Bengaluru Rent: ಬೆಂಗಳೂರಿನ ಈ ಪುಟ್ಟ ಫ್ಲಾಟ್‌ಗೆ ₹25,000 ಬಾಡಿಗೆ: ವಿಡಿಯೋ ವೈರಲ್‌

ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ಮನೆ, ಅಂಗಡಿಗಳು ಹಾಗೂ ಫ್ಲಾಟ್‌ಗಳ ಬಾಡಿಗೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಉದ್ಯೋಗ ಅರಸಿ ಊರು, ಸ್ವಂತ ಮನೆ ಬಿಟ್ಟು ಬಂದವರು ಇಲ್ಲಿ ಜೀವನ ಕಟ್ಟಿಕೊಳ್ಳಲು ಬಾಡಿಗೆ ಮನೆಯಲ್ಲಿ ಇರಲೇಬೇಕಾದ ಅನಿವಾರ್ಯತೆ ಇದೆ. ಹೀಗಾಗಿ ಬಾಡಿಗೆ ಎಷ್ಟೇ ದುಬಾರಿಯಾದರೂ ಕೂಡ ಮನೆ ಬಾಡಿಗೆ ಪಡೆದು ಇರುತ್ತಾರೆ.

ಇನ್ನು ಸಾರಿಗೆ ಸಂಪರ್ಕ ಅಂದರೆ ಮೆಟ್ರೋ ನಿಲ್ದಾಣ, ಬಸ್‌ ನಿಲ್ದಾಣ ಹತ್ತಿರ ಇದ್ದರಂತೂ ಬಾಡಿಗೆ ಆಗಸ ಮುಟ್ಟಿರುತ್ತದೆ. ಇತ್ತೀಚಿನ ದಿನಗಳಲ್ಲಂತೂ ಬೆಂಗಳೂರಿನಲ್ಲಿ ಕಟ್ಟಡಗಳ ಬಾಡಿಗೆ ಬಲು ದುಬಾರಿಯಾಗಿದೆ. ಇದಕ್ಕೆ ಉದಾಹರಣೆ ಎನ್ನುವಂತೆ ಎರಡು ದಿನದ ಹಿಂದೆ ಯುವಕನೊಬ್ಬ ಶೇರ್‌ ಮಾಡಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ.

Bengaluru Small Flat Rent for 25 000 Go Viral on Social Media

ಒಂದು ರೂಮ್‌ ಹಾಗೂ ಚಿಕ್ಕ ಬಾಲ್ಕನಿಯಿರುವ ಫ್ಲಾಟ್‌ಗೆ ಎಷ್ಟು ಬಾಡಿಗೆ ಇರಬಹುದು ಎಂದು ಪ್ರಶ್ನಿಸಿದರೆ, ಹೆಚ್ಚೆಂದರೆ ಹತ್ತರಿಂದ ಹದಿನೈದು ಸಾವಿರ ಇರಬಹುದು ಎಂದು ಸಾಮಾನ್ಯವಾಗಿ ಅಂದಾಜಿಸಬಹುದು. ಆದರೆ ಇಲ್ಲೊಬ್ಬ ಯುವಕ ಪುಟ್ಟ ಫ್ಲಾಟ್‌ಗೆ ತಿಂಗಳಿಗೆ ಬರೋಬ್ಬರಿ 25 ಸಾವಿರ ರೂಪಾಯಿ ಬಾಡಿಗೆ ನೀಡುತ್ತಿದ್ದಾನೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ.

ಅಭಿಷೇಕ್‌ ಸಿಂಗ್‌ (abhiskks_17) ಎನ್ನುವ ಇನ್ಸ್ಟಾಗ್ರಾಮ್‌ ಖಾತೆಯಲ್ಲಿ ಈ ಪುಟ್ಟ ಫ್ಲಾಟ್ ಕಥೆಯ ವಿಡಿಯೋ ಶೇರ್‌ ಮಾಡಿಕೊಳ್ಳಲಾಗಿದೆ. ಎರಡು ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ ಈಗಾಗಲೇ 1.1 ಮಿಲಿಯನ್‌ ವೀಕ್ಷಣೆ ಪಡೆದಿದ್ದು, ನೂರಕ್ಕೂ ಹೆಚ್ಚು ನೆಟ್ಟಿಗರು ಕಮೆಂಟ್‌ ಮಾಡಿದ್ದಾರೆ.

Bengaluru Small Flat Rent for 25 000 Go Viral on Social Media

ಬೆಂಗಳೂರಿನ ಗೆಳೆಯನ ರೂಮಿಗೆ ಬಂದ ಅಭಿಷೇಕ್‌ ಸಿಂಗ್‌ ಆತನ ರೂಮ್‌ ನೋಡಿಯೇ ಶಾಕ್‌ ಆಗಿದ್ದಾರೆ. ಬಳಿಕ ಅಂತಹ ರೂಮಿಗೆ ತನ್ನ ಗೆಳೆಯ ಕೊಡುತ್ತಿರುವ ಬಾಡಿಗೆ ಕೇಳಿ ಹೌಹಾರಿರುವ ಅಭಿಷೇಕ್‌ ಸಿಂಗ್‌, ಕೊನೆಗೆ ಹೋಮ್‌ ಟೂರ್‌ ವಿಡಿಯೋವನ್ನೇ ಮಾಡಿದ್ದಾರೆ. ಫ್ಲಾಟ್‌ನ ಹೋಮ್‌ ಟೂರ್‌ ಮಾಡಿರುವ ಅಭಿಷೇಕ್‌ ಮನೆಯನ್ನು ಹಾಸ್ಯಾಸ್ಪದವಾಗಿ ವಿವರಿಸಿದ್ದಾರೆ. ಇಬ್ಬರು ನಿಲ್ಲಬಹುದಾದ ಬಾಲ್ಕನಿ, ಒಬ್ಬನೇ ಇರಬಹುದಾದ ಈ ರೂಮಿಗೆ ತಿಂಗಳ ಬಾಡಿಗೆ 25 ಸಾವಿರ ರೂಪಾಯಿ ಎಂದು ವಿವರಿಸಿದ್ದಾರೆ.

ನೋಡಲು ಸ್ಟೋ ರೂಮ್‌ನಂತೆ ಇರುವ ಇಂತಹ ಫ್ಲಾಟ್‌ಗೆ ತಿಂಗಳ ಬಾಡಿಗೆ 25 ಸಾವಿರ ರೂಪಾಯಿ ಎನ್ನುವುದು ಸುಳ್ಳು ಎಂದು ಕೆಲವರು ಕಮೆಂಟ್‌ ಮಾಡುತ್ತಿದ್ದು, ಇನ್ನೂ ಕೆಲವರು ಬೆಂಗಳೂರು ಇಷ್ಟೊಂದು ದುಬಾರಿನಾ ಎಂದು ಪ್ರಶ್ನಿಸಿದ್ದಾರೆ. ಇನ್ನು ಅಷ್ಟು ಚಿಕ್ಕ ಮನೆಗೆ ಶೌಚಾಲಯ ಎಲ್ಲಿ ಮಾಡಿದ್ದಾರೆ ಎನ್ನುವ ಪ್ರಶ್ನೆಗಳು ಕೂಡ ಕಮೆಂಟ್‌ನಲ್ಲಿ ಬಂದಿದ್ದು, ಬೆಂಗಳೂರು ಮಾತ್ರವಲ್ಲ ಮುಂಬೈನಲ್ಲೂ ಇದೇ ದುಬಾರಿ ಜೀವನ ಎಂದು ಅನೇಕರು ಕಮೆಂಟ್‌ ಮಾಡಿದ್ದಾರೆ. ಸದ್ಯ ಈ ಹೋಮ್‌ ಟೂರ್‌ ವಿಡಿಯೋ ಇನ್ಸ್ಟಾಗ್ರಾಮ್‌ ಸೇರಿದಂತೆ ಸೋಶಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+