ಭಾರತದಲ್ಲಿ ಅತಿಹೆಚ್ಚು ಬೈಕ್‌ಗಳನ್ನು ತಯಾರಿಸುವುದಕ್ಕೆ ಕಾರಣ ಕೊಟ್ಟ ಆನಂದ್ ಮಹೀಂದ್ರಾ

ಉದ್ಯಮಿ ಆನಂದ್ ಮಹೀಂದ್ರಾ ಅವರ ಟ್ವೀಟ್‌ಗಳು ಯಾವಾಗಲೂ ನೋಡುಗರನ್ನು ಸೆಳೆಯುತ್ತವೆ. ಯಾಕೆಂದರೆ ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ತಮ್ಮ ಅನುಯಾಯಿಗಳಿಗೆ ಸಾಕಷ್ಟು ಸ್ಫೂರ್ತಿದಾಯಕ ವಿಡಿಯೋಗಳನ್ನು ಮತ್ತು ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಅವರು ಆಗಾಗ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುವ ಪ್ರೇರಕ ಮತ್ತು ಆಸಕ್ತಿದಾಯಕ ವಿಡಿಯೊಗಳು, ಫೋಟೋಗಳ ಪೋಸ್ಟ್‌ಗಳಿಗೆ ಜನ ಸಾಕಷ್ಟು ಕಾಮೆಂಟ್‌ಗಳನ್ನು ಮಾಡುತ್ತಾರೆ. ಇತ್ತೀಚೆಗೆ ಅವರು ಭಾರತದಲ್ಲಿ ದ್ವಿಚಕ್ರ ವಾಹನಗಳ ಜನಪ್ರಿಯತೆಯ ಬಗ್ಗೆ ಮಾತನಾಡಿದ್ದಾರೆ. ಭಾರತ ದೇಶ ವಿಶ್ವದ ದ್ವಿಚಕ್ರ ವಾಹನಗಳ ಅತಿದೊಡ್ಡ ಉತ್ಪಾದಕತೆಯಲ್ಲಿ ಒಂದಾಗಿದೆ. ಏಕೆ ಎಂದು ಮಹೀಂದ್ರ ಅವರು ಪೋಸ್ಟ್‌ವೊಂದನ್ನು ಹಂಚಿಕೊಳ್ಳುವ ಮೂಲಕ ವಿವರಿಸಿದ್ದಾರೆ. ಈ ಪೋಸ್ಟ್ ಆಸಕ್ತಿದಾಯಕವಾಗಿದ್ದು ಭಾರೀ ವೈರಲ್ ಆಗಿದೆ.

ಆನಂದ್ ಮಹೀಂದ್ರಾ ಅವರು ಪುರುಷ ಮತ್ತು ಮಹಿಳೆ ಮೋಟಾರ್ ಬೈಕ್ ನಲ್ಲಿ ಹೋಗುತ್ತಿರುವ ಫೋಟೋವನ್ನು ಟ್ವೀಟ್ ಮಾಡಿದ್ದಾರೆ. ಈ ಬೈಕ್ ನಲ್ಲಿ ಕೇವಲ ಪುರುಷ ಮತ್ತು ಮಹಿಳೆ ಇರದೆ, ರಾಶಿಗಟ್ಟಲೆ ಕುರ್ಚಿಗಳು ಮತ್ತು ಚಾಪೆಗಳನ್ನು ಹೊತ್ತೊಯ್ಯುತ್ತಿರುವುದಿದೆ. ದ್ವಿಚಕ್ರ ವಾಹನಕ್ಕೆ ಇಷ್ಟು ಸರಕು ತುಂಬುವುದು ಅಸಾಧ್ಯವೆಂದು ತೋರುತ್ತಿದ್ದರೂ, ಈ ಜೋಡಿ ಅದನ್ನು ಸಲೀಸಾಗಿ ಮಾಡುವಂತೆ ತೋರುತ್ತಿದೆ.

ಈ ಪೋಟೋವನ್ನು ಹಂಚಿಕೊಂಡ ಮಹೀಂದ್ರಾ, "ಭಾರತವು ಪ್ರಪಂಚದಲ್ಲಿ ಅತಿ ಹೆಚ್ಚು ದ್ವಿಚಕ್ರ ವಾಹನಗಳನ್ನು ಏಕೆ ತಯಾರಿಸುತ್ತದೆ ಎಂದು ಈಗ ನಿಮಗೆ ತಿಳಿದಿರಬೇಕು. ಪ್ರತಿ ಇಂಚಿನ ಚಕ್ರಕ್ಕೆ ಅತ್ಯಧಿಕ ಪ್ರಮಾಣದ ಸರಕುಗಳನ್ನು ಸಾಗಿಸುವುದು ಹೇಗೆ ಎಂದು ನಮಗೆ ತಿಳಿದಿದೆ" ಎಂದು ಬರೆದಿದ್ದಾರೆ. ಈ ಟ್ವೀಟ್ 49,000 ಕ್ಕೂ ಹೆಚ್ಚು ಲೈಕ್‌ಗಳನ್ನು ಪಡೆದಿದೆ.

Anand Mahindra explains Why India makes most two-wheelers in the world?

ಬಳಕೆದಾರರಲ್ಲಿ ಒಬ್ಬರು ಮಹೀಂದ್ರಾ ಅವರ ಒಳನೋಟಗಳಿಗಾಗಿ ಹೊಗಳಿದ್ದಾರೆ. ಜೊತೆಗೆ ಅವರು "ಇಂತಹ ಅದ್ಭುತ ಮೀಮ್‌ಗಳ ನಿಧಿಗೆ ಹೇಗೆ ಧುಮುಕುವುದು ಎಂದು ನಿಮಗೆ ತಿಳಿದಿದೆ. ಈ ಬೈಕ್ ಯಾವ ಕಂಪನಿ ಮತ್ತು ಯಾವ ಮಾಡೆಲ್ ಹೇಳಿ?"

ಮತ್ತೊಬ್ಬ ಬಳಕೆದಾರರು ಬರೆದಿದ್ದಾರೆ, "ಸರ್, ದಯವಿಟ್ಟು ಈ ಅದ್ಭುತ ಪತಿಗೆ ಹೊಸ ಮಹೀಂದ್ರಾ XUV700 ಅನ್ನು ಉಡುಗೊರೆಯಾಗಿ ನೀಡಿ. ಅವರು ಎಲ್ಲವನ್ನೂ ಸಮತೋಲನಗೊಳಿಸುತ್ತಿರುವ ರೀತಿಯನ್ನು ಯಾವುದಕ್ಕೂ ಹೋಲಿಸಲಾಗುವುದಿಲ್ಲ."

Anand Mahindra explains Why India makes most two-wheelers in the world?

ಕೆಲವು ದಿನಗಳ ಹಿಂದೆ, ಮಹೀಂದ್ರಾ ಅವರು ಮತ್ತೊಂದು ಟ್ವೀಟ್‌ನಲ್ಲಿ ಯುವಕನೊಬ್ಬ ಬೈಸಿಕಲ್ ಸವಾರಿ ಮಾಡುವಾಗ ತನ್ನ ಕೈಗಳಿಂದ ಬಟ್ಟೆಯ ಹೊರೆಯನ್ನು ತಲೆಯ ಮೇಲೆ ಹಿಡಿದು ಹ್ಯಾಂಡಲ್ ಹಿಡಿಯದೇ ಸವಾರಿ ಮಾಡುವ ವಿಡಿಯೋ ಎಲ್ಲರ ಹುಬ್ಬೇರಿಸುವಂತೆ ಮಾಡಿತ್ತು. ವಿಡಿಯೊ ಕುರಿತು ಪ್ರತಿಕ್ರಿಯಿಸಿದ ಮಹೀಂದ್ರಾ, ಆ ವ್ಯಕ್ತಿಯನ್ನು "ಮಾನವ ಸೆಗ್ವೇ, ಅವನ ದೇಹದಲ್ಲಿ ಗೈರೊಸ್ಕೋಪ್ ಅನ್ನು ನಿರ್ಮಿಸಲಾಗಿದೆ" ಅಸಾಧಾರಣ ಜಿಮ್ನಾಸ್ಟ್‌ಗಳು ಅಥವಾ ಅಥ್ಲೀಟ್‌ಗಳಾಗುವ ಸಾಮರ್ಥ್ಯವನ್ನು ಹೊಂದಿರುವ ದೇಶದಲ್ಲಿ ಅವರಂತಹ ಇನ್ನೂ ಅನೇಕರು ಇದ್ದಾರೆ. ಆದರೆ ಅವರನ್ನು ಗುರುತಿಸಲ್ಪಡಲಾಗುತ್ತಿಲ್ಲ ಎಂದು ಅವರು ಹೇಳಿದರು.

ಇದಕ್ಕೂ ಮೊದಲು ಮಾರ್ಚ್‌ನಲ್ಲಿ ನೋಯ್ಡಾದಲ್ಲಿ 19 ವರ್ಷದ ಹದಿಹರೆಯದ ಯುವಕನ ವಿಡಿಯೊಗೆ ಮಹೀಂದ್ರಾ ಪ್ರತಿಕ್ರಿಯಿಸಿದ್ದರು, ಮಧ್ಯರಾತ್ರಿಯಲ್ಲಿ ಕೆಲಸದಿಂದ ಮನೆಗೆ ಹೋಗುತ್ತಿದ್ದ ಹುಡುಗ ಕಾರಿನಲ್ಲಿ ಸವಾರಿ ಮಾಡಲು ನಿರಾಕರಿಸಿದ್ದ. ಜೊತೆಗೆ ಆ ಹುಡುಗ ಸೇನೆ ಸೇರುವ ಆಸೆಯಿಂದ ಕೆಲಸದಿಂದ ಮನೆಗೆ ಓಡಿಕೊಂಡು ಮದ್ಯರಾತ್ರಿ ಓಡುವ ವಿಡಿಯೋ ವೈರಲ್ ಆಗಿತ್ತು. ಈ ಟ್ವೀಟ್ ಗೆ "ನಿಜಕ್ಕೂ ಸ್ಪೂರ್ತಿದಾಯಕ" ಎಂದು ಮಹೀಂದ್ರಾ ಹೇಳಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+