• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅತುಲ್ಯ ಗಂಗಾ: ಹಿರಿಯ ಯೋಧರಿಂದ ವಿಶಿಷ್ಟ ಸ್ವಚ್ಛತಾ ಯೋಜನೆ

|

ನವದೆಹಲಿ, ನವೆಂಬರ್ 23: ಪವಿತ್ರ ಗಂಗೆಯು ಭಾರತದ ಜೀವನದಿ. ಕೋಟ್ಯಂತರ ಜನರ ಬಾಯಾರಿಕೆ ನೀಗಿಸುವುದರ ಜತೆಗೆ, ಬದುಕಿದ್ದಾಗ ಆಹಾರವನ್ನು ನೀಡುತ್ತದೆ. ಸತ್ತರೆ ನಮ್ಮ ಚಿತಾಭಸ್ಮ ಲೀನವಾಗಿಸಿಕೊಳ್ಳುತ್ತದೆ.

ಒಂದರ್ಥದಲ್ಲಿ ಭಾರತೀಯರ ನರನಾಡಿಯಲ್ಲಿ ಗಂಗೆ ಹರಿಯುತ್ತದೆ. ಆದರೆ ಇಂತಹ ಗಂಗೆ ಈಗ ಮಲಿನದಿಂದ ಕೊರಗುತ್ತಿದೆ. ಆದರೆ ಭಾರತೀಯ ಸೇನೆಯ ಹಿರಿಯರ ತಂಡವೊಂದು ಈಗ ಗಂಗಾ ನದಿಗೆ ಮರು ಜೀವ ನೀಡುವ ಪುಣ್ಯ ಕೆಲಸ ಮಾಡಿದೆ.

ಗಂಗೆಯನ್ನು ಶುದ್ಧಗೊಳಿಸಿ ಹಳೆಯ ವೈಭವಕ್ಕೆ ತರುವುದು ದೊಡ್ಡ ಸಾಹಸ. ಆದರೆ ಸೇನೆಯ ಹಿರಿಯ ಜೀವಗಳು ತಮ್ಮ ಗುರಿಯಲ್ಲಿ ಯಾವುದೇ ಚ್ಯುತಿಯಿಲ್ಲದಂತೆ ಕೆಲಸ ಮಾಡಿದ್ದಾರೆ.

ಗಂಗಾ ನದಿಯ ತಟದಲ್ಲಿ 50 ಕೋಟಿಗೂ ಅಧಿಕ ಜನರಿದ್ದಾರೆ. ಜನರು ಪವಿತ್ರ ಭಾವನೆ ಹೊಂದಿದ್ದರೂ ಮಾಲಿನ್ಯದ ಮೂಲಕ ಪವಿತ್ರತೆ ಹಾಳುಮಾಡಿದ್ದಾರೆ. ಆದರೆ ಅತುಲ್ಯ ಗಂಗಾ ಯೋಜನೆ ಮೂಲಕ ಡಿ15 ರಂದು ಇಲ್ಲಿ ಹೊಸದೊಂದು ಅಧ್ಯಾಯ ಪ್ರಾರಂಭಿಸಲಾಯಿತು.

ಲೆಫ್ಟಿನಂಟ್‌ ಕರ್ನಲ್‌ ಹೆಮ್‌ ಲೊಹುಮಿ, ಗೋಪಾಲ್‌ ಶರ್ಮಾ ಹಾಗೂ ಕರ್ನಲ್‌ ಮನೋಜ್‌ ಕೇಶ್ವರ್‌ ಅವರು ಈ ಅತುಲ್ಯ ಗಂಗಾ ಯೋಜನೆಗೆ ಕೈ ಹಾಕಿದರು. ಪರಿಕ್ರಮ, ಪೊಲ್ಯೂಶನ್‌ ಹಾಗೂ ಪೀಪಲ್‌ ಈ ಮೂರು ಪಿಗಳಲ್ಲಿ ಬದಲಾವಣೆ ತರುವ ಮೂಲಕ ಗಂಗೆಯ ವೈಭವವನ್ನು ಮತ್ತೆ ನೋಡಬಹುದು ಎಂದು ಈ ಮೂವರು ನಿರ್ಧರಿಸಿದರು.

ಈ ಯೋಜನೆಯಲ್ಲಿ ಪರಿಸರ, ಸಾಹಸ, ಸಂಸ್ಕೃತಿ, ಪುರಾಣ ಹಾಗೂ ಇತಿಹಾಸವನ್ನು ಸೇರಿಸಲಾಯಿತು. "ಈ ದೇಶದ ಬೆನ್ನೆಲುವು ಎಂದು ಕರೆಯಲಾಗುವ ಯುವಕರಲ್ಲಿ ಗಂಗೆಯ ಬಗ್ಗೆ ಜಾಗೃತಿ ಮೂಡಿಸುವುದು ನಮ್ಮ ಮೊದಲ ಆದ್ಯತೆಯಾಗಿತ್ತು. ಕಳೆದ 1600 ವರ್ಷಗಳಲ್ಲಿ ಈ ಬಗ್ಗೆ ಯಾರೂ ಗಮನವಹಿಸಿಲ್ಲ.

ಗಂಗಾ ತಟದಲ್ಲಿ ನಿಯಮಗಳನ್ನು ಪಾಲಿಸುವುದು ಕೂಡ ಪ್ರಮುಖ ವಿಚಾರವಾಗಿತ್ತು. ಗಂಗೆಯ 5000 ಕಿ.ಮೀ ಪ್ರಯಾಣವನ್ನು ಯಾರೊಬ್ಬರೂ ಸರಿಯಾಗಿ ಅನ್ವೇಶಿಸಿಲ್ಲ. ಇದನುನ ಜಗತ್ತಿಗೆ ತಿಳಿಸುವುದು ಕೂಡ ಮುಖ್ಯವಾಗಿತ್ತು. ಇದೊಂದು ಸಾಹಸಯಮ ಪ್ರಯಾಣವಾಗಿದೆ ಎಂದು ಕರ್ನಲ್‌ ಮನೋಜ್‌ ಹೇಳುತ್ತಾರೆ.

ಇನ್ನೊಂದೆಡೆ ಮಾಲಿನ್ಯ ಎನ್ನುವುದು ಗಂಗೆಗೆ ದೊಡ್ಡ ಶಾಪವಾಗಿದೆ. ಅದರಲ್ಲೂ ಕೈಗಾರಿಕೆ ಮಾಲಿನ್ಯ ತಡೆ ದೊಡ್ಡ ಸಾಹಸವಾಗಿದೆ. ಈ ಬಗ್ಗೆ ಕ್ಷಿಪ್ರ ನಿಯಂತ್ರಣದ ಅಗತ್ಯವೂ ಇದೆ. ಗಂಗಾ ನದಿಯ ಸುತ್ತಲೆಲ್ಲ ಬೇಜವಾಬ್ದಾರಿ ತಾಂಡವಾಡುತ್ತಿದೆ. "ಕೇಂದ್ರ ಸರ್ಕಾರವು ಗಂಗಾ ಪುನರುಜ್ಜೀವನ ಯೋಜನೆಗೆ ದೊಡ್ಡ ಪ್ರಮಾಣದಲ್ಲಿ ಮಹತ್ವ ನೀಡುತ್ತಿದೆ.

ಹೀಗಾಗಿ ನಾವು ಕೇವಲ ಜಾಗೃತಿ ಮೂಡಿಸಬಹುದು. ಆದರೆ ಕೈಗಾರಿಕೆ ಮಾಲಿನ್ಯ ತಡೆಯು ಸರ್ಕಾರದ ಮೇಲಿನ ದೊಡ್ಡ ಜವಾಬ್ದಾರಿಯಾಗಿದೆ. ಹೀಗಾಗಿ ನದಿ ರಕ್ಷಣೆ ಸಲುವಾಗಿ ಯುವಕರು ಹಾಗೂ ಸಾರ್ವಜಿನಕರಲ್ಲಿ ಜಾಗೃತಿ ಮೂಡಿಸುವ ಕೆಲಸ ನಾವು ಮಾಡುತ್ತಿದ್ದೇವೆ. ಹಾಗೆಯೇ ನಾವು ಮಾಲಿನ್ಯ ಎಲ್ಲಿ ಎಷ್ಟಿದೆ ಎಂದು ಗುರುತಿಸಿ ಕೊಟ್ಟಾಗ ಅದಕ್ಕೆ ಪರಿಹಾರ ಕೊಡುವುದು ಸರ್ಕಾರಗಳ ಕೆಲಸವಾಗಿದೆ ಎಂದು ಕರ್ನಲ್‌ ಮನೋಜ್‌ ಹೇಳುತ್ತಾರೆ.

ಕಳೆದ ಡಿ.15ರಂದು ಅತುಲ್ಯ ಗಂಗಾ ಯೋಜನೆಗೆ ಚಾಲನೆ ನೀಡಲಾಗಿತ್ತು. ಇದು ಜನರ ಆಂದೋಲನವಾಗಿದ್ದು, ಮುಂದಿನ ವರ್ಷ ಆ.10ಕ್ಕೆ ಕೊನೆಗೊಳ್ಳಿದೆ. ಆದರೆ ಈ ಆಂದೋಲನ 2020ರವರೆಗೂ ನಡೆಯಲಿದ್ದು, ಈ ಅವಧಿಯಲ್ಲಿ 5 ಸಾವಿರ ಹಳ್ಳಿ, 45ನಗರಗಳಲ್ಲಿ 220 ದಿನಗಳ ಕಾಲ ಪ್ರಯಾಣ ನಡೆಯಲಿದೆ.

ಈ ಆಂದೋಲನದಲ್ಲಿ 6 ವಾಕರ್‌, 150 ರೀಲೆ ಹಾಗೂ 20 ಸಾವಿರ ಮಿನಿ ವಾಕ್‌ಗಳು ಇರಲಿವೆ. ಜನರು ಕೂಡ ಇದಕ್ಕೆ ಸೇರಿಕೊಳ್ಳಬಹುದಾಗಿದೆ. ಪ್ರತಿ 5.ಕಿಮೀಗೆ ಮಣ್ಣು ಪರೀಕ್ಷೆ, ಅಂತರ್ಜಲ ಪರೀಕ್ಷೆ ಹಾಗೂ ಗಂಗಾ ನದಿಯ ನೀರಿನ ಪರೀಕ್ಷೆ ನಡೆಸಲಾಗುತ್ತದೆ. ಹಾಗೆಯೇ ಇಂತಹ ಸಂದರ್ಭದಲ್ಲಿ ಪಾರಂಪರಿಕ ಸಸ್ಯಗಳನ್ನು ಕೂಡ ಇಲ್ಲಿ ನಡೆಲಾಗುತ್ತದೆ.

ಗಂಗಾ ನದಿ ಶುದ್ಧೀಕರಣ ಹಾಗೂ ಈ ಆಂದೋಲನಕ್ಕೆ ಸಾಕಷ್ಟು ಆಯಾಮವಿದೆ ಎನ್ನುತ್ತಾರೆ ಮನೋಜ್‌. ಅವರ ಪ್ರಕಾರ. ಭೋಜ್ಪುರ ಭಾಗವು ದೇಶದ ಕ್ಯಾನ್ಸರ್‌ ರಾಜಧಾನಿಯಾಗಿದೆ.

ಇದಕ್ಕೆ ಈ ಭಾಗದಲ್ಲಿನ ಗಂಗಾ ನದಿಯಲಿನ ಮಾಲಿನ್ಯ ಕಾರಣ. ಹೀಗಾಗಿ ಕುಡಿಯುವ ನೀರಿನ ಮೂಲಕ ಆರ್ಸೆನಿಕ್‌ ಅಂಶಗಳು ಜನರ ದೇಹ ಸೇರುತ್ತಿವೆ. ಈ ಬಗ್ಗೆ ತುರ್ತು ಗಮನವಹಿಸಬೇಕಿದೆ.

ಒಟ್ಟಾರೆಯಾಗಿ ಈ ಆಂದೋಲನವು ದೇಶದ ಜನತೆ ಹಾಗೂ ಅದರಲ್ಲೂ ವಿಶೇಷವಾಗಿ ಮುಂದಿನ ಪೀಳಿಗೆಗೆ. ಆದರೆ ಇಂದಿನ ಯುವಕರು ಪರಿಸರ ರಕ್ಷಣೆ ಹಾಗೂ ನೀರಿನ ಶುದ್ಧತೆ ಬಗೆ ಇನ್ನಷ್ಟು ಕಾಳಜಿವಹಿಸಬೇಕಿದೆ. ಗಂಗೆಯ ಜತೆಗೆ ಯಮುನಾ ಸೇರಿ ಸಾಕಷ್ಟು ನದಿಯ ಕಥೆ ಹೀಗೆಯೇ ಇದೆ. ಒಂದರ್ಥದಲ್ಲಿ ಟೈಮ್‌ ಬಾಂಬ್‌ ಕಟ್ಟಿಕೊಂಡು ಕೆಲಸ ಮಾಡುತ್ತಿದ್ದೇವೆ.

ತಕ್ಷಣದಲ್ಲಿ ಇದಕ್ಕೆ ಪರಿಹಾರ ಕಂಡುಕೊಳ್ಳದಿದ್ದರೆ ಬಾಂಬ್‌ ಸ್ಫೋಟಿಸಿ ಸಾಕಷ್ಟು ಅನಾಹುತ ಸೃಷ್ಟಿಸಲಿದೆ. ಸೇನೆಯ ಹಿರಿಯ ಜೀವಗಳು ಇಂತಹದೊಂದು ಪುಣ್ಯ ಕಾಯಕಕ್ಕೆ ಮುಂದಾಗಿದ್ದು, ದೇಶದ ಜನ ಕೂಡ ಇಂತಹ ಪವಿತ್ರ ನದಿಗಳ ರಕ್ಷಣೆ ಮೂಲಕ ದೇಶದ ಸಂಸ್ಕೃತಿ ರಕ್ಷಣೆಗೆ ಪಣ ತೊಡಬೇಕಿದೆ.

English summary
The waters of the Ganges quench our thirst, nourish the food we eat and when we die, the river assimilates our ashes. It is not far from the truth to say the Ganga courses through our bloodstreams.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X