ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಾವ ವಯಸ್ಸಿನವರಲ್ಲಿ ಕೊರೊನಾ ಲಸಿಕೆಯಿಂದ ಹೆಚ್ಚಿನ ಪ್ರತಿಕಾಯ ಸೃಷ್ಟಿ?

|
Google Oneindia Kannada News

ಕೊರೊನಾ ಸೋಂಕಿನ ವಿರುದ್ಧ ಹೋರಾಡಲು ಹಲವು ದೇಶಗಳು ಲಸಿಕೆಗಳನ್ನು ಅಭಿವೃದ್ಧಿಪಡಿಸಿದ್ದು, ಸೋಂಕು ಹರಡುವಿಕೆ ತಡೆಗೆ ಭಾರತದಲ್ಲಿ 18 ವಯಸ್ಸಿನ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ನೀಡಲಾಗುತ್ತಿದೆ. ಸೋಂಕಿನ ವಿರುದ್ಧ ಹೋರಾಡಲು ದೇಹದಲ್ಲಿ ಪ್ರತಿಕಾಯ ಸೃಷ್ಟಿಗೆ ಈ ಲಸಿಕೆಗಳು ಸಹಕಾರಿ ಎನ್ನಲಾಗಿದೆ.

ಆದರೆ ಕೊರೊನಾ ಲಸಿಕೆ ಪಡೆದ ನಂತರ ಎಲ್ಲರ ದೇಹದಲ್ಲಿಯೂ ಒಂದೇ ಪ್ರಮಾಣದಲ್ಲಿ ಪ್ರತಿಕಾಯ ಸೃಷ್ಟಿಯಾಗುವುದೇ? ಭಿನ್ನ ವಯೋಮಾನಕ್ಕೆ ತಕ್ಕಂತೆ ದೇಹದಲ್ಲಿ ಪ್ರತಿಕಾಯ ಸೃಷ್ಟಿಯಾಗುವುದೇ? ಈ ಸಂಬಂಧ ಒರೆಗಾನ್ ಹೆಲ್ತ್ ಅಂಡ್ ಸೈನ್ಸ್ ಯೂನಿವರ್ಸಿಟಿ ಅಧ್ಯಯನವೊಂದನ್ನು ನಡೆಸಿದೆ. "ಜರ್ನಲ್ ಆಫ್ ಅಮೆರಿಕನ್ ಮೆಡಿಕಲ್ ಅಸೋಸಿಯೇಷನ್‌"ನಲ್ಲಿ ಈ ಅಧ್ಯಯನವನ್ನು ಪ್ರಕಟಗೊಳಿಸಲಾಗಿದೆ. ಕೊರೊನಾ ಲಸಿಕೆಗೂ, ದೇಹದಲ್ಲಿನ ಪ್ರತಿಕಾಯ ಸೃಷ್ಟಿಗೂ, ವಯಸ್ಸಿಗೂ ಇರುವ ಸಂಬಂಧದ ಕುರಿತು ಅಧ್ಯಯನ ವಿವರಣೆ ನೀಡಿದೆ. ಲಸಿಕೆಯಿಂದ ಪ್ರತಿಕಾಯ ಸೃಷ್ಟಿ ಸಂಬಂಧ ಅಧ್ಯಯನ ಏನು ಹೇಳುತ್ತಿದೆ? ಮುಂದೆ ಓದಿ...

ಯಾರಿಗೆ ಮೊದಲು ಲಸಿಕೆ ನೀಡಿದರೆ ಕೊರೊನಾ ರೂಪಾಂತರ ತಡೆಯಬಹುದು?; ತಜ್ಞರ ಉತ್ತರ...ಯಾರಿಗೆ ಮೊದಲು ಲಸಿಕೆ ನೀಡಿದರೆ ಕೊರೊನಾ ರೂಪಾಂತರ ತಡೆಯಬಹುದು?; ತಜ್ಞರ ಉತ್ತರ...

ಲಸಿಕೆ ಪಡೆದಿದ್ದರೂ ವಯಸ್ಸಾದವರಿಗೆ ಸೋಂಕು ತಗುಲುತ್ತಿದೆ

ಲಸಿಕೆ ಪಡೆದಿದ್ದರೂ ವಯಸ್ಸಾದವರಿಗೆ ಸೋಂಕು ತಗುಲುತ್ತಿದೆ

ಆ್ಯಂಟಿಬಾಡೀಸ್ ಅಥವಾ ಪ್ರತಿಕಾಯ ಎನ್ನುವುದು ರಕ್ತದಲ್ಲಿನ ಪ್ರೊಟೀನ್ ಆಗಿದ್ದು, ಸೋಂಕಿನ ವಿರುದ್ಧ ಹೋರಾಡಲು ದೇಹಕ್ಕೆ ಅಗತ್ಯ ಶಕ್ತಿಯನ್ನು ಇದು ಒದಗಿಸುತ್ತದೆ. ಕೊರೊನಾ ಸೋಂಕಿನ ವಿರುದ್ಧ ಹೋರಾಟದಲ್ಲಿ ಈ ಪ್ರೊಟೀನ್ ಪ್ರಮುಖ ಪಾತ್ರ ವಹಿಸುತ್ತದೆ. ಆದರೆ ಹೆಚ್ಚು ವಯಸ್ಸಾದವರು ಕೊರೊನಾ ಲಸಿಕೆ ಪಡೆದುಕೊಂಡಿದಿದ್ದರೂ ಅವರಲ್ಲಿ ಕೊರೊನಾ ರೂಪಾಂತರಗಳು ಕಾಣಿಸಿಕೊಳ್ಳುತ್ತಿವೆ ಎಂದು ಒರೆಗಾನ್ ಹೆಲ್ತ್ ಅಂಡ್ ಸೈನ್ಸ್ ಯೂನಿವರ್ಸಿಟಿಯ ಹಿರಿಯ ಲೇಖಕ, ಸಹಾಯಕ ಪ್ರಾಧ್ಯಾಪಕ ಫಿಕಾಡು ಟಫೇಸಿ ಆತಂಕ ವ್ಯಕ್ತಪಡಿಸಿದ್ದಾರೆ.

Long Covid: ಏನಿದು ಸೋಂಕಿನ ಮತ್ತೊಂದು ವರಸೆ? ಕಳವಳ ವ್ಯಕ್ತಪಡಿಸಿದ WHOLong Covid: ಏನಿದು ಸೋಂಕಿನ ಮತ್ತೊಂದು ವರಸೆ? ಕಳವಳ ವ್ಯಕ್ತಪಡಿಸಿದ WHO

ಯಾವ ವಯೋಮಾನದವರಲ್ಲಿ ಪ್ರತಿಕಾಯ ಮಟ್ಟ ಕಡಿಮೆ?

ಯಾವ ವಯೋಮಾನದವರಲ್ಲಿ ಪ್ರತಿಕಾಯ ಮಟ್ಟ ಕಡಿಮೆ?

ವಯಸ್ಸಾದವರು ಲಸಿಕೆ ಪಡೆದ ನಂತರ ತಾವು ಸುರಕ್ಷಿತ ಎಂದು ಭಾವಿಸುವಂತಿಲ್ಲ. ಅವರಿಗೆ ಬೇಗನೆ ಸೋಂಕು ತಗುಲಬಹುದಾದ್ದರಿಂದ ಅವರ ಜೊತೆಯಿರುವವರು ಅಥವಾ ಕುಟುಂಬದವರು ಕೂಡ ಲಸಿಕೆ ಪಡೆದುಕೊಳ್ಳಬೇಕು. ಒಟ್ಟಾರೆ ಲಸಿಕೆ ನೀಡುವ ಪ್ರಕ್ರಿಯೆಯನ್ನು ಚುರುಕುಗೊಳಿಸಬೇಕು ಎಂಬುದನ್ನು ಅಧ್ಯಯನ ತಿಳಿಸಿಕೊಟ್ಟಿದೆ.

ಫೈಜರ್ ಲಸಿಕೆಯ ಎರಡನೇ ಡೋಸ್ ಪಡೆದ ಎರಡು ವಾರಗಳ ನಂತರ ಭಿನ್ನ ವಯಸ್ಸಿನ ಸುಮಾರು 50 ಜನರನ್ನು ಗುಂಪುಗಳನ್ನು ಮಾಡಿ, ಲಸಿಕೆ ಪಡೆದ ನಂತರ ಅವರ ರಕ್ತದಲ್ಲಿನ ಪ್ರತಿಕಾಯ ಮಟ್ಟವನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. 20ರ ವಯೋಮಾನದವರಲ್ಲಿ ಅತಿ ಹೆಚ್ಚಿನ ಪ್ರತಿಕಾಯ ಸೃಷ್ಟಿಯಾಗಿರುವುದು ಕಂಡುಬಂದಿದೆ. 70ರಿಂದ 82 ವಯೋಮಾನದವರಿಗೆ ಹೋಲಿಸಿದರೆ ಯುವಜನರಲ್ಲಿ ಅತಿ ಹೆಚ್ಚಿನ ಪ್ರತಿಕಾಯ ಸೃಷ್ಟಿಯಾಗಿದೆ. ಕಡಿಮೆ ವಯಸ್ಸಿನವರಲ್ಲಿ ಹೆಚ್ಚಿನ ಪ್ರತಿಕಾಯ ಮಟ್ಟ ಸೃಷ್ಟಿಯಾಗಿರುವ ಅಂಶವನ್ನು ಅಧ್ಯಯನ ಸಾಬೀತುಪಡಿಸಿದೆ. ಆದರೆ ಯಾವುದೇ ವಯೋಮಾನದವರಿಗಾದರೂ ಲಸಿಕೆ ಹಾಕಿಸಿಕೊಳ್ಳುವುದನ್ನು ತಪ್ಪಿಸುವಂತಿಲ್ಲ ಎಂಬುದನ್ನು ಸಾರಿ ಹೇಳಿದೆ.

ವಯಸ್ಸಾದವರಲ್ಲಿ ಲಸಿಕೆಯಿಂದ ಪ್ರತಿಕಾಯ ಮಟ್ಟ ಕಡಿಮೆ

ವಯಸ್ಸಾದವರಲ್ಲಿ ಲಸಿಕೆಯಿಂದ ಪ್ರತಿಕಾಯ ಮಟ್ಟ ಕಡಿಮೆ

ವಯಸ್ಕರಿಗೆ ಹೋಲಿಸಿದರೆ ವಯಸ್ಸಾದವರಲ್ಲಿ, ಅಂದರೆ 60 ಅಥವಾ ಅದಕ್ಕಿಂತ ಹೆಚ್ಚು ವಯಸ್ಸಾದವರಲ್ಲಿ ಕೊರೊನಾ ಲಸಿಕೆಯಿಂದ ಉತ್ಪತ್ತಿಯಾಗುವ ಪ್ರತಿಕಾಯಗಳ ಮಟ್ಟ ಕಡಿಮೆಯಿದೆ. ಆದರೆ ವಯಸ್ಸಾದವರಲ್ಲಿ, ಲಸಿಕೆಯು ಸೋಂಕು ತಗುಲುವುದನ್ನು ಹಾಗೂ ಸೋಂಕು ಗಂಭೀರ ಸ್ವರೂಪ ಪಡೆಯುವುದನ್ನು ತಡೆಯಲು ಸಹಕಾರಿಯಾಗುತ್ತಿದೆ. ಈ ವಿಷಯದಲ್ಲಿ ಲಸಿಕೆಗಳು ನಿಜಕ್ಕೂ ಬಲಿಷ್ಠವಾಗಿವೆ ಎಂಬುದನ್ನು ಅಧ್ಯಯನ ಒತ್ತಿ ಹೇಳಿದೆ.

ಸೋಂಕು ಯಾವಾಗ ಯಾವ ರೂಪ ತಳೆಯುತ್ತದೆ ಹೇಳುವುದು ಕಷ್ಟ

ಸೋಂಕು ಯಾವಾಗ ಯಾವ ರೂಪ ತಳೆಯುತ್ತದೆ ಹೇಳುವುದು ಕಷ್ಟ

ವಯಸ್ಸಾದವರಿಗೆ ಕೊರೊನಾ ಲಸಿಕೆ ನೀಡಲು ಮೊದಲು ಆದ್ಯತೆ ನೀಡಬೇಕು ಎಂದು ಸಲಹೆ ನೀಡಿರುವ ಅಧ್ಯಯನ, ಕೊರೊನಾ ಸೋಂಕು ನಿಯಂತ್ರಣಕ್ಕೆ ಸ್ಥಳೀಯ ಸಮುದಾಯಗಳಿಗೆ ಲಸಿಕೆ ನೀಡುವುದನ್ನು ಆದ್ಯತೆಯಾಗಿಸಿಕೊಳ್ಳಬೇಕು ಎಂಬುದನ್ನು ಒತ್ತಿ ಹೇಳಿದೆ.

"ಸದ್ಯದ ಪರಿಸ್ಥಿತಿಯಲ್ಲಿ ಕೊರೊನಾ ಸೋಂಕು ಯಾವಾಗ ಯಾವ ರೂಪ ತಳೆಯುತ್ತದೆ ಎಂಬುದನ್ನು ಅಂದಾಜಿಸುವುದು ಸಾಧ್ಯವಿಲ್ಲ. ಇದರೊಂದಿಗೆ, ವಯಸ್ಸಾದವರು ಬೇಗನೆ ಸೋಂಕಿಗೆ ತುತ್ತಾಗುವ ಸಾಧ್ಯತೆಯಿರುವುದರಿಂದ ಹಾಗೂ ಹೊಸ ಹೊಸ ರೂಪಾಂತರಗಳು ಸೃಷ್ಟಿಯಾಗುತ್ತಿರುವುದರಿಂದ ಲಸಿಕೆಯನ್ನು ಅವರಿಗೆ ನೀಡುವುದು ಕಡ್ಡಾಯ. ಹೆಚ್ಚು ಜನರಿಗೆ ಲಸಿಕೆ ನೀಡಿದಷ್ಟು, ಸೋಂಕು ಹರಡುವ ಪ್ರಮಾಣ ಕಡಿಮೆಯಾಗುತ್ತದೆ" ಎಂದು ಟಫೇಸೀ ತಿಳಿಸಿದ್ದಾರೆ.

English summary
Oregon health and science university explains corona vaccines and its immune response in different age,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X