BSNL: ಕಡಿಮೆ ಬೆಲೆಗೆ 70 ದಿನದ ಬೆಸ್ಟ್ ಪ್ಲಾನ್ ನಿಮಗಾಗಿ: ಏನೆಲ್ಲ ಪ್ರಯೋಜನಗಳು ಸಿಗುತ್ತವೆ?
BSNL Affordable Plan: ಟೆಲಿಕಾಂ ವಲಯದಲ್ಲಿನ ಬಳಕೆದಾರರಿಗೆ ಅಗತ್ಯ ಪೂರೈಕೆ ಮಾಡುವ ನಿಟ್ಟಿನಲ್ಲಿ ಖಾಸಗಿ ಟೆಲಿಕಾಂ ಕಂಪನಿಗಳು ದೀಘಾವಧಿಯ ಯೋಜನೆ ಪರಿಚಯಿಸುತ್ತಿದ್ದಾರೆ. ಆರಂಭದಲ್ಲಿ ಕಡಿಮೆ ಬೆಲೆಗೆ ನೀಡಿದ್ದ ಪ್ಲಾನ್‌ಗಳು ಇದೀಗ ದುಬಾರಿ ಬೆಲೆಯಾಗಿವೆ. ಈ ಮಧ್ಯ ಕೇಂದ್ರ ಸರ್ಕಾರಿ ಸ್ವಾಮ್ಯದ ಭಾರತ್ ಸಂಚಾರ ನಿಗಮ ಲಿಮಿಟೆಡ್ (BSNL) ಲಕ್ಷಾಂತರ ಗ್ರಾಹಕರನ್ನು ಹೆಚ್ಚಿಸಿಕೊಂಡಿದೆ. ಮಾತ್ರವಲ್ಲದೇ ಅವರಿಗಾಗಿ ಅತೀ ಕಡಿಮೆ ಬೆಲೆಗೆ ಹೊಸ ಹೊಸ ಯೋಜನೆ ಪರಿಚಯಿಸುತ್ತಿದೆ. ಇದೀಗ 70 ದಿನ ಹೊಸ ಮೊಬೈಲ್ ಪ್ರಿಪೇಯ್ಡ್ ಪ್ಲಾನ್ ಘೋಷಿಸಿದೆ.
ಮೊಬೈಲ್ ಬಳಕೆದಾರರಿಗೆ ಮಿತವ್ಯಯದ ಬೆಲೆಯಲ್ಲಿ ದೀರ್ಘಾವಧಿಯ ಮಾನ್ಯತೆ ನೀಡಲು ಟೆಲಿಕಾಂ ಕಂಪನಿಗಳು ಮುಂದಾಗುತ್ತಿವೆ. ಈ ಪೈಕಿ ಅಗ್ರಸ್ತಾನದಲ್ಲಿರುವುದು BSNL ಎನ್ನಬಹುದು. ಗ್ರಾಹಕರಿಗೆ ಎಲ್ಲ ವಿಧದಿಂದಲೂ ಈ ಬಿಎಸ್‌ಎನ್ಎಲ್ ಉತ್ತಮ ಆಯ್ಕೆ ಆಗಿದೆ ಎಂದು ಜನ ನಂಬುತ್ತಾರೆ. ಹೀಗಾಗಿಯೇ ಕಂಪನಿಯು ತನ್ನ ಬಳಕೆದಾರರಿಗೆ ಬಜೆಟ್ ಸ್ನೇಹಿ ರೀಚಾರ್ಜ್ ಆಯ್ಕೆ ನೀಡುತ್ತಿದೆ. ಈ ನಿಟ್ಟಿನಲ್ಲಿ BSNL ಗ್ರಾಹಕರನ್ನು ತನ್ನತ್ತ ಸಳೆಯುವಲ್ಲಿ ಯಶಸ್ವಿಯಾಗಿದೆ.

ಕೆಲವು ತಿಂಗಳಲ್ಲಿ ಸುಮಾರು 50 ಲಕ್ಷ ಹೊಸ ಬಳಕೆದಾರರು ಬಿಎಸ್‌ಎನ್‌ಎಲ್ ಗೆ ಹೆಚ್ಚಾಗಿದ್ದಾರೆ. ಈ ಮೂಲಕ ಸರ್ಕಾರ ಅಧಿನದ ಕಂಪನಿಯು ಖಾಸಗಲಿ ಟೆಲಿಕಾಂ ಕಂಪನಿಗಳಾದ ಏರ್‌ಟೆಲ್, ಜಿಯೋ, ವಿಐಗೆ ಪ್ರಬಲ ಸ್ಪರ್ಧೆ ಒಡ್ಡುತ್ತಿದೆ. ಸದ್ಯ BSNL 197 ರೂಪಾಯಿಗೆ 70 ದಿನಗಳ ಮಾನ್ಯತೆಯ ಯೋಜನೆ ಪರಿಚಯಿಸಿದೆ. ಅದರ ಪ್ರಯೋಜನ, ವಿವರ ಇಲ್ಲಿದೆ.
197 ರೂ. ಅತೀ ಕಡಿಮೆ ಬೆಲೆ 70 ದಿನಗಳ ಪ್ಲಾನ್
ಬಳಕೆದಾರರಿಗೆ ಬಜೆಟ್ ಸ್ನೇಹಿ 70 ದಿನಗಳ ಹೊಸ ಪ್ರಿಪೇಯ್ಡ್ ಯೋಜನೆಗೆ ನೀವು ಕೇವಲ 197 ರೂ. ಭರಿಸಬೇಕಾಗುತ್ತದೆ. ಈ ಯೋಜನೆಯಿಂದ 70 ದಿನಗಳ ಸೇವೆ ಲಭ್ಯವಾಗುತ್ತದೆ. ಅಧಿಕ ಇಂಟರ್‌ನೆಟ್ ಡೇಟಾ ಅಥವಾ ಕರೆ ಅಗತ್ಯವಿಲ್ಲದವರು ಈ ಯೋಜನೆ ಪಡೆಯಬಹುದು. ಬ್ಯಾಂಕ್, ಇತರೆ ಹಣಕಾಸು ವಹೀವಾಟುಗಳ ವೇಳೆ OTP ಅಗತ್ಯವಿರುತ್ತದೆ. ಈ ಓಟಿಪಿ ಪಡೆಯಲು ಸಿಮ್ ಸಕ್ರಿಯವಾಗಿರಬೇಕು. ಹೀಗೆ ಸಿಮ್ ಸಕ್ರಿಯವಾಗಿರಲು ಈ ಯೋಜನೆ ಸೂಕ್ತವಾಗಿದೆ. ಈಗಾಗಲೇ ಒಂದಷ್ಟು ಸಿಮ್ ಸಕ್ರಿಯೆ ಯೋಜನೆಗಳು ಇವೆ. ಅದಕ್ಕೀಗ ಹೊಸ ಯೋಜನೆ ಸೇರ್ಪಡೆಯಾಗಿದೆ.

ಸಿಮ್ 70 ದಿನವೂ ಸಕ್ರಿಯ
ವಿಸ್ತೃತ ಅವಧಿಗೆ ನೀವು ನಿಮ್ಮ BSNL ಸಿಮ್ ಅನ್ನು ಸಕ್ರಿಯವಾಗಿಡಲು ಈ ಯೋಜನೆ ಪಡೆಯಬಹದು. ಇದರ ಪ್ರಯೋಜನೆ ನೋಡುವುದಾದರೆ, ಉಚಿತ ಅನಿಯಮಿತ ಕರೆ, ಡೇಟಾ ಮತ್ತು ಎಸ್‌ಎಂಎಸ್ ಸೇವೆ ಸಿಗಲಿದೆ. ಒಂದು ಯೋಜನೆ ಹಲವು ಲಾಭ ಎಂಬ ಮಾತು ಈ ಯೋಜನೆಗೆ ಸೂಕ್ತವೆನಿಸುತ್ತದೆ.
ಯೋಜನೆ ಸಕ್ರಿಯವಾದ ಬಳಿಕ ಮೊದಲ 18 ದಿನಗಳವರೆಗೆ ಯಾವುದೇ ನೆಟ್ ವರ್ಕ್ ಅಡಿ ನೀವು ಅನಿಯಮಿತ ಕರೆ ಮಾಡಬಹುದು. ನಂತರ ಕರೆಗಳೂ ಕರೆಗಳು ನಿಷ್ಕ್ರಿಯವಾಗಲಿವೆ. ಆದರೆ ಇನ್‌ಕಮಿಂಗ್ ಕರೆಗಳು ಯೋಜನೆಯ ಅವಧಿವರೆಗೆ ಬರಲಿವೆ.
ಡೇಟಾ ಪ್ಯಾಕ್ ಎಷ್ಟಿರುತ್ತೆ
ಈ ಯೋಜನೆಯು ಒಟ್ಟು 70 ದಿನಕ್ಕೆ ಒಟ್ಟು 36 ಜಿಬಿ ಡೇಟಾ ಹೊಂದಿರುತ್ತದೆ. ಇದರ ಬಳಕೆಗೆ ಮೊದಲ 18 ದಿನಗಳ ಮಿತಿ ನೀಡಲಾಗಿದೆ. ನಿತ್ಯ 2 ಜಿಬಿ ಸೇವೆ ಈ ಯೋಜನೆಯಲ್ಲಿ ನಿಮಗೆ ಸಿಲಿಗದೆ. ನಂತರ ಈ ಲಿಮಿಡೆಟ್ ಡೇಟಾ ಖಾಲಿಯಾಗುತ್ತದೆ. ನಿಮಗೆ ಡೇಟಾ ಅಗತ್ಯವಿದ್ದಲ್ಲಿ ನಿಮ್ ಸಿಮ್‌ಗೆ ಹೆಚ್ಚುವರಿ ಡೇಟಾ ಪ್ಯಾಕ್ ಹಾಕಿಸಿಕೊಳ್ಳಬಹುದು. ಇನ್ನೂ 18 ದಿನಗಳವರೆಗೆ ದೈನಂದಿನ 100 ಉಚಿತ ಎಸ್‌ಎಂಎಸ್ ಮಾಡಲು ಅವಕಾಶ ಇದೆ. ನಂತರ ಅದು ಕಡಿತಗೊಳ್ಳುತ್ತದೆ ಎಂದು ಬಿಎಸ್‌ಎನ್‌ಎಲ್ ತಿಳಿಸಿದೆ.












Click it and Unblock the Notifications