Get Updates
Get notified of breaking news, exclusive insights, and must-see stories!

Araga Jnanendra Profile: 45 ವರ್ಷಗಳ ಕಾಲ ಬಿಜೆಪಿಗಾಗಿ ದುಡಿದ ಪಕ್ಷ ನಿಷ್ಠ ಆರಗ ಜ್ಞಾನೇಂದ್ರ ಪರಿಚಯ

1983 ರಲ್ಲಿ ಚುನಾವಣಾ ರಾಜಕೀಯದಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ಆರಗ ಜ್ಞಾನೇಂದ್ರ, ಎರಡು ಸಾವಿರ ಮತಗಳ ಅಂತರದಲ್ಲಿ ಸೋಲು ಕಂಡರು. ಬಳಿಕ 1985, 1989ರಲ್ಲೂ ಸತತ ಸೋಲು ಕಂಡಿದ್ದರು.

ಶಿವಮೊಗ್ಗ, ಮಾರ್ಚ್ 01: ಸುಮಾರು 45 ವರ್ಷಗಳ ಕಾಲ ಪಕ್ಷ ಸಂಘಟನೆ ಮಾಡಿದ, ಪಕ್ಷ ನಿಷ್ಠೆಗೆ ಹೆಸರಾಗಿರುವ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಆರಗ ಜ್ಞಾನೇಂದ್ರ. ಇವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಗೃಹ ಸಚಿವರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಕ್ಷೇತ್ರದ ಬಿಜೆಪಿ ಶಾಸಕ ಆರಗ ಜ್ಞಾನೇಂದ್ರ, ಒಟ್ಟು 9 ಬಾರಿ ಚುನಾವಣೆಗೆ ಸ್ಪರ್ಧಿಸಿದ್ದು, 4 ಬಾರಿ ಗೆಲುವು ಸಾಧಿಸಿದ್ದಾರೆ. 1983ರ ಚುನಾವಣೆಯಲ್ಲಿ ಬಿ. ಎಸ್. ಯಡಿಯೂರಪ್ಪ ಜೊತೆ ಚುನಾವಣೆಗೆ ಸ್ಪರ್ಧೆ ಮಾಡಿದ ಕೆಲವೇ ನಾಯಕರಲ್ಲಿ ಆರಗ ಜ್ಞಾನೇಂದ್ರ ಕೂಡ ಒಬ್ಬರು. ಪಕ್ಷ ನಿಷ್ಠೆ, ಜನಪರ ಹೋರಾಟ, ಸರಳ ಜೀವನ ಶೈಲಿ, ಜನರೊಂದಿಗೆ ಸದಾ ಬೆರೆಯುವ ಗುಣ ಆರಗ ಜ್ಞಾನೇಂದ್ರ ಅವರದ್ದು.

Araga Jnanendra Age, Biography, Education, Family, Net Worth & Political Career Details

ಆರಗ ಜ್ಞಾನೇಂದ್ರ ಅವರು ಪ್ರಸ್ತುತ 2021 ರ ಆಗಸ್ಟ್ 04 ರಿಂದ ಕರ್ನಾಟಕದ ಗುಪ್ತಚರ ವಿಭಾಗವನ್ನು ಹೊರತುಪಡಿಸಿ ಗೃಹ ಇಲಾಖೆಯ ಸಚಿವರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು, 1953 ರಲ್ಲಿ ತೀರ್ಥಹಳ್ಳಿ ತಾಲ್ಲೂಕಿನ ಆರಗ ಗ್ರಾಮದ ಹಿಸಣದಲ್ಲಿ ಜನಿಸಿದರು. ಗ್ರಾಮದಲ್ಲಿಯೇ ತಮ್ಮ ಪ್ರಾಥಮಿಕ ಶಿಕ್ಷಣವನ್ನು ಪಡೆದರು. ಶಿವಮೊಗ್ಗದ ಕಾಲೇಜಿನಲ್ಲಿ ತಮ್ಮ ಬಿ.ಕಾಂ ಪದವಿಯನ್ನು ಪೂರ್ಣಗೊಳಿಸಿದ್ದಾರೆ.

ವಿದ್ಯಾರ್ಥಿಯಾಗಿರುವಾಗಲೇ ರಾಷ್ಟ್ರೀಯ ಸ್ವಯಂ ಸೇವಾ ಸಂಘದ (ಆರ್‌ಎಸ್‌ಎಸ್‌) ಸಂಪರ್ಕಕ್ಕೆ ಬಂದಿದ್ದ ಅವರು, ಶಾಖೆಯ ಮುಖ್ಯ ಶಿಕ್ಷಕನಾಗಿ ಜವಾಬ್ದಾರಿ ನಿಭಾಯಿಸಿದ್ದರು. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಹೋರಾಟದಲ್ಲಿ ಪಾಲ್ಗೊಂಡು ಆರು ತಿಂಗಳ ಸೆರೆವಾಸವನ್ನು ಕೂಡ ಅನುಭವಿಸಿದ್ದಾರೆ. ಇದಾದ ನಂತರ ತಾಲೂಕು ಬೋರ್ಡ್ ಚುನಾವಣೆಗೆ ಸ್ಪರ್ಧಿಸಿದರು ರಾಜಕೀಯ ಜೀವನಕ್ಕೆ ಪದಾರ್ಪಣೆ ಮಾಡಿದರು.

Araga Jnanendra Age, Biography, Education, Family, Net Worth & Political Career Details

1983 ರಲ್ಲಿ ಚುನಾವಣಾ ರಾಜಕೀಯದಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ಆರಗ ಜ್ಞಾನೇಂದ್ರ, ಎರಡು ಸಾವಿರ ಮತಗಳ ಅಂತರದಲ್ಲಿ ಸೋಲು ಕಂಡರು. ಬಳಿಕ 1985, 1989ರಲ್ಲೂ ಆರಗ ಜ್ಞಾನೇಂದ್ರ ಅವರಿಗೆ ಸತತ ಸೋಲು ಬೆಂಬಿಡದಂತೆ ಕಾಡುತ್ತಿತ್ತು. ಈ ನಡುವೆ ಅವರಿಗೆ ಬಿಜೆಪಿಯ ಜಿಲ್ಲಾ ಅಧ್ಯಕ್ಷ ಸ್ಥಾನ ನೀಡಲಾಯಿತು. ಪಕ್ಷ ಸಂಘಟನೆ ಮಾಡುತ್ತ ವಿವಿಧ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸಿದರು.

1994 ರಲ್ಲಿ ಮೊದಲ ಬಾರಿಗೆ ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ವಿಧಾನಸಭೇಗೆ ಪ್ರವೇಶ ಪಡೆದರು. 1994ರ ಚುನಾವಣೆಯಲ್ಲಿ ತೀರ್ಥಹಳ್ಳಿಯಲ್ಲಿ ಡಿ. ಬಿ. ಚಂದ್ರೇಗೌಡರನ್ನು ಸೋಲಿಸಿರು. 1999 ಮತ್ತು 2004 ರಲ್ಲಿ ಶಾಸಕ ಚುನಾವಣೆಯಲ್ಲಿ ಅವರನ್ನು ಮರು ಆಯ್ಕೆಯಾದರು. ತೀರ್ಥಹಳ್ಳಿಯಲ್ಲಿ ಒಮ್ಮೆ ಗೆದ್ದವರು ಮತ್ತೆ ಗೆಲ್ಲುವುದಿಲ್ಲ ಎಂಬುದನ್ನು ಸುಳ್ಳು ಮಾಡಿ ಸತತ ಮೂರು ಬಾರಿ ಗೆದ್ದರು.

Araga Jnanendra Age, Biography, Education, Family, Net Worth & Political Career Details

2009 ಮತ್ತು 2013ರಲ್ಲಿ ಸತತ ಸೋಲು ಕಂಡ ಇವರು, 2018ರ ಚುನಾವಣೆಯಲ್ಲಿ 22,000 ಮತಗಳ ಅಂತರದಿಂದ ಮತ್ತೆ ಗೆಲುವು ತಮ್ಮದಾಗಿಸಿಕೊಂಡರು. 2021 ರಲ್ಲಿ ಅವರು ರಾಜ್ಯ ಸರ್ಕಾರದಲ್ಲಿ ಸಂಪುಟ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು.

ಆರಗ ಜ್ಞಾನೇಂದ್ರ ಅವರು, ಶಿವಮೊಗ್ಗ ಹಾಲು ಒಕ್ಕೂಟದ ನಿರ್ದೇಶಕರಾಗಿ, ಶಿಮುಲ್ ಅಧ್ಯಕ್ಷರಾಗಿಯೂ ಜವಾಬ್ದಾರಿ ನಿಭಾಯಿಸಿದ್ದಾರೆ. ರೈತರ ಬಗ್ಗೆ, ಅಡಕೆ ಬೆಳೆಗಾರರ ಬಗ್ಗೆ ಆರಗ ಜ್ಞಾನೇಂದ್ರರಿಗೆ ಅಪಾರವಾದ ಕಾಳಜಿ, ಜ್ಞಾನವಿದೆ. ಬಿಜೆಪಿ ರೈತ ಮೋರ್ಚಾದ ರಾಜ್ಯಾಧ್ಯಕ್ಷರಾಗಿದ್ದರು. ಅಡಕೆ ಬೆಳೆಗಾರರ ಪರಿವಾಗಿ ಹೋರಾಟಗಳನ್ನು ನಡೆಸಿದರು. ಕೇಂದ್ರ ಸರ್ಕಾರದವರೆಗೆ ರೈತರ ನಿಯೋಗ ಕರೆದುಕೊಂಡು ಹೋಗಿದ್ದ ರಾಜಕಾರಣಿ ಇವರು.

ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸರ್ಕಾರ ರಚನೆ ಮಾಡಿದ ರಾಜ್ಯ ಅಡಕೆ ಬೆಳೆಗಾರರ ಕಾರ್ಯಪಡೆ ಅಧ್ಯಕ್ಷರಾಗಿ ಆರಗ ಜ್ಞಾನೇಂದ್ರ ನೇಮಕವಾಗಿದ್ದರು, ಯಡಿಯೂರಪ್ಪ ಸರ್ಕಾರ ರಾಜ್ಯ ಹೌಸಿಂಗ್ ಬೋರ್ಡ್ ಅಧ್ಯಕ್ಷರಾಗಿಯೂ ಅವರನ್ನು ನೇಮಕ ಮಾಡಲಾಗಿತ್ತು.

ಆರಗ ಜ್ಞಾನೇಂದ್ರ ಅವರ ಪತ್ನಿಯ ಹೆಸರು ಪ್ರಫುಲ್ಲಾ. ಮಗ ಅಭಿನಂದನ್, ಪತ್ನಿ ಶೃತಿ ಅವರೊಂದಿಗೆ ಗುಡ್ಡೇಕೊಪ್ಪದಲ್ಲಿ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಜ್ಞಾನೇಂದ್ರ ಅವರ ಮಗಳು ಅನನ್ಯಾ, ಐಎಫ್ಎಸ್ ಅಧಿಕಾರಿ ಸಮರ್ಥ್ ಎಂಬುವರವ ಜೊತೆಗೆ ವಿವಾಹವಾಗಿ ತಮಿಳುನಾಡಿನ ಮಧುರೈನಲ್ಲಿದ್ದಾರೆ.

*ಆರಗ ಜ್ಞಾನೇಂದ್ರ ಅವರ ಆಸ್ತಿ*

ಆರಗ ಜ್ಞಾನೇಂದ್ರ ಅವರ ಒಟ್ಟು ಆಸ್ತಿ 2.04 ಕೋಟಿ ರೂಪಾಯಿ. ಆಸ್ತಿ 2.15 ಕೋಟಿ ರೂಪಾಯಿ. ಸಾಲ 10.51 ಲಕ್ಷ ರೂಪಾಯಿ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+