ಫ್ರೀಲಾನ್ಸ್ ಪತ್ರಕರ್ತರಾಗಬೇಕೆ? ಇಲ್ಲಿದೆ ಉತ್ತಮ ಅವಕಾಶ!
ಬರವಣಿಗೆಯೆಂಬುದು ಕೆಲವರಿಗೆ ಅಂತರ್ಗತ ಕಲೆಯಾಗಿ ಅರಳಿರುತ್ತದೆ, ಕೆಲವೊಬ್ಬರು ಬರೆದುಬರೆದೇ ಅಕ್ಷರಲೋಕದಲ್ಲಿ ತಮ್ಮದೊಂದು ಛಾಪನ್ನು ರೂಪಿಸಿಕೊಂಡಿರುತ್ತಾರೆ, ಕೆಲವರು ಬರವಣಿಗೆಯ ತುಡಿತ, ಕಲೆಗಾರಿಕೆ, ಪ್ರತಿಭೆ ಇದ್ದರೂ ಅವಕಾಶವಿಲ್ಲದೆ ಚಟಪಡಿಸುತ್ತಿರುತಾರೆ.
ಅಂಥ ಪ್ರತಿಭಾವಂತ ಹವ್ಯಾಸಿ, ಫ್ರೀಲಾನ್ಸ್ ಬರಹಗಾರರಿಗೆ ಒನ್ಇಂಡಿಯಾ ಕನ್ನಡ ಅತ್ಯುತ್ತಮ ವೇದಿಕೆಯನ್ನು ಕಲ್ಪಿಸುತ್ತಿದೆ. ತಮ್ಮ ಸುತ್ತಮುತ್ತಲ ಸುದ್ದಿಸಮಾಚಾರಗಳನ್ನು, ಆಗುಹೋಗುಗಳನ್ನು ವಿಶ್ವದಾದ್ಯಂತ ಪಸರಿಸಿರುವ ಲಕ್ಷಾಂತರ ಓದುಗರಿಗೆ ತಲುಪಿಸುವುದರ ಜೊತೆಗೆ, ದುಡಿತಕ್ಕೆ ತಕ್ಕ ಪ್ರತಿಫಲ ಪಡೆಯಲು ಕೂಡ ಇದು ಉತ್ತಮ ವೇದಿಕೆಯಾಗಲಿದೆ.
ಈಗಾಗಲೆ ಹಲವಾರು ಹವ್ಯಾಸಿ/ವೃತ್ತಿನಿರತ ಪತ್ರಕರ್ತರು ನಮ್ಮ ತಂಡ ಸೇರಿಕೊಂಡಿದ್ದಾರೆ. ನಿಮ್ಮಲ್ಲಿಯೂ ಸುದ್ದಿಯ ಹಸಿವಿದ್ದರೆ, ಆ ಸುದ್ದಿಯನ್ನು ನೆಟ್ಟಿಗರಿಗೆ ತಲುಪಿಸುವ ಹುಮ್ಮಸ್ಸಿದ್ದರೆ ಕೂಡಲೆ ನಮ್ಮ www.lekhaka.com ವೇದಿಕೆಯ ಮೂಲಕ ನಮ್ಮ ತಂಡವನ್ನು ಸೇರಿಕೊಳ್ಳಿ. ಕರ್ನಾಟಕದ ವಿವಿಧ ಜಿಲ್ಲೆಗಳ ಪತ್ರಕರ್ತರಿಗೆ ಆದ್ಯತೆ ನೀಡಲಾಗುವುದು.

ಗುಣಮಟ್ಟದ ಲೇಖನಗಳು
ಲೇಖಕರು ಯಾವುದೇ ಸಮಕಾಲೀನ ವಿಷಯದ ಬಗ್ಗೆ ಬರೆಯಬಹುದು. ಸ್ಥಳೀಯ ರಾಜಕೀಯ ಗುದ್ದಾಟ, ಮಾನವೀಯ ಸಂವೇದಿ ಲೇಖನಗಳು, ಎಲೆಮರೆ ಕಾಯಿಯಂಥ ವ್ಯಕ್ತಿಗಳ ವ್ಯಕ್ತಿಚಿತ್ರ, ನಿಮ್ಮೂರಿನ ಸುದ್ದಿಸ್ವಾರಸ್ಯಗಳು, ಕಟ್ಟೆಪುರಾಣಗಳು, ನೋಡತಕ್ಕ ಸ್ಥಳಗಳು, ಹೆಂಗಳೆಯರ ಗಾಸಿಪ್ಪುಗಳು...
ವಿಷಯ ಯಾವುದೇ ಇರಲಿ, ಗುಣಮಟ್ಟದಲ್ಲಿ ಮಾತ್ರ ರಾಜೀ ಮಾತೇ ಇಲ್ಲ. ವ್ಯಾಕರಣ ದೋಷ ರಹಿತ, ತಪ್ಪು ಮಾಹಿತಿಗಳಿಲ್ಲದ, ಅನವಶ್ಯಕ ಮಾಹಿತಿ ತುರುಕಿರದ, ಓದುಗರನ್ನು ಸೆಳೆಯುವ, ಅವರಲ್ಲಿ ಉತ್ತಮ ಅಭಿರುಚಿ ಬೆಳೆಸುವ, ಈಗಾಗಲೆ ಪ್ರಕಟವಾಗಿಲ್ಲದ ತಾಜಾ ಸುದ್ದಿಸ್ವಾರಸ್ಯಗಳಿಗೆ ಹೆಚ್ಚಿನ ಆದ್ಯತೆ.
ಮಾಡಬೇಕಾಗಿರುವುದೇನು? ನಿಬಂಧನೆಗಳೇನು?
* ನಿಮ್ಮಲ್ಲಿ ಅರ್ಹತೆಯಿದ್ದಲ್ಲಿ ಸರಳವಾದ ಮತ್ತು ಸಂಪೂರ್ಣ ಮಾಹಿತಿಗಳಿಂದ ಕೂಡಿದ ನಿಮ್ಮ ಬಯೋಡೇಟಾವನ್ನು ಸಿದ್ಧಪಡಿಸಿಕೊಳ್ಳಿ. ಬಯೋಡೇಟಾ ಇಂಗ್ಲಿಷ್ ನಲ್ಲಿ ಇರಲಿ. ಪತ್ರಕರ್ತರಿಗೆ ಮತ್ತು ಬರವಣಿಗೆಯ ಅನುಭವವಿರುವವರಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗುವುದು.
* ಯುವ, ಪ್ರತಿಭಾವಂತ ಲೇಖಕರ ವೇದಿಕೆಯಾಗಿರುವ www.lekhaka.com ವೆಬ್ ತಾಣದಲ್ಲಿ ನೋಂದಾವಣಿ ಮಾಡಿಕೊಳ್ಳಿ. ಅನುಮೋದನೆಗೊಂಡರೆ, ಬ್ಯಾಂಕ್ ವಿವರಗಳನ್ನು ನೀಡಬೇಕಾಗುತ್ತದೆ.
* ಬರಹಗಳನ್ನು ಲೇಖಕ.ಕಾಂ ಮೂಲಕವೇ ನೀಡತಕ್ಕದ್ದು. ಉತ್ತಮವಾಗಿರುವ ಲೇಖನಗಳನ್ನು ಆದ್ಯತೆಯ ಮೇರೆಗೆ ಆಯ್ಕೆ ಮಾಡಿಕೊಳ್ಳಲಾಗುವುದು. ಅಂತಿಮ ತೀರ್ಮಾನ ಸಂಪಾದಕೀಯ ಮಂಡಳಿಯದ್ದು ಆಗಿರುತ್ತದೆ.
* ಲೇಖನಗಳನ್ನು ಯುನಿಕೋಡ್ ರೂಪದಲ್ಲಿ ಬರೆದಿರಬೇಕು. ಇತರ ಫಾಂಟ್ ಬಳಸಿ ಹಾಕಿರುವ (ಓದಲು ಕಷ್ಟವಾಗುವಂಥ) ಲೇಖನಗಳನ್ನು ತಿರಸ್ಕರಿಸಲಾಗುವುದು.
* ಕಾಪಿರೈಟ್ ಉಲ್ಲಂಘನೆಯಾಗಿರದ, ತಾವಾಗಿಯೇ ಖುದ್ದಾಗಿ ತೆಗೆದಿರುವ ಅಥವಾ ನಂಬಹರ್ಲ ಮೂಲದ ಫೋಟೋ ಮತ್ತು ಆಯಾ ಸುದ್ದಿಯನ್ನು ಹಿಡಿದಿಡುವ ವಿಡಿಯೋಗಳಿಗೆ ಕೂಡ ಪ್ರಾಧಾನ್ಯತೆ ನೀಡಲಾಗುವುದು.
* ಬ್ರೇಕಿಂಗ್ ಸುದ್ದಿಗಳನ್ನು, ಫೋಟೋ ಮತ್ತು ವಿಡಿಯೋ ಸಮೇತ ವಾಟ್ಸಾಪ್ ಅಥವಾ ಟೆಲಿಗ್ರಾಂ ಮೂಲಕ ತಲುಪಿಸಬಹುದು. ಆದರೆ, ನಂತರ ಲೇಖಕ.ಕಾಂಗೆ ಪ್ರಕಟವಾದ ಲೇಖನಗಳನ್ನು ಸೇರಿಸತಕ್ಕದ್ದು.
-
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Bengaluru Property Tax: ಆಸ್ತಿ ತೆರಿಗೆ ಸ್ವೀಕಾರಕ್ಕಾಗಿ ರಾತ್ರಿ 10ಗಂಟೆವರೆಗೆ ಪಾಲಿಕೆ ಕಚೇರಿ ಓಪನ್ -
Arecanut Price: ದಾವಣಗೆರೆ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ ಭರ್ಜರಿ ಏರಿಕೆ: ಇಲ್ಲಿದೆ ಮಾರ್ಚ್ 30ರ ದರಪಟ್ಟಿ -
Hardik Pandya: ಕೇವಲ 35 ದಿನಗಳಲ್ಲಿ ಕೋಟಿ.. ಕೋಟಿ ಖರ್ಚು ಮಾಡಿದ ಹಾರ್ದಿಕ್ ಪಾಂಡ್ಯ; ಇಲ್ಲಿದೆ ಪಟ್ಟಿ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ












Click it and Unblock the Notifications