‘ಇದು ಇತಿಹಾಸದಲ್ಲೇ ಭೀಕರ ಕಾರ್ಯಾಚರಣೆ, ನಮ್ಮವರ ರಕ್ಷಣೆ ನಮ್ಮ ಹೊಣೆ..!’

ಅಲ್ಲಿ ಜೀವ ಉಳಿಸಿಕೊಳ್ಳಲು ಲಕ್ಷಾಂತರ ಜನರು ಹಾತೊರೆಯುತ್ತಿದ್ದಾರೆ. ಎಷ್ಟು ಬೇಗ ಆಗುತ್ತೋ ಅಷ್ಟು ಬೇಗ ದೇಶ ಬಿಟ್ಟು ಓಡಿ ಹೋಗಲು ಪ್ರಯತ್ನಿಸುತ್ತಿದ್ದಾರೆ. ದುರಾದೃಷ್ಟ ಏನೆಂದರೆ ಹೀಗೆ ಜೀವ ಉಳಿಸಿಕೊಂಡು ದೇಶ ಬಿಟ್ಟು ಓಡಿ ಹೋಗುತ್ತಿದ್ದವರ ಪ್ರಾಣಪಕ್ಷಿಯೇ ಹಾರಿಹೋಗಿದೆ. ಈ ಕಾರ್ಯಾಚರಣೆಯಲ್ಲಿ ಹಲವರು ಜೀವ ಬಿಟ್ಟಿದ್ದಾರೆ. ಅಂದಹಾಗೆ ಇದು ಅಫ್ಘಾನಿಸ್ತಾನದ ಸ್ಥಿತಿ ಈ ಬಗ್ಗೆ ಸ್ವತಃ ಅಮೆರಿಕ ಅಧ್ಯಕ್ಷ ಜೋ ಬೈಡನ್ ವಿವರಣೆ ನೀಡಿದ್ದು ಇದು ಇತಿಹಾಸದಲ್ಲೇ ಭೀಕರ ಕಾರ್ಯಾಚರಣೆ ಎಂದಿದ್ದಾರೆ.ಅಲ್ಲದೆ ನಮ್ಮವರ ರಕ್ಷಣೆ ನಮ್ಮ ಹೊಣೆ ಎಂದು ತಾಲಿಬಾನ್‌ಗೆ ಪರೋಕ್ಷ ಎಚ್ಚರಿಕೆ ರವಾನಿಸಿದ್ದಾರೆ.

ಅಮೆರಿಕ ಮಿತ್ರ ಪಡೆಗಳು ಹಾಗೂ ಮಿತ್ರ ದೇಶಗಳ ಸಾವಿರಾರು ಜನ ಅಫ್ಘಾನ್‌ನಲ್ಲಿ ಸಿಲುಕಿದ್ದಾರೆ. ಇವರನ್ನು ಸುರಕ್ಷಿತವಾಗಿ ಹೊರತರಬೇಕು. ಆದರೆ ಈ ಭೀಕರ ಕಾರ್ಯಾಚರಣೆಯಲ್ಲಿ ಜನರ ಜೀವ ಹೋಗುತ್ತಿದೆ, ಈ ಸಂಕಷ್ಟದ ಸಮಯದಲ್ಲಿ ಎಚ್ಚರಿಕೆಯಿಂದ ಇರಬೇಕಿದೆ ಎಂದಿದ್ದಾರೆ ಬೈಡನ್.

ಶ್ವೇತಭವನದಲ್ಲಿ ಅಫ್ಘಾನ್‌ ಪರಿಸ್ಥಿತಿ ಬಗ್ಗೆ ವಿವರಣೆ ನೀಡಿರುವ ಬೈಡನ್, ಈವರೆಗೂ 18 ಸಾವಿರ ಜನರನ್ನು ರಕ್ಷಣೆ ಮಾಡಿದ್ದೇವೆ. ಅಮೆರಿಕ ಕಾರ್ಯಾಚರಣೆಯಲ್ಲಿ ಜುಲೈನಿಂದ ಈವರೆಗೆ 18 ಸಾವಿರ ಜನರ ಸ್ಥಳಾಂತರ ನಡೆದಿದೆ. ಕೆಲವೇ ದಿನದಲ್ಲಿ ಈ ಸಂಖ್ಯೆ 13 ಸಾವಿರದ ಗಡಿಯನ್ನ ದಾಟಿದೆ. ಸಾಧ್ಯವಾದಷ್ಟು ಬೇಗ ನಮ್ಮವರ ಸ್ಥಳಾಂತರ ಪ್ರಕ್ರಿಯೆ ಮುಗಿಸಲಿದ್ದೇವೆ ಎಂದು ಭರವಸೆ ನೀಡಿದ್ದಾರೆ ಬೈಡನ್.

 ‘ನನ್ನ ನಿರ್ಧಾರ ಸರಿಯಾಗಿದೆ’

‘ನನ್ನ ನಿರ್ಧಾರ ಸರಿಯಾಗಿದೆ’

ಮತ್ತೊಂದು ಕಡೆ ಅಫ್ಘಾನ್‌ನಿಂದ ಅಮೆರಿಕ ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳುವ ತಮ್ಮ ನಿರ್ಧಾರವನ್ನು ಜೋ ಬೈಡನ್ ಸಮರ್ಥಿಸಿಕೊಂಡಿದ್ದಾರೆ. ಬೈಡನ್ ನಿರ್ಧಾರ ಸರಿಯಿಲ್ಲ, ಬೈಡನ್ ಮಾಡಿದ ಎಡವಟ್ಟಿನಿಂದ ಇಷ್ಟೆಲ್ಲಾ ಸಮಸ್ಯೆ ಎದುರಾಗಿದೆ ಎಂದು ಟ್ರಂಪ್ ಸೇರಿದಂತೆ ಹಲವರು ಆರೋಪಿಸುತ್ತಿದ್ದಾರೆ. ಆದ್ರೆ ಬೈಡನ್ ಮಾತ್ರ ಈ ನಿರ್ಧಾರ ಸರಿಯಾಗಿದೆ ಎಂದಿದ್ದಾರೆ. ಈಗಾಗ್ಲೇ ಇಡೀ ಅಫ್ಘಾನಿಸ್ತಾನವನ್ನು ತಾಲಿಬಾನ್ ತನ್ನ ವಶಕ್ಕೆ ಪಡೆದಿದೆ, ಆದರೂ ಕಾಬೂಲ್ ವಿಮಾನ ನಿಲ್ದಾಣವನ್ನ ಮಾತ್ರ ಅಮೆರಿಕ ಉಳಿಸಿಕೊಂಡಿದೆ. ರಕ್ಷಣಾ ಕಾರ್ಯಾಚರಣೆಗಾಗಿ ಕಾಬೂಲ್ ಏರ್ಪೋರ್ಟ್ ಬಳಕೆಯಾಗುತ್ತಿದ್ದು, ಪರಿಸ್ಥಿತಿ ಕ್ಷಣಕ್ಷಣಕ್ಕೂ ಗಂಭೀರವಾಗುತ್ತಿದೆ.

 ಇಡೀ ಊರಿಗೆ ಬೆಂಕಿ ಬಿದ್ದಿದೆ..!

ಇಡೀ ಊರಿಗೆ ಬೆಂಕಿ ಬಿದ್ದಿದೆ..!

ಈಗಾಗಲೇ ತಾಲಿಬಾನ್ ಇಡೀ ಅಫ್ಘಾನಿಸ್ತಾನವನ್ನೇ ತನ್ನ ವಶಕ್ಕೆ ಪಡೆದಿದೆ. ಇಂತಹ ಹೊತ್ತಲ್ಲಿ ಕೇವಲ ಒಂದು ವಿಮಾನ ನಿಲ್ದಾಣ ವಶಕ್ಕೆ ಪಡೆಯುವುದು ಕಷ್ಟವಾಗುತ್ತಾ..? ಎಂಬ ಪ್ರಶ್ನೆ ಉದ್ಭವಿಸಿದೆ. ಆದರೆ ಅಮೆರಿಕ ಸೂಕ್ತ ವ್ಯವಸ್ಥೆ ಮಾಡಿಕೊಂಡು ಕಾಬೂಲ್ ವಿಮಾನ ನಿಲ್ದಾಣವನ್ನ ಕಾಯುತ್ತಿದೆ. ಹೀಗಿದ್ದರು ಕೂಡ ಪರಿಸ್ಥಿತಿ ಕೈಮೀರಿ ಹೋಗಬಹುದು. ಇಂತಹ ಪರಿಸ್ಥಿತಿ ಎದುರಾದರೆ ಅನಿವಾರ್ಯವಾಗಿ ಅಮೆರಿಕ ಪಡೆಗಳು ಕಾಬೂಲ್ ವಿಮಾನ ನಿಲ್ದಾಣ ಬಿಟ್ಟು ಎಸ್ಕೇಪ್ ಆಗಬೇಕು. ಇಲ್ಲವಾದ್ರೆ ತಾಲಿಬಾನ್ ಎದುರು ಅಮೆರಿಕ ಸೈನಿಕರು ಹೋರಾಡಬೇಕು.

ಯಾಕೆ ಬೇಕಿತ್ತು ಇದೆಲ್ಲಾ..?

ಯಾಕೆ ಬೇಕಿತ್ತು ಇದೆಲ್ಲಾ..?

ಅಮೆರಿಕ ಸೂಕ್ತ ವ್ಯವಸ್ಥೆ ಮಾಡಿಕೊಂಡು ಅಫ್ಘಾನಿಸ್ತಾನ ಬಿಟ್ಟು ಹೊರಟಿದ್ದರೆ ಇಂತಹ ಪರಿಸ್ಥಿತಿ ಬರುತ್ತಿರಲಿಲ್ಲ ಎಂಬುದು ತಜ್ಞರ ವಾದ. ಅಮೆರಿಕ ಕೈಗೊಂಡ ಆತುರದ ನಿರ್ಧಾರ ಈಗ ಅದೇ ದೇಶಕ್ಕೆ ಮುಳುವಾಗುತ್ತಿದೆ. ಗಂಟುಮೂಟೆ ಕಟ್ಟಿಕೊಂಡು ಓಡಿ ಹೋಗಿದ್ದ 'ದೊಡ್ಡಣ್ಣ' ವಾಪಸ್ ಬರುವಂತಾಗಿದೆ. ಇಷ್ಟೆಲ್ಲಾ ಹೈಡ್ರಾಮಾಕ್ಕೆ ಮೊದಲು ಸೂಕ್ತವಾಗಿ ಅಫ್ಘಾನ್ ಪಡೆಗಳಿಗೆ ಸೇನಾ ಸ್ಥಳಗಳನ್ನು ಹಸ್ತಾಂತರ ಮಾಡಿದ್ದರೆ ಇಂತಹ ಪರಿಸ್ಥಿತಿಯೇ ಬರುತ್ತಿರಲಿಲ್ಲ. ಆದರೆ ಸುಮ್ಮನೆ ಇರದೆ ಇರುವೆ ಬಿಟ್ಟುಕೊಂಡ ಅಮೆರಿಕ ಜಗತ್ತಿನ ಎದುರು ವಿಲನ್ ಆಗುತ್ತಿದೆ. ತನ್ನದೇ ತಪ್ಪಿಗೆ ಮುಂದಿನ ದಿನಗಳಲ್ಲಿ ಬೆಲೆ ತೆರಬೇಕಾದ ಅನಿವಾರ್ಯತೆ ಕೂಡ ಸೃಷ್ಟಿಯಾಗಬಹುದು.

ಅಮೆರಿಕ ವಶದಲ್ಲಿ ಏರ್ಪೋರ್ಟ್

ಅಮೆರಿಕ ವಶದಲ್ಲಿ ಏರ್ಪೋರ್ಟ್

ಇಡೀ ಅಫ್ಘಾನಿಸ್ತಾನವನ್ನೇ ತಾಲಿಬಾನ್ ತನ್ನ ವಶಕ್ಕೆ ಪಡೆದಾಗಿದೆ. ಆದರೆ ಅಫ್ಘಾನ್‌ನ ರಾಜಧಾನಿ ಕಾಬೂಲ್ ವಿಮಾನ ನಿಲ್ದಾಣ ಮಾತ್ರ ಈಗಲೂ ಅಮೆರಿಕದ ವಶದಲ್ಲಿದ್ದು, ರಾಜತಾಂತ್ರಿಕ ಅಧಿಕಾರಿಗಳು ಹಾಗೂ ಜನರನ್ನ ಏರ್‌ಲಿಫ್ಟ್ ಮಾಡಲಾಗುತ್ತಿದೆ. ಈಗಾಗಲೇ ಏರ್ಪೋರ್ಟ್ ಸುತ್ತಮುತ್ತ ಗುಂಡಿನ ಮೊರೆತ ಕೇಳಿಬಂದಿದ್ದು ಅಲ್ಲಿ ಕ್ಷಣಕ್ಷಣಕ್ಕೂ ಪರಿಸ್ಥಿತಿ ಬಿಗಡಾಯಿಸುತ್ತಿದೆ. ಹೀಗಾಗಿ ಆದಷ್ಟು ಬೇಗ ಜಾಗ ಖಾಲಿ ಮಾಡಲು ಅಮೆರಿಕ ಸೇನೆ ಪರದಾಡುತ್ತಿವೆ. ಯಾವ ಕ್ಷಣದಲ್ಲಿ ಬೇಕಾದರೂ ತಾಲಿಬಾನ್ ಕಾಬೂಲ್ ವಿಮಾನ ನಿಲ್ದಾಣವನ್ನು ತನ್ನ ವಶಕ್ಕೆ ಪಡೆಯುವ ಸಾಧ್ಯತೆ ದಟ್ಟವಾಗಿದೆ.

ವಿಮಾನ ಏರಲು ಜನರ ಫೈಟಿಂಗ್

ವಿಮಾನ ಏರಲು ಜನರ ಫೈಟಿಂಗ್

ಒಂದು ಕಡೆ ಜನರು ಹಾಗೂ ಅಧಿಕಾರಿಗಳನ್ನು ಸ್ಥಳಾಂತರ ಮಾಡಲು ಅಮೆರಿಕ ಅವಸರ ಮಾಡುತ್ತಿದ್ದರೆ, ಇತ್ತ ವಿಮಾನ ಹತ್ತಲು ಜನರು ಕಿತ್ತಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಹತ್ತಾರು ಸಾವಿರ ಜನ ದಿಢೀರ್ ವಿಮಾನ ನಿಲ್ದಾಣಕ್ಕೆ ನುಗ್ಗಿ ಬಂದಿದ್ದು, ಕುರಿಗಳಂತೆ ತುಂಬಿ ಜನರನ್ನು ಅಲ್ಲಿಂದ ಬೇರೆಡೆಗೆ ಸ್ಥಳಾಂತರ ಮಾಡಲಾಗುತ್ತಿದೆ. ತಾಲಿಬಾನ್ ದಾಳಿಯ ಭಯದಲ್ಲಿ ಜನ ಕುಟುಂಬ ಸಮೇತ ಗಂಟುಮೂಟೆ ಕಟ್ಟಿ ತಾವು ಹುಟ್ಟಿ ಬೆಳೆದ ಜಾಗ ಖಾಲಿ ಮಾಡುತ್ತಿದ್ದಾರೆ. ಆದರೆ ಜನರ ಕಷ್ಟಗಳಿಗೆ ಸ್ಪಂದಿಸಬೇಕಿದ್ದ ಅಧ್ಯಕ್ಷ ನಾಪತ್ತೆಯಾಗಿದ್ದಾರೆ.

ಎಲ್ಲವೂ ಅಮೆರಿಕದ ಎಡವಟ್ಟು..!

ಎಲ್ಲವೂ ಅಮೆರಿಕದ ಎಡವಟ್ಟು..!

ದಿಢೀರ್ ಅಫ್ಘಾನಿಸ್ತಾನದಿಂದ ಸೇನೆ ವಾಪಸ್ ಕರೆಸಿಕೊಂಡಿದ್ದ ಅಮೆರಿಕ ಪತರುಗುಟ್ಟಿದೆ. ಅಮೆರಿಕ ಕನಸಲ್ಲೂ ಅಂದುಕೊಳ್ಳದ ರೀತಿ ತಾಲಿಬಾನ್ ಕಮ್‌ಬ್ಯಾಕ್ ಮಾಡಿದೆ. ಸತತ 20 ವರ್ಷಗಳ ಕಾಲ ಅಫ್ಘಾನಿಸ್ತಾನ ಆಳಿದ್ದ ಅಮೆರಿಕ ದಿಢೀರ್ ಅಂತಾ ಹೊರ ಬಂದಿದ್ದೇ ತಡ, ತಾಲಿಬಾನ್ ಅಲರ್ಟ್ ಆಗಿ ಇಡೀ ಅಫ್ಘಾನಿಸ್ತಾನವನ್ನ ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಯಾವ ಕ್ಷಣದಲ್ಲಿ ಬೇಕಾದ್ರೂ ಕಾಬೂಲ್ ವಿಮಾನ ನಿಲ್ದಾಣದ ಮೇಲೆ ತಾಲಿಬಾನ್ ದಾಳಿ ನಡೆಸಿ ವಶಕ್ಕೆ ಪಡೆಯುವ ಸಾಧ್ಯತೆ ಇದ್ದು, ಅಕಸ್ಮಾತ್ ಈ ಜಾಗವೂ ಅಮೆರಿಕದ ತೆಕ್ಕೆಯಿಂದ ಬಿಟ್ಟು ಹೋದರೆ ಅಮೆರಿಕದ ಪಾಲಿಗೆ ಅಫ್ಘಾನಿಸ್ತಾನದ ಬಾಗಿಲು ಸಂಪೂರ್ಣ ಬಂದ್ ಆದಂತೆಯೇ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+