• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶ್ವಸೃಷ್ಟಿ, ನಕ್ಷತ್ರಗಳ ಹುಟ್ಟು ಸಾವು, ಬ್ರಹ್ಮಾಂಡ ತೋರಿಸುವ James Webb ಟೆಲಿಸ್ಕೋಪ್

|
Google Oneindia Kannada News

ವಿಶ್ವಸೃಷ್ಟಿಯ ಆರಂಭಿಕ ದಿನಗಳಲ್ಲಿ ನಕ್ಷತ್ರಗಳು, ನಕ್ಷತ್ರ ಮಂಡಲಗಳ ಹುಟ್ಟು. ಅವುಗಳ ಅಂತ್ಯ ಹೇಗೆ ಆಯಿತು ಎಂಬುದನ್ನು ತಿಳಿದುಕೊಳ್ಳಲು ಬೇಕಾದ ಟೆಲಿಸ್ಕೋಪ್ ಸಿಕ್ಕಿದೆ. ನೆಕ್ಸ್ಟ್ ಜನೆರೇಷನ್ ಸ್ಪೇಸ್ ಟೆಲಿಸ್ಕೋಪ್ ಎಂದೆ ಕರೆಯಲ್ಪಡುವ James Webb ಟೆಲಿಸ್ಕೋಪ್ ಹೊಸ ಚಿತ್ರಗಳನ್ನು ಅನಾವರಣಗೊಳಿಸುತ್ತಿದ್ದು, ಹೊಸ ಹಾದಿಯನ್ನು ತೋರಿಸಿದೆ.

2007ರಲ್ಲಿ ಜೇಮ್ಸ್ ವೆಬ್ ನಿರ್ಮಾಣ, ಉಡಾವಣೆ ಬಗ್ಗೆ ಮಾತುಕತೆ ಆರಂಭವಾದಾಗ ವಿರೋಧಿಸಿದವರೇ ಹೆಚ್ಚು, ಆದರೆ, ಈ ಪ್ರಯೋಗಕ್ಕೆ ಸಿದ್ಧತೆ ನಡೆದಿತ್ತು. ಆದ್ರೆ ಇದು ಸಾಧ್ಯನಾ ಎಂದು ತುಂಬಾ ಮಂದಿ ಅನುಮಾನಿಸಿದ್ದರು. ಇದರ ನಿರ್ಮಾಣಕ್ಕೆ ಆರಂಭದಲ್ಲಿ 50 ಕೋಟಿ ಡಾಲರ್ ಆಗಬಹುದು ಎಂದು ಅಂದಾಜಿಸಲಾಗಿತ್ತು. ಆದರೆ ನಿರ್ಮಾಣ ವೆಚ್ಚ 730 ಕೋಟಿ ರೂ. ಮೀರಿತು.

ಬಿಗ್‌ ಬ್ಯಾಂಗ್‌ ನಂತರದ ಗ್ಯಾಲಕ್ಸಿಯ ಮೊದಲ ಚಿತ್ರ ಬಿಡುಗಡೆಗೊಳಿಸಿದ ನಾಸಾಬಿಗ್‌ ಬ್ಯಾಂಗ್‌ ನಂತರದ ಗ್ಯಾಲಕ್ಸಿಯ ಮೊದಲ ಚಿತ್ರ ಬಿಡುಗಡೆಗೊಳಿಸಿದ ನಾಸಾ

ಉಡಾವಣೆ ಆದ ನಂತರ ನಿಗದಿತ ಸ್ಥಳ ಸೇರಲು ಒಂದು ತಿಂಗಳು ತೆಗೆದುಕೊಂಡಿತು. ಇದನ್ನು ಭೂಮಿಯಿಂದ 15 ಲಕ್ಷ ಕಿಲೋಮೀಟರ್ ದೂರದಲ್ಲಿರುವ ಲಾಗಾಂಗ್ರೆ ಪಾಯಿಂಟ್ ಎಲ್2 ಬಳಿ ಸ್ಥಿರವಾಗಿಸಲಾಯಿತು. ಇಲ್ಲಿಂದ ವಿಶ್ವ ದರ್ಶನ ನೀಡಲು ಸಹಕಾರಿ ಎಂಬುದನ್ನು ವಿಜ್ಞಾನಿಗಳು ಮನಗಂಡಿದ್ದರು. ಅದರಂತೆ James Webb ಟೆಲಿಸ್ಕೋಪ್ ತನ್ನ ಕಾರ್ಯಾಚರಣೆ ಆರಂಭಿಸಿದ್ದು, ಬ್ರಹ್ಮಾಂಡ ರಹಸ್ಯವನ್ನು ಬಿಚ್ಚಿಡುತ್ತಿದೆ.

ನಕ್ಷತ್ರಪುಂಜಗಳನ್ನು ಪತ್ತೆಹಚ್ಚಲು

ನಕ್ಷತ್ರಪುಂಜಗಳನ್ನು ಪತ್ತೆಹಚ್ಚಲು

ಬ್ರಹ್ಮಾಂಡದಲ್ಲಿ ಆರಂಭದಲ್ಲಿ ಸೃಷ್ಟಿಯಾದ ಕೆಲವು ನಕ್ಷತ್ರಪುಂಜಗಳನ್ನು ಪತ್ತೆಹಚ್ಚಲು ಹಾಗೂ ನಮ್ಮ ಕ್ಷೀರಪಥ ಸೇರಿದಂತೆ ವಿವಿಧ ತಾರಾಪುಂಜಗಳು ಸೃಷ್ಟಿಯಾಗಿದ್ದು, ಹೇಗೆ ಎಂಬುದನ್ನು ಅರ್ಥಮಾಡಿಕೊಳ್ಳಲೂ ಖಗೋಳವಿಜ್ಞಾನಿಗಳಿಗೆ ಈ ಪ್ರಬಲ ಟೆಲಿಸ್ಕೋಪ್ ನೆರವಾಗುತ್ತಿದೆ.

ಹಬಲ್ ಟೆಲಿಸ್ಕೋಪ್‍ಗಿಂತಲೂ ಶಕ್ತಿಶಾಲಿಯಾಗಿದೆ

ಹಬಲ್ ಟೆಲಿಸ್ಕೋಪ್‍ಗಿಂತಲೂ ಶಕ್ತಿಶಾಲಿಯಾಗಿದೆ

ಅಮೆರಿಕದ ನಾಸಾ, ಯುರೋಪ್, ಕೆನಡಾ ಬಾಹ್ಯಾಕಾಶ ಸಂಸ್ಥೆಗಳು ಜಂಟಿಯಾಗಿ ರೂಪಿಸಿದ್ದು, ಇದು ಹಬಲ್ ಟೆಲಿಸ್ಕೋಪ್‍ಗಿಂತಲೂ ಶಕ್ತಿಶಾಲಿಯಾಗಿದೆ. ಜೇಮ್ಸ್ ವೆಬ್ ಸ್ಪೇಸ್ ಟೆಲಿಸ್ಕೋಪ್‍ಗೆ ಇನ್‍ಫ್ರಾರೆಡ್ ವಿಷನ್ ಮೂಲಕ 1350 ವರ್ಷಗಳ ಹಿಂದಕ್ಕೆ ಹೋಗಿ ಅಲ್ಲೇನು ನಡೆದಿದೆ ಎಂಬುದನ್ನು ತಿಳಿಸುವ ಅದ್ಭುತ ಸಾಮರ್ಥ್ಯ ಇರುವುದು ವಿಶೇಷ.

ಜೇಮ್ಸ್ ವೆಬ್‌ನ ಮೂಲ ದರ್ಪಣವು ಚಿನ್ನ ಲೇಪಿತವಾಗಿದ್ದು, 6.5 ಮೀಟರ್ ವ್ಯಾಸವನ್ನು ಹೊಂದಿದೆ. ಹಬಲ್ ಸೂರದರ್ಶಕದಲ್ಲಿ ಇದು 2.4 ಮೀ. ಆಗಿದೆ. ಜೇಮ್ಸ್ ವೆಬ್‌ ದೂರದರ್ಶಕದ ಅವರೋಹಿತ ಪರಿವೀಕ್ಷಣಾ ಸಾಮರ್ಥ್ಯದಿಂದಾಗಿ, ದೂರದ ತಾರಾಪುಂಜಗಳಲ್ಲಿರುವ ನಕ್ಷತ್ರಗಳನ್ನು ಅತ್ಯಂತ ಸೂಕ್ಷ್ಮವಾಗಿ ಅವಲೋಕಿಸಲು ಸಾಧ್ಯವಾಗಲಿದೆ.
13 ಶತಕೋಟಿ ವರ್ಷಗಳಿಗಿಂತ ಹೆಚ್ಚು ಕಾಲ ಹಿಂತಿರುಗಿ ನೋಡುತ್ತಿದ್ದೇವೆ

13 ಶತಕೋಟಿ ವರ್ಷಗಳಿಗಿಂತ ಹೆಚ್ಚು ಕಾಲ ಹಿಂತಿರುಗಿ ನೋಡುತ್ತಿದ್ದೇವೆ

ನಾವು 13 ಶತಕೋಟಿ ವರ್ಷಗಳಿಗಿಂತ ಹೆಚ್ಚು ಕಾಲ ಹಿಂತಿರುಗಿ ನೋಡುತ್ತಿದ್ದೇವೆ. ಈ ಚಿಕ್ಕ ಚುಕ್ಕೆಗಳಲ್ಲಿ ಒಂದರ ಮೇಲೆ ನೀವು ನೋಡುತ್ತಿರುವ ಬೆಳಕು 13 ಶತಕೋಟಿ ವರ್ಷಗಳಿಂದ ಪ್ರಯಾಣಿಸುತ್ತಿದೆ. ಇದು ಬಿಗ್ ಬ್ಯಾಂಗ್‌ಗಿಂತ ಕೇವಲ 800 ಮಿಲಿಯನ್ ವರ್ಷಗಳಷ್ಟು ಕಿರಿಯವಾಗಿದೆ. ಇದು ತಿಳಿದಿರುವ ಬ್ರಹ್ಮಾಂಡದ ವಿಸ್ತರಣೆಯನ್ನು ಚಲನೆಯಲ್ಲಿ ಹೊಂದಿಸುವ ಚಿತ್ರ ಎಂದು ನಾಸಾ ವಕ್ತಾರರು ಹೇಳಿದ್ದಾರೆ.

ಸೂರ್ಯನ ಕಕ್ಷೆಯಲ್ಲಿ ಸುತ್ತಲಿದೆ ಜೇಮ್ಸ್ ವೆಬ್

ಸೂರ್ಯನ ಕಕ್ಷೆಯಲ್ಲಿ ಸುತ್ತಲಿದೆ ಜೇಮ್ಸ್ ವೆಬ್

1990ರಲ್ಲಿ ಉಡಾವಣೆಯಾದ ಹಬಲ್ ದೂರದರ್ಶಕವು ಭೂಮಿಯ ಕಕ್ಷೆಯಲ್ಲಿ ಸುತ್ತುತ್ತಿದ್ದರೆ, ಜೇಮ್ಸ್ ವೆಬ್ ದೂರದರ್ಶಕವು ಭೂಮಿಯಿಂದ ಸುಮಾರು 15 ಲಕ್ಷ ಕಿ.ಮೀ ದೂರದಲ್ಲಿ ಸೂರ್ಯನ ಕಕ್ಷೆಯಲ್ಲಿ ಸುತ್ತಲಿದೆ. ಹೀಗಾಗಿಯೇ ಈ ದೂರದರ್ಶಕದ ಉಡಾವಣೆ ಮತ್ತು ನಿಯೋಜನೆಯು ಅತ್ಯಂತ ಸವಾಲಿನ ಕೆಲಸ ಎನ್ನುತ್ತಾರೆ ವಿಜ್ಞಾನಿಗಳು. ಖಗೋಳ ಲೋಕದಲ್ಲಿ ಮಹಾನ್ ಕ್ರಾಂತಿ ಎನ್ನಬಹುದು. ಅಸಾಧ್ಯ ಎಂದು ಭಾವಿಸಿದ್ದನ್ನು ಸಾಧ್ಯ ಮಾಡುವಲಿ ವಿಜ್ಞಾನಿಗಳು ಯಶಸ್ವಿಯಾಗಿದ್ದಾರೆ. ಕಳೆದ ಮೂರು ದಶಕಗಳಿಂದ ನಡೆಯುತ್ತಿದ್ದ ಪ್ರಯತ್ನ ಸಾಕಾರಗೊಂಡಿದೆ.

ಜೇಮ್ಸ್ ವೆಬ್‌ನ ಮೊದಲ ಐದು ಗುರಿ

ಡಿಸೆಂಬರ್ 25ರ ಕ್ರಿಸ್‌ಮಸ್ ದಿನವೇ ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ತನ್ನ ಮಹತ್ವಾಕಾಂಕ್ಷೆಯ ''ಜೇಮ್ಸ್‌ ವೆಬ್ ಸ್ಪೇಸ್ ಟೆಲಿಸ್ಕೋಪ್'' ಉಡಾವಣೆ ಮಾಡಲಾಗಿತ್ತು. ಸೂರ್ಯನಿಗೆ ವಿರುದ್ಧವಿರುವ ಭಾಗ -233 ಡಿಗ್ರಿ ಸೆಂಟಿಗ್ರೇಡ್ ಇದ್ದು ಅತೀಶೀತಲವಾಗಿರುತ್ತದೆ. 40 ಕಿಲೋಮೀಟರ್ ದೂರದಲ್ಲಿರುವ ಒಂದು ನಾಣ್ಯವನ್ನು ಸ್ಪಷ್ಟವಾಗಿ ತೋರಿಸುವ ಸಾಮರ್ಥ್ಯ ಈ ಉಪಗ್ರಹಕ್ಕಿದೆ. ಜೇಮ್ಸ್ ವೆಬ್‌ನ ಮೊದಲ ಐದು ಗುರಿಗಳನ್ನು ಬಹಿರಂಗಪಡಿಸಿದೆ. ಕ್ಯಾರಿನಾ ನೆಬ್ಯುಲಾ, ಡಬ್ಲ್ಯೂಎಸ್‌ಪಿ -96ಬಿ, ಸದರ್ನ್ ರಿಂಗ್ ನೆಬ್ಯುಲಾ, ಸ್ಟೀಫನ್ಸ್ ಕ್ವಿಂಟೆಟ್ ಮತ್ತು ಎಸ್‌ಎಂಸಿಎಸ್‌ 0723 ಬಗ್ಗೆ ಜೇಮ್ಸ್ ವಿವರ ನೀಡಲಿದೆ.

English summary
All You need to know about NASA's James Webb Space Telescope. The James Webb Space Telescope is an orbiting infrared observatory. It is the world’s most powerful ‘telescope’
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X