• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Navratri 2022 Day 9: ನವರಾತ್ರಿ 9ನೇ ದಿನ ಅ. 4, ಸಿದ್ಧಿದಾತ್ರಿ ಪೂಜೆ ಮಹತ್ವ, ಮುಹೂರ್ತ, ಮಂತ್ರ

|
Google Oneindia Kannada News

ನವರಾತ್ರಿಯನ್ನು ದೇಶದಾದ್ಯಂತ ಅತ್ಯಂತ ಸಂಭ್ರಮ ಸಡಗರದಿಂದ ಆಚರಿಸಲಾಗುತ್ತಿದೆ. ಈ ಮಂಗಳಕರವಾದ ಒಂಬತ್ತು ದಿನಗಳ ಹಬ್ಬವನ್ನು ವೈಭವದಿಂದ ಆಚರಿಸಲಾಗುತ್ತಿದೆ. ಈ ಸಮಯದಲ್ಲಿ ಭಕ್ತರು ಒಂಬತ್ತು ದಿನಗಳ ಕಾಲ ದುರ್ಗಾದೇವಿಯ ಒಂಬತ್ತು ಅವತಾರಗಳನ್ನು ಪೂಜಿಸುತ್ತಾರೆ. ಒಂಬತ್ತನೇ ದಿನ ಅಂದರೆ ಮಹಾನವಮಿಯ ದಿನ ದುರ್ಗಾ ದೇವಿಯ ಒಂಬತ್ತನೇ ರೂಪವಾದ ದೇವಿ ಸಿದ್ಧಿದಾತ್ರಿಗೆ ಸಮರ್ಪಿತವಾಗಿದೆ. ದುರ್ಗಾ ದೇವಿಯು ಈ ದಿನದಂದು ರಾಕ್ಷಸ ಮಹಿಷಾಸುರನನ್ನು ಕೊಂದಳು ಎಂದು ಹೇಳಲಾಗುತ್ತದೆ. ಆದ್ದರಿಂದ ಅವಳನ್ನು ಮಹಿಷಾಸುರ ಮರ್ದಿನಿ ಎಂದೂ ಕರೆಯುತ್ತಾರೆ. ಸಿದ್ಧಿದಾತ್ರಿ ದೇವಿಯು ತನ್ನ ಎರಡು ಕೈಗಳಲ್ಲಿ ಗದಾ ಮತ್ತು ಚಕ್ರವನ್ನು ಹೊಂದಿದ್ದಾಳೆ ಮತ್ತು ಇನ್ನೆರಡು ಕೈಗಳಲ್ಲಿ ಕಮಲ ಮತ್ತು ಶಂಕು ಹಿಡಿದಿದ್ದಾಳೆ.

ಮಹಾನವಮಿ ದಿನಾಂಕ ಮತ್ತು ಶುಭ ಮುಹೂರ್ತ

ದೃಕ್ ಪಂಚಾಂಗದ ಪ್ರಕಾರ, ಮಹಾನವಮಿಯ ಶುಭ ಸಮಯಗಳು ಅಕ್ಟೋಬರ್ 3ರಂದು ಸಂಜೆ 04:37 ಕ್ಕೆ ಪ್ರಾರಂಭವಾಗಿ ಅಕ್ಟೋಬರ್ 4ರಂದು ಮಧ್ಯಾಹ್ನ 02:20 ಕ್ಕೆ ಮುಕ್ತಾಯಗೊಳ್ಳಲಿದೆ. ಬ್ರಹ್ಮ ಮುಹೂರ್ತವು 04:38 ಕ್ಕೆ ಪ್ರಾರಂಭವಾಗಿ 05:27 ಕ್ಕೆ ಕೊನೆಗೊಳ್ಳುತ್ತದೆ. ಅಭಿಜಿತ್ ಮುಹೂರ್ತವು ಬೆಳಿಗ್ಗೆ 11:46 ರಿಂದ ಮಧ್ಯಾಹ್ನ 12:33 ರವರೆಗೆ ಮತ್ತು ವಿಜಯ ಮುಹೂರ್ತವು ಮಧ್ಯಾಹ್ನ 02:08 ರಿಂದ 02:55 ರವರೆಗೆ ಇರುತ್ತದೆ.

ಪೂಜಾ ವಿಧಿ, ಮಂತ್ರ

ಪೂಜಾ ವಿಧಿ, ಮಂತ್ರ

ಮಾ ಸಿದ್ಧಿದಾತ್ರಿಯು ಎಲ್ಲಾ ಸಿದ್ಧಿಗಳ ಮೂಲವಾಗಿದೆ ಮತ್ತು ಎಲ್ಲಾ ಎಂಟು ಅಷ್ಟಸಿದ್ಧಿಗಳನ್ನು ಹೊಂದಿದೆ.

ದುರ್ಗಾ ಪೂಜೆಯ ಸಮಯದ ಮಹಾನವಮಿಯು ಪ್ರಮುಖ ದಿನಗಳಲ್ಲಿ ಒಂದಾಗಿದೆ. ಪೂಜೆ ವಿಧಿವಿಧಾನಗಳು ಮಹಾಸ್ನಾನ ಮತ್ತು ಷೋಡಶೋಪಾಚಾರ ಪೂಜೆಯೊಂದಿಗೆ ಪ್ರಾರಂಭವಾಗಿ ಕನ್ಯಾಪೂಜನದೊಂದಿಗೆ ಮುಕ್ತಾಯಗೊಳ್ಳುತ್ತದೆ. ಜನರು ಚಿಕ್ಕ ಹುಡುಗಿಯರನ್ನು ತಮ್ಮ ಮನೆಗೆ ಪೂಜೆ ಮಾಡಲು ಆಹ್ವಾನಿಸುತ್ತಾರೆ. ಜೊತೆಗೆ ಅವರಿಗೆ ಆಹಾರವನ್ನು ನೀಡುತ್ತಾರೆ. ಅವರಿಗೆ ಉಡುಗೊರೆಗಳನ್ನು ಅರ್ಪಿಸಿ ಅವರ ಆಶೀರ್ವಾದವನ್ನೂ ಪಡೆಯುತ್ತಾರೆ.


ನವರಾತ್ರಿ 2022 ದಿನ 9 ಬಣ್ಣ: ಗುಲಾಬಿ

ಗುಲಾಬಿ ಬಣ್ಣ ಪ್ರೀತಿ, ಸಹಾನುಭೂತಿ ಮತ್ತು ತಾಜಾತನಕ್ಕೆ ಮಹತ್ವದ್ದಾಗಿದೆ.


ನವರಾತ್ರಿ 2022 ದಿನ 9 ಮಂತ್ರ

ಮಹಾ ನವಮಿಯಂದು "ಓಂ ದೇವಿ ಸಿದ್ಧಿದತ್ರ್ಯೈ ನಮಃ" ಎಂದು ಪಠಿಸುವ ಮೂಲಕ ಸಿದ್ಧಿದಾತ್ರಿ ದೇವಿಯ ಆಶೀರ್ವಾದವನ್ನು ಪಡೆಯಿರಿ.

ನವರಾತ್ರಿ 2022 ದಿನ 9: ಮಹತ್ವ

ನವರಾತ್ರಿ 2022 ದಿನ 9: ಮಹತ್ವ

ಸಿದ್ಧಿದಾತ್ರಿ ದೇವಿಯು ಎಲ್ಲಾ ಸಿದ್ಧಿಗಳ ಮೂಲ. ಆಕೆ ಎಲ್ಲಾ ಎಂಟು ಅಷ್ಟಸಿದ್ಧಿಗಳನ್ನು ಹೊಂದಿದ್ದಾಳೆ. ದೇವಿಯ ಆರಾಧನೆಯು ಸಹಸ್ರಾರ ಚಕ್ರವನ್ನು ಪ್ರಚೋದಿಸುತ್ತದೆ, ಇದನ್ನು ಕಿರೀಟ ಚಕ್ರ ಎಂದೂ ಕರೆಯುತ್ತಾರೆ. ಹಿಂದೂ ಶಾಸನಗಳ ಪ್ರಕಾರ, ಅವಳು ತನ್ನ ಭಕ್ತರಿಗೆ ಅದೃಷ್ಟವನ್ನು ಆಶೀರ್ವದಿಸುತ್ತಾಳೆ ಮತ್ತು ಅವರಿಗೆ ಮೋಕ್ಷವನ್ನು ಒದಗಿಸುತ್ತಾಳೆ.

ಸಿದ್ಧಿ ಎಂದರೆ ಅಲೌಕಿಕ ಶಕ್ತಿ ಅಥವಾ ಸೃಷ್ಟಿ ಮತ್ತು ಅಸ್ತಿತ್ವದ ಅಂತಿಮ ಮೂಲದ ಅರ್ಥವನ್ನು ಸಾಧಿಸುವ ಸಾಮರ್ಥ್ಯ ಮತ್ತು ದಾತ್ರಿ ಎಂದರೆ ಕೊಡುವುದು. ಸಿದ್ಧಿ ದಾತ್ರಿಯ ಪೂಜೆಯಿಂದ ಸಿಗುವ ಫಲ ಏನು ಎಂಬುದರ ಬಗ್ಗೆ ನಿಮಗೆ ಸುಳಿವು ಸಿಕ್ಕಿರಬಹುದು. ತಾಯಿಯನ್ನು ಪೂಜೆ ಮಾಡಿದರೆ ನಿಜವಾದ ಅಸ್ತಿತ್ವವನ್ನು ಅರಿತುಕೊಳ್ಳುವ ಶಕ್ತಿ ಪ್ರಾಪ್ತಿಯಾಗುತ್ತದೆ. ತಾಯಿಯ ಆರಾಧನೆಯು ನಮ್ಮ ಮನಸ್ಸಿನಲ್ಲಿರುವ ಅಜ್ಞಾನವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ ಎಂದು ಹೇಳಲಾಗುತ್ತದೆ. ಪುರಾಣ ಗ್ರಂಥಗಳ ಪ್ರಕಾರ ಜಗತ್ತಿನ ಎಂಟು ಸಿದ್ಧಿಗಳೆಂದರೆ ಅನಿಮಾ, ಮಹಿಮಾ, ಗರಿಮಾ, ಲಘಿಮಾ, ಪ್ರಾಪ್ತಿ, ಪ್ರಕ್ಯಾಮ್ಯ, ಇನ್ಶಿತ್ವ, ವಶಿತ್ವ. ನವದುರ್ಗೆಗಳಲ್ಲಿ ತಾಯಿ ಸಿದ್ಧಿದಾತ್ರಿಯು ಈ ಎಲ್ಲ ಅದ್ಭುತ ಅಂಶಗಳನ್ನು ಹೊಂದಿದ್ದಾಳೆ.

ಸಿದ್ಧಿದಾತ್ರಿಯ ಮೂಲ:

ಸಿದ್ಧಿದಾತ್ರಿಯ ಮೂಲ:

ಪುರಾಣದ ಕತೆಗಳ ಪ್ರಕಾರ ತಾಯಿ ಸಿದ್ಧಿದಾತ್ರಿಯಿಂದ ಆಶೀರ್ವಾದ ಪಡೆದ ಶಿವನು ಆಕೆಯಿಂದ ಎಂಟು ಸಿದ್ಧಿಗಳನ್ನು ಪಡೆದ ಎಂದು ಹೇಳಲಾಗುತ್ತದೆ. ಬ್ರಹ್ಮಾಂಡದ ಸೃಷ್ಟಿಯ ವೇಳೆ ಶಿವನು ಆದಿ ಪರಾಕಾಷ್ಟೆಯನ್ನು ಆರಾಧಿಸಿದನು. ಎಷ್ಟೇ ಆರಾಧಿಸಿದರೂ ಶಕ್ತಿ ದೇವತೆಯು ಪ್ರತ್ಯಕ್ಷಳಾಗಲಿಲ್ಲ. ನಂತರ ಆಕೆಯು ಶಿವನ ಎಡ ಭಾಗದ ಅರ್ಧದಲ್ಲಿ ಕಾಣಿಸಿಕೊಂಡಳು. ಆಗಿನಿಂದ ಪರಶಿವನು ಅರ್ಧನಾರೀಶ್ವರ ಎನ್ನುವ ಇನ್ನೊಂದು ಹೆಸರಿನಿಂದ ಗುರುತಿಸಿಕೊಂಡನು ಎಂದು ಹೇಳಲಾಗುತ್ತದೆ.

ನೈವೇದ್ಯ

ನೈವೇದ್ಯ

ಈ ದಿನ ಭಕ್ತರು ಸಿದ್ಧಿದಾತ್ರಿ ದೇವಿಗೆ ತೆಂಗಿನಕಾಯಿ, ಖೀರ್ ಮತ್ತು ಪಂಚಾಮೃತವನ್ನು ಅರ್ಪಿಸುತ್ತಾರೆ. ಕನ್ಯಾ ಪೂಜೆ ಮಾಡುವಾಗ, ಭಕ್ತರು ದೇವಿಗೆ ಪೂರಿ, ಹಲ್ವಾ ಮತ್ತು ಕರಿಬೇವನ್ನು ಅರ್ಪಿಸುತ್ತಾರೆ. ಸಿದ್ಧಿದಾತ್ರಿಗೆ ಇಷ್ಟವಾದ ಹೂವು ಸಂಪಿಗೆ ಹೂವು. ಇದರಿಂದಾಗಿ ಈ ದಿನ ಸಂಪಿಗೆ ಹೂವು ಇಟ್ಟು ಪೂಜೆ ಮಾಡಲಾಗುತ್ತದೆ.

English summary
Dasara Festival- Navaratri 9th day on October 4. Goddess Maa Siddhidatri is worshipped on this day. Know about the puranas describing Maa Siddhidatri and the significance of worshipping her.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X