ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮನೆಯಲ್ಲೇ ತಯಾರಿಸಿದ ಮಾಸ್ಕ್ ಗಳನ್ನು ಸ್ವಚ್ಛಗೊಳಿಸಿ, ಮರುಬಳಕೆ ಮಾಡುವುದು ಹೇಗೆ?

|
Google Oneindia Kannada News

ಮಾರಣಾಂತಿಕ ಕೊರೊನಾ ವೈರಸ್ ವ್ಯಾಪಕವಾಗಿ ಹರಡಲು ಆರಂಭಿಸಿದ ಮೇಲೆ ಮುಖಗವಸು/ ಮಾಸ್ಕ್ ಗಳಿಗೆ ಹಾಹಾಕಾರ ಶುರುವಾಗಿದೆ. ಮನೆಯಿಂದ ಹೊರಗೆ ಬಂದರೆ ಮಾಸ್ಕ್ ಧರಿಸುವುದು ಕಡ್ಡಾಯವಾದ ಮೇಲೆ ಹಲವು ಮಂದಿ ಮನೆಯಲ್ಲೇ ತಯಾರಿಸಿದ ಮಾಸ್ಕ್ ಗಳನ್ನು ಧರಿಸುತ್ತಿದ್ದಾರೆ.

Recommended Video

ಮೇ 3 ರ ನಂತರ ಎಫೆಕ್ಟ್ ಇನ್ನೂ ಜಾಸ್ತಿಯಾಗುತ್ತೆ,ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿದೆ | DKS | Oneindia Kannada

ಮನೆಯಲ್ಲೇ ತಯಾರಿಸಿದ ಬಟ್ಟೆ ಮಾಸ್ಕ್ ಗಳನ್ನು ಆಗಾಗ ಸ್ವಚ್ಛಗೊಳಿಸಿ ಮರುಬಳಕೆ ಮಾಡಬಹುದು. ಹಾಗಾದ್ರೆ, ಕೊರೊನಾ ವೈರಸ್ ನಿಂದ ಪಾರಾಗಲು ಮನೆಯಲ್ಲೇ ತಯಾರಿಸಿದ ಮಾಸ್ಕ್ ಗಳನ್ನು ಸ್ವಚ್ಛಗೊಳಿಸಿ, ಮರುಬಳಕೆ ಮಾಡುವುದು ಹೇಗೆ ಅಂತ ನೀವು ಯೋಜಿಸುತ್ತಿದ್ದರೆ.. ಇಲ್ಲಿದೆ ನೋಡಿ ನಾಲ್ಕು ವಿಧಾನಗಳು...

ಸಿಹಿ ಸುದ್ದಿ: ಮಂಗಗಳ ಮೇಲೆ ಪ್ರಯೋಗ ಯಶಸ್ವಿ, ಸೆಪ್ಟೆಂಬರ್ ನಲ್ಲಿ ಕೊರೊನಾ ಲಸಿಕೆ!ಸಿಹಿ ಸುದ್ದಿ: ಮಂಗಗಳ ಮೇಲೆ ಪ್ರಯೋಗ ಯಶಸ್ವಿ, ಸೆಪ್ಟೆಂಬರ್ ನಲ್ಲಿ ಕೊರೊನಾ ಲಸಿಕೆ!

ಮಾಸ್ಕ್ ಗಳನ್ನು ಮನೆಯಲ್ಲಿ ಹೇಗೆಲ್ಲಾ ಸ್ವಚ್ಛಗೊಳಿಸಬಹುದು ಎಂಬುದನ್ನು ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವಿಡಿಯೋ ಮೂಲಕ ತಿಳಿಸಿಕೊಟ್ಟಿದೆ.

How To Wash Home Made Masks? Watch Karnataka Health Department Video

ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವಿಡಿಯೋ ಮೂಲಕ ಮಾಸ್ಕ್ ಸ್ವಚ್ಛಗೊಳಿಸಲು ತಿಳಿಸಿರುವ ವಿಧಾನಗಳು ಇಂತಿವೆ:

* ವಿಧಾನ - 1

ಸಾಬೂನು ಮತ್ತು ಬೆಚ್ಚನೆಯ ನೀರನ್ನು ಬಳಸಿ ಮುಖಗವಸನ್ನು ಸಂಪೂರ್ಣವಾಗಿ ತೊಳೆಯಿರಿ. ಬಳಿಕ ಬಿಸಿಲಿನಲ್ಲಿ ಕನಿಷ್ಟ ಐದು ಗಂಟೆಗಳವರೆಗೆ ಒಣಗಲು ಬಿಡಿ

ಕೊರೊನಾ ನರಕದಿಂದ ಪಾರಾಗಲು, ನೆಮ್ಮದಿ ನೆಲೆಸಲು ಇನ್ನೂ 10 ವರ್ಷ ಬೇಕೆ?ಕೊರೊನಾ ನರಕದಿಂದ ಪಾರಾಗಲು, ನೆಮ್ಮದಿ ನೆಲೆಸಲು ಇನ್ನೂ 10 ವರ್ಷ ಬೇಕೆ?

* ವಿಧಾನ - 2

ಪ್ರೆಶರ್ ಕುಕ್ಕರಿನ ಒಳಗೆ ಉಪ್ಪು ನೀರು ಹಾಕಿ, ಅದರಲ್ಲಿ ಮುಖಗವಸುಗಳನ್ನು ಇರಿಸಿ.

ಪ್ರೆಶರ್ ನಲ್ಲಿ ಹತ್ತು ನಿಮಿಷ ಕುದಿಸಿ, ನಂತರ ಒಣಗಲು ಬಿಡಿ.

* ವಿಧಾನ - 3

ಪ್ರೆಶರ್ ಕುಕ್ಕರ್ ಇಲ್ಲದಿದ್ದಲ್ಲಿ, ಬಟ್ಟೆಯ ಮುಖಗವಸನ್ನು ಬಿಸಿ ನೀರಿನಲ್ಲಿ 15 ನಿಮಿಷಗಳವರೆಗೆ ಕುದಿಸಿ. ಬಳಿಕ ಒಣಗಲು ಬಿಡಿ.

* ವಿಧಾನ - 4

ಸಾಬೂನಿನ ನೀರಿನಲ್ಲಿ ಕೂಡ ನೀವು ಮುಖಗವಸನ್ನು ಸ್ವಚ್ಛಗೊಳಿಸಬಹುದು.

* ಸ್ವಚ್ಛಗೊಳಿಸಿದ ನಂತರ ಮುಖಗವಸು ಒಣಗಿದ ಮೇಲೆ, ಇಸ್ತ್ರಿ ಪೆಟ್ಟಿಗೆಯನ್ನು ಬಳಸಿ 5 ನಿಮಿಷಗಳ ಕಾಲ ಮುಖಗವಸನ್ನು ಬಿಸಿ ಮಾಡಿದರೆ ನಿಮ್ಮ ಮುಖಗವಸು ಮರುಬಳಕೆಗೆ ಸಿದ್ಧ.

English summary
How to Wash Home Made Masks? Watch Karnataka Health Department Video.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X