ಕಾಲೇಜು ದಿನಗಳಲ್ಲಿ ಓಡಿಸಿದ ಬೈಕ್ ರಿಪೇರಿ ಮಾಡಿಸಿದ ಡಿಸಿಎಂ ಡಿ.ಕೆ.ಶಿವಕುಮಾರ್
ಬೆಂಗಳೂರು, ಸೆಪ್ಟೆಂಬರ್, 01: ಬಹುತೇಕ ಮಂದಿ ಅದೃಷ್ಟವೆಂಬಂತೆ ತಮ್ಮ ಹಳೆಯ ವಾಹನಗಳನ್ನು ಕಳೆದುಕೊಳ್ಳಲು ಇಷ್ಟಪಡುವುದಿಲ್ಲ. ಮನೆ ಮುಂದೆ ಸುಮ್ಮನೆ ನಿಂತಿದ್ದರೂ ಕೂಡ ಅವುಗಳನ್ನು ಬೇರೆಯವರಿಗೆ ಮಾರಾಟ ಮಾಡುವುದಿಲ್ಲ. ಅಷ್ಟರ ಮಟ್ಟಿಗೆ ಅವುಗಳನ್ನು ಹಚ್ಚಿಕೊಂಡಿರುತ್ತಾರೆ. ಇದೀಗ ಡಿಸಿಎಂ ಡಿ.ಕೆ.ಶಿವಕುಮಾರ್ ಸಹ ತಮ್ಮ ಕಾಲೇಜು ದಿನಗಳಲ್ಲಿ ಓಡಿಸಿದ ಬೈಕ್ ಜೊತೆ ನಿಂತು ಹಳೇ ನೆನಪುಗಳನ್ನು ಮೆಲುಕು ಹಾಕಿದ್ದಾರೆ.
ಮತ್ತೊಂದೆಡೆ ಇದೀಗ ಯುವಪೀಳಿಗೆಯವರು ಸಹ ಹಳೇ ಮಾದರಿಯ ಬೈಕ್‌ಗಳನ್ನೇ ಹೆಚ್ಚು ಇಷ್ಟಪಡುತ್ತಾರೆ. ಅವುಗಳಲ್ಲಿ ಕುಳಿತು ಸವಾರಿ ಮಾಡುವ ಗಮತ್ತೇ ಬೇರೆ. ಆದ್ದರಿಂದ ತುಕ್ಕು ಹಿಡಿದಿದ್ದರೂ ಅವುಗಳನ್ನು ರಿಪೇರಿ ಮಾಡಿಸಿಕೊಳ್ಳುತ್ತಾರೆ. ಹಾಗೆಯೇ ಇದೀಗ ಡಿ.ಕೆ.ಶಿವಕುಮಾರ್ ಅವರು ಕೂಡ ತಮ್ಮ ಕಾಲೇಜು ದಿನದಲ್ಲಿ ಓಡಿಸಿದ ಹಳೇ ಬೈಕ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಈ ಫೋಟೋ ಭಾರೀ ವೈರಲ್ ಆಗುತ್ತಿದೆ.

ಕಾಲೇಜು ಹುಡುಗರು ಸಾಮಾನ್ಯವಾಗಿ ಹೊಸ ಮಾದರಿಯ ಬೈಕ್‌ಗಳನ್ನು ಇಷ್ಟಪಡುವುದಿಲ್ಲ. ಬದಲಿಗೆ ಎಲ್ಲಾರೂ ತಮ್ಮ ಕಡೆಯೇ ತಿರುಗಿನೋಡಬೇಕೆನ್ನುವ ಹಂಬಲದಿಂದ ಜೋರಾಗಿ ಸೌಂಡ್ ಮಾಡುವ ಹಳೇ ಗಾಡಿಗಳನ್ನೇ ರಿಪೇರಿ ಮಾಡಿಸಿಕೊಳ್ಳುತ್ತಾರೆ. ಅಥವಾ ಕೆಲವರು ಎಷ್ಟಾದರೂ ಸರಿ ನಾವು ಹಳೇ ಗಾಡಿಗಳನ್ನೇ ಕೊಂಡುಕೊಳ್ಳುವ ಹಂತಕ್ಕೆ ಇಳಿದಿದ್ದಾರೆ. ಅಷ್ಟರ ಮಟ್ಟಿಗೆ ಹಳೇ ಬೈಕ್‌ಗಳು ಇದೀಗ ಹಾಡುಗಳಂತೆ ರೀಲ್ಸ್‌ಗಳಂತೆ ಯುವಕರನ್ನು ಹುಚ್ಚುಹಿಡಿಸಿಬಿಟ್ಟಿವೆ.
ಹಳೇ ಬೈಕ್‌ಗಳ ಇಂಜಿನ್ ಗಟ್ಟಿಮುಟ್ಟಾಗಿರುತ್ತದೆ. ಅಲ್ಲದೆ, ಸೈಲೆನ್ಸರ್ ಜೋರಾಗಿ ಸೌಂಡ್ ಮಾಡುತ್ತದೆ. ಆದರೆ ಈಗ ಮರುಕಟ್ಟೆಗೆ ಲಗ್ಗೆ ಇಡುತ್ತಿರುವ ಬುಲೆಟ್ ಬೈಕ್‌ಗಳ ಸೈಲೆನ್ಸರ್ ಸೌಂಡ್ ಅನ್ನು ಕೂಡ ಪರಿಸರಕ್ಕೆ ಹಾಗೂ ಜನರಿಗೆ ಮಾರಕ ಎಂದು ಕಡಿಮೆ ಮಾಡಿದ್ದಾರೆ.
ಆದ್ದರಿಂದ ಈಗಾಗಲೇ ಹಳೇ ಬೈಕ್ ಇಟ್ಟವರು ಅವುಗಳನ್ನು ಯಾರು ಎಷ್ಟೇ ಹಣ ನೀಡಿದರೂ ಮಾರಾಟ ಮಾಡಲು ಬಯಸುವುದಿಲ್ಲ. ಬದಲಿಗೆ ತಮ್ಮ ಬಳಿಯೇ ಇಟ್ಟುಕೊಂಡು, ಅದಕ್ಕೆ ಮತ್ತಷ್ಟು ಆಲ್ಟ್ರೇಶನ್ ಮಾಡಿಸಿಕೊಂಡು ಓಡಿಸುತ್ತಿದ್ದಾರೆ. ಹಿಂದಿನ ಕಾಲದಲ್ಲಿ ಯಾರಾದರೂ, RX 100, YEZDI, SUZUKIಗಂಳತಹ ಬೈಕ್‌ಗಳನ್ನು ಇಟ್ಟವನೇ ಶ್ರೀಮಂತ ಆಗಿರುತ್ತಿದ್ದ. ಈ ಗಾಡಿಗಳು ಬಂದವೆಂದರೆ ಸಾಕು ಊರೆಲ್ಲ ಸೌಂಡೋ.. ಸೌಂಡು.. ಈಗಲೂ ಇವುಗಳು ಕೆಲವೊಬ್ಬರ ಬಳಿ ಮಾತ್ರ ಇವೆ.
ಇದೀಗ ಮನೆಗೊಂದು ಬೇರೆ ಬೇರೆ ಕಂಪನಿಗಳ ಹೊಸ ಮಾದರಿಯ ಲಕ್ಷ, ಕೋಟಿ, ರೂಪಾಯಿ ಬೈಕ್‌ಳಿದ್ದರೂ ಕೂಡ ಅವುಗಳು ಹಳೇ ಬೈಕ್ ಗಮತ್ತಿನ ಮುಂದೆ ಏನು ಇಲ್ಲ ಎನ್ನುವಂತಾಗಿದೆ. ಹಳೇ ಹಾಡುಗಳು ಇದೀಗ ಹೇಗೆ ರೀಲ್ಸ್‌ಗಳಾಗಿ ಟ್ರೆಂಡ್ ಆಗುತ್ತಿವೆಯೋ ಅದೇ ರೀತಿಯಲ್ಲಿ ಹಳೇ ಕಾಲದ ಬ್ಯಾನ್ ಆಗಿರುವ ಈ ಹಳೇ ಮಾದರಿಯ ಬೈಕ್‌ಗಳು ಟ್ರೆಂಡ್ ಸೃಷ್ಟಿಸಿವೆ.
ಇದೀಗ ಡಿ.ಕೆ.ಶಿಕುಮಾರ್ ಅವರಯ ಕಾಲೇಜು ದಿನಗಳಲ್ಲಿ ಓಡಿಸುತ್ತಿದ್ದ YEZDI ROADKING ಕಂಪನಿಯ CAE 7684 ನಂಬರ್ ಬೈಕ್ ಫೋಟೋವನ್ನು ಹಂಚಿಕೊಂಡಿದ್ದು, ಇದರೊಂದಿಗಿನ ಬಾಂಧವ್ಯದ ಬಗ್ಗೆ ಸವಿನೆನಪುಗಳನ್ನು ಮೆಲುಕು ಹಾಕಿದ್ದಾರೆ.
"ಕಾಲೇಜು ದಿನಗಳಲ್ಲಿ ಬೈಕ್ ಕ್ರೇಜ್ ಸಾಮಾನ್ಯ, ನನ್ನ ಕಾಲೇಜು ದಿನಗಳಲ್ಲಿ ಓಡಿಸಿದ ಬೈಕ್ ಕೆಲ ವರ್ಷಗಳಿಂದ ಧೂಳು ಹಿಡಿದಿತ್ತು. ವಿಂಟೇಜ್ ಬೈಕ್ ಪ್ರೇಮಿಯಾದ ಸುಪ್ರಿತ್ ಎನ್ನುವ ಯುವಕ ಸಂಪೂರ್ಣವಾಗಿ ಮರು ನವೀಕರಣ ಮಾಡಿ ಇಂದು ನನಗೆ ಹಸ್ತಾಂತರಿಸಿದರು. ನನ್ನ ಮೊದಲ ಬೈಕ್ ಇದು, ಇದರೊಂದಿಗೆ ಸಾವಿರಾರು ನೆನಪುಗಳು ಬೆಸೆದುಕೊಂಡಿವೆ. ಆ ನೆನಪಿನ ಪುಟಗಳಿಗೆ ಹೋಗಿ ಬಂದ ಅನುಭವವಾಯಿತು," ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.












Click it and Unblock the Notifications