
ಆಸ್ಟ್ರಾಜೆನಿಕಾ ಬೂಸ್ಟರ್ ಡೋಸ್ ಓಮಿಕ್ರಾನ್ ವಿರುದ್ಧ ಪರಿಣಾಮಕಾರಿ: ಆಕ್ಸ್‌ಫರ್ಡ್ ಅಧ್ಯಯನ
ಕೊರೊನಾ ವೈರಸ್ ಸೋಂಕಿನ ಹೊಸ ರೂಪಾಂತರ ಓಮಿಕ್ರಾನ್‌ಗೆ ಆಸ್ಟ್ರಾಜೆನಿಕಾದ ಕೋವಿಡ್ ಲಸಿಕೆಯ ಬೂಸ್ಟರ್ ಶಾಟ್ ಹೆಚ್ಚು ಪರಿಣಾಮಕಾರಿಯಾಗಿದೆ. ಈ ಬೂಸ್ಟರ್‌ನಿಂದಾಗಿ ದೇಹದಲ್ಲಿ ಪ್ರತಿಕಾಯಗಳು ಹೆಚ್ಚಾಗುತ್ತದೆ ಎಂದು ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದ ಸಂಶೋಧನೆ ವರದಿಯು ಹೇಳಿದೆ. ಈ ಮೂಲಕ ತೀವ್ರವಾಗಿ ಹರಡುವ ರೂಪಾಂತರಗಳ ವಿರುದ್ಧವಾಗಿ ಲಸಿಕೆಗಳು ರಕ್ಷಣೆ ನೀಡಬಲ್ಲದು ಎಂಬ ಭರವಸೆಯನ್ನು ನೀಡಿದೆ.
ಭಾರತದಲ್ಲಿ ಆಸ್ಟ್ರಾಜೆನಿಕಾದ ಕೋವಿಡ್ ಲಸಿಕೆಯು ಕೋವಿಶೀಲ್ಡ್ ಹೆಸರಿನಲ್ಲಿ ಬಳಕೆಯಲ್ಲಿದೆ. ದಕ್ಷಿಣ ಆಫ್ರಿಕಾದಲ್ಲಿ ವಾಜ್ವೇರಿಯಾ ಎಂಬ ಹೆಸರಿನಲ್ಲಿ ಬಳಕೆಯಲ್ಲಿ ಇದ್ದು, ಈ ಲಸಿಕೆಯನ್ನು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಪ್ರಯೋಗಾಲಯದಲ್ಲಿ ಅಭಿವೃದ್ಧಿ ಮಾಡಲಾಗಿದೆ. ಈ ವಿಶ್ವವಿದ್ಯಾನಿಲಯದ ಸಂಶೋಧಕರ ಬೇರೆಯೇ ತಂಡವು ಈ ಅಧ್ಯಯನವನ್ನು ಮಾಡಿದೆ. ಈ ಲಸಿಕೆಯ ಮೂರನೇ ಡೋಸ್ ಅನ್ನು ಪಡೆದ ಒಂದು ತಿಂಗಳ ನಂತರ ಓಮಿಕ್ರಾನ್ ರೂಪಾಂತರದ ಪರಿಣಾಮವನ್ನು ಕುಂಠಿತ ಮಾಡುವ ಪ್ರತಿಕಾಯವು ಸೃಷ್ಟಿ ಆಗಲಿದೆ. ಡೆಲ್ಟಾ ರೂಪಾಂತರಕ್ಕೆ ಹೋಲಿಕೆ ಮಾಡಿದಾಗ ಈ ಪ್ರತಿಕಾಯವು ಎರಡನೇ ಡೋಸ್ ಪಡೆದ ಒಂದು ತಿಂಗಳ ಬಳಿಕ ಸೃಷ್ಟಿ ಆಗುತ್ತದೆ ಎಂದು ಈ ಅಧ್ಯಯನದಲ್ಲಿ ಉಲ್ಲೇಖ ಮಾಡಲಾಗಿದೆ.
ಓಮಿಕ್ರಾನ್ ರೂಪಾಂತರಿಯನ್ನು ತಟಸ್ಥಗೊಳಿಸಲಿದೆ 'ಪ್ಯಾಕ್ಸ್ಲೋವಿಡ್' ಮಾತ್ರೆ
ಇನ್ನು ಈ ಹಿಂದೆ ಡೆಲ್ಟಾ ಸೇರಿದಂತೆ ಬೇರೆ ರೂಪಾಂತರಕ್ಕೆ ಒಳಗಾದವರಲ್ಲಿ ಮೂರನೇ ಡೋಸ್‌ನ ಲಸಿಕೆಯ ಬಳಿಕ ಪ್ರತಿಕಾಯಗಳು ಹೆಚ್ಚಾಗಿರುತ್ತದೆ ಎಂದು ಅಧ್ಯಯನವು ಹೇಳಿದೆ. ಇನ್ನು ಈ ನಡುವೆ ಮಾಡರ್ನಾ ಲಸಿಕೆ, ಫೈಜರ್ ಲಸಿಕೆಯ ಮೂರನೇ ಡೋಸ್ ಓಮಿಕ್ರಾನ್ ರೂಪಾಂತರದ ವಿರುದ್ಧ ಪರಿಣಾಮಕಾರಿಯಾಗಿದೆ ಎಂದು ಈಗಾಗಲೇ ಅಧ್ಯಯನಗಳು ಹೇಳಿದೆ. ಆದರೆ ಡೆಲ್ಟಾ ರೂಪಾಂತರದ ವಿರುದ್ಧ ಈ ಲಸಿಕೆಗಳ ಪರಿಣಾಮಕಾರಿತ್ವಕ್ಕಿಂತ ಕೊಂಚ ಕಡಿಮೆಯೇ ಪರಿಣಾಮ ಓಮಿಕ್ರಾನ್ ವಿರುದ್ಧವಾಗಿ ಉಂಟು ಮಾಡಲಿದೆ ಎಂದು ಕೂಡಾ ಈ ಅಧ್ಯಯನಗಳು ಹೇಳಿದೆ.
ಕೋವಿಶೀಲ್ಡ್ ಲಸಿಕೆ ಪಡೆದಿದ್ದಾರೆ ದೇಶದಲ್ಲಿ ಶೇಕಡ 85 ಕ್ಕೂ ಅಧಿಕ ಮಂದಿ
ಭಾರತದಲ್ಲಿ ಶೇಕಡ 85 ಕ್ಕೂ ಅಧಿಕ ಲಸಿಕೆ ಫಲಾನುಭವಿಗಳು ಕೋವಿಶೀಲ್ಡ್ ಲಸಿಕೆಯನ್ನು ಪಡೆದುಕೊಂಡಿದ್ದಾರೆ. ಈ ಲಸಿಕೆಯು ಬೂಸ್ಟರ್ ಡೋಸ್‌ಗಳಿಗೆ ಅತೀ ಪರಿಣಾಮಕಾರಿ ಲಸಿಕೆ ಎಂಬ ನಿಟ್ಟಿನಲ್ಲಿ ಈ ಲಸಿಕೆಗೆ ಭಾರತದಲ್ಲಿ ಹೆಚ್ಚು ಆಧ್ಯತೆಯನ್ನು ನೀಡಲಾಗಿದೆ. ಇನ್ನು ಎರಡು ದಿನಗಳ ಹಿಂದೆ ಓಮಿಕ್ರಾನ್‌ಗಾಗಿಯೇ ಲಸಿಕೆಯನ್ನು ಅಭಿವೃದ್ದಿ ಪಡಿಸುವ ಬಗ್ಗೆ ಆಸ್ಟ್ರಾಜೆನಿಕಾ ಮಾಹಿತಿ ನೀಡಿದೆ. ಈ ನಡುವೆ ಓಮಿಕ್ರಾನ್ ರೂಪಾಂತರವನ್ನು ಪ್ಯಾಕ್ಸ್ಲೋವಿಡ್ ಎಂಬ ಮಾತ್ರೆಯು ತಟಸ್ಥಗೊಳಿಸಲಿದೆ ಎಂದು ಫೈಜರ್ ಸಂಸ್ಥೆಯು ಹೇಳಿಕೆ ನೀಡಿದೆ. ಈ ಮಾತ್ರೆಯು ಕೇವಲ ಮೂರು ದಿನಗಳಲ್ಲಿ ಓಮಿಕ್ರಾನ್ ಸೋಂಕಿನ ಲಕ್ಷಣಗಳನ್ನು ಕಡಿಮೆ ಮಾಡುತ್ತದೆ ಎಂದು ಸಂಸ್ಥೆಯು ಹೇಳಿಕೊಂಡಿದೆ. ಹೆಚ್ಚು ಅಪಾಯಕಾರಿ ಸ್ಥಿತಿಯಲ್ಲಿ ಇರಯವ ರೋಗಿಗಳಲ್ಲಿ ಶೇಕಡ 89 ರಷ್ಟು ಸಾವಿನ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ. ಫೈಜರ್ ಮಾತ್ರೆಯಿಂದಾಗಿ ಕೊರೊನಾ ರೋಗಿಗಳ ಚಿಕಿತ್ಸೆ ಅತೀ ಸುಲಭವಾಗಿದೆ. ಇನ್ನು ಮುಂದೆ ಮಾತ್ರೆಗಳ ವೈದ್ಯಕೀಯ ಪರೀಕ್ಷೆ ನಡೆಸಲ್ಲ ಎಂದು ಫೈಜರ್ ಹೇಳಿಕೆಯಲ್ಲಿ ತಿಳಿಸಿದೆ.
ಲಸಿಕೆ ಹಾಕದ ಓಮಿಕ್ರಾನ್ ಸೋಂಕಿತ ಬಲಿ: ಯುಎಸ್ ವರದಿ
ಮಕ್ಕಳಿಗೆ ಕೊರೊನಾ ಲಸಿಕೆ
ಓಮಿಕ್ರಾನ್ ಸೋಂಕು ಹೆಚ್ಚಾಗುತ್ತಿರುವ ನಡುವೆಯೇ ಹಲವಾರು ದೇಶಗಳಲ್ಲಿ ಮಕ್ಕಳಿಗೆ ಕೊರೊನಾ ಲಸಿಕೆಯನ್ನು ನೀಡುವುದಕ್ಕೆ ಆರಂಭ ಮಾಡಿದೆ. 12 ವರ್ಷಕ್ಕಿಂತ ಹೆಚ್ಚು ವಯಸ್ಸಿನ ಮಕ್ಕಳಿಗೆ ಹಲವು ದೇಶಗಳಲ್ಲಿ ಲಸಿಕೆ ನೀಡುವುದಕ್ಕೆ ಆರಂಭ ಮಾಡಿದೆ. ಆದರೆ ವಿಶ್ವದ ಬಹುತೇಕ ದೇಶಗಳಲ್ಲಿ 18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಮಾತ್ರ ಕೊರೊನಾ ಲಸಿಕೆಯನ್ನು ನೀಡಲಾಗುತ್ತಿದೆ. ಇನ್ನು ಈ ನಡುವೆ ಕೆಲವು ದೇಶಗಳಲ್ಲಿ 12-18 ವರ್ಷದವರಿಗೆ ಲಸಿಕೆಯನ್ನು ನೀಡಲಾಗುತ್ತಿದೆ. ಈ ಹಿನ್ನೆಲೆಯಿಂದಾ ಲಸಿಕೆಯನ್ನು ಪಡೆಯದ ಜನರ ಪೈಕಿ ಬಹುತೇಕ ಯುವಕರೇ ಆಗಿದ್ದಾರೆ. ಈ ಹಿನ್ನೆಲೆಯಿಂದಾಗಿ ಯುವಕರಲ್ಲಿ ಓಮಿಕ್ರಾನ್ ಪ್ರಕರಣಗಳು ಹೆಚ್ಚಳವಾಗುವ ಭೀತಿ ಸೃಷ್ಟಿ ಆಗಿದೆ. (ಒನ್‌ಇಂಡಿಯಾ ಸುದ್ದಿ)