Niveditha Jain Death: ನಿವೇದಿತಾ ಜೈನ್ ಸಾವು ಆಕಸ್ಮಿಕವೋ, ಆತ್ಮಹತ್ಯೆಯೋ: ಅವರ ತಾಯಿ ಹೇಳಿದ್ದೇನು?

ಬೆಂಗಳೂರು, ಮೇ. 12 : ಕೆಲವು ಕಲಾವಿದರೆ ಹಾಗೆ.... ಎಷ್ಟು ಸಿನಿಮಾ ಮಾಡಿದ್ದಾರೆ ಎನ್ನುವುದು ಮುಖ್ಯವಾಗುವುದಿಲ್ಲ. ಮಾಡಿರುವ ಕೆಲವೇ ಕೆಲವು ಸಿನಿಮಾಗಳಿಂದ ಜನ ಮಾನಸದಲ್ಲಿ ತಮ್ಮದೆ ಛಾಪು ಮೂಡಿಸಿರುತ್ತಾರೆ. ಅವರು ನಮ್ಮನ್ನು ಅಗಲಿದ ಬಳಿಕವೂ ಅವರ ನೆನಪು ನಮ್ಮನ್ನು ಕಾಡುತ್ತದೆ. ಅಂತಹ ಕಲಾವಿದರ ಪೈಕಿ ಅತಿ ಚಿಕ್ಕ ವಯಸ್ಸಿನಲ್ಲೇ ನಮ್ಮನ್ನು ಅಗಲಿದ ತಾರೆಯರಲ್ಲಿ ನಿವೇದಿತಾ ಜೈನ್ ಕೂಡ ಒಬ್ಬರು.

ಬಣ್ಣದ ಲೋಕದಲ್ಲಿ ಮಿಂಚಲು ಬಂದಿದ್ದ ಅವರು, ನಟಿಸಿದ್ದು ಬೆರಳೆಣಿಕೆ ಸಿನಿಮಾಗಳಲ್ಲಿ ಮಾತ್ರ. 16ನೇ ವಯಸ್ಸಿಗೆ ಸಿನಿಮಾರಂಗಕ್ಕೆ ಕಾಲಿಟ್ಟಿದ್ದ ನಿವೇದಿತಾ ಜೈನ್, ಮೊದಲ ಚಿತ್ರದಲ್ಲಿಯೇ ನಟಿಸಿದ್ದು ರಾಘವೇಂದ್ರ ರಾಜ್‌ಕುಮಾರ್ ಎದುರು 'ಶಿವರಂಜಿನಿ'ಯಲ್ಲಿ. ಬಳಿಕ ನಟ ಶಿವರಾಜ್‌ಕುಮಾರ್ ನಟನೆಯ 'ಶಿವ ಸೈನ್ಯ'ದಲ್ಲಿ ಜೋಡಿಯಾಗಿದ್ದರು. ಎರಡು ಸಿನಿಮಾಗಳೂ ಸೂಪರ್ ಹಿಟ್ ಆಗಿದ್ದವು.

Actress Nivedita Jain death mystery What happended that day

ಚಿಕ್ಕ ವಯಸ್ಸಿನಲ್ಲಿಯೇ ಸಾವಿಗೀಡಾದ ನಟಿ

ನಟಿ ನಿವೇದಿತಾ ಜೈನ್ ಅಭಿನಯಿಸಿದ್ದ ಅಮೃತವರ್ಷಿಣಿ ಸಿನಿಮಾ ಬಳಿಕ ಹಲವು ಸಿನಿಮಾಗಳು ಸೋಲು ಕಂಡಿದ್ದವು. ಇದರ ಜೊತೆಗೆ ಮಾಡೆಲಿಂಗ್ ಪ್ರಪಂಚದಿಂದ ಬಂದಿದ್ದ, ಮಿಸ್ ಬೆಂಗಳೂರು ಆಗಿದ್ದ ನಿವೇದಿತಾ ಮತ್ತೆ ಅದೇ ಕ್ಷೇತ್ರದ ಕಡೆಗೆ ಹೊರಟಿದ್ದರು. ಮಿಸ್ ಇಂಡಿಯಾ ಕಿರೀಟದ ಮೇಲೆ ಕಣ್ಣಿಟ್ಟಿದ್ದ ಅವರು, ಅದಕ್ಕೆ ತಯಾರಿ ನಡೆಸುವಾಗಲೇ ಸಾವಿನ ಮನೆಯ ಕದ ತಟ್ಟಿದ್ದರು. ಆದರೆ, ಅವರ ಸಾವಿನ ಬಗ್ಗೆ ಹಲವು ಊಹಾಪೋಹಗಳು ಸುತ್ತುಕೊಂಡಿದ್ದವು. ಅದು ಆತ್ಮಹತ್ಯೆಯೋ... ಆಕಸ್ಮಿಕ ಸಾವೋ ಎಂಬ ಚರ್ಚೆ ಇಂದಿನವರೆಗೂ ನಡೆಯುತ್ತಲೇ ಇದೆ.

1998ರಲ್ಲಿ ಮೃತಪಟ್ಟ ನಿವೇದಿತಾ ಜೈನ್ ಅವರ ಸಾವಿನ ಚರ್ಚೆ ಇಂದಿಗೂ ಮುಗಿದಿಲ್ಲ. ಬಗೆ ಬಗೆಯ ಕಥೆಗಳು ಹುಟ್ಟಿಕೊಳ್ಳುತ್ತಲೇ ಇವೆ. ಈ ಬಗ್ಗೆ ಅವರ ತಾಯಿಯೇ ಖುದ್ದಾಗಿ ಮಾಹಿತಿ ನೀಡಿದ್ದಾರೆ. ಬಹಳ ದಿನಗಳ ಬಳಿಕ ನಿವೇದಿತಾ ಜೈನ್ ತಾಯಿ ಪ್ರಿಯಾ ಜೈನ್ ನಿರ್ದೇಶಕ ರಘುರಾಮ್ ಯೂಟ್ಯೂಬ್ ಚಾನಲ್‌ನಲ್ಲಿ ಆ ದಿನ ಏನಾಯಿತು ಎನ್ನುವುದರ ಮಾಹಿತಿ ನೀಡಿದ್ದಾರೆ.

ಕಾಲು ಸ್ಲಿಪ್ ಆಗಿ ಮೇಲಿನಿಂದ ಬಿದ್ದಿದ್ದಳು

ಕೇವಲ 19 ವರ್ಷಕ್ಕೆ 12ಕ್ಕೂ ಹೆಚ್ಚು ಸಿನೆಮಾಗಳಲ್ಲಿ ನಟಿಸಿದ್ದರು ನಟಿ ನಿವೇದಿತಾ ಜೈನ್. ಮಿಸ್ ಇಂಡಿಯಾ ಸ್ಪರ್ಧೆಗಾಗಿ ಕ್ಯಾಟ್‌ವಾಕ್ ಅಭ್ಯಾಸ ಮಾಡುವಾಗ 1998ರ ಮೇ 17ರಂದು 35 ಅಡಿ ಎತ್ತರದ ಎರಡು ಅಂತಸ್ತಿನ ಮನೆಯ ಟೆರೇಸ್‌ನಿಂದ ಬಿದ್ದ ನಿವೇದಿತಾ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕೋಮಾದಲ್ಲಿದ್ದ ಅವರು 24 ದಿನಗಳ ಕಾಲ ಸಾವು ಬದುಕಿನೊಂದಿಗೆ ಹೋರಾಡುತ್ತಾರೆ. ಕೊನೆಗೆ 1998, ಜೂನ್ 10ರಂದು, ತನ್ನ 19ನೇ ವರ್ಷದ ಹುಟ್ಟುಹಬ್ಬದ ಮರುದಿನವೇ ಇಹಲೋಕ ತ್ಯಜಿಸುತ್ತಾರೆ.

Actress Nivedita Jain death mystery What happended that day

ಈ ಎಲ್ಲಾ ಘಟನೆಗಳನ್ನು ಮತ್ತೆ ನೆನಪಿಸಿಕೊಂಡಿರುವ ಅವರ ತಾಯಿ ಪ್ರಿಯಾ ಜೈನ್ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತಾಡಿದ್ದಾರೆ. "ಅವತ್ತು ಮನೆ ಕೆಲಸದವರು, ನಾನು, ನಮ್ಮ ಮನೆಯವರು ನಾವೆಲ್ಲರೂ ಮನೆಯಲ್ಲಿದ್ದೆವು. ನಿವೇದಿತಾ ಮಿಸ್ ಇಂಡಿಯಾ ಸವಮದರ್ಯ ಸ್ಪರ್ಧೆಗೆ ಸಿದ್ಧತೆ ನಡೆಸುತ್ತಿದ್ದಳು. ಯಾರು ನೋಡಬಾರದು ಎಂದು ಟೆರೆಸ್ ಮೇಲೆ ಕ್ಯಾಟ್‌ವಾಕ್ ಪ್ರಾಕ್ಟಿಸ್ ಮಾಡುತ್ತಿದ್ದಳು. ಮನೆ ಸುತ್ತ ಗ್ರಿಲ್ ಹಾಕಲಾಗಿತ್ತು. ಆದರೆ, ಆಕೆಯ ಎತ್ತರ 5.8 ಅಡಿ. ಜೊತೆಗೆ ಹೈ ಹೀಲ್ಡ್ ಚಪ್ಪಲಿ ಕೂಡ ಹಾಕಿದ್ದಳು. ಹೀಗಾಗಿ ಕಾಲು ಸ್ಲಿಪ್ ಆಗಿ ಬಿದ್ದು ಬಿಟ್ಟಿದ್ದಳು" ಎಂದಿದ್ದಾರೆ.

"ನಾನು ಅಡಿಗೆ ಮನೆಯಿಂದ ಓಡಿ ಹೋಗಿ ನೋಡಿ ಯಜಮಾನರನ್ನು ಕೂಗಿದೆ. ತಕ್ಷಣ ನಮ್ಮ ಮನೆಯಿಂದ ಕಾರಿನಲ್ಲಿ ಗಾಯತ್ರಿ ಆಸ್ಪತ್ರೆಗೆ ಕರೆದುಕೊಂಡು ಹೋದೆವು. ಅಲ್ಲಿಂದ ಮಲ್ಯ ಆಸ್ಪತ್ರೆಗೆ ಶಿಫ್ಟ್ ಮಾಡಿದರು. ಆಕೆಗೆ ಪ್ರಜ್ಞೆ ಇರಲಿಲ್ಲ. ಏದುಸಿರು ಬಿಡುತ್ತಿದ್ದಳು. ರಕ್ತ ಹರಿಯುತಿತ್ತು. ಇದೆ ಸತ್ಯ. ಆದರೆ, ಜನ ಏನೇನೊ ಮಾತನಾಡುತ್ತಾರೆ. ಅದೆಲ್ಲಾ ಕೇಳಿ ನೋವಾಗುತ್ತಿತ್ತು. ನಿವೇದಿತಾಳದ್ದು ಆತ್ಮಹತ್ಯೆ ಅಲ್ಲ. ಆಕಸ್ಮಿಕ ಸಾವು. ಸಿಬಿಐ ಅಧಿಕಾರಿಗಳು ಬಂದು ತನಿಖೆ ನಡೆಸಿದ್ದರು" ಎಂದು ನಟಿಯ ತಾಯಿ ಕಣ್ಣೀರು ಹಾಕಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+