ರಾಕೆಟ್ ಇಂಜಿನ್‌ನಲ್ಲಿ ತಾಂತ್ರಿಕ ದೋಷ: ಆರ್ಟೆಮಿಸ್-1 ರಾಕೆಟ್ ಉಡಾವಣೆ ರದ್ದುಗೊಳಿಸಿದ ನಾಸಾ

ನಾಸಾದ ಆರ್ಟೆಮಿಸ್ 1 ಮೂನ್ ರಾಕೆಟ್‌ ಉಡಾವಣೆಯನ್ನು ನಾಸಾ ರದ್ದುಗೊಳಿಸಿದೆ. ನಾಲ್ಕು RS-25 ಎಂಜಿನ್‌ಗಳಲ್ಲಿ ಒಂದರಲ್ಲಿ ತಾಪಮಾನದ ಸಮಸ್ಯೆ ಇದ್ದ ಕಾರಣ, ಬಾಹ್ಯಾಕಾಶ ಸಂಸ್ಥೆ ಪರೀಕ್ಷಾ ಹಾರಾಟವನ್ನು ರದ್ದುಗೊಳಿಸಲು ನಿರ್ಧರಿಸಿತು.

ಸೆಪ್ಟೆಂಬರ್ 2 ಮತ್ತು ಸೆಪ್ಟೆಂಬರ್ 5 ಆರ್ಟೆಮಿಸ್ 1 ಮಿಷನ್‌ಗೆ ಪರ್ಯಾಯ ಉಡಾವಣಾ ದಿನಾಂಕಗಳಾಗಿವೆ. ಇದು ಚಂದ್ರನ ಸುತ್ತ ಮಾನವರಹಿತ ಪ್ರವಾಸವಾಗಿದೆ. ಹೆಚ್ಚುವರಿಯಾಗಿ, ಇಂಧನ ಸೋರಿಕೆಯಿಂದಾಗಿ ಉಡಾವಣೆಯನ್ನು ಅನಿವಾರ್ಯವಾಗಿ ನಾಸಾ ರದ್ದುಗೊಳಿಸಿದೆ ಎಂದು ವರದಿಗಳು ತಿಳಿಸಿವೆ.

ಚಂದ್ರನ ಕಕ್ಷೆಗೆ ಕ್ಯಾಪ್ಸೂಲ್ ಅನ್ನು ಉಡಾವಣೆ ಮಾಡುವ ಕಾರ್ಯಾಚರಣೆಯನ್ನು ಬಾಹ್ಯಾಕಾಶ ಉಡಾವಣಾ ವ್ಯವಸ್ಥೆಯ ರಾಕೆಟ್‌ನ ಮೊದಲ ಹಾರಾಟವು ನಡೆಸಬೇಕಿತ್ತು, ಇದು ಸೋಮವಾರ ಬೆಳಿಗ್ಗೆ ಮೂರು ಪರೀಕ್ಷಾ ಡಮ್ಮಿಗಳೊಂದಿಗೆ ಉಡಾವಣೆ ಮಾಡಲು ನಿರ್ಧರಿಸಲಾಗಿತ್ತು.

2025 ರಲ್ಲಿ ಜನರನ್ನು ಚಂದ್ರನ ಮೇಲೆ ಇರಿಸಲು ಮತ್ತು 2024 ರಲ್ಲಿ ನಾಲ್ಕು ಗಗನಯಾತ್ರಿಗಳನ್ನು ಚಂದ್ರನ ಮೇಲೆ ನಿಯೋಜಿಸುವುದು ಈ ಆರ್ಟೆಮಿಸ್ I ಬಾಹ್ಯಾಕಾಶದ ಕಾರ್ಯಾಚರಣೆಯ ಹಿಂದಿನ ಮುಖ್ಯ ಉದ್ದೇಶವಾಗಿದೆ. ಆರ್ಟೆಮಿಸ್ ಮಿಷನ್‌ನ್ನು ಮಂಗಳ ಗ್ರಹಕ್ಕೆ ಗಗನಯಾತ್ರಿಗಳನ್ನು ಕಳುಹಿಸುವ ಮೊದಲ ಮೆಟ್ಟಿಲು ಎಂದೇ ಹೇಳಲಾಗುತ್ತದೆ.

 ಚಂದ್ರನಲ್ಲಿ ಮಿನಿ ಸ್ಪೇಸ್ ಸ್ಟೇಷನ್ ನಿರ್ಮಾಣ

ಚಂದ್ರನಲ್ಲಿ ಮಿನಿ ಸ್ಪೇಸ್ ಸ್ಟೇಷನ್ ನಿರ್ಮಾಣ

ಫ್ಲೋರಿಡಾದ ಕೇಪ್ ಕ್ಯಾನವೆರಲ್‌ನಲ್ಲಿರುವ ಕೆನಡಿ ಬಾಹ್ಯಾಕಾಶ ಕೇಂದ್ರದಲ್ಲಿ ಲಾಂಚ್ ಪ್ಯಾಡ್ ಕಾಂಪ್ಲೆಕ್ಸ್ 39ಬಿ ಯಿಂದ ಆರ್ಟೆಮಿಸ್ 1 ಮಿಷನ್ ನಭಕ್ಕೆ ಜಿಗಿಯಲು ಸಿದ್ಧವಾಗಿತ್ತು. ಆದರೆ ತಾಂತ್ರಿಕ ತೊಂದರೆಯಿಂದ ಸದ್ಯ ಉಡಾವಣಾ ದಿನಾಂಕ ಮುಂದೂಡಲಾಗಿದೆ. ಆರ್ಟೆಮಿಸ್ 1 ಚಂದ್ರನ ದೂರದ ಬದಿಯಿಂದ ಮತ್ತು ಹಿಂದಕ್ಕೆ 42 ದಿನಗಳ ಪ್ರಯಾಣವನ್ನು ನಡೆಸಲಿದೆ.

2024ರಲ್ಲಿ ಚಂದ್ರನ ಮೇಲ್ಮೈಗೆ ಇಳಿಯುವ ಮೊದಲು ಅದರ ಸುತ್ತ ಸುತ್ತುವ ಮಿನಿ-ಸ್ಪೇಸ್ ಸ್ಟೇಷನ್‌ನ್ನು ಸ್ಥಾಪಿಸಲು ನಾಸಾದ ಆರ್ಟೆಮಿಸ್ ಪ್ರೋಗ್ರಾಂನಲ್ಲಿ ಗ್ರಾಫಿಕ್ ಮಾಡಲಾಗಿದೆ. ಕ್ಯಾಪ್ಸುಲ್ ಚಂದ್ರನ ಆಚೆಗೆ 40,000 ಮೈಲುಗಳಷ್ಟು ದೂರದ ರೆಟ್ರೋಗ್ರೇಡ್ ಆರ್ಬಿಟ್ (DRO)ಗೆ ಹೋಗಲು ಅದರ ಎಂಜಿನ್‌ಗಳನ್ನು ಬಳಸಿಕೊಳ್ಳುತ್ತದೆ.

 2024ರಲ್ಲಿ ಚಂದ್ರನಲ್ಲಿಗೆ ಮಾನವ ಪ್ರಯಾಣ

2024ರಲ್ಲಿ ಚಂದ್ರನಲ್ಲಿಗೆ ಮಾನವ ಪ್ರಯಾಣ

ಆರ್ಟೆಮಿಸ್-I ನಲ್ಲಿ ಯಾವುದೇ ಸಿಬ್ಬಂದಿ ಇರುವುದಿಲ್ಲ. ಇದು ಚಂದ್ರನ ಬಳಿ ಹೋಗುತ್ತದೆ ನಂತರ ಭೂಮಿಗೆ ಹಿಂತಿರುಗುತ್ತದೆ. ಆರ್ಟೆಮಿಸ್ ಮೂಲಕ ನಾಸಾದ 2025ರ ವೇಳೆಗೆ ಮತ್ತೊಮ್ಮೆ ಚಂದ್ರನಿಗೆ ಮಾನವರನ್ನು ಕಳುಹಿಸುವ ಗುರಿಯನ್ನು ಹೊಂದಿದೆ. ಈ ಮಿಷನ್ ಆರ್ಟೆಮಿಸ್ ಪ್ರೋಗ್ರಾಂನಲ್ಲಿ ಮೊದಲ ಹೆಜ್ಜೆಯಾಗಿದೆ.

2024ರಲ್ಲಿ ಚಂದ್ರನ ಮೇಲೆ ಗಗನಯಾತ್ರಿಗಳನ್ನು ಇಳಿಸುವ ಗುರಿ ಹೊಂದಲಾಗಿದ್ದು, ಇದರಲ್ಲಿ ಓರ್ವ ಮಹಿಳೆ ಕೂಡ ಸೇರಿರುತ್ತಾರೆ. ಒಂದು ವೇಳೆ ನಾಸಾ ಯಶಸ್ವಿಯಾಗಿ ಚಂದ್ರನ ಮೇಲೆ ಗಗನಯಾತ್ರಿಗಳನ್ನು ಇಳಿಸಿದ್ದೇ ಆದಲ್ಲಿ ಚಂದ್ರನ ಮೇಲೆ ಕಾಲಿಟ್ಟ ಮೊದಲ ಮಹಿಳೆ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.

 ಚಂದ್ರನ ಸುತ್ತ ಸಂಶೋಧನೆ ನಡೆಸಲಿರುವ ಆರ್ಟೆಮಿಸ್-I

ಚಂದ್ರನ ಸುತ್ತ ಸಂಶೋಧನೆ ನಡೆಸಲಿರುವ ಆರ್ಟೆಮಿಸ್-I

ಭವಿಷ್ಯದ ಯೋಜನೆಯನ್ನು ಸಕಾರಗೊಳಿಸಲು ನಾಸಾ ಆರ್ಟೆಮಿಸ್-I ಮಿಷನ್ ಸಾಕಷ್ಟು ಚಂದ್ರಯಾನಕ್ಕೆ ಹಾಗೂ ತಂತ್ರಜ್ಞಾನವನ್ನು ಸುಧಾರಿಸಲು ಸಹಾಯವಾಗಲಿದೆ. ಮಾನವರಹಿತವಾಗಿ ಚಂದ್ರಯಾನ ಕೈಗೊಳ್ಳಲಿರುವ ಆರ್ಟೆಮಿಸ್-I ಚಂದ್ರನ ಸುತ್ತಲು ಹೊಸ ಸಂಶೋಧನೆಗಳನ್ನು ನಡೆಸಲಿದೆ.

ಆರ್ಟೆಮಿಸ್ I ಮಿಷನ್ ನಾಸಾ ಮತ್ತು ಇತರ ಬಾಹ್ಯಾಕಾಶ ಸಂಶೋಧಕರಿಗೆ ಸುಧಾರಿತ ಉಪಕರಣಗಳು ಮತ್ತು ತಂತ್ರಜ್ಞಾನಗಳನ್ನು ಬಳಸಿಕೊಂಡು ಚಂದ್ರನ ಕುರಿತಂತೆ ಹಗಚ್ಚಿನ ಸಂಶೋಧನೆ ನಡೆಸಲು ಅನ್ವೇಷಣೆ ನಡೆಸುತ್ತದೆ

 42 ದಿನಗಳ ಅಧ್ಯಯನದ ನಂತರ ವಾಪಸ್

42 ದಿನಗಳ ಅಧ್ಯಯನದ ನಂತರ ವಾಪಸ್

ಆರ್ಟೆಮಿಸ್-I ಉಡಾವಣೆಯಾದ ನಂತರ ಒಟ್ಟು 42 ದಿನಗಳ ಕಾಲ ಕಾರ್ಯಾಚರಣೆ ನಡೆಸಲಿದೆ. 42 ದಿನಗಳ ಬಳಿಕ ಭೂಮಿಗೆ ವಾಪಸ್ ಬರಲಿದೆ. ಮೊದಲೇ ಪ್ರಯತ್ನದಲ್ಲಿ ತಾಂತ್ರಿಕ ದೋಷ ಕಂಡು ಬಂದಿರುವುದರಿಂದ ಸೆಪ್ಟೆಂಬರ್ 2ರಂದು 12:48ರ ಮಧ್ಯಾಹ್ನದ ಸಮಯಕ್ಕೆ ಎರಡನೇ ಉಡಾವಣಾ ಸಮಯ ಎಂದು ನಿಗದಿಪಡಿಸಲಾಗಿದೆ. ಸೆಪ್ಟೆಂಬರ್ 2ರಂದು ಯಶಸ್ವಿಯಾಗಿ ಉಡಾವಣೆಯಾದರೆ ಅಕ್ಟೋಬರ್ 11ರಂದು ಭೂಮಿಗೆ ಹಿಂತಿರುಗುತ್ತದೆ.

ಒಂದು ವೇಳೆ ಸೆಪ್ಟೆಂಬರ್ 2ರಂದು ಕೂಡ ತೊಂದರೆ ಎದುರಾದರೆ, ಸೆಪ್ಟೆಂಬರ್ 5ರಂದು ಅಮೆರಿಕ ಸ್ಥಳೀಯ ಕಾಲಮಾನ 5:12 ಕ್ಕೆ ಉಡಾವಣೆ ಮಾಡಲು ನಾಸಾ ನಿರ್ಧರಿಸಿದೆ. ಅಕ್ಟೋಬರ್ 17ರಂದು ಹಿಂತಿರುಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+