ಒಕ್ಕಲಿಗರಿಗೂ, ಮುಸ್ಲಿಮರಿಗೂ ತಂದಿಟ್ಟು ಬ್ರಿಟಿಷರ ಋಣ ತೀರಿಸುತ್ತಿರುವ ಬಿಜೆಪಿ
ಸಮಾಜದ ಆರೋಗ್ಯಕ್ಕೆ ಬೇಕಾದಂತಹ ಕನಿಷ್ಟ ಅಥವಾ ಯಾವುದೇ ಜ್ಞಾನವಿಲ್ಲದ ಸಿ.ಟಿ.ರವಿಯಂತಹ ಶೂದ್ರ ಬಿಜೆಪಿ ನಾಯಕರು ಶೂದ್ರರು ಮತ್ತು ದಲಿತರ ಪಾಲಿಗೆ ಅಪಾಯಕಾರಿ ರೋಗವಾಗಿ ಪರಿಣಮಿಸಿದ್ದಾರೆ. ಸಿ.ಟಿ.ರವಿಯಂತಹ ಶೂದ್ರನನ್ನು ಬಳಸಿಕೊಂಡು ಬಿಜೆಪಿಯು ಮನುವಾದದಂತಹ ಅಮಾನುಷ ಸಿದ್ಧಾಂತವನ್ನು ಹೇರಲು ಹೊರಟಿದೆ. ಅಧಿಕಾರಕ್ಕಾಗಿ ಹಪಹಪಿಸುವ ಸಿ.ಟಿ.ರವಿ ಎಂತಹ ಕೆಲಸ ಬೇಕಾದರೂ ಮಾಡಲು ತಯಾರಿದ್ದಾರೆ.
ಬಿಜೆಪಿಗರು ಈತನ ಬಾಯಲ್ಲಿ ಬೆಂಕಿ ಮತ್ತು, ಮೆದುಳಲ್ಲಿ ವಿಷವನ್ನು ತುಂಬಿ ಈತನನ್ನು ಜೀವಂತ ಬಾಂಬ್ ಆಗಿ ರೂಪಿಸಿ ಈತನಿಗೆ ವೇದಿಕೆ ಕಲ್ಪಿಸುತ್ತಾರೆ. ಹೋದರೆ ಹೋಗಲಿ ಲಾಭವಾದರೆ ಆಗಲಿ ಎಂಬ ರೀತಿಯಲ್ಲಿ. ಜ್ಞಾನ ರಹಿತ ಮತ್ತು ತಪ್ಪು ಮಾಹಿತಿ ಹಾಗೂ ಇತಿಹಾಸ ನಿರ್ಮಿಸಲು ಹೊರಟಿರುವ ಬಿಜೆಪಿ ಮತ್ತು RSS ನವರ ನಿನ್ನೆ ದಿನ ಮಂಡ್ಯದಲ್ಲಿ ಸುಳ್ಳುಗಳ ವಿಷ ಕಕ್ಕಲು ಕಾರಣವಾಗಿದ್ದಾರೆ.
ಟಿಪ್ಪುವನ್ನು ಹತ್ಯೆ ಮಾಡಿದವರು ಇಬ್ಬರು ಒಕ್ಕಲಿಗೆ ನಾಯಕರು ಎಂದು ಬಾಯಿಗೆ ಬಂದಂತೆ ಇತಿಹಾಸ ತಿರುಚುವ ಸುಳ್ಳನ್ನು ಹೇಳಿ ಒಕ್ಕಲಿಗರು ಮತ್ತು ಮುಸ್ಲಿಮರ ನಡುವೆ ಅತ್ಯಂತ ಸ್ಪಷ್ಟವಾಗಿ ದ್ವೇಷ ಮೂಡಿಸುತ್ತಿದ್ದಾರೆ. ಆ ಮೂಲಕ ಹಿಂದೆ ಬ್ರಿಟಿಷರ ಪರವಾಗಿದ್ದ ಈ ಮನಸ್ಥಿತಿಯು ಬ್ರಿಟಿಷರ ರೀತಿಯಲ್ಲೇ ಸಮುದಾಯದ ನಡುವೆ ಒಡಕು ಮೂಡಿಸಿ ಬ್ರಿಟಿಷರು ಹೇಳಿಕೊಟ್ಟ ಪಾಠದ ಮೂಲಕ ಅವರ ಋಣ ತೀರಿಸುತ್ತಿದ್ದಾರೆ.
ತನ್ನ ಇಡೀ ಜೀವಿತಾವಧಿಯನ್ನು ಬಡವರು ಮತ್ತು ದಲಿತ ದಮನಿತರ ಏಳಿಗೆಗಾಗಿ ಮುಡುಪಾಗಿಟ್ಟ ಟಿಪ್ಪುವಿನ ಕುರಿತು ನಮ್ಮ ಮೈಸೂರು ಭಾಗದ ರೈತಾಪಿ ಮನೆಗಳ ಜನರು ಲಾವಣಿಗಳನ್ನು ಕಟ್ಟಿ ಹಾಡಿದ್ದಾರೆ. ಭೂ ಸುಧಾರಣೆ ಮಾಡಿ ರೇಷ್ಮೆ, ತೋಟಗಾರಿಕೆ, ಕೈಗಾರಿಕೆ ಮುಂತಾದವುಗಳ ಮೂಲಕ ಇಡೀ ಮೈಸೂರು ಭಾಗವನ್ನು ಮಾದರಿಯನ್ನಾಗಿಸಿದ ಶ್ರೇಯ ಟಿಪ್ಪುವಿಗೆ ಸಲ್ಲುತ್ತದೆ.

ಯಾರು ತಡೆಯುತ್ತಾರೋರೊ ನೋಡುತ್ತೇವೆ ಎಂದು ಅಮಿತ್ ಶಾ ಹೇಳಿಕೆ
ಇತಿಹಾಸವನ್ನು ಪುನಾರಚನೆಯಷ್ಟೆ ನಮ್ಮ ಕೆಲಸ ಅದನ್ನು ಯಾರು ತಡೆಯುತ್ತಾರೋರೊ ನೋಡುತ್ತೇವೆ ಎಂದು ಅಮಿತ್ ಶಾ ಹೇಳಿಕೆ ಕೊಟ್ಟಿದ್ದಾರೆ. ಇತ್ತ ಸಿ.ಟಿ.ರವಿಯಂಥವರು ಉರಿಗೌಡ, ನಂಜೇಗೌಡ ಎಂಬುವವರು ಟಿಪ್ಪುವನ್ನು ಕೊಂದರು ಎಂದು ಸುಳ್ಳು ಹೇಳಲು ಪ್ರಾರಂಭಿಸಿದ್ದಾರೆ. ತಲೆಗೆ ಬಂದಂತೆ ಇತಿಹಾಸವನ್ನು ತಿರುಚುತ್ತಿದ್ದಾರೆ. ಆದರೆ ನಮ್ಮ ಪುಣ್ಯಕ್ಕೆ ಟಿಪ್ಪುವಿನ ಅಂತ್ಯ ಹೇಗಾಯಿತು ಎಂಬುದರ ಕುರಿತು ಬ್ರಿಟಿಷರ ಯುದ್ಧ ಕುರಿತಾದ ಡೈರಿಗಳಿವೆ. ಟಿಪ್ಪು ಸಾವನ್ನು ನೇರವಾಗಿ ಕಂಡ ಮೇಜರ್ ಡೇವಿಡ್ ಪ್ರೈಸ್ ಎಂಬಾತನ ಡೈರಿಗಳನ್ನು ಆಧರಿಸಿ, "ಮೆಮರೀಸ್ ಆಫ್ ದ ಅರ್ಲಿ ಲೈಫ್ ಅಂಡ್ ಸರ್ವಿಸ್ ಆಫ್ ಎ ಫೀಲ್ಡ್ ಆಫೀಸರ್" ಎಂಬ ಪುಸ್ತಕವಿದೆ.

ಡಾ.ಎಚ್.ಸಿ.ಮಹದೇವಪ್ಪ ಲೇಖನ
ಹಾಗೆಯೆ ಸರ್ ಡೇವಿಡ್ ಬಯಾರ್ಡ್ ಎಂಬಾತನ ಕೈಯಲ್ಲಿ ಟಿಪ್ಪು ಕೊನೆಯುಸಿರು ಎಳೆಯುತ್ತಾನೆ ಎಂದು ಕ್ಯಾಪ್ಟನ್ ಡಬ್ಲ್ಯು ಎಚ್.ವಿಲ್ಕಿನ್ ಎಂಬಾತ ವಿವರವಾಗಿ ಬರೆದಿದ್ದಾನೆ. ಫಾರೆಸ್ಟ್ ಎಂಬಾತ 'ಟೈಗರ್ ಆಫ್ ಮೈಸೂರ್' ಎಂಬ ಪುಸ್ತಕವನ್ನು ಬರೆದಿದ್ದಾನೆ. 1792ರ ಬ್ರಿಟಿಷರ ಪತ್ರ ವ್ಯವಹಾರಗಳಲ್ಲಿಯೆ ಟಿಪ್ಪುವಿಗೆ ಬ್ರಿಟಿಷರು ಟೈಗರ್ ಎಂದು ಕರೆದಿರುವುದರ ದಾಖಲೆಗಳನ್ನು ಈತ ಪತ್ರಾಗಾರಗಳಿಂದ ತೆಗೆದು ದಾಖಲಿಸಿದ್ದಾನೆ. ಈ ಎಲ್ಲ ದಾಖಲೆಗಳಲ್ಲಿ ಎಲ್ಲೂ ಕೂಡ ಟಿಪ್ಪುವಿನ ದೇಹದಲ್ಲಿ ಎಲ್ಲೂ ಕೂಡ ಉರಿಗೌಡ ಮತ್ತು ನಂಜೇಗೌಡರ ಖಡ್ಗದಿಂದಾದ ಗಾಯಗಳ ಗುರುತುಗಳ ಪ್ರಸ್ತಾಪವಿಲ್ಲ.

ಟಿಪ್ಪು ತನ್ನ ಖಡ್ಗದ ಮೂಲಕ ಕಟ್ಟ ಕಡೆಯದಾಗಿ ಮಾರಣಾಂತಿಕ ಪೆಟ್ಟು ಕೊಡುತ್ತಾನೆ
ಟಿಪ್ಪು ತೀವ್ರ ಪ್ರತಿರೋಧ ಒಡ್ಡಿ ಹೋರಾಡುತ್ತಿದ್ದಾಗ ಫಿರಂಗಿಯನ್ನು ಅವನ ಕಡೆಗೆ ತಿರುಗಿಸಿ ಉಡಾಯಿಸಲಾಗುತ್ತದೆ. ಫಿರಂಗಿ ಗುಂಡಿನ ತುಣುಕೊಂದು ಅವನ ಎಡಗೈಯನ್ನು ತೀವ್ರ ಗಾಯಗೊಳಿಸುತ್ತದೆ. ಅವನ ಅಂಗ ರಕ್ಷಕನೊಬ್ಬ ಶರಣಾಗಿ ಬಿಡೋಣ ಎನ್ನುತ್ತಾನೆ. ಟಿಪ್ಪು 'ನಿನಗೇನು ಹುಚ್ಚು ಹಿಡಿದಿದೆಯೇ, ಬಾಯಿ ಮುಚ್ಚು' ಎಂದು ರೇಗಿದ್ದಾಗಿ ಬ್ರಿಟಿಷ್ ಫೀಲ್ಡ್ ಆಫೀಸರ್ ದಾಖಲಿಸಿದ್ದಾನೆ. ಕೋಟೆ ಒಡೆದು ಒಳ ನುಗ್ಗಿ ನಡೆಸುತ್ತಿದ್ದ ದಾಳಿಯಲ್ಲಿ ಬ್ರಿಗೇಡಿಯರನೊಬ್ಬ ಗಾಯಗೊಂಡಿದ್ದ ಟಿಪ್ಪುವಿನ ಸೊಂಟದಲ್ಲಿದ್ದ ಚಿನ್ನದ ಬಕಲ್ ಅನ್ನು ಕಿತ್ತುಕೊಳ್ಳಲು ನುಗ್ಗುತ್ತಾನೆ. ಅವನಿಗೆ ಟಿಪ್ಪು ತನ್ನ ಖಡ್ಗದ ಮೂಲಕ ಕಟ್ಟ ಕಡೆಯದಾಗಿ ಮಾರಣಾಂತಿಕ ಪೆಟ್ಟು ಕೊಡುತ್ತಾನೆ.

ಸಿ.ಟಿ.ರವಿಯಂಥಹ ಪೆದ್ದರು ಜನಾಂಗೀಯ ದ್ವೇಷಕ್ಕಾಗಿ ಚರಿತ್ರೆಯನ್ನೆ ತಿರುಚುತ್ತಾರೆ
ಬ್ರಿಟಿಷ್ ಕೆಂಪಂಗಿ ದಳದವನೊಬ್ಬ ಕಡೆಯವನೊಬ್ಬ ದೇವಸ್ಥಾನದ ಕಡೆಯಿಂದ ಪಾಯಿಂಟ್ ಬ್ಲಾಂಕ್ ರೇಂಜ್ [ಹತ್ತಿರದಿಂದಲೆ ಗುರಿಯಿಟ್ಟು] ಶೂಟ್ ಮಾಡುತ್ತಾನೆ. ಟಿಪ್ಪು ಆ ಕ್ಷಣ ಅಸುನೀಗುತ್ತಾನೆ.
ಇಷ್ಟೆಲ್ಲ ದಾಖಲೆಗಳಿದ್ದರೂ ಸಿ.ಟಿ.ರವಿಯಂಥಹ ಪೆದ್ದರು ಜನಾಂಗೀಯ ದ್ವೇಷಕ್ಕಾಗಿ ಚರಿತ್ರೆಯನ್ನೆ ತಿರುಚಿ ಹಾಳು ಮಾಡುವ ಹೀನ ಕೆಲಸ ಮಾಡುತ್ತಿದ್ದಾರೆ. ಸಿ.ಟಿ.ರವಿಯವರ ಈ ಅಜ್ಞಾನಯುತ ಕೆಲಸಗಳಿಗೆ ಬಿಜೆಪಿಯವರೇ ಸಾಥ್ ನೀಡುತ್ತಿದ್ದು ಇದನ್ನು ಎಲ್ಲರೂ ಖಂಡಿಸಬೇಕಿದೆ. ಇಂಥವರು ಕರ್ನಾಟಕದ ಎಲ್ಲ ದುಡಿದು ಬದುಕುವ ಸಮುದಾಯಗಳನ್ನು ಮನುವಾದಿಗಳ ಪಾದದ ಕೆಳಕ್ಕೆ ತಳ್ಳಲು ಪ್ರಯತ್ನಿಸುತ್ತಿದ್ದಾರೆ.

ಟಿಪ್ಪು ಶೃಂಗೇರಿ ಮುಂತಾದ ದೇವಾಲಯಗಳನ್ನು ಹೇಗೆ ನೋಡಿಕೊಂಡ
ಬ್ರಿಟಿಷರು ತಮ್ಮ ಡೈರಿಗಳಲ್ಲಿ ಬರೆದುಕೊಂಡಿರುವಂತೆ ಟಿಪ್ಪು ಬ್ರಾಹ್ಮಣ ಪುರೋಹಿತರನ್ನು ಕೇಳಿಯೆ ಪೂಜೆ, ಬಲಿಗಳನ್ನು ನೀಡಿ ಯುದ್ಧ ಪ್ರಾರಂಭಿಸುತ್ತಾನೆ. ತನ್ನ ಆಡಳಿತದಲ್ಲಿ ದೇವಾಲಯಗಳಿಗೆ ಚ್ಯುತಿ ಬರದ ಹಾಗೆ ನೋಡಿಕೊಂಡಿದ್ದಾನೆ. ಟಿಪ್ಪು ಶೃಂಗೇರಿ ಮುಂತಾದ ದೇವಾಲಯಗಳನ್ನು ಹೇಗೆ ನೋಡಿಕೊಂಡ ಎಂದು ಡಾ.ಎ.ಕೆ ಶಾಸ್ತ್ರಿಯವರು "ಶೃಂಗೇರಿ ಮಠದ ಕಡತಗಳಲ್ಲಿಯ ಆಯ್ದ ಚಾರಿತ್ರಿಕ ದಾಖಲೆಗಳು" ಎಂಬ ಪುಸ್ತಕವೊಂದನ್ನು ಬರೆದಿದ್ದಾರೆ. ಆಸಕ್ತರು ಆ ಪುಸ್ತಕವನ್ನು ನೋಡಿದರೆ ಸಾಕು. ಟಿಪ್ಪು ದೇವಾಲಯಗಳ ವಿಚಾರದಲ್ಲಿ ಅರ್ಚಕರುಗಳ ವಿಚಾರದಲ್ಲಿ ಹೇಗೆ ನಡೆದುಕೊಂಡ ಎಂದು ತಿಳಿಯುತ್ತದೆ.

ಆರೆಸ್ಸೆಸ್ಸು ಮೂಲ ಪ್ರೇರಣೆಯಾಗಿ ಪೇಶ್ವೆಗಳ ಸಾಮ್ರಾಜ್ಯವನ್ನು ಆದರ್ಶ
ಯಾವ ಆರೆಸ್ಸೆಸ್ಸು ತನ್ನ ಮೂಲ ಪ್ರೇರಣೆಯಾಗಿ ಮರಾಠ ಪೇಶ್ವೆಗಳ ಸಾಮ್ರಾಜ್ಯವನ್ನು ಆದರ್ಶ ಎಂದು ಹೇಳಿಕೊಳ್ಳುತ್ತದೊ, ಆ ಪೇಶ್ವೆಗಳ ದಂಡನಾಯಕ ಪರಶುರಾಮ್ ಭಾವೆ ಶೃಂಗೇರಿ ದೇವಸ್ಥಾನದ ಮೇಲೆ ದಾಳಿ ಮಾಡಿ ಕೊಳ್ಳೆ ಹೊಡೆಯುತ್ತಾನೆ. ಶೃಂಗೇರಿಯ ರಥ ಬೀದಿಯೂ ಸೇರಿದಂತೆ ಪಟ್ಟಣದ ಹೆಂಗಸರ ಮೇಲೆ ಅತ್ಯಾಚಾರ ಮಾಡಲಾಗುತ್ತದೆ. ಶೃಂಗೇರಿಯ ಗುರುಗಳು ಪರಶುರಾಮ್ ಭಾವೆಯ ಪೇಶ್ವೆ ಸೈನ್ಯ ಹೇಗೆಲ್ಲ ಲೂಟಿ ಮಾಡಿದರು, ರಕ್ತ ಪಾತ ಮಾಡಿದರು, ಮಾನಭಂಗ ಮಾಡಿದರೆಂದು ಟಿಪ್ಪುವಿಗೆ ಪತ್ರ ಬರೆದು ನೆರವಿಗೆ ನಿಲ್ಲುವಂತೆ ಕೇಳಿಕೊಳ್ಳುತ್ತಾರೆ. ಟಿಪ್ಪು ಕೂಡಲೆ ಶೃಂಗೇರಿಯ ಗುರುಗಳು ಕೇಳಿದ್ದೆಲ್ಲವನ್ನು ಕಳಿಸುತ್ತಾನೆ.

ಧಾರ್ಮಿಕ ಮೂಲಭೂತ ವಾದಿಗಳಿಂದ ಬಸವಣ್ಣನವರನ್ನು ಕಳೆದುಕೊಂಡೆವು
ಟಿಪ್ಪು ಮತಾಂಧನಾಗಿದ್ದರೆ, ಶೃಂಗೇರಿಯ ಗುರುಗಳು ನೆರವು ಕೇಳುತ್ತಿದ್ದರೆ? ಎಂಬ ಸಣ್ಣ ಪ್ರಶ್ನೆಯೂ ಬಿಜೆಪಿಗರ ತಲೆಗೆ ಹೋಗುವುದಿಲ್ಲ. ಪದೇ ಪದೇ ಸುಳ್ಳು ಹೇಳಿ ಜನರ ಮೆದುಳನ್ನೂ ಬ್ಲಾಕ್ ಮಾಡುವ ಕೆಲಸ ಮಾಡುತ್ತಿದ್ದಾರೆ. ನಾನು ದಾಖಲೆಗಳನ್ನು ಮುಂದಿಟ್ಟು ಮಾತಾಡುತ್ತೇನೆ. ಬಿಜೆಪಿಯವರು ಸುಳ್ಳು ಹೇಳುತ್ತಾರೆಯೇ ಹೊರತು ಒಂದಿಷ್ಟೂ ದಾಖಲೆ ನೀಡುವುದಿಲ್ಲ. ಇದೇ ನಮಗೂ ಅವರಿಗೂ ಇರುವ ವ್ಯತ್ಯಾಸ. ಬಿಜೆಪಿಯವರು ಭಯೋತ್ಪಾದನೆಯ ಬಗ್ಗೆಯೂ ಮಾತನಾಡುತ್ತಾರೆ. ಭಯೋತ್ಪಾದನೆಯ ಪಿತೃಗಳೇ ಬಿಜೆಪಿಯವರು ಹಾಗೂ ಮನುವಾದಿಗಳು. ನಾವು ಈ ಧಾರ್ಮಿಕ ಮೂಲಭೂತ ವಾದಿಗಳಿಂದ ಬಸವಣ್ಣನವರನ್ನು ಕಳೆದುಕೊಂಡೆವು ಗಾಂಧೀಜಿಯವರನ್ನೂ ಕಳೆದುಕೊಂಡೆವು.

ಇಂದಿರಾಗಾಂಧಿ, ರಾಜೀವ್ ಗಾಂಧಿಯವರನ್ನು ಕಳೆದುಕೊಂಡೆವು
ಇಷ್ಟೇ ಏಕೆ ನಮ್ಮ ಪಕ್ಷದ ಇಂದಿರಾಗಾಂಧಿ, ರಾಜೀವ್ ಗಾಂಧಿಯವರನ್ನು ಕಳೆದುಕೊಂಡೆವು. ಆದರೆ ಬಿಜೆಪಿಯವರು ಭಯೋತ್ಪಾದಕರನ್ನು ವಿಮಾನದಲ್ಲಿ ಕೂರಿಸಿಕೊಂಡು ಕಂದಹಾರ್ ಗೆ ಬಿಟ್ಟು ಬಂದರು. ತಾಲಿಬಾನ್‍ಗೆ ಗೋಧಿ, ಔಷಧ, ಧಾನ್ಯಗಳು, ಹಣಕಾಸಿನ ನೆರವನ್ನೂ ಒದಗಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಅತ್ತ ತಾಲಿಬಾನಿಗಳು ಹೆಣ್ಣು ಮಕ್ಕಳು ಶಾಲೆ, ಕಾಲೇಜುಗಳಿಗೆ ಹೋಗಬಾರದೆಂದು ಕಾನೂನು ತಂದಿದ್ದಾರೆ. RSS ನ ಮೋಹನ್ ಭಾಗವತ್ ಅಂತವರೂ ಸಹ ಹೆಣ್ಣು ಮಕ್ಕಳು ಮನೆ ಕೆಲಸ ಮಾತ್ರ ಮಾಡಬೇಕು, ಹೊರಗಡೆ ಕೆಲಸ ಮಾಡಬಾರದು ಎಂದು ಹೇಳುತ್ತಾರೆ.
ಇನ್ನು ತಲೆಗೆ ಪೆಟ್ಟು ಬಿದ್ದ ಮನೋರೋಗಿಗಳಂತೆ ಈ ಬಿಜೆಪಿಯವರು ಕಾಂಗ್ರೆಸ್ ಸರ್ಕಾರ ಇದ್ದಾಗ ಪಿಎಫ್‍ಐ ಮೇಲಿನ ಕೇಸುಗಳನ್ನು ವಾಪಸ್ಸು ತೆಗೆದುಕೊಂಡರು ಎಂದು ಸುಳ್ಳು ಹೇಳುತ್ತಾರೆ.

ಪಿಎಫ್‍ಐ ಕಾರ್ಯಕರ್ತರ ಹೆಸರು, ಅವರ ಮೇಲಿದ್ದ ಪ್ರಕರಣ
ಬಹಳ ಹಿಂದೆಯೇ ಈ ಕುರಿತು ಸರ್ಕಾರಕ್ಕೆ ಪತ್ರ ಬರೆದು ಮಾಹಿತಿ ತರಿಸಿಕೊಳ್ಳಲಾಗಿದ್ದು ಸರ್ಕಾರವೇ ನೀಡಿರುವ ಆ ಉತ್ತರದಲ್ಲಿ ಪಿಎಫ್‍ಐ ಕಾರ್ಯಕರ್ತರ ಮೇಲಿನ ಪ್ರಕರಣ ವಾಪಸ್ಸು ತೆಗೆದುಕೊಂಡ ಒಂದೇ ಒಂದು ದಾಖಲೆಯನ್ನೂ ಅವರು ನೀಡಿಲ್ಲ. ಹೀಗಿರುವಾಗ ಬಾಯಿಗೆ ಬಂದಂತೆ ಸುಳ್ಳು ಹೇಳುವ ಇವರಿಗೆ ಸ್ವಲ್ಪವಾದರೂ ನಾಚಿಕೆ ಇದೆಯೇ? ಇದರ ಜೊತೆಗೆ ನಮ್ಮ ವಿಪಕ್ಷೀಯ ನಾಯಕರಾದ ಸಿದ್ದರಾಮಯ್ಯ ಅವರು ಪತ್ರ ಬರೆದು ಪಿಎಫ್‍ಐ ಕಾರ್ಯಕರ್ತರ ಹೆಸರು, ಅವರ ಮೇಲಿದ್ದ ಪ್ರಕರಣ ಇವುಗಳ ಸಮಗ್ರ ದಾಖಲೆ ಕೊಡಿ ಎಂದು ಈಗಾಗಲೇ ಕೇಳಿದ್ದಾರೆ.

ಗೃಹ ಸಚಿವ ಆರಗ ಜ್ಞಾನೇಂದ್ರ
ಆದರೆ, ಕಳೆದ 6 ತಿಂಗಳಿಂದ ಯಾವ ಮಾಹಿತಿಯನ್ನೂ ಕೊಡದೆ ಕಡತವನ್ನು ಗೃಹ ಸಚಿವ ಆರಗ ಜ್ಞಾನೇಂದ್ರ ಇಟ್ಟುಕೊಂಡು ಕೂತಿದ್ದರೂ ಬಿಜೆಪಿ ಸುಳ್ಳು ಹೇಳಿಕೊಂಡು ಓಡಾಡುತ್ತಿದೆ. ಇನ್ನು
ಇದೇ ಬಿಜೆಪಿಯೇ SDPI ಜೊತೆಗೆ ಹಲವಾರು ಕಡೆಗಳಲ್ಲಿ ಒಳ ಒಪ್ಪಂದ ಮಾಡಿಕೊಂಡ ಮಾಹಿತಿ ನಮ್ಮ ಬಳಿ ಇದ್ದು ಭಯೋತ್ಪಾದಕ ಮನಸ್ಥಿತಿಯ ಬಿಜೆಪಿಯ ಯೋಗ್ಯತೆ ನಮಗೆ ತಿಳಿದಿದೆ. ಈ ಹಿನ್ನಲೆಯಲ್ಲಿ ಸುಳ್ಳು ಹೇಳಲೆಂದೇ ಜನಿಸಿರುವ ಭಾರತೀಯ ಸುಳ್ಳಿನ ಪಾರ್ಟಿಯಾದ ಬಿಜೆಪಿಯ ಸುಳ್ಳುಗಳ ಬಗ್ಗೆ ತಿಳಿದುಕೊಂಡು ಜನರು ವಿವೇಚನಾಯುಕ್ತವಾದ ತೀರ್ಮಾನಗಳನ್ನು ತೆಗೆದುಕೊಳ್ಳಬೇಕು ಮತ್ತು ಆ ತೀರ್ಮಾನದ ಮೂಲಕ ನಮ್ಮ ಕರ್ನಾಟಕವನ್ನೂ ಉಳಿಸಬೇಕು.
-
Bagalkote: ಮನೆಗೆ ಯಾರನ್ನೂ ಸೇರಿಸದ ವೀರಣ್ಣ ಚರಂತಿಮಠ ಶಾಸಕರಾಗಲೂ ಲಾಯಕ್ಕಾ?: ಸಿದ್ದರಾಮಯ್ಯ -
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ












Click it and Unblock the Notifications