ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಳವಳಕಾರಿ ಅಂಶ: ನಗರ ಪ್ರದೇಶಗಳಲ್ಲಿ ಹೆಚ್ಚುತ್ತಿರುವ ಬಾಲ್ಯದಲ್ಲೇ ಅಂಧತ್ವ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 8: ಭಾರತದಲ್ಲಿ ಪ್ರತಿ 1,000 ಮಕ್ಕಳಲ್ಲಿ ಒಂದು ಮಗು ಬಾಲ್ಯಾವಸ್ಥೆಯ ಅಂಧತ್ವದಿಂದ ಬಳಲುತ್ತಿರುವುದು ಮತ್ತು ಮಗುವು ಪ್ರತಿ ನಿಮಿಷಕ್ಕೆ ದ್ವಿಪಕ್ಷೀಯ ಅಂಧನಾಗುತ್ತಿರುವುದು ಪ್ರಮುಖವಾದ ಸಾರ್ವಜನಿಕ ಆರೋಗ್ಯ ಕಳವಳಕಾರಿ ಅಂಶವಾಗಿದೆ. ವಯಸ್ಕರರಲ್ಲಿ ಶೇ.80 ರಷ್ಟು ಅಂಧತ್ವವನ್ನು ತಪ್ಪಿಸಬಹುದಾಗಿದ್ದರೆ, ಮಕ್ಕಳಲ್ಲಿ ಇದರ ಪ್ರಮಾಣ ಕೇವಲ ಶೇ.50 ರಷ್ಟಿದೆ ಎಂದು ಬೆಂಗಳೂರಿನ ಡಾ.ಅಗರ್‌ವಾಲ್ ಐ ಹಾಸ್ಪಿಟಲ್‍ನ ಕನ್ಸಲ್ಟೆಂಟ್ ಆಫ್ತಲ್ಮೋಲಾಜಿಸ್ಟ್ ಡಾ.ಬಿಂದಿಯಾ ಹಪಾನಿ ಹೇಳಿದ್ದಾರೆ.

ವಿಶ್ವದಾದ್ಯಂತ ಸುಮಾರು 1.5 ಮಿಲಿಯನ್ ಅಂಧ ಮಕ್ಕಳಿದ್ದಾರೆ ಮತ್ತು ಹೆಚ್ಚುವರಿಯಾಗಿ 18 ಮಿಲಿಯನ್ ಮಕ್ಕಳು ಸಾಮಾನ್ಯದಿಂದ ಗಂಭೀರ ಸ್ವರೂಪದ ದೃಷ್ಟಿಹೀನತೆಯಿಂದ ಬಳಲುತ್ತಿದ್ದಾರೆ. ಇವರಲ್ಲಿ ಬಹುತೇಕ ಮುಕ್ಕಾಲು ಭಾಗದ ಮಕ್ಕಳು ಕಡಿಮೆಯಿಂದ ಮಧ್ಯಮ ಪ್ರಮಾಣದ ಆದಾಯ ಇರುವ ದೇಶಗಳಿಗೆ ಸೇರಿದ್ದಾರೆ. ಅಲ್ಲಿ ಪ್ರತಿ 1,000 ಮಕ್ಕಳಲ್ಲಿ 1.5 ಕ್ಕಿಂತ ಹೆಚ್ಚು ಮಗುವಿಗೆ ಈ ಸಮಸ್ಯೆ ಇದೆ. ಆದರೆ, ಉತ್ತಮದಿಂದ ಹೆಚ್ಚು ಆದಾಯವಿರುವ ದೇಶಗಳಲ್ಲಿ ಇದರ ಪ್ರಮಾಣ ಪ್ರತಿ 1,000 ಮಕ್ಕಳಲ್ಲಿ ಕೇವಲ 0.3 ರಷ್ಟಿದೆ.

ಡಾ.ಬಿಂದಿಯಾ ಹಪಾನಿ

ಡಾ.ಬಿಂದಿಯಾ ಹಪಾನಿ

ಡಾ.ಬಿಂದಿಯಾ ಹಪಾನಿ ಹೇಳುವಂತೆ, ''ಭಾರತದಲ್ಲಿ ಬಾಲ್ಯದ ಅಂಧತ್ವಕ್ಕೆ ಸಾಮಾನ್ಯ ಕಾರಣಗಳಲ್ಲಿ ಪ್ರಮುಖವಾಗಿ ಚಿಕಿತ್ಸೆ ಪಡೆಯದಿರುವ ವಕ್ರೀಕಾರಕ ದೋಷಗಳು, ದಡಾರದಿಂದ ಉಂಟಾಗುವ ಕಾರ್ನಿಯಲ್ ಒಪಾಸಿಟಿಸ್, ವಿಟಮಿನ್ ಎ ಕೊರತೆ, ಕಣ್ಣಿನ ಸೋಂಕು ಅಥವಾ ಸಾಂಪ್ರದಾಯಿಕ ಕಣ್ಣಿನ ಪರಿಹಾರಗಳ ವಿಷತ್ವ, ಜನ್ಮಜಾತ ಕಣ್ಣಿನ ಪೊರೆಗಳ ಸಮಸ್ಯೆ, ಜನ್ಮಜಾತ ಗ್ಲುಕೋಮಾ ಮತ್ತು ಆರ್‍ಒಪಿ ಸೇರಿವೆ. ಕಳೆದ ಹಲವು ವರ್ಷಗಳಲ್ಲಿ ಬಾಲ್ಯದ ಅಂಧತ್ವ ಪ್ರಕರಣಗಳಲ್ಲಿ ಹೆಚ್ಚಳ ಕಂಡುಬರುತ್ತಿದೆ. 1999 ರಿಂದ 2007 ರ ನಡುವೆ ಕೈಗೊಂಡ ಅಧ್ಯಯನಗಳ ಪ್ರಕಾರ, ಭಾರತದಲ್ಲಿ ಕಾರ್ನಿಯಾ ಸಂಬಂಧಿತ ಅಂಶಗಳು ಬಾಲ್ಯದ ಅಂಧತ್ವಕ್ಕೆ ಪ್ರಮುಖ ಕಾರಣಗಳಾಗಿವೆ. ಆದರೆ, 2007 ರಿಂದ 2018 ರ ನಡುವೆ ನಡೆದ ಅಧ್ಯಯನಗಳು, ಮೈಕ್ರೋಫ್ತಲ್ಮೋಸ್(ಸಣ್ಣ ಕಣ್ಣು), ಅನೊಫ್ತಲ್ಮೋಸ್ (ಕಣ್ಣಿನ ದೋಷ) ಮತ್ತು ರೆಟಿನೋಪಥಿ ಆಫ್ ಪ್ರೀಮೆಚ್ಯುರಿಟಿ(ಆರ್‍ಒಪಿ) ಯಂತಹ ಸಮಸ್ಯೆಗಳು ಜಗತ್ತಿನಾದ್ಯಂತ ಹೆಚ್ಚಾಗಿ ಕಂಡು ಬಂದಿವೆ ಎಂದು ತಿಳಿಸಿವೆ'' ಎಂದರು.

ಲಾಕ್‌ಡೌನ್‌ ಸಮಯದಲ್ಲಿ ಮಕ್ಕಳಲ್ಲಿ ಹೆಚ್ಚಿದೆ ದೃಷ್ಟಿದೋಷ; ಅಧ್ಯಯನಲಾಕ್‌ಡೌನ್‌ ಸಮಯದಲ್ಲಿ ಮಕ್ಕಳಲ್ಲಿ ಹೆಚ್ಚಿದೆ ದೃಷ್ಟಿದೋಷ; ಅಧ್ಯಯನ

ಆನುವಂಶಿಕ ವೈಪರೀತ್ಯಗಳು

ಆನುವಂಶಿಕ ವೈಪರೀತ್ಯಗಳು

''ಮಕ್ಕಳ ಅಂಧತ್ವಕ್ಕೆ ಕಾರಣವಾಗಿರುವ ಇಡೀ ಜಾಗತಿಕ ಸಮಸ್ಯೆಗಳು ರಕ್ತಸಂಬಂಧಿ ವಿವಾಹಗಳಿಂದ ಉಂಟಾಗುವ ಆನುವಂಶಿಕ ವೈಪರೀತ್ಯಗಳು, ತಾಯಿಯು ಮದ್ಯ ಸೇವನೆ ಮಾಡುವುದು ಮತ್ತು ಗರ್ಭಾವಸ್ಥೆಯ ಸಂದರ್ಭದಲ್ಲಿ ರಸಗೊಬ್ಬರಗಳು ಹಾಗೂ ಕ್ರಿಮಿನಾಶಕಗಳಿಗೆ ಒಡ್ಡಿಕೊಳ್ಳುವುದು. ಭಾರತದ ನಗರ ಪ್ರದೇಶಗಳಲ್ಲಿ ನವಜಾತ ಶಿಶು ಆರೈಕೆ ಸೇವೆಗಳ ಉತ್ತಮ ಲಭ್ಯತೆಯಿಂದಾಗಿ ರೆಟಿನೋಪಥಿ ಆಫ್ ಪ್ರೀಮೆಚ್ಯುರಿಟಿ ಮಗುವಿನ ಅಂಧತ್ವಕ್ಕೆ ಒಂದು ಪ್ರಮುಖ ಕಾರಣವಾಗಿ ಹೊರಹೊಮ್ಮಿದೆ. ಈ ಕಾರಣದಿಂದಾಗಿ ನವಜಾತ ಶಿಶುಗಳು ಕಡಿಮೆ ತೂಕ ಹೊಂದಿದ್ದರೂ ಬದುಕುಳಿಯುತ್ತವೆ. ಆದರೆ, ಭಾರತದ ಗ್ರಾಮೀಣ ಪ್ರದೇಶಗಳಲ್ಲಿ ಇದಕ್ಕೆ ತದ್ವಿರುದ್ಧವಾಗಿ ಕಡಿಮೆ ತೂಕದ ನವಜಾತ ಶಿಶುಗಳ ಮರಣ ಪ್ರಮಾಣ ಹೆಚ್ಚಾಗಿದೆ'' ಎಂದು ಅವರು ತಿಳಿಸಿದ್ದಾರೆ.

ರೋಗನಿರೋಧಕ ಕಾರ್ಯಕ್ರಮ

ರೋಗನಿರೋಧಕ ಕಾರ್ಯಕ್ರಮ

''ಸರ್ಕಾರಗಳು ಆರೋಗ್ಯ ರಕ್ಷಣೆ ಮತ್ತು ರೋಗನಿರೋಧಕ ಕಾರ್ಯಕ್ರಮಗಳನ್ನು ಉತ್ತಮ ರೀತಿಯಲ್ಲಿ ಕಾರ್ಯಗತಗೊಳಿಸಿರುವುದರ ಪರಿಣಾಮ ವರ್ಷಗಳಲ್ಲಿ ಬಾಲ್ಯದ ಅಂಧತ್ವ ಕಾರಣಗಳಲ್ಲಿ ಬದಲಾವಣೆಗಳು ಆಗಿವೆ. ಇದು ದೇಶದಲ್ಲಿ ಸಾಮಾಜಿಕ-ಆರ್ಥಿಕ ಅಭಿವೃದ್ಧಿಯನ್ನು ಹೆಚ್ಚಿಸುತ್ತದೆ. ಆದಾಗ್ಯೂ, ಮಕ್ಕಳ ಅಂಧತ್ವವನ್ನು ತಡೆಗಟ್ಟುವಲ್ಲಿ ಇರುವ ಸವಾಲುಗಳು ಹಾಗೆಯೇ ಉಳಿದಿವೆ. ಈ ಹಿನ್ನೆಲೆಯಲ್ಲಿ ಮಕ್ಕಳ ಅಂಧತ್ವ ನಿಯಂತ್ರಣಕ್ಕೆ ಉತ್ತಮ ಪ್ರಾಥಮಿಕ ಆರೋಗ್ಯ ಸೇವೆಗಳ ಲಭ್ಯತೆ ಅತ್ಯಗತ್ಯವಾಗಿದೆ. ಅಲ್ಲದೇ, ಉತ್ತಮ ಪೌಷ್ಠಿಕಾಂಶ, ತಾಯಿ ಮತ್ತು ಮಗುವಿನ ಆರೈಕೆ ಸೌಲಭ್ಯಗಳು, ರೋಗನಿರೋಧಕ ಹಾಗೂ ಸಮರ್ಪಕವಾದ ರೋಗನಿರ್ಣಯ ಮತ್ತು ಕಣ್ಣಿನ ಸಾಮಾನ್ಯ ಪರಿಸ್ಥಿತಿಗಳ ಚಿಕಿತ್ಸೆ ಸಹ ಮುಖ್ಯವಾಗಿದೆ. ಇದೇ ವೇಳೆ ಗ್ರಾಮೀಣ ಪ್ರದೇಶಗಳಲ್ಲಿ ಸುಶಿಕ್ಷಿತವಾದ ಕಣ್ಣಿನ ತಜ್ಞರೊಂದಿಗಿನ ತೃತೀಯ ಆರೈಕೆ ಸೌಲಭ್ಯಗಳ ಲಭ್ಯತೆಯು ದೊಡ್ಡ ಸವಾಲಾಗಿ ಉಳಿದಿದೆ'' ಎಂದು ಕಳವಳ ವ್ಯಕ್ತಪಡಿಸಿದರು.

ಜ್ಯೋತಿಷ್ಯ: ಯಾರನ್ನೂ ಕಾಡಬಹುದಾದ ದೃಷ್ಟಿದೋಷ ಮತ್ತು ಪರಿಹಾರ ಮಾರ್ಗಜ್ಯೋತಿಷ್ಯ: ಯಾರನ್ನೂ ಕಾಡಬಹುದಾದ ದೃಷ್ಟಿದೋಷ ಮತ್ತು ಪರಿಹಾರ ಮಾರ್ಗ

ಮಕ್ಕಳ ನೇತ್ರ ರಕ್ಷಣೆ ಸೌಲಭ್ಯ

ಮಕ್ಕಳ ನೇತ್ರ ರಕ್ಷಣೆ ಸೌಲಭ್ಯ

''ದೇಶಾದ್ಯಂತ ಮಕ್ಕಳ ನೇತ್ರ ರಕ್ಷಣೆ ಸೌಲಭ್ಯಗಳನ್ನು ಅಸಮರ್ಪಕ ಮತ್ತು ಏಕರೂಪತೆ ಇಲ್ಲದೇ ವಿತರಣೆ ಮಾಡಲಾಗುತ್ತಿದೆ. ಉತ್ತರ ಮತ್ತು ಈಶಾನ್ಯ ಭಾರತಕ್ಕೆ ಹೋಲಿಸಿದರೆ ದಕ್ಷಿಣ ಮತ್ತು ಪಶ್ಚಿಮ ಭಾರತದಲ್ಲಿ ಉತ್ತಮ ಅನುಪಾತವಿದೆ. ಮಕ್ಕಳ ನೇತ್ರವಿಜ್ಞಾನವು ಈಗ ದೇಶದಲ್ಲಿ ಒಂದು ವಿಶೇಷವಾದ ರೀತಿಯಲ್ಲಿ ಬೆಳೆಯುತ್ತಿದ್ದರೂ ಮಕ್ಕಳ ಜನಸಂಖ್ಯೆಗೆ ಹೋಲಿಸಿದರೆ ಮಕ್ಕಳ ನೇತ್ರತಜ್ಞರ ಸಂಖ್ಯೆ ಕಡಿಮೆ ಇದೆ. ಆದಾಗ್ಯೂ, ಹೆಚ್ಚಿನ ಮಕ್ಕಳ ಕಣ್ಣಿನ ಪರಿಸ್ಥಿತಿಗಳನ್ನು ಸಾಮಾನ್ಯ ನೇತ್ರಶಾಸ್ತ್ರಜ್ಞರು ಪತ್ತೆ ಹಚ್ಚಬಹುದು ಹಾಗೂ ಚಿಕಿತ್ಸೆ ನೀಡಬಹುದಾಗಿದೆ. ಜನ್ಮಜಾತ ಕಣ್ಣಿನ ಪೊರೆ, ಸ್ಕ್ವಿಂಟ್ ಮತ್ತು ಪ್ರಿಟ್ಯೂಟರಿಯ ರೆಟಿನೋಪತಿಯಂತಹ ಸಂಕೀರ್ಣ ಪರಿಸ್ಥಿತಿಗಳಿಗೆ ಮಕ್ಕಳ ನೇತ್ರ ತಜ್ಞರ ಅಗತ್ಯವಿದೆ'' ಎಂದು ಅವರು ಹೇಳಿದರು.

ಪೋಷಕರು ತಮ್ಮ ಮಗುವು ಅಂಧತ್ವ ಹೊಂದುತ್ತಿದೆ ಎಂದು ಹೇಗೆ ತಿಳಿಯಬಹುದು ಎಂಬುದರ ಕುರಿತು ಮಾತನಾಡಿದ ಡಾ.ಬಿಂದಿಯಾ ಹಪಾನಿ ಅವರು, ''ಮಕ್ಕಳು ಅಪಕ್ವವಾದ ದೃಷ್ಟಿ ವ್ಯವಸ್ಥೆಯಿಂದ ಜನಿಸುತ್ತಾರೆ. ಮಗುವಿನಲ್ಲಿ ಕಣ್ಣಿನ ಪರಿಸ್ಥಿತಿಗಳಿಗೆ ಸಕಾಲಿಕವಾಗಿ ಚಿಕಿತ್ಸೆಯನ್ನು ಕೊಡಿಸದಿದ್ದರೆ ವಯಸ್ಕರವಾಗುವಾಗ ಚಿಕಿತ್ಸೆ ನೀಡಲಾಗದೇ ದೃಷ್ಟಿ ಪಕ್ವತೆ(ಆಂಬ್ಲಿಯೋಪಿಯಾ) ವೈಫಲ್ಯಕ್ಕೆ ಕಾರಣವಾಗಬಹುದು'' ಎಂದು ಎಚ್ಚರಿಸಿದರು.

Recommended Video

KL Rahul ಪಂದ್ಯ ಮುಗಿದಾದ ನಂತರ ಹೇಳಿದ್ದೇನು | Oneindia Kannada
ತಕ್ಷಣ ನೇತ್ರಶಾಸ್ತ್ರಜ್ಞರನ್ನು ಸಂಪರ್ಕಿಸಬೇಕು

ತಕ್ಷಣ ನೇತ್ರಶಾಸ್ತ್ರಜ್ಞರನ್ನು ಸಂಪರ್ಕಿಸಬೇಕು

''ಮಗುವಿನಲ್ಲಿ ಅಂಧತ್ವ ಅಭಿವೃದ್ಧಿ ಹೊಂದುತ್ತಿದ್ದರೆ ಅಥವಾ ಬಿಳಿ ಪ್ರತಿಫಲಿತವನ್ನು (ಲ್ಯುಕೋಕೋರಿಯಾ)ದಿಂದ ನೋಡಿದರೆ, ನೀವು ತಕ್ಷಣ ನೇತ್ರಶಾಸ್ತ್ರಜ್ಞರನ್ನು ಸಂಪರ್ಕಿಸಬೇಕು. ಮಕ್ಕಳಲ್ಲಿ ದೃಷ್ಟಿಹೀನತೆಗೆ ಪ್ರಮುಖ ಕಾರಣ ವಕ್ರೀಕಾರಕ ದೋಷ. ಆದ್ದರಿಂದ, ಮಗುವಿನ ಪೂರ್ವ-ಶಾಲಾ ಕಣ್ಣಿನ ಪರೀಕ್ಷೆಯನ್ನು ನಡೆಸುವುದು ಮುಖ್ಯವಾಗಿರುತ್ತದೆ. ಅಂಧತ್ವವು ಮಕ್ಕಳ ಶೈಕ್ಷಣಿಕ, ಭಾವನಾತ್ಮಕ, ಮಾನಸಿಕ ಮತ್ತು ಸಾಮಾಜಿಕ ಬೆಳವಣಿಗೆಯನ್ನು ಕುಂಠಿತವಾಗುವಂತೆ ಮಾಡುತ್ತದೆ. ತೀವ್ರವಾದ ದೃಷ್ಟಿಹೀನತೆಯು ಅವರ ಬೆಳವಣಿಗೆಯ ಮೈಲಿಗಲ್ಲುಗಳನ್ನು ವಿಳಂಬಗೊಳಿಸುತ್ತದೆ ಮತ್ತು ಆಸ್ಪತ್ರೆಗೆ ಸೇರಿಸುವ ಅಪಾಯವನ್ನು ಹೆಚ್ಚಿಸುತ್ತದೆ'' ಎಂದು ಅವರು ವಿವರಿಸಿದರು.

English summary
Childhood blindness is a significant public health concern in India, with one out of every 1,000 children in the country suffering from blindness, and a child becoming bilaterally blind every minute. according to Dr. Bindiya Hapani, Consultant Ophthalmologist, Dr. Agarwals Eye Hospital, Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X