BSNL Reacharge: ಅತೀ ಕಡಿ ದರದಲ್ಲಿ ರೀಚಾರ್ಜ್; ವಿಐ, ಏರ್‌ಟೆಲ್‌ಗೆ ಸೆಡ್ಡು ಹೊಡೆದ ಬಿಎಸ್‌ಎನ್‌ಎಲ್
BSNL Recharge: ಜಿಯೋ ಉತ್ತಮ ಆಫರ್ ನೀಡುವ ಮೂಲಕ ದೇಶಾದ್ಯಂತ ಹೆಚ್ಚೆಚ್ಚು ಗ್ರಾಹಕರನ್ನು ಸೆಳೆಯುವ ಕೆಲಸ ಮಾಡಿತ್ತು. ಬರಬರುತ್ತಾ ರೀಚಾರ್ಜ್ ದರಗಳನ್ನು ಹೆಚ್ಚು ಮಾಡುವ ಮೂಲಕ ಶಾಕ್ ನೀಡುತ್ತಾ ಬಂದಿದೆ. ಇದೇ ಚಾಳಿಯನ್ನೇ ಏರ್‌ಟೆಲ್, ವಿಐ ಮುಂದುವರೆಸಿಕೊಂಡು ಬಂದಿವೆ. ಆದರೆ, ಇದೀಗ ಕಡಿಮೆ ಬೆಲೆಯಲ್ಲಿ ರೀಚಾರ್ಜ್ ನೀಡುವ ಮೂಲಕ ಇವೆಲ್ಲವುಗಳಿಗೆಲ್ಲಾ ಬಿಎಸ್‌ಎನ್‌ಎಲ್ ಸೆಡ್ಡು ಹೊಡೆಯಲು ಮುಂದಾಗಿದೆ.
ಬಿಎಸ್ಎನ್‌ಎಲ್ ಕಡಿಮೆ ದರದಲ್ಲಿ ರೀಚಾರ್ಜ್ ಆಫರ್‌ಗಳನ್ನು ನೀಡಲು ಮುಂದಾಗಿದ್ದು, ಈ ಮೂಲಕ ಹೆಚ್ಚೆಚ್ಚು ಗ್ರಾಹಕರನ್ನು ಸೆಳೆಯುವ ಕೆಲಸವನ್ನು ಮಾಡುತ್ತಿದೆ. ಇದೀಗ ಇತರ ಎಲ್ಲಾ ನೆಟ್‌ವರ್ಕ್‌ಗಿಂತ ಕಡಿಮೆ ದರದಲ್ಲಿ 1.5 ಜಿಬಿ ಡೇಟಾ, ಅನ್‌ಲಿಮಿಟೆಡ್ ಕಾಲ್ 28 ದಿನ ವ್ಯಾಲಿಡಿಟಿ ಸೇರಿದಂತೆ ಉತ್ತಮ ಕೊಡುಗೆ ನೀಡಲು ಮುಂದಾಗಿದೆ. ಹಾಗಾದರೆ ದರ ಎಷ್ಟೆಂದು ಇಲ್ಲಿ ತಿಳಿಯಿರಿ.

ಇತರ ನೆಟ್‌ವರ್ಕ್‌ಗಳಿಂದ ಬಿಎಸ್ಎನ್‌ಎಲ್‌ಗೆ ಪೋರ್ಟ್ ಆಗುತ್ತಿರುವವರ ಸಂಖ್ಯೆ ಹೆಚ್ಚಳ ಆಗುತ್ತಿದೆ. ಬಿಎಸ್ಎನ್‌ಎಲ್ ಉತ್ತಮ ನೆಟ್‌ವರ್ಕ್, 4ಜಿ ಇಂಟರ್‌ನೆಟ್ ಸೇರಿದಂತೆ ಹಲವು ಸೌಲಭ್ಯಗಳನ್ನು ಕಡಿಮೆ ದರದಲ್ಲಿ ನೀಡುತ್ತಿದೆ. ಅದರಲ್ಲೂ ಇದೀಗ ಇತರ ನೆಟ್‌ವರ್ಕ್ ರೀಚಾರ್ಜ್ ಬೆಲೆ ದುಬಾರಿ ಆಗುತ್ತಿರುವ ಹಿನ್ನೆಲೆ ಗ್ರಾಹಕರು ಬಿಎಸ್ಎನ್‌ಎಲ್‌ನತ್ತ ಮುಖ ಮಾಡುತ್ತಿದ್ದಾರೆ.
ಬಿಎಸ್ಎನ್‌ಎಲ್ ಕೇವಲ 187 ರೂಪಾಯಿಗೆ ರೀಚಾರ್ಜ್‌ನಲ್ಲಿ, ಪ್ರತಿ ದಿನ 1.5 ಜಿಬಿ ಡೇಟಾ, ಅನ್‌ಲಿಮಿಟೆಡ್ ಕಾಲ್, 28 ದಿನ ವ್ಯಾಲಿಟಿಡಿ ನೀಡಲು ಮುಂದಾಗಿದೆ. ಪ್ರತಿ ದಿನದ 1.5 ಜಿಬಿ ಡೇಟಾ ಮುಗಿದ ಬಳಿಕ ಇಂಟರ್‌ನೆಟ್ ಸ್ಪೀಡ್ 40Kbpsಗೆ ಇಳಿಕೆ ಆಗಲಿದೆ. 28 ದಿನ 1.5 ಜಿಬಿ ಡೇಟಾ ಹಾಗೂ ಉಚಿತ ಕಾಲ್ ಇತರ ನೆಟ್‌ವರ್ಕ್‌ಗಳಲ್ಲಿ 350 ರೂಪಾಯಿಗೂ ಅಧಿಕವಾಗಿದೆ. ಇವುಗಳಿಗೆ ಹೋಲಿಸಿದರೆ, ಬಿಎಸ್ಎನ್‌ಎಲ್ ಉತ್ತಮ ಎನ್ನುತ್ತಿದ್ದಾರೆ ಗ್ರಾಹಕರು.
* ಇನ್ನು ಬಿಎಸ್‌ಎನ್‌ಎಲ್ ಹಲವು ಸೌಲಭ್ಯಗಳನ್ನು ನೀಡಿದ್ದು, ಪ್ರತಿ ದಿನ 2 ಜಿಬಿ ಡೇಟಾ ಬಳಕೆದಾರರಿಗೆ 349 ರೂಪಾಯಿ ರೀಚಾರ್ಜ್ ಪ್ಲಾನ್ ಘೋಷಣೆ ಮಡಿದೆ. ವಿಶೇಷ ಅಂದ್ರೆ, ಈ ರೀಚಾರ್ಜ್ ಮಾಡುವ ಗ್ರಾಹಕರಿಗೆ ಜಿಯೋ ಟಿವಿ, ಜಿಯೋ ಸಿನಿಮಾ ಹಾಗೂ ಡಿಯೋ ಕ್ಲೌಟ್ ಸೌಲಭ್ಯವೂ ಸಿಗಲಿದೆ. 349 ರೂಪಾಯಿ ಪ್ಲಾನ್‌ನಲ್ಲಿ ಪ್ರತಿ ದಿನ 2ಜಿಬಿ ಡೇಟಾ ಸಿಗಲಿದೆ. ಇನ್ನು 28 ದಿನ ವ್ಯಾಲಿಟಿಡಿ, ಅನ್‌ಲಿಮಿಟೆಡ್ ಕಾಲ್, ಪ್ರತಿ ದಿನ 100 ಎಸ್ಎಂಎಸ್ ಸೌಲಭ್ಯವೂ ಇರಲಿದೆ ಎಂದು ತಿಳಿಸಿದೆ.
* ಅದೆಲ್ಲೂ ಒಟಿಟಿ ಸೇರಿ ಮನರಂಜನಾ ಪ್ಲಾನ್ ಬಯಸುವವರಿಗೆ ವಿಶೇಷ ರೀಚಾರ್ಜ್ ಪ್ಲಾನ್ ನೀಡಲು ಮುಂದಾಗಿದೆ. 448 ರೂಪಾಯಿ ರೀಚಾರ್ಜ್ ಪ್ಲಾನ್‌ನಲ್ಲಿ 12 ಜನಪ್ರಿಯ ಒಟಿಟಿ ಆ್ಯಕ್ಸೆಸ್, ಜಿಯೋ ಟಿವಿ, ಡಿಯೋ ಸಿನಿಮಾ ಹಾಗೂ ಜಿಯೋ ಕ್ಲೌಡ್ ಸೌಲಭ್ಯ ಸಹ ಸಿಗಲಿದೆ. ಪ್ರತಿ ದಿನ 2 ಜಿಬಿ ಡೇಟಾ, ಅನ್‌ಲಿಮಿಟೆಡ್ ಕಾಲ್, ಪ್ರತಿ ದಿನ 100 ಉಚಿತ ಎಸ್‌ಎಂಎಸ್ ಸೇರಿದಂತೆ ಇತರ ಸೌಲಭ್ಯಗಳನ್ನು ಒದಗಿಸಲು ಮುಂದಾಗಿದೆ. ಇದರ ವ್ಯಾಲಿಟಿಡಿ ಒಟ್ಟು 28 ದಿನ ಇರಲಿದೆ.
* ಪ್ರತಿ ದಿನ 3ಜಿಬಿ ಡೇಟಾ ಬಳಕೆ ಮಾಡುವ ಗ್ರಾಹಕರಿಗೆ 449 ರೂಪಾಯಿ ಪ್ಲಾನ್ ಘೋಷಣೆ ಮಾಡಿದೆ. ಈ ಪ್ಲಾನ್ ಅಡಿಯಲ್ಲಿ ಪ್ರತಿ ದಿನ 3ಜಿಬಿ ಉಚಿತ ಡೇಟಾ ಸಿಗಲಿದೆ. 28 ದಿನ ವ್ಯಾಲಿಟಿಡಿ ಇರುವ ಈ ಪ್ಲಾನ್ ಅನ್‌ಲಿಮಿಟೆಡ್ ಕಾಲ್, ಪ್ರತಿ ದಿನ 100 ಎಸ್ಎಂಎಸ್, ಜಿಯೋ ಟಿವಿ, ಜಿಯೋ ಕ್ಲೌಡ್ ಹಾಗೂ ಜಿಯೋ ಸಿನಿಮಾ ಸಬ್‌ಸ್ಕ್ರಿಪ್ಶನ್ ಸಿಗಲಿದೆ.
ಇದೇ ವರ್ಷದಲ್ಲಿ 2,000ಕ್ಕೂ ಹೆಚ್ಚೂ ಟವರ್‌ಗಳನ್ನು ಸ್ಥಾಪಿಸಲು ಬಿಎಸ್ಎನ್‌ಎಲ್ ಅನುಮೋದನೆ ನೀಡಿದೆ. ಮುಂದಿನ ವರ್ಷದ ಆರಂಭದಲ್ಲಿ ದೇಶದೆಲ್ಲೆಡೆ ಟವರ್ ಹಾಗೂ ನೆಟ್‌ವರ್ಕ್ ಇರಲಿದೆ. ಅಲ್ಲದೆ, 5ಜಿ ಸೇವೆ ಸಹ ಆರಂಭ ಆಗಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.












Click it and Unblock the Notifications