನ್ನು ನೋಡಬಹುದು. ಇಂತಹ ಇತಿಹಾಸ ಪ್ರಸಿದ್ಧ ದೇವಸ್ಥಾನವನ್ನು ಕಾಮನ ಬಿಲ್ಲು ಆವರಿಸಿದ್ದು ನೋಡುಗರನ್ನು ಆಕರ್ಷಿಸಿದೆ.

Devotees Thrilled as Rainbow Appears Over Tirupati Temple – A Divine Miracle!

ತಿರುಪತಿ ಬಾಲಾಜಿ ದೇವಾಲಯವು ಭೂಮಿಯ ಮೇಲಿನ ಅತ್ಯಂತ ಜನಪ್ರಿಯ ದೇವಾಲಯವಾಗಿದ್ದು, ವರ್ಷದ ಯಾವುದೇ ದಿನ ಈ ದೇವಾಲಯಕ್ಕೆ ಭೇಟಿ ನೀಡಬಹುದು. ಲಕ್ಷಾಂತರ ಜನ ನಿತ್ಯ ತಿರುಪತಿಗೆ ಭೇಟಿ ನೀಡುತ್ತಾರೆ. ಇಲ್ಲಿ ಭಕ್ತರು ತಮ್ಮೆಲ್ಲಾ ಇಚ್ಚೆಯನ್ನು ಈಡೇರಿಸುವಂತೆ ಭಗವಂತನಲ್ಲಿ ಬೇಡಿಕೊಳ್ಳುತ್ತಾರೆ.

ಇಲ್ಲಿನ ವೆಂಕಟೇಶ್ವರ ಸ್ವಾಮಿಯ ಮುಖ್ಯ ವಿಗ್ರಹವು ತುಂಬಾ ವಿಶಿಷ್ಟ ಮತ್ತು ಶಕ್ತಿಯುತವಾಗಿದೆ ಎಂದು ಹೇಳಲಾಗುತ್ತದೆ. ಆಕರ್ಷಕ ವಿಗ್ರಹವು ಹಲವಾರು ಪವಾಡದ ಲಕ್ಷಣಗಳನ್ನು ಹೊಂದಿದೆ. ಪ್ರತಿದಿನವೂ, ವಿಗ್ರಹವನ್ನು ಹೂವುಗಳಿಂದ, ಉಡುಪುಗಳಿಂದ ಮತ್ತು ಆಭರಣಗಳಿಂದಭವ್ಯವಾದ ಅಲಂಕರಿಸಲಾಗುತ್ತದೆ.

Devotees Thrilled as Rainbow Appears Over Tirupati Temple – A Divine Miracle!

ವಿಷ್ಣವಿನ ಸ್ವಯಂಭು ವಿಗ್ರಹವಿರುವ ತಿರುಪತಿ ದೇವಸ್ಥಾನದ ಗರ್ಭಗುಡಿಯನ್ನು ಆನಂದ ನಿಲಯಂ ಎಂದು ಕರೆಯಲಾಗುತ್ತದೆ. ಆನಂದ ನಿಲಾಯಂನಲ್ಲಿ ಭೋಗ ಶ್ರೀನಿವಾಸ ಮೂರ್ತಿಯ ಸುಂದರ ವಿಹ್ರಗವೂ ಇದೆ. ತಿರುಪತಿ ಬಾಲಾಜಿ ದೇವಾಲಯದ ನಿರ್ಮಾಣವು ಕ್ರಿ.ಶ 300ರಲ್ಲಿ ಆರಂಭವಾಯಿತು. ಅನೇಕ ಚಕ್ರವರ್ತಿಗಳು ಮತ್ತು ರಾಜರು ಕಾಲಕಾಲಕ್ಕೆ ಅದರ ಅಭಿವೃದ್ಧಿಗೆ ನಿಯಮಿತವಾಗಿ ಕೊಡುಗೆಗಳನ್ನು ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+