Video Viral: ಕೆನರಾ ಬ್ಯಾಂಕ್‌ನಲ್ಲಿ 'ರಾಷ್ಟ್ರಭಾಷೆ ಹಿಂದಿ' ಅಷ್ಟೇ ಮಾತನಾಡಿ! ಕನ್ನಡಿಗರ ಮೇಲೆ ಅಧಿಕಾರಿ ಧಮ್ಕಿ

ಬೆಂಗಳೂರು, ಸೆಪ್ಟಂಬರ್ 06: ಕರ್ನಾಟಕದಲ್ಲಿ ಸ್ಥಾಪನೆಯಾದ ಕೆನರಾ ಬ್ಯಾಂಕ್ ಗೆ ದಶಕಗಳ ಇತಿಹಾಸ ಇದೆ. ಇದೀಗ ಈ ಬ್ಯಾಂಕ್ ಕನ್ನಡಿಗರನ್ನು, ಕನ್ನಡ ಭಾಷೆಯನ್ನು ಕಡೆಗಣಿಸುತ್ತಿರುವ ವಿಚಾರವಾಗಿ ಸುದ್ದಿಯಾಗಿದೆ. ಸ್ವತಃ ಬ್ಯಾಂಕಿನಲ್ಲಿ ಕನ್ನಡ ಭಾಷೆ ಬಳಕೆ ನಿರಾಕರಿಸುತ್ತಿರುವ ವಿಡಿಯೋ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಕುರಿತು ಕನ್ನಡಿಗರಾದ ಗ್ರಾಹಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕೆನರಾ ಬ್ಯಾಂಕ್ ಅಧಿಕಾರಿಗಳೇ ನಿಮಗೆ ಕನ್ನಡಿಗರ ವ್ಯವಹಾರ ಬೇಕು. ಆದರೆ ನಮ್ಮ ಭಾಷೆಯಲ್ಲಿ ನಮ್ಮೊಂದಿಗೆ ಸಂವಹನ ನಡೆಸಲು ನೀವು ಬಯಸುವುದಿಲ್ಲವೇ?. ನಿಮ್ಮ ಹಿಂದಿ ಹೇರಿಕೆಯನ್ನು ನಿಲ್ಲಿಸಬೇಕು. ಬ್ಯಾಂಕಿಂಗ್ ಪರೀಕ್ಷೆಗಳಲ್ಲಿ ಹಿಂದಿ ತಂದಿದ್ದರ ಫಲಿತಾಂಶ ಇದು ಎಂದು ಸಾಮಾಜಿಕ ಜಾಲತಾಣದ ಬಳಕೆದಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತ ವಿಡಿಯೋ ಅನ್ನು ಎಕ್ಸ್ ಖಾತೆಯಲ್ಲಿ @LavanyaBallal ಹಂಚಿಕೊಂಡಿದ್ದಾರೆ.

Canara Bank Hindi Imposed on Kannadigas Customer Outrage Video Goes Viral

ಹಿಂದಿ ಭಾಷೆ ಬಳಕೆ, ಕನ್ನಡ ನಿರ್ಲಕ್ಷ್ಯ: ವಿಡಿಯೋದಲ್ಲಿ ಏನಿದೆ?

ಹಿಂದಿ ಹೇರಿಕೆಗೆ ಸಂಬಂಧಿಸಿದಂತೆ ವೈರಲ್ ಆಗುತ್ತಿರುವ ವಿಡಿಯೋದಲ್ಲಿನ ಘಟನೆ ಕೋಲಾರ ಜಿಲ್ಲೆಯ ಬಂಗಾರಪೇಟೆಯ ಕೆನರಾ ಬ್ಯಾಂಕ್‌ ಶಾಖೆಯಲ್ಲಿ ನಡೆದಿದೆ. ಶಾಖೆಯಲ್ಲಿ ಬ್ಯಾಂಕ್ ನಾಮಪಲಕದಲ್ಲಿ ಕನ್ನಡ ಭಾಷೆ ಇದ್ದು, ಒಳಗೆ ಹಿಂದಿ, ಆಂಗ್ಲ ಭಾಷೆ ತುಂಬಿಕೊಂಡಿದೆ.

ಈ ಬ್ಯಾಂಕಿಗೆ ತೆರಳಿದ್ದ ಗ್ರಾಹಕರು ವಹೀವಾಟು ವಿಚಾರವಾಗಿ ಚಲನ್ ಪಡೆದಿದ್ದಾರೆ. ಆದರೆ ಅದರಲ್ಲಿ ಆಂಗ್ಲ ಭಾಷೆ 'ಇಂಗ್ಲೀಷ್ ಹಾಗೂ ಹಿಂದಿ' ಮಾತ್ರವೇ ಇದೆ. ನಾನು ಕನ್ನಡಿಗ ಬೇರೆ ಭಾಷೆಗಳಲ್ಲಿ ಚಲನ್ ಇದ್ದರೆ ಅದನ್ನು ಭರ್ತಿ ಮಾಡುವುದು ಹೇಗೆ. ದಯಮಾಡಿ ಕನ್ನಡ ಭಾಷೆಯ ಚಲನ್ ಕೊಡಿ ಎಂದು ಆಗ್ರಹಿಸಿದ್ದಾರೆ.

ಇದಕ್ಕೆ ಆ ಕೆನರಾ ಬ್ಯಾಂಕ್ ವ್ಯವಸ್ಥಾಪಕರು ಇಲ್ಲಿ ಹಿಂದಿ ಚಾಲ್ತಿ ಇದೆ. ಹಿಂದಿ ರಾಷ್ಟ್ರಭಾಷೆ. ಹಿಂದಿಯನ್ನೇ ಮಾನತಾಡಿ ಎಂದು ಧಮ್ಕಿ ಹಾಕಿದ್ದಾರೆ. ಮಾತಿಗೆ ಮಾತು ಬೆಳೆಯುತ್ತಿದ್ದಂತೆ ಅಲ್ಲಿದ್ದ ಇತರ ಗ್ರಾಹಕರು ಜೊತೆಯಾಗಿದ್ದಾರೆ. ಕೆಲವರು ಸಮಾಧಾನ ಪಡಿಸಲು, ಗಲಾಟೆ ನಿಲ್ಲಿಸಲು ಯತ್ನಿಸಿದ್ದಾರೆ..

ಕನ್ನಡಿಗರ ಆಗ್ರಹವೇನು?

ಇದು ಕರ್ನಾಟಕ, ಇಲ್ಲಿ ಕನ್ನಡ ಭಾಷೆಯ ಚಲನ್ ಇಡಬೇಕು, ಯಾಕಿಲ್ಲ?. ನಾವು ಕನ್ನಡಿಗರು, ಬೇರೆ ಭಾಷೆ ಚಲನ್ ಇದ್ದರೆ ಅದನ್ನು ತುಂಬುವುದು ಹೇಗೆ? ನೀವು ಹಿಂದಿ ರಾಷ್ಟ್ರ ಭಾಷೆ ಹೇಳುತ್ತಿದ್ದೀರಿ. ಹಿಂದಿ ರಾಷ್ಟ್ರಭಾಷೆ ಎಂದು ಯಾರು ಹೇಳಿದ್ದು?, ಬ್ಯಾಂಕಿನಲ್ಲಿ ಹಿಂದಿ, ಇಂಗ್ಲೀಷ್ ಮಾತನಾಡಲೇಬೇಕು ಎಂದು ಯಾರು ಹೇಳಿದ್ದು? ಎಂದು ಗ್ರಾಹಕರು ಪ್ರಶ್ನಿಸಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.

ಗ್ರಾಹಕರ ಮಾತಿಗೆ ಆ ಕಡೆಯಿಂದ ಆ ಬ್ಯಾಂಕ್ ವ್ಯವಸ್ಥಾಪಕರು, ಹಿಂದಿಯಲ್ಲಿ ನಾನೇಕೆ ಮಾತನಾಡಲಿ. ನೀವು ಹಿಂದಿ ಮಾತನಾಡಿ. ಇಲ್ಲಿ ಹಿಂದಿ ಚಾಲ್ತಿಯಲ್ಲಿದೆ. ಅದು ರಾಷ್ಟ್ರೀಯ ಭಾಷೆ ಎಂದು ಜೋರು ಧ್ವನಿಯಲ್ಲಿ ಕನ್ನಡಿಗರಿಗೆ ಆಗ್ರಹಿಸಿದ ವಿಡಿಯೋ ವೈರಲ್ ಆಗಿದೆ.

ಹಿಂದಿ ಹೇರಿಕೆಗೆ ತಾಜಾ ಉದಾಹರಣೆ

ಕೆನರಾ ಬ್ಯಾಂಕ್ ಸೇರಿ ಬೇರೆ ಬೇರೆ ಬ್ಯಾಂಕ್‌ಗಳಲ್ಲಿ ಇಂತಹ ಘಟನೆ ನಡೆಯುತ್ತಿರುತ್ತವೆ. ಅದಕ್ಕಾಗಿ ಆರ್‌ಬಿಐ ಸ್ಥಳೀಯ ಭಾಷೆ ನಿರಾಕರಿಸಿದರೆ ಏನು ಮಾಡಬೇಕು ಎಂದು ಮಾರ್ಗಸೂಚಿ ಹೊರಡಿಸಿದೆ. ಬ್ಯಾಂಕಿಂಗ್ ಪರೀಕ್ಷೆಗಳು ಹಿಂದಿ ಹೇರಿಕೆಯಿಂದ ಮುಕ್ತವಾಗಿಲ್ಲ. ಒಂದಲ್ಲ ಒಂದು ರೀತಿಯಲ್ಲಿ ಕನ್ನಡಿಗರ ಮೇಲೆ ಹಿಂದಿ ಹೇರಿಕೆ ನಡೆಯುತ್ತಲೆ ಇದೆ ಎಂಬುದಕ್ಕೆ ಬಂಗಾರಪೇಟೆಯ ಘಟನೆ ತಾಜಾ ಉದಾಹರಣೆ ಆಗಿದೆ.

ಕನ್ನಡ ನಿರಾಕರಿಸಿದರೆ ಏನು ಮಾಡಬೇಕು?

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಮಾರ್ಗಸೂಚಿ ಪ್ರಕಾರ, ಒಂದು ಬ್ಯಾಂಕ್ ಸ್ಥಳೀಯ ಅಥವಾ ಪ್ರಾದೇಶಿಕ ಭಾಷೆಯಲ್ಲಿ ಸಂವಹನ ನಡೆಸಬೇಕು. ಇದಕ್ಕೆ ನಿರಾಕರಿಸಿದರೆ ಅಂತವರ ವಿರುದ್ಧ ಸೆಂಟ್ರಲ್ ಬ್ಯಾಂಕ್‌ನ ಬ್ಯಾಂಕಿಂಗ್ ಒಂಬುಡ್ಸ್‌ಮನ್ ಅಡಿ ದೂರು ದಾಖಲಿಸಲು ಅವಕಾಶ ಇದೆ. ಅಂತವರ ವಿರುದ್ಧ ನಿಯಮಗಳ ಪ್ರಕಾರ ಕ್ರಮ ಜರುಗಿಸಲಾಗುತ್ತದೆ. ಕೆಲವು ಬ್ಯಾಂಕಿಂಗ್ ಸೇವೆಗಳಲ್ಲಿನ ಕೊರತೆಯ ವಿರುದ್ಧ ಗ್ರಾಹಕರ ದೂರುಗಳನ್ನು ನಿವಾರಿಸಲು ಆರ್‌ಬಿಐನಿಂದ ಬ್ಯಾಂಕ್ ಒಂಬುಡ್ಸ್‌ಮನ್ ಅಳವಡಿಸಿಕೊಂಡಿದ್ದು, ಅದಕ್ಕಾಗಿ ಹಿರಿಯ ಅಧಿಕಾರಿಯನ್ನು ನೇಮಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+