Get Updates
Get notified of breaking news, exclusive insights, and must-see stories!

ಕೇಸರಿ ಬಟ್ಟೆ ಧರಿಸಿದ್ದಕ್ಕಾಗಿ ನಟಿ ದೀಪಿಕಾ ಮೇಲೆ ಕೋಪ: ಟ್ವಿಟರ್‌ನಲ್ಲಿ ಟ್ರೆಂಡ್‌ ಆಯ್ತು 'Boycott Pathaan'

ಬೆಂಗಳೂರು, ಡಿಸೆಂಬರ್‌ 14: ಬಾಲಿವುಡ್‌ ಬಾದ್‌ಷಾ ಶಾರುಖ್‌ ಖಾನ್‌ ಹಾಗೂ ಕನ್ನಡದ ಬೆಡಗಿ ದೀಪಿಕಾ ಪಡುಕೋಣೆ ನಟಿಸಿರುವ ಪಠಾಣ್‌ ಚಿತ್ರಕ್ಕೆ ಬಾಯ್‌ಕಾಟ್‌ ಬಿಸಿ ತಟ್ಟಿದೆ.

ಎರಡು ದಿನಗಳ ಹಿಂದೆ ಯುಟ್ಯೂಬ್‌ನಲ್ಲಿ ಬಿಡುಗಡೆಯಾದ 'ಬೇಷರಮ್‌ ರಂಗ್‌' ಹಾಡಿಗೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಈ ಹಾಡಿನಲ್ಲಿ ನಟಿ ದೀಪಿಕಾ ಪಡುಕೋಣೆ ಕೇಸರಿ ಬಣ್ಣದ ಉಡುಪು ಧರಿಸಿದ್ದಕ್ಕಾಗಿ ಹಿಂದೂಪರ ನೆಟ್ಟಿಗರು ಕೋಪಗೊಂಡಿದ್ದಾರೆ.

Boycott Pathaan trends netizens object to SRK, Deepika Padukones Besharam Rang

ಕೇಸರಿ ಉಡುಪು ಧರಿಸಿರುವ ದೀಪಿಕಾ ಹಾಡಿನಲ್ಲಿ ಅಶ್ಲೀಲವಾಗಿ ಕಾಣಿಸಿಕೊಂಡು, ಹಿಂದುತ್ವಕ್ಕೆ ಧಕ್ಕೆ ತಂದಿದ್ದಾರೆ ಎಂದು ನೆಟ್ಟಿಗರು ಆರೋಪಿಸಿದ್ದಾರೆ.

ಈ ಸಂಬಂಧ ಟ್ವಿಟರ್‌ನಲ್ಲಿ #BoycottbollywoodCompletely ಮತ್ತು #BoycottPathaan ಟ್ರೆಂಡ್‌ ಆಗುತ್ತಿದೆ.

ಇನ್ನು ಕೆಲವರು ಮೈಕ್ರೋ-ಬ್ಲಾಗಿಂಗ್ ಸೈಟ್‌ನಲ್ಲಿ #BoycottShahRukhKhan ಅನ್ನು ಟ್ರೆಂಡ್ ಮಾಡಿದ್ದಾರೆ.

ಪಠಾಣ್‌ ಚಿತ್ರಕ್ಕೆ ಒಂದು ಕಡೆ ಆಕ್ರೋಶ ವ್ಯಕ್ತವಾಗುತ್ತಿದೆ. ಆದರೆ, 'ಬೇಷರಮ್‌ ರಂಗ್‌' ಹಾಡಿಗೆ ಯುಟ್ಯೂಬ್‌ನಲ್ಲಿ ಭಾರೀ ಬೆಂಬಲ ವ್ಯಕ್ತವಾಗಿದೆ.

Boycott Pathaan trends netizens object to SRK, Deepika Padukones Besharam Rang

ಹಾಡು ಬಿಡುಗಡೆಯಾಗಿ ಎರಡು ದಿನ ಕಳೆದರೂ, ಯುಟ್ಯೂಬ್‌ನಲ್ಲಿ ನಂ. ಒನ್‌ ಟ್ರೆಂಡಿಂಗ್‌ನಲ್ಲಿದೆ. ಕಳೆದ 48 ಗಂಟೆಗಳಲ್ಲಿ 3 ಕೋಟಿ 60 ಲಕ್ಷಕ್ಕೂ ಹೆಚ್ಚು ಜನ ಬೇಷರಮ್‌ ರಂಗ್‌ ಹಾಡನ್ನೂ ವೀಕ್ಷಣೆ ಮಾಡಿದ್ದಾರೆ.

ಚಿತ್ರ ಸಾಹಿತಿ ಕುಮಾರ್ ಸಾಹಿತ್ಯದೊಂದಿಗೆ ವಿಶಾಲ್-ಶೇಖರ್ ಸಂಯೋಜಿಸಿದ ಹಾಟ್‌ ಹಾಡು ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ನಡುವಿನ ಹಾಟ್‌ ಕೆಮಿಸ್ಟ್ರಿಯನ್ನು ಎತ್ತಿ ತೋರಿಸಿದೆ.

ಹಾಟ್‌ ಅವತಾರದಲ್ಲಿ ಕಾಣಿಸಿಕೊಂಡಿರುವ ದೀಪಿಕಾ ನೃತ್ಯ, ಶಾರುಖ್‌ರ ಹಾಟ್‌ ಲುಕ್‌ ಅನೇಕ ಪಡ್ಡೆ ಹುಡುಗರ ಹೃದಯ ಕದ್ದಿದೆ. ಸಾಮಾಜಿಕ ತಾಣಗಳಲ್ಲಿ ಟ್ರೆಂಡ್‌ ಆಗಿರುವ ಬೇಷರಮ್‌ ರಂಗ್‌ ಹಾಡಿಕೆ ಕೋಟ್ಯಂತರ ಅಭಿಮಾನಿಗಳು ಭೇಷ್‌ ಎಂದಿದ್ದಾರೆ.

Boycott Pathaan trends netizens object to SRK, Deepika Padukones Besharam Rang

ಯಶ್ ರಾಜ್ ಫಿಲ್ಮ್ಸ್‌ನ ಆದಿತ್ಯ ಚೋಪ್ರಾ ಅವರು ನಿರ್ಮಿಸಿರುವ ಪಠಾಣ್‌ ಚಿತ್ರವನ್ನು ಸಿದ್ಧಾರ್ಥ್‌ ಆನಂದ್ ನಿರ್ದೇಶಿಸಿದ್ದಾರೆ. ಚಿತ್ರವು ಜನವರಿ 25, 2023 ರಂದು ಥಿಯೇಟರ್‌ಗೆ ಅಪ್ಪಳಿಸಲಿದೆ.

ಈ ವಿಚಾರವಾಗಿ ಪ್ರತಿಕ್ರಿಯಿರುವ ಮಧ್ಯಪ್ರದೇಶ ಗೃಹ ಸಚಿವ ನರೋತ್ತಮ್ ಮಿಶ್ರಾ ಹಾಡಿಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. 'ಮಧ್ಯಪ್ರದೇಶದಲ್ಲಿ ಪಠಾಣ್‌ ಚಿತ್ರವನ್ನು ಬಿಡುಗಡೆ ಮಾಡಲು ಅನುಮತಿ ನೀಡಬೇಕೇ ಅಥವಾ ಬೇಡವೇ ಎಂಬುದರ ಬಗ್ಗೆ ಸರ್ಕಾರ ಚಿಂತನೆ ನಡೆಸುತ್ತಿದೆ' ಎಂದು ಮಿಶ್ರಾ ಟ್ವೀಟ್ ಮಾಡಿದ್ದಾರೆ.

ಬೇಷರಮ್‌ ರಂಗ್ ಹಾಡಿನಲ್ಲಿ ದೀಪಿಕಾ ಧರಿಸಿರುವ ವೇಷಭೂಷಣಗಳು ಆಕ್ಷೇಪಾರ್ಹವಾಗಿವೆ. ಜೆಎನ್‌ಯುನ 'ತುಕ್ಡೆ ತುಕ್ಡೆ ಗ್ಯಾಂಗ್' ಅನ್ನು ಬೆಂಬಲಿಸುವ ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ ಪಠಾಣ್ ಚಿತ್ರದ ಈ ಅಶ್ಲೀಲ ಹಾಡಿನಲ್ಲಿದ್ದಾರೆ. ಅವರು ತೊಟ್ಟಿರುವ ಉಡುಪುಗಳು ಹೆಚ್ಚು ಆಕ್ಷೇಪಾರ್ಹವಾಗಿವೆ. ಇದೊಂದು ಕೊಳಕು ಮನಸ್ಥಿತಿಯನ್ನು ಬಿಂಬಿಸುವ ಹಾಡು. ಹಾಡುಗಳಲ್ಲಿರುವ ದೃಶ್ಯಗಳು ಮತ್ತು ಬಟ್ಟೆಗಳನ್ನು ಸರಿಪಡಿಸಬೇಕು. ಇದನ್ನು ಮಾಡದೇ ಹೋದಲ್ಲಿ, ಮಧ್ಯ ಪ್ರದೇಶದಲ್ಲಿ ಪಠಾಣ್‌ ಚಿತ್ರವನ್ನು ಬಿಡುಗಡೆ ಮಾಡಲು ಅನುಮತಿ ನೀಡಬೇಕೇ ಅಥವಾ ಬೇಡವೇ ಎಂದು ನಾವು ನಿರ್ಧರಿಸುತ್ತೇವೆ' ಎಂದು ಎಚ್ಚರಿಕೆ ನೀಡಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+