Diet: ಈ ಬಿಳಿ ಪದಾರ್ಥಗಳಿಂದ ದೂರವಿರಿ: ನಿಮ್ಮ ಡಯಟ್‌ನಲ್ಲಿ ಇವುಗಳನ್ನು ಕಡಿಮೆ ಮಾಡಿ
ಉತ್ತಮ ಆಹಾರ ಉತ್ತಮ ಜೀವನವನ್ನು ನಡೆಸಲು ಸಹಾಯಕ. ಬದಲಾಗುತ್ತಿರುವ ಜೀವನ ಕ್ರಮದಲ್ಲಿ ಆಹಾರ ಸೇವನೆಯಲ್ಲಿ ಪೋಷಕಾಂಶಗಳ ಕೊರತೆ ಎದ್ದು ಕಾಣುತ್ತದೆ. ಫಾಸ್ಟ್ ಫುಡ್ ಹಾಗೂ ಬದಲಾಗುತ್ತಿರುವ ನಮ್ಮ ಜೀವನ ಶೈಲಿ ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ. ಕೆಟ್ಟ ಆಹಾರ ಪದ್ಧತಿಯನ್ನು ಅಳವಿಡಿಸಿಕೊಳ್ಳುವುದರಿಂದ ದೇಹದಲ್ಲಿ ಪೋಷಕಾಂಶದ ಕೊರತೆ ಕಾಡುತ್ತದೆ.
ಫಾಸ್ಟ್ ಫುಡ್ ಹಾಗೂ ವಿದೇಶಿ ಆಹಾರ ಪದ್ಧತಿಗಳು ನಮ್ಮ ದೇಹವನ್ನು ಹಾಳು ಮಾಡುತ್ತಿವೆ. ಇವುಗಳಲ್ಲಿ ಹೆಚ್ಚಾಗಿ ಉಪ್ಪು, ಸಕ್ಕರೆ, ಮೈದಾ, ಅಜಿನೊಮೊಟೊ, ಅಕ್ಕಿ ಮತ್ತು ಆಲೂಗಡ್ಡೆಯಂತಹ ಬಿಳಿ ವಸ್ತುಗಳನ್ನು ಬಳಸಲಾಗುತ್ತದೆ. ಇದರಿಂದ ನಮ್ಮ ದೇಹದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಇವುಗಳನ್ನು ಅತಿಯಾಗಿ ಸೇವಿಸುವುದರಿಂದ ಆರೋಗ್ಯ ಹದಗೆಡುತ್ತದೆ. ಅಲ್ಲದೆ ನಾವೇ ಬೇರೆ ರೋಗಗಳನ್ನು ಕರೆದು ಅಪ್ಪಿಕೊಂಡಂತೆ ಆಗುತ್ತದೆ. ಇದರಿಂದ ಬೊಜ್ಜು, ರಕ್ತದೊತ್ತಡದಂತಹ ಕಾಯಿಲೆಗಳು ಬರುವುದಲ್ಲದೆ, ವ್ಯಕ್ತಿಯ ಆಯಸ್ಸು ಕಡಿಮೆಯಾಗುತ್ತಿದೆ.

ನೀವು ಸಹ ಜೀವನ ಪದ್ಧತಿಯನ್ನು ಈಗ ಬದಲಿಸಿಕೊಂಡಿರುತ್ತೀರಾ. ಈಗ ಹೆಚ್ಚಿನ ಜನ ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಾರೆ. ಅಲ್ಲದೆ ಉತ್ತಮ ಆಹಾರದ ಕಡೆಗೂ ಮುಖ ಮಾಡುತ್ತಿರುವುದು ಕಂಡು ಬರುತ್ತಿದೆ. ಬೇಕರಿ ಪದಾರ್ಥ ಮುಕ್ತ, ಸಕ್ಕರೆ ಮುಕ್ತ ಆಹರವನ್ನು ಸೇವಿಸುವತ್ತ ಜನ ಮುಖ ಮಾಡುತ್ತಿದ್ದಾರೆ. ಅಲ್ಲದೆ ತಮ್ಮ ಡಯಟ್ ಬಗ್ಗೆ ಅವರಿಗೆ ಹೆಚ್ಚಿನ ಗಮನ ಇದ್ದೇ ಇರುತ್ತದೆ. ನೀವು ಸಹ ಡಯಟ್ ಮಾಡುತ್ತಿದ್ದರೆ, ನೀವು ಈ ಪದಾರ್ಥಗಳಿಂದ ದೂರ ಉಳಿದರೆ ಬೆಸ್ಟ್..
ಮಿತವಾದ ಉಪ್ಪು ಸೇವನೆ
ಉಪ್ಪಿನ ಅತಿಯಾದ ಸೇವನೆ ಆರೋಗ್ಯಕ್ಕೆ ಹಾನಿಕಾರಕ. ಸಾಕಷ್ಟು ಸೋಡಿಯಂ ಮತ್ತು ಕ್ಲೋರೈಡ್ ದೇಹಕ್ಕೆ ಉಪ್ಪಿನ ಮೂಲಕ ಮಾತ್ರ ಪೂರೈಕೆಯಾಗುತ್ತದೆ. ಆದರೆ ಹೆಚ್ಚು ಉಪ್ಪನ್ನು ತಿನ್ನುವುದನ್ನು ತಪ್ಪಿಸಬೇಕು. ಇದು ದೇಹದಲ್ಲಿನ ನೀರಿನ ಪ್ರಮಾಣವನ್ನು ಪರಿಣಾಮ ಬೀರುತ್ತದೆ. ಇದರ ಸಹಾಯದಿಂದ ರಕ್ತನಾಳಗಳಿಗೆ ಹಾನಿಗೊಳಗಾಗುತ್ತದೆ. ಹೆಚ್ಚು ಉಪ್ಪನ್ನು ಸೇವಿಸುವುದರಿಂದ ಮೂಳೆಗಳು ದುರ್ಬಲವಾಗುತ್ತವೆ ಮತ್ತು ಅನೇಕ ರೀತಿಯ ಹೊಟ್ಟೆಯ ಸಮಸ್ಯೆಗಳಿಗೆ ಅಡಿಪಾಯ ಹಾಕಿಕೊಡುತ್ತದೆ. ದೇಹದಲ್ಲಿ ನೀರು ಸಂಗ್ರಹವಾಗುವುದರಿಂದ ರಕ್ತದೊತ್ತಡ ಹೆಚ್ಚಾಗುತ್ತದೆ. ಆದಷ್ಟು ಕಡಿಮೆ ಉಪ್ಪನ್ನು ಸೇವಿಸಿದರೆ ಒಳ್ಳೆಯದು.

ಸಕ್ಕರೆ ಸಿಹಿ ಆದರೆ ಆರೋಗ್ಯಕ್ಕೆ ಕಹಿ
ಸಕ್ಕರೆ ಸೇವನೆ ಮಿತಿಯಾಗಿದ್ದರೆ ಒಳ್ಳೆಯದು. ಅದೇ ನಮ್ಮ ಹಿರಿಯರು ಹೇಳಿದ್ದಾರಲ್ಲಾ ಮಿತವಾಗಿ ತಿನ್ನು ಎಂದು. ಹಾಗಿ ಮಾಡಿದರೆ ಉತ್ತಮ. ಉತ್ತಮ ರುಚಿಕರ. ಇದರಿಂದ ತಯಾರಿಸಿದ ಖಾದ್ಯಗಳು ಸೇವನೆ ಸಹ ಆರೋಗ್ಯಕ್ಕೆ ಹಾನಿ ಉಂಟು ಮಾಡಬಹುದು.
ಇದನ್ನು ಅತಿಯಾಗಿ ತಿನ್ನುವುದರಿಂದ ನಿಮ್ಮ ಶಕ್ತಿಯನ್ನು ಕಡಿಮೆ ಮಾಡುವುದಲ್ಲದೆ ಮಧುಮೇಹದ ಸಾಧ್ಯತೆಯನ್ನು ಹೆಚ್ಚಿಸುತ್ತದೆ.

ಅನ್ನ ಸೇವನೆ ಮಿತಿಯಲ್ಲಿರಲಿ
ಅನ್ನ ಸೇವನೆ ಭಾರತೀಯ ಆಹಾರ ಪದ್ಧತಿಯಲ್ಲಿ ಪ್ರಮುಖ. ಬಹಳಷ್ಟು ಜನರ ಪ್ರೀತಿಯ ಖಾದ್ಯ. ಊಟದಲ್ಲಿ ಅನ್ನ ಇಲ್ಲದಿದ್ದರೆ ಅದು ಊಟವನ್ನು ಮಾಡಿದಂತೆ ಆಗುವುದಿಲ್ಲ. ಒಂದು ಸಂಶೋಧನೆಯ ಪ್ರಕಾರ, ಬಿಳಿ ಅಕ್ಕಿಯನ್ನು ತಿನ್ನುವುದು ಟೈಪ್ -2 ಮಧುಮೇಹದ ಅಪಾಯವನ್ನು ಹೆಚ್ಚಿಸುತ್ತದೆ. ಇದರಿಂದ ತೂಕವೂ ಹೆಚ್ಚುತ್ತದೆ. ಅಕ್ಕಿ ಬಿಳಿಯಾಗಿರುತ್ತದೆ ಮತ್ತು ಅದರ ಸಂಸ್ಕರಣಾ ಪ್ರಕ್ರಿಯೆಯಲ್ಲಿ ಹೊಟ್ಟು ಮತ್ತು ಸೂಕ್ಷ್ಮಾಣುಗಳನ್ನು ತೆಗೆದುಹಾಕುವ ಮೂಲಕ ಅದರಲ್ಲಿರುವ ಪೋಷಕಾಂಶಗಳು ಕಡಿಮೆಯಾಗುತ್ತವೆ.
ಅನ್ನದ ಅತಿಯಾದ ಸೇವನೆಯು ಸಕ್ಕರೆಯ ಜೊತೆಗೆ ಬೊಜ್ಜಿನ ಸಮಸ್ಯೆಯನ್ನು ಹೆಚ್ಚಿಸುತ್ತದೆ ಎಂಬುದು ನಿಮಗೆ ತಿಳಿದಿದೆಯೇ. ಆದ್ದರಿಂದ, ನೀವು ಬಿಳಿ ಅಕ್ಕಿಯ ಬದಲಿಗೆ ಬ್ರೌನ್ ರೈಸ್ ಅನ್ನು ಸೇವಿಸದರೆ ಉತ್ತಮ.

ಮೈದಾ ಹಿಟ್ಟು ಆರೋಗ್ಯಕ್ಕೆ ತುಂಬಾ ಅಪಾಯಕಾರಿ. ಸಂಶೋಧನೆಯ ಪ್ರಕಾರ, ಹಿಟ್ಟಿನಲ್ಲಿರುವ ಸಂಸ್ಕರಿಸಿದ ಕಾರ್ಬೋಹೈಡ್ರೇಟ್‌ಗಳು ದೇಹವು ಹೆಚ್ಚು ಇನ್ಸುಲಿನ್ ಅನ್ನು ಉತ್ಪಾದಿಸಲು ಕಾರಣವಾಗುತ್ತದೆ, ಇದರಿಂದಾಗಿ ಜನರು ಅತಿಯಾಗಿ ತಿನ್ನುತ್ತಾರೆ. ಇದು ತೂಕವನ್ನು ಹೆಚ್ಚಿಸುವುದು ಮಾತ್ರವಲ್ಲದೆ ಅಧಿಕ ರಕ್ತದ ಸಕ್ಕರೆ ಮತ್ತು ಜೀರ್ಣಾಂಗ ವ್ಯವಸ್ಥೆಯ ಸಮಸ್ಯೆಗಳನ್ನು ಹೆಚ್ಚಿಸುತ್ತದೆ.












Click it and Unblock the Notifications