ಓವೈಸಿ ಕಣ್ಣು ಬಂಗಾಳದ ಮೇಲೆ: ಬಿಜೆಪಿಗೆ ಲಾಭದ ನಿರೀಕ್ಷೆ
ಇತ್ತೀಚಿನ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಅಚ್ಚರಿಯ ಸಾಧನೆ ಮಾಡಿರುವ ಅಸಾದುದ್ದೀನ್ ಓವೈಸಿ ಅವರ ಆಲ್ ಇಂಡಿಯಾ ಮಜ್ಲಿಸ್-ಇ-ಇಟ್ಟೆಹದ್-ಉಲ್-ಮುಸ್ಲಿಮೀನ್ (ಎಐಎಂಐಎಂ) ಪಕ್ಷವು ಮುಂದಿನ ವರ್ಷ ನಡೆಯಲಿರುವ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಇಳಿಸಲು ಸಿದ್ಧತೆ ನಡೆಸಿದೆ.
ಬಿಹಾರದಲ್ಲಿ ಮುಸ್ಲಿಂ ಬಾಹುಳ್ಯವಿರುವ ಕ್ಷೇತ್ರಗಳಲ್ಲಿ ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದ ಓವೈಸಿ, ಸಿಎಎ ಮತ್ತು ಎನ್ಆರ್ಸಿಯಂತಹ ವಿಚಾರಗಳನ್ನು ಮುಂದಿಟ್ಟುಕೊಂಡು ಪ್ರಚಾರ ನಡೆಸಿದ್ದರು. ಅದರಲ್ಲಿ ಅವರು ಯಶಸ್ವಿಯೂ ಆಗಿದ್ದರು. ಅದೇ ರೀತಿಯ ತಂತ್ರವನ್ನು ಅವರು ಪಶ್ಚಿಮ ಬಂಗಾಳದಲ್ಲಿಯೂ ಅಳವಡಿಸುವ ನಿರೀಕ್ಷೆಯಿದೆ. ಹಾಗೆಯೇ ಓವೈಸಿ ಮುಸ್ಲಿಂ ಮತಗಳನ್ನು ಕಲೆಹಾಕುವುದು ಬಿಜೆಪಿಗೆ ಹಿಂದೂ ಮತಗಳನ್ನು ಪಡೆದುಕೊಳ್ಳುವ ಅನುಕೂಲವನ್ನು ಸಹ ಕಲ್ಪಿಸಿಕೊಡಲಿದೆ.
ಎಐಎಂಐಎಂ ಪಕ್ಷವು ಬಿಜೆಪಿಯ 'ಬಿ ಟೀಮ್' ಎಂಬ ಆರೋಪವಿದೆ. ಇದನ್ನು ಓವೈಸಿ ಮತ್ತು ಬಿಜೆಪಿ ಇಬ್ಬರೂ ಅಲ್ಲಗಳೆದಿದ್ದಾರೆ. ಆದರೂ ಕಠೋರವಾದಿ ಮುಸ್ಲಿಂ ಮುಖಗಳು ಚುನಾವಣೆಯಲ್ಲಿ ಇಳಿಯುವುದು ಪಕ್ಷಕ್ಕೆ ಹಿಂದೂ ಮತಗಳನ್ನು ಸೆಳೆಯಲು ಅನುಕೂಲ ಮಾಡಿಕೊಡಲಿದೆ ಎಂದು ಬಿಜೆಪಿ ನಾಯಕರೇ ಹೇಳುತ್ತಾರೆ. ಮುಂದೆ ಓದಿ.

ಹಿಂದೂ ಮತಗಳಿಗೆ ಅನುಕೂಲ
'ಕಾಂಗ್ರೆಸ್, ಎಡಪಕ್ಷಗಳು ಅಥವಾ ಟಿಎಂಸಿ ಅಭ್ಯರ್ಥಿಗಳು ಮಾಡಲಾಗದ್ದನ್ನು ಎಐಎಂಐಎಂ ಅಭ್ಯರ್ಥಿಗಳು ಮಾಡಬಲ್ಲರು. ಪಕ್ಷ, ಅದರ ಸಿದ್ಧಾಂತ ಮತ್ತು ಅದು ಎತ್ತುವ ವಿಚಾರಗಳು ಹಿಂದೂ ಮತಗಳು ಮತ್ತು ಭಾಗಶಃ ಎನ್ನಲಾಗುವ ಮತಗಳನ್ನು ಸಹ ನಮ್ಮ ಕಡೆ ಸೆಳೆಯಬಲ್ಲವು' ಎಂದು ಪಶ್ಚಿಮ ಬಂಗಾಳದಲ್ಲಿ ಪಕ್ಷದ ಚುನಾವಣಾ ಚಟುವಟಿಕೆಗಳಲ್ಲಿ ತೊಡಗಿರುವ ಬಿಜೆಪಿ ನಾಯಕರೊಬ್ಬರು ತಿಳಿಸಿದ್ದಾರೆ.

ಮುಸ್ಲಿಂ ಮತದಾರರ ಕ್ಷೇತ್ರಗಳು
ಬಿಜೆಪಿ ನಾಯಕರ ಪ್ರಕಾರ 294 ಕ್ಷೇತ್ರಗಳ ಪೈಕಿ ಉತ್ತರ ಮತ್ತು ದಕ್ಷಿಣ ಬಂಗಾಳದಲ್ಲಿನ 75-80 ಕ್ಷೇತ್ರಗಳಲ್ಲಿ ವ್ಯಾಪಕವಾಗಿರುವ ಮುಸ್ಲಿಂ ಮತದಾರರು ಫಲಿತಾಂಶವನ್ನು ನಿರ್ಧರಿಸಬಲ್ಲರು. 2019ರ ಸಂಸತ್ ಚುನಾವಣೆಯ ಬಳಿಕ ಇಲ್ಲಿನ ಆಡಳಿತಾರೂಢ ತೃಣಮೂಲ ಕಾಂಗ್ರೆಸ್‌ಗೆ ಪ್ರಮುಖ ಎದುರಾಳಿಯಾಗಿ ಬಿಜೆಪಿ ಇತ್ತೀಚೆಗೆ ಬೆಳೆದು ನಿಂತಿದೆ. ಬಂಗಾಳವನ್ನು ಪ್ರತಿಷ್ಠೆಯಾಗಿ ಪರಿಗಣಿಸಿರುವ ಬಿಜೆಪಿ ಈಗಾಗಲೇ ತೀವ್ರ ಪ್ರಚಾರ ಆರಂಭಿಸಿದೆ.

ಬಂಗಾಳದಲ್ಲಿ ಮುಸ್ಲಿಂ ಜನಸಂಖ್ಯೆ
ಬಂಗಾಳದ ಜನತೆಯಲ್ಲಿ ಶೇ 27ರಷ್ಟು ಮುಸ್ಲಿಮರಿದ್ದಾರೆ. ಮಾಲ್ಡಾ, ಉತ್ತರ ದಿನಜ್ಪುರ ಮತ್ತು ಮುರ್ಷಿದಾಬಾದ್‌ನಲ್ಲಿ ಶೇ 50ಕ್ಕಿಂತಲೂ ಅಧಿಕ ಮುಸ್ಲಿಂ ಜನಸಂಖ್ಯೆ ಇದೆ. ಇನ್ನು ಬಿರ್ಭುಮ್, ಉತ್ತರ ಮತ್ತು ದಕ್ಷಿಣ 24 ಪರಗಣ, ಹೌರಾ ಮತ್ತು ನಾಡಿಯಾ ಜಿಲ್ಲೆಗಳಲ್ಲಿ ನಾಲ್ಕನೇ ಒಂದರಷ್ಟು ಮುಸ್ಲಿಂ ಜನಸಂಖ್ಯೆ ಇದೆ.
ಇತ್ತೀಚಿನ ಬಿಹಾರ ಚುನಾವಣೆಯಲ್ಲಿ ಎಐಎಂಐಎಂ 20 ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಅವುಗಳಲ್ಲಿ ಬಂಗಾಳದ ಗಡಿಭಾಗದಲ್ಲಿರುವ ಮುಸ್ಲಿಂ ಪ್ರಾಬಲ್ಯದ ಸೀಮಾಂಚಲ ಪ್ರದೇಶದ 14 ಸೀಟುಗಳಿದ್ದವು. ಇದರಲ್ಲಿ ಪಕ್ಷ ಐದು ಸೀಟುಗಳಲ್ಲಿ ಗೆದ್ದಿತ್ತು.

ಓವೈಸಿ ಚುನಾವಣಾ ಲೆಕ್ಕಾಚಾರ
ಪಶ್ಚಿಮ ಬಂಗಾಳದಲ್ಲಿ ಮುಸ್ಲಿಂ ಸಮುದಾಯವನ್ನು ಕಡೆಗಣಿಸಲಾಗಿದೆ. ರಾಜ್ಯದಲ್ಲಿನ ಮುಸ್ಲಿಮರ ಸಾಮಾಜಿಕ ಮತ್ತು ಆರ್ಥಿಕ ಪರಿಸ್ಥಿತಿ ದೇಶದ ಇತರೆ ಭಾಗಗಳಲ್ಲಿರುವ ಮುಸ್ಲಿಮರ ಸ್ಥಿತಿಗಿಂತಲೂ ಹೀನಾಯವಾಗಿದೆ ಎಂದು ಓವೈಸಿ ಇತ್ತೀಚೆಗೆ ಆರೋಪಿಸಿದ್ದರು.
ಮೂಲಗಳ ಪ್ರಕಾರ ಓವೈಸಿ ಬಂಗಾಳ ಚುನಾವಣೆಯಲ್ಲಿ ಅಲ್ಪಸಂಖ್ಯಾತ ಸಮುದಾಯದವರು ಧ್ವನಿ ಎತ್ತಲು ಬಯಸಿರುವ ವಿಚಾರಗಳನ್ನು ಬೇರೆ ದಿಕ್ಕಿಗೆ ಹೊರಳಿಸದ ಯುವ ಮುಸ್ಲಿಂ ಮುಖಗಳನ್ನು ಕಣಕ್ಕಿಳಿಸಲು ಯೋಜನೆ ರೂಪಿಸಿದ್ದಾರೆ. ಬಿಹಾರದಲ್ಲಿ ಪಕ್ಷದ ಅಭ್ಯರ್ಥಿಗಳು ಸಿಎಎ ಮತ್ತು ಎನ್ಆರ್ಸಿಯಂತಹ ವಿಚಾರಗಳನ್ನು ಪ್ರಮುಖವಾಗಿ ಬಿಂಬಿಸಿದ್ದರು. ಆದರೆ ವಿರೋಧಪಕ್ಷಗಳಾದ ಆರ್‌ಜೆಡಿ ಮತ್ತು ಕಾಂಗ್ರೆಸ್ ಸುದೀರ್ಘ ಕಾಲದಿಂದ ಮುಸ್ಲಿಂ ಸಮುದಾಯದ ಬೆಂಬಲ ಪಡೆದಿದ್ದರೂ ಈ ವಿಚಾರಗಳಿಂದ ದೂರವೇ ಇದ್ದವು.

ಹಿಂದೂ ಮತಗಳನ್ನು ಸೆಳೆಯುವ ತಂತ್ರ
ಬಂಗಾಳದಲ್ಲಿ ಬಿಜೆಪಿಯ ಬೆಳವಣಿಗೆ ಮತ್ತು ಮತ ಬ್ಯಾಂಕ್ ರಾಜಕಾರಣ ಅಥವಾ ಓಲೈಕೆ ರಾಜಕೀಯದ ವಿರುದ್ಧ ಪ್ರಚಾರ ನಡೆಸುತ್ತಿದೆ. ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಪಶ್ಚಿಮ ಬಂಗಾಳ ಸರ್ಕಾರ ಘೋಷಿಸಿದ ಕ್ರಮಗಳ ವಿರುದ್ಧ ಪ್ರಚಾರ ನಡೆಸುತ್ತಿರುವುದರಿಂದ ಟಿಎಂಸಿ ತನ್ನ ಅಲ್ಪಸಂಖ್ಯಾತ ಪರ ಹೇಳಿಕೆಗಳನ್ನು ಕಡಿಮೆ ಮಾಡುವಂತೆ ಮಾಡಿದೆ.
'ಈಗ ಟಿಎಂಸಿ ಮತ್ತು ಕಾಂಗ್ರೆಸ್ ಎರಡೂ ಮೃದು ಹಿಂದುತ್ವ ಧೋರಣೆಯನ್ನು ಅಳವಡಿಸಿಕೊಳ್ಳುತ್ತಿವೆ. ಇನ್ನೊಂದಡೆ ಮುಸ್ಲಿಂ ಮತದಾರರು ಮುಖ್ಯವಾಗಿ ಯುವಜನರು ತಮ್ಮ ಪರವಾಗಿ ಧ್ವನಿ ಎತ್ತುವ ಓವೈಸಿ ಅವರೊಂದಿಗೆ ತಮ್ಮ ಬೆಂಬಲ ವ್ಯಕ್ತಪಡಿಸುವ ಸಾಧ್ಯತೆ ಇದೆ. ಇದು ಹಿಂದೂಗಳನ್ನು ಖಂಡಿತವಾಗಿಯೂ ಎಚ್ಚರಿಸುತ್ತದೆ' ಎಂದು ಬಿಜೆಪಿ ಮುಖಂಡರು ಹೇಳಿದ್ದಾರೆ.
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications