ಮೊದಲು ಓದಿ: ಅಂಟುವುದು ಕಪ್ಪು ಜ್ವರ, ಭಾರತೀಯರೇ ಬಲು ಎಚ್ಚರ!

ಕೋಲ್ಕತ್ತಾ, ಜುಲೈ 18: ಜ್ವರ, ಕೆಮ್ಮು, ನೆಗಡಿ, ತಲೆನೋವು, ಮೈ-ಕೈ ನೋವು. ಹೀಗೆ ಎಲ್ಲ ರೋಗದ ಲಕ್ಷಣಗಳೂ ಭಯ ಹುಟ್ಟಿಸುವುದಕ್ಕೆ ಕೊರೊನಾ ವೈರಸ್ ಸಾಂಕ್ರಾಮಿಕ ಪಿಡುಗುವೊಂದೇ ಪ್ರಮುಖ ಕಾರಣವಾಗಿ ಬಿಟ್ಟಿತ್ತು. ಆದರೆ ಪರಿಸ್ಥಿತಿ ಇದೀಗ ಬದಲಾಗಿದೆ.

ಕೋವಿಡ್-19 ಆತಂಕದ ನಡುವೆ ಪಶ್ಚಿಮ ಬಂಗಾಳದಲ್ಲಿ ಮತ್ತೊಂದು ರೀತಿಯ ರೋಗ ಹರಡುವುದಕ್ಕೆ ಶುರುವಾಗಿದೆ. ಪಶ್ಚಿಮ ಬಂಗಾಳದ ಬಹುಪಾಲು ಜಿಲ್ಲೆಗಳಲ್ಲಿ ಕಾಲಾ ಅಜರ್ ಅಥವಾ ಕಪ್ಪು ಜ್ವರವು ಭಾರೀ ಪ್ರಮಾಣದಲ್ಲಿ ಹರಡುತ್ತಿದೆ.

ಪಶ್ಚಿಮ ಬಂಗಾಳದಲ್ಲಿ ಕಳೆದ ಎರಡು ವಾರಗಳಲ್ಲಿ ಕಾಲಿಂಪಾಂಗ್, ಮಾಲ್ಡಾ, ಉತ್ತರ ದಿನಾಜ್‌ಪುರ, ಡಾರ್ಜಿಲಿಂಗ್ ಮತ್ತು ದಕ್ಷಿಣ ದಿನಾಜ್‌ಪುರ ಸೇರಿದಂತೆ ಜಿಲ್ಲೆಗಳಲ್ಲಿ ಸುಮಾರು 65 ಕಪ್ಪು ಜ್ವರದ ಪ್ರಕರಣಗಳು ವರದಿಯಾಗಿವೆ. ಹಾಗಾದಲ್ಲಿ ಈ ಕಪ್ಪು ಜ್ವರ ಎಂದರೇನು?, ಕಪ್ಪು ಜ್ವರದ ಲಕ್ಷಣಗಳು ಹೇಗಿರುತ್ತದೆ?, ಕಪ್ಪು ಜ್ವರವು ಎಷ್ಟರ ಮಟ್ಟಿಗೆ ಅಪಾಯಕಾರಿ ಆಗಿರುತ್ತದೆ ಎಂಬುದನ್ನು ಈ ವರದಿಯಲ್ಲಿ ತಿಳಿದುಕೊಳ್ಳೋಣ.

ನಿರ್ಮೂಲನೆ ಆಯ್ತು ಎಂದುಕೊಂಡಿದ್ದ ಕಪ್ಪು ಜ್ವರ ಪ್ರತ್ಯಕ್ಷ

ನಿರ್ಮೂಲನೆ ಆಯ್ತು ಎಂದುಕೊಂಡಿದ್ದ ಕಪ್ಪು ಜ್ವರ ಪ್ರತ್ಯಕ್ಷ

ಪಶ್ಚಿಮ ಬಂಗಾಳದಲ್ಲಿ ಕಪ್ಪು ಜ್ವರವನ್ನು ಪ್ರಾಯೋಗಿಕವಾಗಿ ನಿರ್ಮೂಲನೆ ಮಾಡಲಾಗಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ ರಾಜ್ಯದಲ್ಲಿ ವಾಸ್ತವ ಸ್ಥಿತಿಯೇ ಬದಲಾಗಿದೆ. ಈಗಾಗಲೇ 11 ಜಿಲ್ಲೆಗಳಲ್ಲಿ ಒಟ್ಟು 65 ಕಪ್ಪು ಜ್ವರದ ಪ್ರಕರಣಗಳು ಪತ್ತೆಯಾಗಿವೆ. ಈ ಕಪ್ಪು ಜ್ವರವನ್ನೇ ಕಾಲಾ ಅಜರ್ ಎಂದು ಕರೆಯಲಾಗುತ್ತದೆ. ಎರಡು ವಾರಗಳಲ್ಲಿ ಕಾಲಿಂಪಾಂಗ್, ಮಾಲ್ಡಾ, ಉತ್ತರ ದಿನಾಜ್‌ಪುರ, ಡಾರ್ಜಿಲಿಂಗ್ ಮತ್ತು ದಕ್ಷಿಣ ದಿನಾಜ್‌ಪುರ, ಪುರುಲಿಯಾ, ಮುರ್ಷಿದಾಬಾದ್, ಬಿರ್ಭುಮ್ ಮತ್ತು ಬಂಕುರಾ ಜಿಲ್ಲೆಗಳಲ್ಲಿ ಕಪ್ಪು ಜ್ವರದ ಪ್ರಕರಣಗಳು ಪತ್ತೆಯಾಗಿವೆ. ಆದರೆ ರಾಜಧಾನಿ ಕೋಲ್ಕತ್ತಾದಲ್ಲಿ ಇದುವರೆಗೂ ಒಂದೇ ಒಂದು ಪ್ರಕರಣವನ್ನು ವರದಿಯಾಗಿಲ್ಲ ಎಂದು ತಿಳಿದು ಬಂದಿದೆ.

ಕಾಲಾ ಅಜರ್ ಅಥವಾ ಕಪ್ಪು ಜ್ವರ ಎಂದರೇನು?

ಕಾಲಾ ಅಜರ್ ಅಥವಾ ಕಪ್ಪು ಜ್ವರ ಎಂದರೇನು?

'ಲೇಷ್ಮೇನಿಯಾ ಡೊನೊವಾನಿ' ಸೋಂಕಿತ ನೊಣಗಳು ಕಚ್ಚುವಿಕೆೆಯಿಂದ ಈ ಕಪ್ಪು ಜ್ವರ ಅಂಟಿಕೊಳ್ಳುತ್ತದೆ. ಈ ಕಾಲಾ-ಅಜರ್ ಅಥವಾ ಕಪ್ಪು ಜ್ವರವು ಅತಿಹೆಚ್ಚು ಮಾರಣಾಂತಿಕವಾಗಿದ್ದು, ಚಿಕಿತ್ಸೆ ಪಡೆದುಕೊಳ್ಳದೇ ಬಿಟ್ಟಲ್ಲಿ, ಶೇ.95ರಷ್ಟು ಸಾವಿನ ಅಪಾಯವನ್ನು ಹೊಂದಿರುತ್ತದೆ. ಹೀಗಾಗಿಯೇ ಅತಿಹೆಚ್ಚು ಸಾವಿನ ಅಪಾಯವನ್ನು ಹೊಂದಿರುವ ರೋಗಗಳ ಸಾಲಿನಲ್ಲಿ ಈ ಕಪ್ಪು ಜ್ವರವೂ ಸೇರಿಕೊಂಡಿದೆ ಎಂದು ಆರೋಗ್ಯ ತಜ್ಞರು ಎಚ್ಚರಿಕೆ ನೀಡುತ್ತಿದ್ದಾರೆ.

ಕಪ್ಪು ಜ್ವರಕ್ಕೆ ಕಾರಣಗಳೇನು?

ಕಪ್ಪು ಜ್ವರಕ್ಕೆ ಕಾರಣಗಳೇನು?

ಸಾಮಾನ್ಯವಾಗಿ ಕಪ್ಪು ಜ್ವರ ರೋಗವು ಅಪೌಷ್ಟಿಕತೆ, ದುರ್ಬಲ ರೋಗನಿರೋಧಕ ಶಕ್ತಿ ಮತ್ತು ಸ್ವಚ್ಛವಿಲ್ಲದ ವಾಸಸ್ಥಳ ಮುಖ್ಯ ಕಾರಣವಾಗಿರುತ್ತದೆ. ಕೆಲವು ಬಡ ಜನರ ಮೇಲೆ ಇದು ಪರಿಣಾಮ ಬೀರುತ್ತದೆ. ಅರಣ್ಯನಾಶ, ಅಣೆಕಟ್ಟುಗಳ ನಿರ್ಮಾಣ, ನೀರಾವರಿ ಯೋಜನೆಗಳು ಮತ್ತು ನಗರೀಕರಣದಂತಹ ಪರಿಸರ ಬದಲಾವಣೆಗಳಿಗೆ ಲೇಷ್ಮೇನಿಯಾ ಸಹ ಸಂಬಂಧಿಸಿದೆ.

ಕಾಲಾ ಅಜರ್ ಲಕ್ಷಣಗಳು?

ಕಾಲಾ ಅಜರ್ ಲಕ್ಷಣಗಳು?

ಕಪ್ಪು ಜ್ವರಕ್ಕೆ ಸಂಬಂಧಿಸಿದ ಲಕ್ಷಣಗಳನ್ನು ವಿಶ್ವ ಆರೋಗ್ಯ ಸಂಸ್ಥೆಯು ಪಟ್ಟಿ ಮಾಡಿದೆ.

* ಅನಿಯಮಿತ ಜ್ವರ

* ತೂಕ ನಷ್ಟ

* ಗುಲ್ಮದ ಹಿಗ್ಗುವಿಕೆ

* ಯಕೃತ್ತು ಮತ್ತು ರಕ್ತಹೀನತೆ

ಕಪ್ಪು ಜ್ವರಕ್ಕೆ ಚಿಕಿತ್ಸೆ?

ಕಪ್ಪು ಜ್ವರಕ್ಕೆ ಚಿಕಿತ್ಸೆ?

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಪ್ಯಾರಾಸಿಟೋಲಾಜಿಕಲ್ ಅಥವಾ ಸೆರೋಲಾಜಿಕಲ್ ಪರೀಕ್ಷೆಗಳೊಂದಿಗೆ ವೈದ್ಯಕೀಯ ಲಕ್ಷಣಗಳನ್ನು ಪತ್ತೆ ಮಾಡುವುದರ ಮೂಲಕ ಕಪ್ಪು ಜ್ವರದ ರೋಗ ನಿರ್ಣಯವನ್ನು ನಡೆಸಲಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+