ವಿಶ್ವವಿದ್ಯಾನಿಲಯಗಳಿಂದ 18 ಬಾರಿ ರಿಜೆಕ್ಟ್ ಆದರೂ ಗೂಗಲ್ ಕಂಪೆನಿಯಲ್ಲಿ ಕೆಲಸ ಗಿಟ್ಟಿಸಿದ ಯುವಕ!
ಬೆಂಗಳೂರು, ಅಕ್ಟೋಬರ್ 11: ತಿರಸ್ಕಾರ ಮತ್ತು ವೈಫಲ್ಯವು ಯಶಸ್ಸಿನ ಹಾದಿಯಲ್ಲಿ ಕಂಡು ಬರುವ ಸಾಮಾನ್ಯ ಹಂತಗಳಾಗಿವೆ. ಆದರೆ ಇದು ಈ ತಿರಸ್ಕಾರಗಳಿಂದ ಕಲಿಯಲು ಸಿದ್ಧರಿರುವವರಿಗೆ ಮಾತ್ರ. ಕೌಶಲ್ಯತೆಗೆ ಪದವಿ ಅಗತ್ಯವಿಲ್ಲ ಎಂಬುದು ಮತ್ತೆ ಸಾಬೀತಾಗಿದೆ.
ಡಿಜಿಟಲ್ ತಂತ್ರಜ್ಞಾನ ಕ್ಷೇತ್ರದಲ್ಲಿ ಮತ್ತಷ್ಟು ಹೊಸತನ ತರಲು ಪ್ರಮುಖ ಟೆಕ್ ಕಂಪನಿಗಳಾದ ಗೂಗಲ್, ಮೈಕ್ರೋಸಾಫ್ಟ್ ಮತ್ತು ಮತ್ತಿತರರ ಕಂಪೆನಿಗಳು ಮಾತ್ರ ಉತ್ಸಾಹಿ ಯುವಕರನ್ನು ಗುರುತಿಸುತ್ತಾ ಬಂದಿವೆ. ಈ ಸಾಲಿಗೆ ಈಗ ಸ್ಟಾನ್ಲಿ ಜಾಂಗ್ ಎಂಬಾತ ಸೇರಿಕೊಂಡಿದ್ದಾನೆ.

18 ವರ್ಷ ವಯಸ್ಸಿನ ಸ್ಟಾನ್ಲಿ ಝಾಂಗ್ ವಿಶ್ವದ ಅಗ್ರ ಐಟಿ ಕಂಪನಿಗಳಲ್ಲಿ ಒಂದಾದ ಗೂಗಲ್‌ನಿಂದ ಉದ್ಯೋಗವನ್ನು ಪಡೆದುಕೊಂಡಿದ್ದಾರೆ. ಪದವಿ ಪಡೆದ ನಂತರ ಸ್ಟಾನ್ಲಿ ಅರ್ಜಿ ಸಲ್ಲಿಸಿದ 18 ಕಾಲೇಜುಗಳಲ್ಲಿ 16 ಕಾಲೇಜುಗಳು ಅವನನ್ನು ತಿರಸ್ಕರಿಸಿದ್ದವು ಎಂಬುದು ಗಮನಾರ್ಹ ಸಂಗತಿ.
ಸ್ಟಾನ್ಲಿ ಜಾಂಗ್ ಯಾರು?
ಕ್ಯಾಲಿಫೋರ್ನಿಯಾದ ಪಾಲೊ ಆಲ್ಟೊದ ವಿದ್ಯಾರ್ಥಿಯಾದ ಸ್ಟಾನ್ಲಿ ಝಾಂಗ್, 1600 ಕ್ಕೆ 1590 ಎಸ್‌ಎಟಿ ಸ್ಕೋರ್ ಹೊಂದಿದ್ದರೂ ಸಹ ಎಂಐಟಿ ಸ್ಟ್ಯಾನ್‌ಫೋರ್ಡ್ ಮತ್ತು ಇತರ ವಿಶ್ವವಿದ್ಯಾನಿಲಯಗಳ ಪ್ರವೇಶಾತಿಯನ್ನು ಪಡೆಯಲಾಗಲಿಲ್ಲ. 2023ರಲ್ಲಿ ಝಾಂಗ್ ವಿದ್ಯಾರ್ಥಿಯಾಗಿರುವಾಗಲೇ ತನ್ನದೇ ಆದ ಇ-ಸೈನ್ ಮಾಡುವ ಸಂಸ್ಥೆಯಾದ RabbitSign ಅನ್ನು ಪ್ರಾರಂಭಿಸಿದರು.
ಗೂಗಲ್ ಅಂತಿಮವಾಗಿ ಸಾಫ್ಟ್‌ವೇರ್ ಡೆವಲಪರ್ ಆಗಿ ಪೂರ್ಣ ಸಮಯದ ಉದ್ಯೋಗ ನೀಡುವವರೆಗೆ ಅವರು ಹಲವಾರು ಬಾರಿ ರಿಜೆಕ್ಸ್ ಆಗಿದ್ದರು. ಈ ಸೋಮವಾರವಷ್ಟೇ ಅವರು ಕ್ಯಾಲಿಫೋರ್ನಿಯಾದ ಮೌಂಟೇನ್ ವ್ಯೂನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಗೂಗಲಗಗ ಸಂಸ್ಥೆಗಾಗಿ ಕೆಲಸ ಮಾಡಲು ಪ್ರಾರಂಭಿಸಿದರು. ಕೇವಲ ಎರಡು ವಿಶ್ವವಿದ್ಯಾನಿಲಯಗಳಲ್ಲಿ ಒಂದಾದ ಟೆಕ್ಸಾಸ್ ವಿಶ್ವವಿದ್ಯಾನಿಲಯಕ್ಕೆ ಸೇರಲು ಸ್ಟಾನ್ಲಿಯನ್ನು ಕೋರಲಾಯಿತು. ಇನ್ನೊಂದು ಮೇರಿಲ್ಯಾಂಡ್ ವಿಶ್ವವಿದ್ಯಾನಿಲಯವಾಗಿತ್ತು. ಆದರೆ ಅವರು ಕೆಲಸಕ್ಕಾಗಿ ಆ ಪ್ರವೇಶಾತಿಯನ್ನು ನಿರಾಕರಿಸಿದರು.
ಅವರ ಈ ಕಥೆಯು ಎಷ್ಟು ಜನಪ್ರಿಯವಾಯಿತು ಎಂದರೆ ಸೆಪ್ಟೆಂಬರ್ 28 ರಂದು ಶಿಕ್ಷಣ ಮತ್ತು ಉದ್ಯೋಗಿಗಳ ಸದನ ಸಮಿತಿಯ ಮುಂದೆ ಸಾಕ್ಷಿಯೊಬ್ಬರು ಇದನ್ನು ಉಲ್ಲೇಖಿಸಿದರು. ಜೂನ್‌ನಲ್ಲಿ ಕಾಲೇಜು ಪ್ರವೇಶಗಳಲ್ಲಿ ತಾರತಮ್ಯವನ್ನು ಕಾನೂನುಬಾಹಿರಗೊಳಿಸುವ US ಸುಪ್ರೀಂ ಕೋರ್ಟ್‌ನ ನಿರ್ಧಾರದಿಂದ ವಿಶ್ವವಿದ್ಯಾಲಯದ ಅಭ್ಯಾಸಗಳು ಹೇಗೆ ಪ್ರಭಾವಿತವಾಗಿವೆ ಎಂಬುದನ್ನು ಪರಿಶೀಲಿಸುವುದು ವಿಚಾರಣೆಯ ಉದ್ದೇಶವಾಗಿತ್ತು.












Click it and Unblock the Notifications