• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೀನಾದ ಕೃತಕ ಸೂರ್ಯ ನೈಜ ಸೂರ್ಯನಿಗಿಂತ 5 ಪಟ್ಟು ಹೆಚ್ಚು ಶಕ್ತಿಶಾಲಿ

|
Google Oneindia Kannada News

ಬೀಜಿಂಗ್, ಜನವರಿ 06: ಭವಿಷ್ಯದಲ್ಲಿ ಶುದ್ಧ ಶಕ್ತಿಗೆ ದಾರಿ ಮಾಡಿಕೊಡಲು ಚೀನಾ "ಕೃತಕ ಸೂರ್ಯನ" ಪ್ರಯೋಗ ಮಾಡುತ್ತಿದೆ. ಇದರ ಹೆಸರು ಎಕ್ಸ್‌ಪೀರಿಯೆನ್ಷಿಯಲ್ ಅಡ್ವಾನ್ಸ್‌ಡ್ ಸೂಪರ್‌ಕಂಡಕ್ಟಿಂಗ್ ಟೋಕಾಮಾಕ್ (ಈಸ್ಟ್) ಎಂದು ಕರೆಯಲಾಗುತ್ತದೆ. ದೊಡ್ಡ ಡೋನಟ್ ಆಕಾರದ ಈ ಕೃತಕ ಸೂರ್ಯನಿಗೆ ಸಂಬಂಧಿಸಿದಂತೆ ಒಂದು ಮಹತ್ವದ ಪರೀಕ್ಷೆಯನ್ನು ಚೀನಾ ನಡೆಸಿದೆ. ಈ ಪರೀಕ್ಷೆಯಲ್ಲಿ ಚೀನಾ ಯಶಸ್ವಿಯಾಗಿದೆ. ಈ ಕೃತಕ ಸೂರ್ಯ ನೈಜ ಸೂರ್ಯನಿಗಿಂತ 5 ಪಟ್ಟು ಹೆಚ್ಚು ಶಕ್ತಿಶಾಲಿ ಎನ್ನುವುದನ್ನು ಕಂಡುಹಿಡಿದಿದೆ.

ನ್ಯೂಕ್ಲಿಯರ್ ಫ್ಯೂಷನ್ ಪರೀಕ್ಷೆ ಇದಾಗಿದ್ದು, ಕೃತಕ ಸೂರ್ಯನ ತಾಪಮಾನ ಹೆಚ್ಚಿಸೋದು ಮತ್ತು ದೀರ್ಘಕಾಲ ಬಾಳಿಕೆ ಬರುವಂತೆ ಮಾಡೋದು ಈ ಪರೀಕ್ಷೆಯ ಉದ್ದೇಶವಾಗಿದೆ. ಹೆಫೀ ಇನ್​ಸ್ಟಿಟ್ಯೂಟ್ ಆಫ್ ಫಿಸಿಕಲ್ ಸೈನ್ಸ್ ಈ ಫರೀಕ್ಷೆ ನಡೆಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಅಂದಹಾಗೆ ಚೀನಾ ಈ ಯೋಜನೆಗೆ ಈಗಾಗಲೇ 89 ಕೋಟಿ ಡಾಲರ್ ಅಂದ್ರೆ ಆರೂವರೆ ಸಾವಿರ ಕೋಟಿ ರೂಪಾಯಿ ಖರ್ಚು ಮಾಡಿದೆ. ಭಾರಿ ತಾಪಮಾನದ ಮೂಲಕ ಹೈಡ್ರೋಜನ್​​ನ್ನು ಉರಿಸಿ, ಪ್ಲಾಸ್ಮಾಗೆ ಬದಲಿಸಿ ಅದರಿಂದ ಇಂಧನ ಬಿಡುಗಡೆ ಮಾಡೋದು ಈ ಯೋಜನೆಯ ಉದ್ದೇಶವಾಗಿದೆ. ಈ ಇಂಧನ ಬಳಸೋಕೆ ಸಾಧ್ಯವಾದ್ರೆ ಸ್ವಲ್ಪ ಮಟ್ಟದ ಇಂಧನ ಸಾಕಾಗುತ್ತೆ. ಅಂದ್ರೆ ಇಂಧನ ಬಳಕೆ ಕಡಿಮೆಯಾಗುತ್ತೆ. ಇದ್ರಿಂದ ರೇಡಿಯೋ ಆಕ್ಟೀವ್ ವೇಸ್ಟೇಜ್ ಕೂಡ ಸೃಷ್ಟಿಯಾಗಲ್ಲ ಅನ್ನೋದು ಈ ಯೋಜನೆಯ ಲೆಕ್ಕಾಚಾರ.

ಸಾಧನದ ಸೆಟಪ್ ಒಂದು ಫ್ಯೂಷನ್ ರಿಯಾಕ್ಟರ್ ಆಗಿದ್ದು, ಇದರಲ್ಲಿ ಇತ್ತೀಚಿನ ಪರೀಕ್ಷೆಯಲ್ಲಿ ಬೆರಗುಗೊಳಿಸುವಂತ ಫಲಿತಾಂಶ ಸಿಕ್ಕಿದೆ. ಇದು 70 ಮಿಲಿಯನ್ ಡಿಗ್ರಿ ಸೆಲ್ಸಿಯಸ್‌ನಲ್ಲಿ ಸುಮಾರು 20 ನಿಮಿಷಗಳ ಕಾಲ ಯಶಸ್ವಿಯಾಗಿ ಕಾರ್ಯನಿರ್ವಹಿಸಿದೆ. ಈ ಬಗ್ಗೆ ಪ್ರತಿಕ್ರಿಯಿಸಿರೋ ಹೆಫಿ ಇನ್​​ಸ್ಟಿಟ್ಯೂಟ್​​ ಆಫ್ ಫಿಸಿಕಲ್​​ ಸೈನ್ಸ್​​ನ ಉಪ ನಿರ್ದೇಶಕ ಸಾಂಗ್ ಯುಂಟಾವೋ, ಈಗಿಂದ ಐದು ವರ್ಷಗಳ ನಂತರ ಫ್ಯೂಷನ್ ರಿಯಾಕ್ಟರ್ ಶುರು ಮಾಡ್ತೀವಿ. ಅದರ ನಿರ್ಮಾಣಕ್ಕೆ 10 ವರ್ಷಗಳು ಬೇಕಾಗುತ್ತೆ. ಸುಮಾರು 2040ರ ವೇಳೆಗೆ ಅದ್ರಿಂದ ಇಂಧನ ಉತ್ಪಾದನೆ ಶುರು ಮಾಡ್ತೀವಿ ಅಂತ ಹೇಳಿದ್ದಾರೆ. 2006ರಿಂದಲೇ ಇದ್ರ ನಿರ್ಮಾಣ ಕಾರ್ಯ ಶುರುವಾಗಿದ್ದು, ಹಲವು ಪರೀಕ್ಷೆಗಳು ಕೂಡ ನಡೆದಿವೆ ಎಂದರು.

ಇತ್ತೀಚಿನ ಪ್ರಯೋಗದಲ್ಲಿ "ಕೃತಕ ಸೂರ್ಯ" 1,056 ಸೆಕೆಂಡುಗಳವರೆಗೆ ಅಥವಾ 17 ನಿಮಿಷಗಳು ಮತ್ತು 36 ಸೆಕೆಂಡುಗಳವರೆಗೆ - 70 ಮಿಲಿಯನ್ ಡಿಗ್ರಿ ಸೆಲ್ಸಿಯಸ್‌ನಲ್ಲಿ ಓಡಿದೆ ಎಂದು ಸೌತ್ ಚೀನಾ ಮಾರ್ನಿಂಗ್ ಪೋಸ್ಟ್‌ನ ವರದಿ ಹೇಳುತ್ತದೆ. ಇದು ನೈಜ ಸೂರ್ಯನಿಗಿಂತ ಸುಮಾರು ಐದು ಪಟ್ಟು ಹೆಚ್ಚು ಬಿಸಿಯಾಗಿರುತ್ತದೆ. ಜೊತೆಗೆ ಅದು ಅದರ ಮಧ್ಯಭಾಗದಲ್ಲಿ 15 ಮಿಲಿಯನ್ ಡಿಗ್ರಿ ಸೆಲ್ಸಿಯಸ್ ತಾಪಮಾನವನ್ನು ಹೊಂದಿರುತ್ತದೆ. ವಿಜ್ಞಾನಿಗಳು ಈಗ 100 ಮಿಲಿಯನ್ ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಿನ ತಾಪಮಾನವನ್ನು ನಿರ್ವಹಿಸುವ ಗುರಿಯನ್ನು ಹೊಂದಿದೆ.

ಚೀನಾದ ಪೂರ್ವ ಪ್ರಾಂತ್ಯದ ಅನ್ಹುಯಿಯಲ್ಲಿರುವ ಹೆಫೀ ಇನ್‌ಸ್ಟಿಟ್ಯೂಟ್ ಆಫ್ ಫಿಸಿಕಲ್ ಸೈನ್ಸ್‌ನಲ್ಲಿ ಇತ್ತೀಚಿನ ಪ್ರಯೋಗ ನಡೆದಿದೆ. ಈ ಪ್ರಯೋಗಗಳು ಡಿಸೆಂಬರ್ ಆರಂಭದಲ್ಲಿ ಪ್ರಾರಂಭವಾಯಿತು ಮತ್ತು ಜೂನ್ ವರೆಗೆ ಇರುತ್ತದೆ ಎಂದು ನಿರೀಕ್ಷಿಸಲಾಗಿದೆ.

ಕೃತಕ ಸೂರ್ಯನನ್ನು ಬೆಳಗಿಸಿದೆ

ಡಿಸೆಂಬರ್ 2020ರಲ್ಲಿ ವಿಜ್ಞಾನ ಕ್ಷೇತ್ರಕ್ಕೆ ಸಂಬಂಧಿಸಿದಂತೆ ದಕ್ಷಿಣ ಕೊರಿಯಾ ಹೊಸ ವಿಶ್ವದಾಖಲೆ ಸೃಷ್ಟಿಸಿದೆ. ಸುಮಾರು 20 ಸೆಕೆಂಡುಗಳ ಕಾಲ 100 ಮಿಲಿಯನ್ ಡಿಗ್ರಿಯಲ್ಲಿ ಕೃತಕ ಸೂರ್ಯನನ್ನು ಬೆಳಗಿಸಿದೆ. ವಾಸ್ತವ ಸೂರ್ಯನ ಕೇಂದ್ರ ಭಾಗವು 15 ಮಿಲಿಯನ್ ಡಿಗ್ರಿ ಸೆಲ್ಸಿಯಸ್ ಮಾತ್ರ ಉರಿಯಬಲ್ಲದು. ಕೊರಿಯನ್ ಇನ್‌ಸ್ಟಿಟ್ಯೂಟ್ ಆಫ್ ಫ್ಯೂಷನ್ ಎನರ್ಜಿ (ಕೆಎಫ್‌ಇ) ಸಂಶೋಧನಾ ಕೇಂದ್ರ ಕೆಸ್ಟಾರ್, ಸೋಲ್ ನ್ಯಾಷನಲ್ ಯುನಿವರ್ಸಿಟಿ (ಎಸ್‌ಎನ್‌ಯು) ಮತ್ತು ಅಮೆರಿಕದ ಕೊಲಂಬಿಯಾ ವಿಶ್ವವಿದ್ಯಾಲಯದ ಜಂಟಿ ಪ್ರಯೋಗದಲ್ಲಿ ಈ ಸಾಧನೆಯನ್ನು ಮಾಡಿದೆ. 2018ನೇ ವರ್ಷದಲ್ಲಿ ಪ್ಲಾಸ್ಮಾ ಕಾರ್ಯಾಚರಣೆಯು ಎಂಟು ಸೆಕೆಂಡುಗಳ ಕಾಲ ಕಾರ್ಯಾಚರಣೆ ನಡೆಸಿತ್ತು. 2018ರಲ್ಲಿ ಕೆಸ್ಟಾರ್ ಮೊದಲ ಬಾರಿಗೆ 100 ಮಿಲಿಯನ್ ಡಿಗ್ರಿ ಸೆಲ್ಸಿಯಸ್ ಉಷ್ಣತೆಯನ್ನು ತಲುಪಿತ್ತು. ಆದರೆ ಆಗ ಅದು ಕೇವಲ 1.5 ಸೆಕೆಂಡ್‌ವರೆಗೆ ಉಳಿದುಕೊಂಡಿತ್ತು.

English summary
China is experimenting with an “artificial sun,” dubbed Experiential Advanced Superconducting Tokamak (EAST), to make way for clean energy in the future.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X