Get Updates
Get notified of breaking news, exclusive insights, and must-see stories!

ಬೆಂಗಳೂರು ನಾಟಕೋತ್ಸವ: ಸೆ.13 & 14ಕ್ಕೆ 'ಲವ್ ಲೆಟರ್ಸ್: ನಿನ್ನ ಪ್ರೀತಿಯ ನಾನು' ಸೇರಿ 2 ನಾಟಕ ಪ್ರದರ್ಶನ

ಬೆಂಗಳೂರು, ಸೆಪ್ಟಂಬರ್ 12: ಬೆಂಗಳೂರಿನಲ್ಲಿ ನಾಟಕಪ್ರಿಯರಿಗೆ ಖುಷಿ ಸುದ್ದಿ ಇಲ್ಲೊಂದಿದೆ. ಇದೇ ವಾರಾಂತ್ಯದಲ್ಲಿ ಸೆಪ್ಟೆಂಬರ್ 13 ಮತ್ತು ಸೆಪ್ಟೆಂಬರ್ 14 ರಂದು 2 ದಿನಗಳ ನಾಟಕೋತ್ಸವದಲ್ಲಿ ಜೈರಂಗಂ ಎರಡು ಗಮನಾರ್ಹ ನಾಟಕಗಳನ್ನು ಪ್ರಸ್ತುತಪಡಿಸುತ್ತಿದೆ. ಬೆಂಗಳೂರಿನಲ್ಲಿರುವ ಕಲೆ ಮತ್ತು ಸಾಂಸ್ಕೃತಿಕ ಅಭಿಮಾನಿಗಳು ಒಂದೇ ಸೂರಿನಡಿ ಹೆಚ್ಚಿನ ಅಂಶಗಳನ್ನು ಪ್ರದರ್ಶಿಸುವ ನಾಟಕ ಕಾರ್ಯಕ್ರಮ ಇದಾಗಿದೆ.

'ಒಂದು ಹಿಂದಿ ಮಾರ್ವಾರಿ - ಕಂಕಡ್ ಮೋತಿ ಔರ್ ಕಿನ್ವಾಡ್' ಮತ್ತು 'ಲವ್ ಲೆಟರ್ಸ್: ನಿನ್ನ ಪ್ರೀತಿಯಾ ನಾನು' ಈ ಎರಡು ನಾಟಕಗಳನ್ನು ನೀವು ಕಣ್ತುಂಬಿಕೊಳ್ಳಬಹುದು. ಕಲಾವಿದರಿಂದ ಪ್ಯಾನಲ್ ಚರ್ಚೆ, ಅಜೀತ್ ಸಿಂಗ್ ಪಲಾವತ್ ಮತ್ತು ಇಪ್ಶಿತಾ ಚಕ್ರವರ್ತಿ ಸಿಂಗ್ ಅವರಿಂದ ನಟನಾ ಕಾರ್ಯಾಗಾರ, ನಟನೆಯ ಮೇಲಿನ ಭಾಷಾ ಪರಿಣಾಮಗಳು ಮತ್ತು ನಾಟಕೀಯ ಓದುವಿಕೆ ಇವುಗಳಿಂದ ನಾಟಕ ಸಮೃದ್ಧವಾಗಲಿದೆ.

Bengaluru Theatre Fest Love Letters amp amp Kankad Moti Aur Kinwad

ಈ ನಾಟಕ ಕಾರ್ಯಕ್ರಮದ ಟಿಕೆಟ್‌ಗಳು ಬುಕ್ ಮೈ ಶೋ ಮತ್ತು ದಿ ಕೋರಮಂಗಲ ಕ್ಲಬ್, ಸಿಎ-17, 6 ನೇ ಕ್ರಾಸ್ ರಸ್ತೆ, 6 ನೇ ಬ್ಲಾಕ್, ಕೋರಮಂಗಲ, ಬೆಂಗಳೂರು, ಕರ್ನಾಟಕ 560095 ನಲ್ಲಿ ಲಭ್ಯವಿರುತ್ತವೆ. ಈ ನಾಟಕವು ಬಾಲ್ಯದ ಮುಗ್ಧತೆ, ಯೌವನದ ತುಂಟಾಟ, ಪ್ರೌಢಾವಸ್ಥೆಯ ಏಳುಬೀಳುಗಳು. ಇವುಗಳ ಮಧ್ಯೆ ಮೂಡುವ ಗೆಳೆತನ, ಅರಳುವ ಪ್ರೀತಿ, ಕಾಡುವ ನೆನಪು, ಅಗಲಿಕೆ , ಸಂತಸ, ನೋವು..ಇವೆಲ್ಲವೂ ಕಥೆಯಲ್ಲಿವೆ.

'ಲವ್ ಲೆಟರ್ಸ್-ನಿನ್ನ ಪ್ರೀತಿಯ ನಾನು' ನಾಟಕದಲ್ಲಿ ಒಂದಿಡೀ ಜೀವನದ ಪಿಸುಮಾತುಗಳು, ಹಂಚಿಕೊಂಡ ಗುಟ್ಟುಗಳು, ಜೊತೆಗೆ ಕಂಡ ಕನಸುಗಳು, ಖುಷಿಯ ಚೀತ್ಕಾರದ ಜೊತೆಗೆ ದು:ಖದ ನಿಟ್ಟುಸಿರು. ದೂರವಿದ್ದರೂ ಜೊತೆಗೆ ಸಾಗಿದ ದಾರಿಗಳು. ಇವೆಲ್ಲವೂ ಒಬ್ಬರಿಗೊಬ್ಬರು ಬರೆದ ಪತ್ರಗಳಲ್ಲಿ ಬಿಚ್ಚಿಕೊಳ್ಳುವ ಪ್ರೇಮ ಕಥಾನಕ ಹೊಂದಿದೆ.

ನಾಟಕದ ನಿರ್ದೇಶಕರ ನುಡಿಗಳು

ಈ ವರ್ಷದ ಮಾರ್ಚ್ ನಲ್ಲಿ 'ಪ್ರೆಸ್ಟೀಜ್ ಸೆಂಟರ್ ಫಾರ್ ಪರ್ಫಾರ್ಮೆನ್ಸ್' ಸಂಸ್ಥೆಯು ತನ್ನ ಹೊಸ ನಾಟಕೋತ್ಸವಕ್ಕೆ ನಮ್ಮ ತಂಡವನ್ನು ಆಹ್ವಾನಿಸಿದೆ. ಹೊಸ ನಾಟಕವೊಂದನ್ನು ಮಾಡಲು ಕೇಳಿಕೊಂಡಿತು. ಹೊಸ ಜಾಗದಲ್ಲಿ ಈ ನಾಟಕೋತ್ಸವ ನಡೆಯಬೇಕಾದ್ದರಿಂದ, ಸಮಯವೂ ಕಡಿಮೆ ಇದ್ದಿದ್ದರಿಂದ ನಾವು ಕಡಿಮೆ ನಟರಿರುವ ನಾಟಕಗಳಿಗೆ ಹುಡುಕಾಟ ಶುರು ಮಾಡಿದೆವು. ಆಗ ಅಕಾಸ್ಮಾತ್ತಾಗಿ ಕಣ್ಣಿಗೆ ಬಿದ್ದಿದ್ದೇ ಎ.ಆರ್‌.ಗರ್ನಿಯವರು ಬರೆದ 'ಲವ್ ಲೆಟರ್ಸ್' ನಾಟಕ.

1986 ರಲ್ಲಿ ಪ್ರಕಟವಾದ ಈ ನಾಟಕ ಸುಮಾರು ದೇಶಗಳಲ್ಲಿ ಪ್ರದರ್ಶನ ಕಂಡು ಜನಪ್ರಿಯಯಾದ ನಾಟಕ‌. ಪ್ರೇಮಿಗಳಿಬ್ಬರು ತಮ್ಮ ಇಡೀ ಜೀವನದ ಘಟನೆಗಳನ್ನು, ನೋವು ನಲಿವುಗಳನ್ನು , ಗೆಲುವು ಸೋಲುಗಳನ್ನು , ತಾವು ಪರಸ್ಪರ ಬರೆದುಕೊಂಡ ಪತ್ರಗಳ ಮೂಲಕ‌ ಪ್ರೇಕ್ಷಕರ ಮುಂದೆ ತೆರೆದಿಡುತ್ತಾ ಹೋಗುತ್ತಾರೆ‌. ಇದೊಂದು ಪ್ರೇಮ ಕಥೆ, ಇಬ್ಬರೇ ಕಲಾವಿದರು ಅಭಿನಯಿಸುವ ಕಥೆ‌. ನಮಗೆ ಬೇಕಾದ ನಾಟಕ ಸಿಕ್ಕಾಗಿತ್ತು‌ .

ಆದರೆ ಕೇವಲ ಇಬ್ಬರು ಕಲಾವಿದರೆಂಬ ಕಾರಣಕ್ಕೆ ಈ ನಾಟಕ ತೆಗೆದುಕೊಂಡದ್ದಲ್ಲ. ಬೇರೆ ಕಾರಣಗಳೂ ಸೇರಿಕೊಂಡವು. ಮೊದಲಿಗೆ ಇದೊಂದು ಭಾವನಾತ್ಮಕ ಪ್ರೇಮ ಕಥೆ. ನಮ್ಮ ಸುತ್ತಲಿನ ಇಡೀ ಜಗತ್ತು ಗದ್ದಲ, ಗೊಂದಲದಲ್ಲಿ ಸಿಲುಕಿರುವಾಗ, ದ್ವೇಷದ ಗಾಳಿಯನ್ನೇ ಉಸಿರಾಡಬೇಕಾದ ಸಂದರ್ಭದಲ್ಲಿ , ಒಂದು ಸೌಮ್ಯವಾದ, ಶಾಂತವಾದ ಪ್ರೀತಿಯ ಕಥೆಯೊಂದನ್ನು ಸಮಾಧಾನದಿಂದ ಪ್ರೇಕ್ಷಕರ ಮುಂದೆ ಹೇಳಬೇಕೆನಿಸಿತ್ತು‌.

ಹಲವು ಹತ್ತು ಅಭಿಪ್ರಾಯಗಳಿಂದ ದೂರವಾಗಿ ದ್ವೀಪಗಳಾದ ನಮ್ಮನ್ನು ಕೊನೆಗೂ ಪ್ರೀತಿ ಮಾತ್ರ ಬೆಸೆಯಲು ಸಾಧ್ಯ. ಅದು ಈ ನಾಟಕ ಮಾಡಲು ಮೊದಲ ಕಾರಣ. ಮತ್ತೊಂದು ಕಾರಣ, ನಾವೆಲ್ಲರೂ ಆಗಾಗ ಕೇಳುವ ಮಾತು - personal is political ಎಂದು. ಅದೇನೆಂದು ಈ ನಾಟಕದಲ್ಲಿ ನೋಡಬಹುದು. ಮನುಷ್ಯರ ಬದುಕಿನ ವೈಯಕ್ತಿಕ ಬೇರೆ, ಸಾಮಾಜಿಕ ಬೇರೆ ಎಂದು ಮೇಲ್ನೋಟಕ್ಕೆ ಅನಿಸಿದರೂ, ವ್ಯಕ್ತಿಯ ಸಾಮಾಜಿಕ ಶ್ರೇಣಿ, ಲಿಂಗ, ಸ್ಥಾನಮಾನಗಳು, ಬಾಲ್ಯದ ಅನುಭವಗಳು ಆ ವ್ಯಕ್ತಿಯ personal ಅಂದರೆ ವೈಯುಕ್ತಿಕವನ್ನೂ ನಿರ್ಧರಿಸುತ್ತದೆ‌ ಎಂಬುದು ವಾಸ್ತವ. ಅದು ಈ ನಾಟಕದಲ್ಲಿ ಪ್ರಮುಖವಾಗಿ ಕಾಣುವ ಮತ್ತೊಂದು ಅಂಶ ಗಮನಿಸಬಹುದು.

ಇವೆಲ್ಲದರ ಜೊತೆಗೆ ಇದೊಂದು ಪತ್ರ ವಿನಿಮಯದ ನಾಟಕ. ಹೆಸರೇ ಹೇಳುವಂತೆ ಇಬ್ಬರು ಪ್ರೇಮಿಗಳು ತಮ್ಮ ಜೀವನದುದ್ದಕ್ಕೂ ಬರೆದುಕೊಂಡ ಪತ್ರಗಳು ಈ ನಾಟಕದ ಜೀವಾಳ‌. ಮೊಬೈಲ್ ಮೆಸೇಜುಗಳು, ಸೋಷಿಯಲ್ ಮೀಡಿಯಾಗಳ ಇಂದಿನ ಜಗತ್ತಿನಲ್ಲಿ ಪತ್ರಗಳನ್ನು, ಬರೆಯುವ , ಓದುವ ಅನುಭವ ಖಂಡಿತಾ ಮುದ ನೀಡುವಂತದ್ದು. ಬಾಲ್ಯದಲ್ಲಿ ಪತ್ರಗಳನ್ನು ಬರೆದವರಿಗೆ ಈ ನಾಟಕ ಪತ್ರಗಳ ನೆನಪನ್ನು ತಂದರೆ , ಪತ್ರಗಳನ್ನು ಬರೆಯುವ ಅಭ್ಯಾಸವೇ ಇಲ್ಲದ ಇಂದಿನ ಕಿರಿಯರಿಗೆ ಇದು ಪತ್ರಗಳ ಲೋಕದ ಅಚ್ಚರಿಯನ್ನು ದಾಟಿಸಬಲ್ಲುದೇನೋ !

ಇವೆಲ್ಲ ಕಾರಣಗಳಿಂದ ಈ ನಾಟಕ ಒಂದು ಆಪ್ತವಾದ, ಸುಂದರವಾದ , ಭಾವನಾತ್ಮಕವಾದ ಪ್ರೇಮ ಕಥಾನಕ. ನಾನು ಮೊದಲು ನಿರ್ದೇಶಿಸಿದ ನಾಟಕಗಳಿಗಿಂತ ಭಿನ್ನವಾದ ನಾಟಕವಾದರೂ ಅಷ್ಟೇ ಮುಖ್ಯವಾದ ನಾಟಕ ಇದೆಂದು ನನಗೆ ನಂಬಿಕೆ ಇದೆ! ಎಂದು ಅವರು ಅಭಿಪ್ರಾಯ ಹೊರ ಹಾಕಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+