ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Ramalinga Reddy Interview : ಬಿಜೆಪಿ ಅವರಿಗೆ ಕೊನೆಯ ಅಸ್ತ್ರ ಅಪಪ್ರಚಾರ: ರಾಮಲಿಂಗಾ ರೆಡ್ಡಿ ಸಂದರ್ಶನ

By ರೇಷ್ಮಾ.ಪಿ
|
Google Oneindia Kannada News

ಬೆಂಗಳೂರು,ಡಿಸೆಂಬರ್ 10: 2023 ಕ್ಕೆ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.

7 ಬಾರಿ ಶಾಸಕರಾಗಿ, 4 ಬಾರಿ ಸಚಿವನ್ನಾಗಿದ್ದೇನೆ. ಕೆಪಿಸಿಸಿ ಕಾರ್ಯಾಧ್ಯಕ್ಷ ಸ್ಥಾನ ಕೊಟ್ಟು ಸಮಾಧಾನ ಮಾಡಿದ್ದಾರೆ ಎಂದರೇ ಯಾವುದೇ ಹುರುಳಿಲ್ಲ, ಯಾವುದೇ ಸ್ಥಾನಕ್ಕೂ ಬೇಕಾದ್ರೂ ನಾನು ಹೋಗ್ಬಹುದಿತ್ತು. ಕಾರ್ಯಾಧ್ಯಕ್ಷನಾಗಿ ನಾವು ಪಕ್ಷವನ್ನ ಅಧಿಕಾರಕ್ಕೆ ತರ್ಬೇಕು ಹಾಗೂ ಬಿಜೆಪಿಯನ್ನ ಅಧಿಕಾರದಿಂದ ದೂರ ಇಡ್ಬೇಕು ಅಂತ ನಾವು ಪಕ್ಷ ಸಂಘಟಿಸಲು ಕಾರ್ಯತಂತ್ರ ರೂಪಿಸುತ್ತಿದ್ದೇನೆ ಎಂದು 'ಒನ್ ಇಂಡಿಯಾ ಕನ್ನಡ'ಕ್ಕೆ ನೀಡಿದ ಸಂದರ್ಶನಲ್ಲಿ ತಿಳಿಸಿದರು. ಸಂದರ್ಶನದ ಹಲವು ವಿಚಾರಗಳು ಇಲ್ಲಿದೆ.

Recommended Video

Ramalinga Reddy: ಬಿಜೆಪಿ ಪಕ್ಷದಲ್ಲಿ ಐದಾರು ಗುಂಪುಗಳಿವೆ! | Exclusive Interview

1. ಭಾರತ್ ಜೋಡೋ ಯಾತ್ರೆ ಅಲ್ಲ ಇದು ಭಾರತ್ ತೋಡೋ ಯಾತ್ರೆ ಎಂದು ಬಿಜೆಪಿ ಟೀಕೆ ವಿಚಾರವಾಗಿ ಹೇಳಿದ್ದೇನು.?

ರಾಹುಲ್ ಗಾಂಧಿ ಬಗ್ಗೆಯಾಗಲಿ, ಕಾಂಗ್ರೆಸ್ ಪಕ್ಷದ ಬಗ್ಗೆಯಾಗಲಿ ಟೀಕೆ ಮಾಡುವ ಅರ್ಹತೆ ಬಿಜೆಪಿಗೆ ಇಲ್ಲ . ಈ ದೇಶಕ್ಕೆ ಕಾಂಗ್ರೆಸ್ ಪಕ್ಷದ ಕೊಡುಗೆ ಹೆಚ್ಚಾಗಿದೆ. ನೆಹರು ಅವರ ಕುಟುಂಬ ದೇಶಕ್ಕೆ ಸಾಕಷ್ಟು ಒಳ್ಳೆಯ ಕೆಲಸ ಮಾಡಿದ್ದಾರೆ. ಬಿಜೆಪಿ ಪಕ್ಷ ಗಾಂಧಿ ಕುಟುಂಬವನ್ನ ಟೀಕೆ ಮಾಡುತ್ತಾರೆ, ಮಹಾತ್ಮ ಗಾಂಧಿಯವರನ್ನ ಟೀಕೆ ಮಾಡುತ್ತಾರೆ, ಕಾಂಗ್ರೆಸ್ ಪಕ್ಷ ಈ ದೇಶಕ್ಕೆ ಏನು ನೀಡಿದೆ ಅಂತ ಟೀಕೆ ಮಾಡುತ್ತಾರೆ, ಸ್ವಾತಂತ್ರ ಪೂರ್ವದಲ್ಲಿ ಬಿಜೆಪಿ ಇರ್ಲಿಲ್ಲ, ಆದರೆ ಆರ್ ಎಸ್ ಎಸ್ ಹಾಗು ವಿಶ್ವಹಿಂದೂ ಪರಿಷತ್ ಇತ್ತು ಆದ್ರೆ ಅವರ್ಯಾರು ದೇಶದ ಸ್ವಾತಂತ್ರ ಚಳುವಳಿಯಲ್ಲಿ ಭಾಗವಹಿಸಲಿಲ್ಲ, ದೇಶಕ್ಕೆ ಬಿಜೆಪಿಯ ಕೊಡುಗೆ ಶೂನ್ಯ ಎಂದು ವಾಗ್ದಾಳಿ ನಡೆಸಿದರು.

Congress leader Ramalinga Reddy says 5 to 6 Groups in BJP

2. ರಾಮಲಿಂಗಾ ರೆಡ್ಡಿ ಅವರ ಪ್ರಾಬಲ್ಯ ಹೆಚ್ಚಾಗಿದ್ದರೂ ಯಾಕೆ ಹೆಚ್ಚಿನ ಸ್ಥಾನ ಗೆಲ್ಲಲು ಸಾಧ್ಯವಾಗಿಲ್ಲ.?

2018 ರಲ್ಲಿ ಕಾಂಗ್ರೆಸ್ ಪಕ್ಷದ ಕೊಟ್ಟ ಚುನಾವಣಾ ಅಶ್ವಾಸನೆಗಳನ್ನ ಜನರಿಗೆ ಮಾತುಕೊಟ್ಟಂತೆ ಕಾರ್ಯಗತ ಮಾಡಿದ್ದೇವೆ, ಆದ್ರೆ ಮಾಡಿದ ಕೆಲಸಕ್ಕೆ ನಾವು ಸರಿಯಾಗಿ ಪ್ರಚಾರವನ್ನ ತೆಗೆದುಕೊಂಡಿಲ್ಲ. ನೂರು ರೂಪಾಯಿ ಕೆಲಸ ಮಾಡಿದರೇ 10 ರೂಪಾಯಿ ಪ್ರಚಾರ ತೆಗೆದುಕೊಂಡ್ವಿ, ಜನರಲ್ಲಿ ನಾವು ಮಾಡಿರುವ ಕೆಲಸವನ್ನ ತಲುಪಿಸುವಲ್ಲಿ ವಿಫಲವಾಗಿ ನಾವು ಸೋತ್ವಿ ಹೊರೆತು, ಕೆಲಸ ಮಾಡದೇ ನಾವು ಸೋತಿಲ್ಲ, ಆದರೆ ಬಿಜೆಪಿ ಹತ್ತು ರೂಪಾಯಿ ಕೆಲಸ ಮಾಡಿ ನೂರು ರೂಪಾಯಿ ಪ್ರಚಾರ ತೆಗೆದುಕೊಳ್ಳುತ್ತಾರೆ. ನರೇಂದ್ರ ಮೋದಿ ಸೇರಿದಂತೆ ಇಡೀ ದೇಶದಲ್ಲಿ ಬಿಜೆಪಿ ಸರ್ಕಾರ ಹತ್ತು ರೂಪಾಯಿ ಕೆಲಸ ಮಾಡಿ ನೂರು ರೂಪಾಯಿ ಪ್ರಚಾರ ತೆಗೆದುಕೊಳ್ಳುತ್ತಾರೆ. ಅದಲ್ಲದೇ ಜನರು ಸಹ ಅರ್ಥ ಮಾಡಿಕೊಳ್ಳಬೇಕು. ಅಭಿವೃದ್ಧಿ ಎಂಬುದೇ ಬಿಜೆಪಿಗೆ ಗೊತ್ತಿಲ್ಲ, ಅಭಿವೃದ್ಧಿ ಎಂಬ ಅಜೆಂಡಾವೇ ಬಿಜೆಪಿಗೆ ಇಲ್ಲ, ಮೋದಿ ಅವರು ಬಂದ ಮೇಲೆ ಅಭಿವೃದ್ಧಿ ಎಂಬುದೇ ಇಲ್ಲ ಎಂದು ವಾಗ್ದಾಳಿ ನಡೆಸಿದರು.

3. ವಿಧಾನಸಭಾ ಚುನಾವಣೆಗೂ ಮುನ್ನ ಬಿಬಿಎಂಪಿ ಚುನಾವಣೆ ನಡೆಸುವುದು ಯಾವ ಪಕ್ಷಗಳು ಇಷ್ಟ ಇರ್ಲಿಲ್ಲ..?

ಬೆಂಗಳೂರಿಗೆ ವಿಶೇಷ ಕಾಯ್ದೆ ತರ್ತಿವಿ ಅಂತ ಹೇಳಿದ್ದಕ್ಕೆ ನಾವು ಸಹ ಸಹಕಾರ ಕೊಟ್ವಿ, ಆದ್ರೆ ಅದು ಆರು ತಿಂಗಳಿನಲ್ಲಿ ಮುಗಿಸಬಹುತಿತ್ತು, ಬಿಬಿಎಂಪಿ ಚುನಾವಣೆ ಮಾಡಲು ಸರ್ಕಾರಕ್ಕೆ ಇಷ್ಟ ಇಲ್ಲದೆ ಮುಂದೂಡುತ್ತಾ ಹೋದರು. 2007 ರಿಂದ 2010 ರವರೆಗೂ ಮೂರುವರೆ ವರ್ಷಗಳ ಕಾಲ ಅವರು ಚುನಾವಣೆ ಮಾಡಿರ್ಲಿಲ್ಲ. ಸರ್ಕಾರಕ್ಕೆ ಬಿಬಿಎಂಪಿ ಚುನಾವಣೆ ಮಾಡಲು ಮನಸ್ಸಿಲ್ಲ ಎಂದರು.

Congress leader Ramalinga Reddy says 5 to 6 Groups in BJP


4. ಬೆಂಗಳೂರು ನಗರದ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸದಲ್ಲಿ ಸರ್ಕಾರ ಯಶಸ್ವಿಯಾಗಿದೆಯೇ.?

ಬಿಜೆಪಿಯವರಿಗೆ ಅಭಿವೃದ್ದಿ ಎಂಬುದೇ ಗೊತ್ತಿಲ್ಲ. ಅವರಿಗೆ ಆಡಳಿತ ಮಾಡಿ ಅನುಭವವೂ ಇಲ್ಲ. 2013 ರಲ್ಲಿ ನಾವು ಅಧಿಕಾರಕ್ಕೆ ಬಂದಾಗ ಬೆಂಗಳೂರಿನ ಎಲ್ಲಾ ಕಡೆ ಪಾಟ್ ಹೋಲ್ಸ್ ಇತ್ತು. ಬೆಂಗಳೂರಿಗೆ ಇಂಟರ್ ನ್ಯಾಷನಲ್ ಏರ್ ಪೋರ್ಟ್, ಮೆಟ್ರೋ, ಮಾಹಿತಿ ತಂತ್ರಜ್ಞಾನ ಸೇರಿದಂತೆ ಹಲವು ಅಭಿವೃದ್ದಿ ಕಾರ್ಯಗಳಾಗಿವೆ, 2006 ರಿಂದ 2013 ರವರೆಗೂ ಬೆಂಗಳೂರಿನಲ್ಲಿ ಅಧಿಕಾರದಲ್ಲಿದ್ರೂ ಒಂದು ಕೆಲಸವನ್ನ ನಾವು ಮಾಡಿದ್ದೇವೆ ಎಂದು ಬಿಜೆಪಿ ತೋರಿಸಲಿ ನೋಡೋಣ ಎಂದರು. ಈಗಲೂ ಅಧಿಕಾರದಲ್ಲಿರುವ ಬಿಜೆಪಿಗೆ ಗುಂಡಿ ವಿಚಾರವಾಗಿ ಹೈಕೋರ್ಟ್ ಛೀಮಾರಿ ಹಾಕಿದೆ.

5. ರಸ್ತೆ ಗುಂಡಿಗೆ ಇನ್ನೂ ಎಷ್ಟು ಜನ ಅಮಾಯಕರ ಬಲಿ ಬೇಕು ಎಂದು ಸಾರ್ವಜನಿಕರ ಆಕ್ರೋಶ ವಿಚಾರ.?

ಪಾಟ್ ಹೋಲ್ಸ್ ನಲ್ಲಿ ಬಿದ್ದು ಸತ್ತಿದ್ದನ್ನ ನಾವು ಕೇಳಿರಲಿಲ್ಲ, 20 ಜನ ಪಾಟ್ ಹೋಲ್ಸ್ ನಲ್ಲಿ ಬಿದ್ದು ಸತ್ತಿದ್ದರೆ, ಕನಿಷ್ಠ ಪಕ್ಷ ಸೌಜನ್ಯಕ್ಕೂ ಸರ್ಕಾರ ಅವರ ಮನೆಗಳಿಗೂ ಭೇಟಿ ನೀಡಿಲ್ಲ, ಆದರೆ ಇವರ ಕಾರ್ಯಕರ್ತರು ಸತ್ತರೇ 25 ರಿಂದ 50 ಲಕ್ಷ ಪರಿಹಾರ ನೀಡುತ್ತಾರೆ ಎಂದರು.

6. ಕಾಂಗ್ರೆಸ್ ಮನೆಯೊಂದು ಮೂರು ಬಾಗಿಲು ಎಂದು ಬಿಜೆಪಿ ಟೀಕೆ ವಿಚಾರ.?

ನಮ್ಮಲ್ಲಿ ಯಾವ ಬಣವೂ ಇಲ್ಲ, ಕೆಲವರು ಸಿದ್ದರಾಮಯ್ಯ ಸಿಎಂ ಆಗ್ಬೇಕು. ಡಿ.ಕೆ. ಶಿವಕುಮಾರ್ ಸಿಎಂ ಆಗ್ಬೇಕು ಎಂದು ಕೆಲವರು ಮಾತನಾಡಿದ್ದಾರೆ. ಆದರೆ ಬಿಜೆಪಿಯಲ್ಲಿ ಐದಾರು ಗುಂಪುಗಳಿವೆ. ಯಡಿಯೂರಪ್ಪ, ಈಶ್ವರಪ್ಪ, ಜದೀಶ್ ಶೆಟ್ಟರ್ ಹಾಗೂ ಬಿ.ಎಸ್ ಸಂತೋಷ್ ಗುಂಪುಗಳಿವೆ. ಬಿಜೆಪಿ ಒಂದು ಪಕ್ಷ ಅಲ್ಲ, ಅದು ಪಕ್ಷಾಂತರಿಗಳ ಪಕ್ಷ. 30 ಜನ ಸಚಿವರಲ್ಲಿ 20 ಜನ ಸಚಿವರು ಬೇರೆ ಪಕ್ಷದಿಂದ ಬಂದವರು. ಅಲ್ಲಿ ಮೂಲ ಬಿಜೆಪಿಗರಿಗೆ ಗೌರವು ಇಲ್ಲ, ಸೂಕ್ತ ಸ್ಥಾನಮಾನವೂ ಇಲ್ಲ ಎಂದರು.

7. ಜಮೀರ್ ಸೇರಿದಂತೆ ಸಾಕಷ್ಟು ಜನರಿಗೆ ಸಿದ್ದರಾಮಯ್ಯ ಸಿಎಂ ಆಗ್ಬೇಕು ಎನ್ನುತ್ತಾರೆ ಆ ಆಸೆ ನಿಮಗೂ ಇದೆಯೇ..?

ನನಗೆ ಸಿದ್ದರಾಮಯ್ಯ ಸಿಎಂ ಆಗ್ಬೇಕು ಅನೋ ಆಸೆ ಇಲ್ಲ, ನಮ್ಮ ಪಕ್ಷ ಅಧಿಕಾರಕ್ಕೆ ಬರ್ಬೇಕು, ಜನರ ದೃಷ್ಟಿಯಿಂದ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರ್ಬೇಕು ಎಂದು ತಿಳಿಸಿದರು.

Congress leader Ramalinga Reddy says 5 to 6 Groups in BJP

8. ಸಿದ್ದರಾಮಯ್ಯ ಅವರಿಗೆ ಕ್ಷೇತ್ರ ಹುಡುಕಾಟ ಯಾಕಿಷ್ಟು ಕಷ್ಟವಾಗುತ್ತಿದೆ. ?

ನಾಯಕರಾದವರು ಎಲ್ಲಿ ಬೇಕಾದ್ರೂ ನಿಲ್ಲಬಹುದು, ಎಲ್ಲಿ ಬೇಕಾದ್ರೂ ಸ್ಪರ್ಧೆ ಮಾಡಿದ್ರೂ ನಿಂತು ಗೆಲ್ಲುತ್ತಾರೆ. ಸಿದ್ದರಾಮಯ್ಯ ಅವರು ನಮ್ಮ ಪಕ್ಷದ ಒಂದು ಶಕ್ತಿ ಎಂದು ಹೇಳಿದರು.

9. ಕಾಂಗ್ರೆಸ್ ಪಕ್ಷದಲ್ಲಿ ನಾಯಕರ ನಡುವೆ ಕೋಲ್ಡ್ ವಾರ್ ಎಂದು ಬಿಜೆಪಿ ಆರೋಪ ವಿಚಾರ..?

ಕಾಂಗ್ರೆಸ್ ನವರಿಗೆ ಸುಳ್ಳು ಹೇಳಿ ಅಭ್ಯಾಸ ಇಲ್ಲ, ಬಿಜೆಪಿಯರಿಗೆ ಅದು ಹುಟ್ಟು ಗುಣ, ಮೊಸರಿನಲ್ಲಿ ಕಲ್ಲು ಹುಡುಕುವ ಕೆಲಸ ಮಾಡ್ಬೇಡಿ, ನಿಮ್ಮ ಕೆಲಸ ನೀವು ಮಾಡಿ, ಜನ ಅಧಿಕಾರ ಕೊಟ್ಟಿದ್ದಾರೆ. ಕಾಂಗ್ರೆಸ್, ಜೆಡಿಎಸ್ ನ ಸಣ್ಣಪುಟ್ಟ ತಪ್ಪುಗಳನ್ನ ಹುಡಕುವುದನ್ನ ಬಿಡಿ ಎಂದು ವಾಗ್ದಾಳಿ ನಡೆಸಿದರು.

10. 2023 ರ ಚುನಾವಣಾ ಫಲಿತಾಂಶ ಅತಂತ್ರವಾದ್ರೆ ಜೆಡಿಎಸ್ ಜೊತೆಗೆ ಕಾಂಗ್ರೆಸ್ ಮೈತ್ರಿ ಅನಿವಾರ್ಯವಾ..?

ಈ ಬಾರೀ ಅಂತ್ರ ಸರ್ಕಾರ ಬರಲ್ಲ. ಸ್ಪಷ್ಟವಾಗಿ ಕಾಂಗ್ರೆಸ್ ಪಕ್ಷಕ್ಕೆ ನೂರಕ್ಕೆ ನೂರು ಭಾಗ ಸ್ಪಷ್ಟ ಬಹುಮತ ಬರುತ್ತೆ. ಜನರಿಗೆ ತಪ್ಪುನ ಅರಿವಾಗಿದೆ. ಜನ ಸುಳ್ಳನ್ನ ನಂಬಿ ಮತ ಹಾಕಿದ್ದಾರೆ. ನಗರ ಸಭೆ, ಪುರ ಸಭೆಯಲ್ಲೂ ಕಾಂಗ್ರೆಸ್ ಗೆ ಹೆಚ್ಚಿನ ಮತ ಹಾಕಿದ್ದಾರೆ. ಬಿಜೆಪಿ ಗೆದ್ದಿರುವುದು ಹೆಚ್ಚಿನ ಹಣ ಖರ್ಚು ಮಾಡಿ ಹಾಗೂ ಸುಳ್ಳನ್ನ ಹೇಳಿ ಕೆಲವು ಕಡೆ ಗೆದ್ದಿದ್ದಾರೆ. ಜನಲರ್ ಎಲೆಕ್ಷನ್ ನಲ್ಲಿ ಮೋದಿ, ಅಮಿತ್ ಶಾ ಏನೇ ಮಾಡಿದ್ರೂ ಜನ ಮತ ಹಾಕಲ್ಲ.

11. ರೌಡಿ ನಾಗನ ಜೊತೆ ನಿಮಗೆ ಸಪರ್ಕವಿದೆಯಾ..?

10 ವರ್ಷದಿಂದ ನನಗೆ ಗೊತ್ತಿದ ಹಾಗೇ ನನಗೆ ನೋಡಿದ ನೆನಪಿಲ್ಲ. ಕಾಂಗ್ರೆಸ್ ಅಂದ್ರೆ ರೌಡಿಸಂ ಪಕ್ಷ ಅಂತ ಕೆಲವರು ಟೀಕೆ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಸುಧಾಕರ್ ಎರಡು ಬಾರಿ ಶಾಸಕರಾಗಿದ್ದಾರೆ. ಈಗ ಬಿಜೆಪಿಗೆ ಹೋದ ನಂತ್ರ ಕಾಂಗ್ರೆಸ್ ಏನು ಮಾಡಿದೆ ಅಂತಾರೆ. ಕಾಂಗ್ರೆಸ್ ಪಕ್ಷಕ್ಕೆ ಬೈಯುವವರು ಹೆತ್ತ ತಾಯಿಗೆ ಬೈದಂತೆ, ಕಾಂಗ್ರೆಸ್ ಪಕ್ಷಕ್ಕೆ ಬೈದರೆ ಒಳ್ಳೆಯದಾಗಲ್ಲ ಎಂದರು.

12. ರಾಮಲಿಂಗಾ ರೆಡ್ಡಿ ಅವರು ರೌಡಿಗಳ ಕೃಪೆಯಿಂದ ಗೆಲ್ಲುತ್ತಿದ್ದಾರೆ ಎಂದು ಬಿಜೆಪಿ ಆರೋಪ ಸರಿಯೇ.?

ಬಿಜೆಪಿ ಅವರಿಗೆ ಮಾನಮರ್ಯಾದೆ ಇಲ್ಲ, ಮಾನಮರ್ಯಾದೆ ಇಲ್ಲದವರೂ ಊರಿಗೆ ದೊಡ್ಡವರು, ನಮ್ಮ ಪಕ್ಷದ ಪ್ರತಿ ವಾರ್ಡ್ ನಲ್ಲಿ 100 ಜನರನ್ನ ಸರ್ವೆ ಮಾಡಿ, 100 ಜನರಲ್ಲಿ ಒಬ್ಬರು ಹೇಳಿದ್ರೂ ನಾನು ಒಪ್ಪಿಕೊಳ್ಳುತ್ತೇನೆ ಎಂದು ತಿಳಿಸಿದರು.

English summary
KPCC Working President Ramalinga Reddy lashes out at BJP leaders. They have no respect and dignity, they use slander as a last weapon against congress.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X