ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶ್ವದೆಲ್ಲೆಡೆ ವಿಜೃಂಭಿಸಿದ ಅದ್ಭುತ ಚಂದ್ರಗ್ರಹಣದ 9 ದೃಶ್ಯ

|
Google Oneindia Kannada News

ಖಂಡಗ್ರಾಸ ಚಂದ್ರಗ್ರಹಣದ ಅತ್ಯಪರೂಪದ ದೃಶ್ಯವನ್ನು ನಿನ್ನೆ (ಜ.31) ಜಗತ್ತು ಕಣ್ತುಂಬಿಸಿಕೊಂಡಿದೆ.

ಭಾರತೀಯ ಕಾಲಮಾನದ ಪ್ರಕಾರ ಸಂಜೆ 5.17ಕ್ಕೆ ಗ್ರಹಣ ಆರಂಭವಾಯಿತಾದರೂ ಚಂದ್ರ ಕಾಣಿಸಿದ್ದು ಮಾತ್ರ 6.30 ರ ನಂತರವೇ. ಅಷ್ಟರಲ್ಲಾಗಲೇ ಚಂದ್ರನ ಬಹುಭಾಗವನ್ನು ಭೂಮಿಯ ನೆರಳು ಆವರಿಸಿತ್ತು. ಕಪ್ಪು ನೆರಳು, ನಿನ್ನೆಯ ಕೆಂಪು ಚಂದ್ರನ ಮೇಲೆ ಬಿದ್ದು ಚಂದ್ರನ ಸೊಬಗನ್ನು ಮತ್ತಷ್ಟು ಹೆಚ್ಚಿಸಿತ್ತು.

ರಾತ್ರಿ 8.41 ಕ್ಕೆ ಗ್ರಹಣ ಬಿಟ್ಟು ಚಂದ್ರ 'ನಿಷ್ಕಳಂಕಿತ'ನಾಗಿ ಮತ್ತೆ ಹೊಳೆಯತೊಡಗಿದ!
ಭೂಮಿಯ ನೈಸರ್ಗಿಕ ಉಪಗ್ರಹ ಚಂದ್ರ ಸಾಮಾನ್ಯವಾಗಿ ಇಳೆಯಿಂದ ಅಂದಾಜು 3.84 ಲಕ್ಷ ಕಿ.ಮೀ. ದೂರದಲ್ಲಿರುತ್ತಾರೆ. ಅಂಡಾಕೃತ ಕಕ್ಷೆಯಲ್ಲಿ ಸುತ್ತುವುದರಿಂದ ಒಮ್ಮೊಮ್ಮೆ ಚಂದ್ರ ಭೂಮಿಗೆ ತೀರಾ ಸಮೀಪ ಅಂದರೆ 3.5 ಲಕ್ಷ ಕಿ.ಮೀ. ದೂರದಲ್ಲಿ ಕಾಣಿಸುತ್ತಾನೆ. ಆಗ ಸೂಪರ್ ಮೂನ್ ಆಗಿ ಆತ ಗೋಚರಿಸುತ್ತಾನೆ. ಅಂದರೆ ಯಾವಾಗಲೂ ಕಾಣುವುದಕ್ಕಿಂತ ಸ್ವಲ್ಪ ದೊಡ್ಡ ಪ್ರಮಾಣದಲ್ಲಿ. ನಿನ್ನೆಯೂ ಚಂದ್ರ ಯಾವಾಗಿನಿಕ್ಕಿಂತ ಕೊಂಚ ದೊಡ್ಡದಾಗಿ ಕಂಡಿದ್ದಲ್ಲದೆ ಕೇಸರಿ ಬಣ್ಣದಲ್ಲಿ ಗೋಚರಿಸಿದ್ದು ಮತ್ತಷ್ಟು ಆಕರ್ಷಕ ಎನ್ನಿಸಿತ್ತು.

ಸಾಮಾಜಿಕ ಜಾಲತಾಣದಲ್ಲಿ ಖಂಡಗ್ರಾಸ ಚಂದ್ರಗ್ರಹಣ!ಸಾಮಾಜಿಕ ಜಾಲತಾಣದಲ್ಲಿ ಖಂಡಗ್ರಾಸ ಚಂದ್ರಗ್ರಹಣ!

ಗ್ರಹಣದಂದು ಭೂಮಿಯ ನೆರಳು ಚಂದ್ರನ ಮೇಲೆ ಬೀಳುವುದರಿಂದ ಯಾವಾಗಲೂ ಚಂದ್ರ ಕಪ್ಪಾಗಿ ಕಾಣುತ್ತಾನೆ. ಆದರೆ ಈ ಬಾರಿ ರಕ್ತವರ್ಣದಲ್ಲಿ ಕಾಣಿಸಿದ್ದರಿಂದ ಸೂಪರ್ ಬ್ಲೂ ಬ್ಲಡ್ ಮೂನ್ ಎಂದು ಕರೆಸಿಕೊಂಡಿದ್ದ!

ವಿಶ್ವದಾದ್ಯಂತ ಸಂಭವಿಸಿದ ಚಂದ್ರಗ್ರಹಣದ ಕೆಲವು ಮನಮೋಹಕ ಚಿತ್ರಗಳು ಇಲ್ಲಿವೆ.

ರಾಜಧಾನಿಯಲ್ಲಿ ಶಶಿಯ ಕಣ್ಣಾಮುಚ್ಚಾಲೆ

ರಾಜಧಾನಿಯಲ್ಲಿ ಶಶಿಯ ಕಣ್ಣಾಮುಚ್ಚಾಲೆ

ರಾಜಧಾನಿ ದೆಹಲಿಯಲ್ಲಿ ಕಂಡುಬಂದ ಚಂದ್ರಗ್ರಹಣದ ವಿಧ ಹಂತಗಳ ಚಿತ್ರವನು ಅತುಲ್ ಕುಮಾರ್ ಎಂಬುವವರು ತಮ್ಮ ಕ್ಯಾಮೆರಾದಲ್ಲಿ ಕ್ಲಿಕ್ಕಿಸಿದ್ದಾರೆ. ಗ್ರಹಣ ಸ್ಪರ್ಶದಿಂದ, ಗ್ರಹಣ ಮೋಕ್ಷದವರೆಗಿನ ಸಂಪೂರ್ಣ ಚಿತ್ರಣ ನೀಡುವ ಈ ಫೋಟೋ, ನಿನ್ನೆಯ ಚಂದ್ರ ಗ್ರಹಣದ ಮನಮೋಹಕತೆಗೆ ಸಾಕ್ಷಿಯಾಗಿದೆ.

ವಿಧಾನಸೌಧಕ್ಕೆ ಬಂದ ಚಂದ್ರ!

ವಿಧಾನಸೌಧಕ್ಕೆ ಬಂದ ಚಂದ್ರ!

ಹ್ಞಾಂ... ಅಂದಹಾಗೇ ನಿನ್ನೆ ಬೆಂಗಳೂರಿನ ವಿಧಾನ ಸೌಧಕ್ಕೂ ಚಂದ್ರ ಬಂದಿದ್ದ! ಅಲ್ಲೂ ತನ್ನ ಸೊಬಗು, ಬಿನ್ನಾಣ ತೋರಿಸಿ ಹೋದ! ಶೈಲೇಂದ್ರ ಭೋಜಕ್ ಎಂಬ ಫೋಟೋಗ್ರಾಫರ್ ಬೆಂಗಳೂರಿನಲ್ಲಿ ಕಂಡ ಚಂದ್ರಗ್ರಹಣವನ್ನು ತಮ್ಮ ಕ್ಯಾಮೆರಾ ಕಣ್ಣಲ್ಲಿ ಸೆರೆ ಹಿಡಿದಿದ್ದು ಹೀಗೆ.

ವಾಣಿಜ್ಯ ನಗರಿಯಲ್ಲಿ ಚಂದ್ರಗ್ರಹಣ

ವಾಣಿಜ್ಯ ನಗರಿಯಲ್ಲಿ ಚಂದ್ರಗ್ರಹಣ

ಮಹಾರಾಷ್ಟ್ರದ ಮುಂಬೈಯಲ್ಲಿ ಛತ್ರಪತಿ ಶಿವಾಜಿ ಮಹಾರಾಜ ಟರ್ಮಿನಸ್ ಹಿಂದುಗಡೆ ಕಂಡ ರಮಣೀಯ ಚಂದ್ರಗ್ರಹಣ. ಕ್ಲಿಕ್ಕಿಸಿದ್ದು ಶಶಾಂಕ್ ಪರಡೆ.

ಹಾಲಿವುಡ್ ಗೆ ಹಾರಿದ ಚಂದ್ರ!

ಹಾಲಿವುಡ್ ಗೆ ಹಾರಿದ ಚಂದ್ರ!

ಅಮೆರಿಕದ ಲಾಸ್ ವೆಗಾಸ್ ನಲ್ಲಿರುವ ಹಾಲಿವುಡ್ ಹಿಲ್ ಹಿಂದೆ ಕಂಡ ಚಂದ್ರ ಗ್ರಹಣದ ದೃಶ್ಯ ಇದು. ಕೇಸರಿ ಬಣ್ಣದಲ್ಲಿ ಕಂಗೊಳಿಸುತ್ತಿದ್ದ ಚಂದ್ರ ಲಾಸ್ ವೆಗಾಸ್ ಸಿಟಿಯ ಅಂದ ಹೀರುತ್ತಿದ್ದುದು ಹೀಗೆ!

ಕೇರಳದಲ್ಲಿ ಕಳ್ಳ ಚಂದಮಾಮ!

ಕೇರಳದಲ್ಲಿ ಕಳ್ಳ ಚಂದಮಾಮ!

ಕೇರಳದ ಕೊಳಿಕೊಡೆಯಲ್ಲಿ ಛಾಯಾಗ್ರಾಹಕರೊಬ್ಬರು ಚಂದ್ರ ಗ್ರಹಣದ ಪ್ರತಿ ಹಂತವನ್ನೂ ಕ್ಲಿಕ್ಕಿಸಿ, ಅತ್ಯಪರೂಪದ ಚಂದ್ರಗ್ರಹಣವನ್ನು ಹೀಗೆ ದಾಖಲಿಸಿದರು. ಖಂಡಗ್ರಾಸದಿಂದ, ಹುಣ್ಣಿಮೆ ಚಂದ್ರನಾಗಿ ಚಂದ್ರ ಮಿನುಗಿದ ರಮಣೀಯ ಚಿತ್ರಗಳು ಇಲ್ಲಿವೆ.

ಹುಣ್ಣಿಮೆ ದಿನ ಕಂಡ ಬಿದಿಗೆ ಚಂದ್ರ!

ಹುಣ್ಣಿಮೆ ದಿನ ಕಂಡ ಬಿದಿಗೆ ಚಂದ್ರ!

ಗ್ರಹಣ ಸಂಪೂರ್ಣ ಆವರಿಸಿ ಚೂರು ಚೂರೇ ಬಿಡುವಾಗ ಬಿದಿಗೆ ಚಂದ್ರನಂತೇ ಕಂಗೊಳಿಸಿದ ದೃಶ್ಯವಂತೂ ಕಣ್ತುಂಬಿಸಿಕೊಂಡಷ್ಟೂ ಸಾಲದು ಎಂಬಂತಿತ್ತು! ಈ ದೃಶ್ಯ ಕಂಡಿದ್ದು ಕೋಲ್ಕತ್ತಾದಲ್ಲಿ. ಹುಣ್ಣಿಮೆಯ ದಿನ ಕಂಡ ಈ ಬಿದಿಗೆ ಚಂದ್ರನನ್ನು ಕ್ಲಿಕ್ಕಿಸಿದ್ದು ಸ್ವಪನ್ ಮಹಾಪಾತ್ರ.

ಗ್ರಹಣ ಮೋಕ್ಷ ಕಾಲ

ಗ್ರಹಣ ಮೋಕ್ಷ ಕಾಲ

ಗ್ರಹಣ ಸಂಪೂರ್ಣವಾಗಿ ಬಿಡುವ ಸಮಯದಲ್ಲಿ ಅಂದರೆ ಗ್ರಹಣ ಮೋಕ್ಷ ಕಾಲದಲ್ಲಿ ರಾಜಧಾನಿ ದೆಹಲಿಯಲ್ಲಿ ಚಂದ್ರ ಕಂಡಿದ್ದು ಹೀಗೆ. ಈ ಚಿತ್ರವನ್ನು ಕ್ಲಿಕ್ಕಿಸಿದ್ದು ಮನ್ವೇಂದರ್ ವಸಿಷ್ಠ.

ಸ್ವಾತಂತ್ರ್ಯ ದೇವತೆ ಹಿಂದೆ ನಾಚಿ ನಿಂತ ಚಂದ್ರ!

ಸ್ವಾತಂತ್ರ್ಯ ದೇವತೆ ಹಿಂದೆ ನಾಚಿ ನಿಂತ ಚಂದ್ರ!

ಅಮೆರಿಕದ ನ್ಯೂಯಾರ್ಕ್ ನ ವಿಶ್ವ ಪ್ರಸಿದ್ಧ ಸ್ವಾತಂತ್ರ್ಯ ದೇವತೆ ಮೂರ್ತಿ(statue of liberty) ಯ ಹಿಂದೆ ಗ್ರಹಣಗ್ರಸ್ಥ ಚಂದ್ರ ನಾಚುತ್ತಿದ್ದಂತೆ ಕಂಡ ದೃಶ್ಯ ವರ್ಣಿಸಲಸದಳ ಎಂಬಂತಿತ್ತು.

ಗ್ರಹಣಗ್ರಸ್ಥ ಚಂದಮಾಮ

ಗ್ರಹಣಗ್ರಸ್ಥ ಚಂದಮಾಮ

ಫಿಲಿಪೈನ್ಸ್ ನಲ್ಲಿ ಸೂಪರ್ ಬ್ಲೂ ಬ್ಲಡ್ ಮೂನ್ ಉದಯಿಸುವ ಸಮಯದಲ್ಲೇ ಗ್ರಹಣಗ್ರಸ್ಥವಾಗಿ ಕಂದಿದ್ದು ಹೀಗೆ.

English summary
Whole world is witnessed to a rare blue blood moon and lunar eclipse on Jan 31st. Here are exciting picture from all over the world.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X