ವಾರಾಂತ್ಯದಲ್ಲಿ ಬೆಂಗಳೂರಿಗರು ರಿಲ್ಯಾಕ್ಸ್‌ ಮಾಡಲು ಚಟುವಟಿಕೆಗಳು, ಸ್ಥಳಗಳ ಪಟ್ಟಿ

ಬೆಂಗಳೂರು, ಅಕ್ಟೋಬರ್‌ 06: ವಾರಾಂತ್ಯದಲ್ಲಿ ಬೆಂಗಳೂರಿನಲ್ಲಿರುವ ಸಾವಿರಾರು ಮಂದಿ ನಗರವನ್ನು ತೊರೆದು ವಿಭಿನ್ನಗಳಿಗೆ ಹೋಗಲು ಮುಂದಾಗುತ್ತಾರೆ. ಕೆಲವರು ಬೆಂಗಳೂರಿನಂತ ಬೃಹತ್‌ ನಗರದಲ್ಲಿ ಸಾಕಷ್ಟು ಜನರಿಗೆ ಗೊತ್ತಿಲ್ಲದ ಸ್ಥಳಗಳು, ಅಂಗಡಿಗಳು, ಹೋಟೆಲ್‌ಗಳನ್ನು ಹುಡುಕುತ್ತಾ ಅನ್ವೇಷಣೆಗೆ ಮುಂದಾಗುತ್ತಾರೆ. ಅಂತಹ ಕೆಲವು ಪ್ರದೇಶಗಳು ಇಲ್ಲಿವೆ.

ನಾಡಹಬ್ಬ ದಸರಾ ಬರುತ್ತಿದ್ದು, ಈಗ ಮತ್ತಷ್ಟು ಚುಟುವಟಿಕೆಗಳು ಆರಂಭವಾಗುತ್ತವೆ. ಅಕ್ಟೋಬರ್ ಬಂದರೆ ಬೆಂಗಳೂರಿನಲ್ಲಿ ಹಲವಾರು ಕಲೆ, ಸಂಗೀತ, ಆಹಾರ ಉತ್ಸವಗಳು ಮತ್ತು ಇನ್ನಷ್ಟು ಕಾರ್ಯಕ್ರಮಗಳು ಜರುಗುತ್ತವೆ. ಈ ವಾರಾಂತ್ಯಕ್ಕೆ ನಿಮ್ಮಲ್ಲಿ ಯಾವುದೇ ಪ್ಲಾನ್‌ ಇಲ್ಲದಿದ್ದರೆ ನಿಮ್ಮ ಸಮಯವನ್ನು ಅರ್ಥಪೂರ್ಣವಾಗಿಸಲು ಬಯಸಿದರೆ ಕೆಲವು ಒಳ್ಳೆಯ ಕಾರ್ಯಕ್ರಮಗಳು ಇಲ್ಲಿವೆ.

A list of activities, places for Bengalureans to relax on weekends

ಉತ್ತರಿ ಬೆಟ್ಟ ಸೂರ್ಯೋದಯ ಟ್ರೆಕ್ಕಿಂಗ್‌:

ಈ ವಾರಾಂತ್ಯಕ್ಕೆ ನೀವು ಹೊಸ ಸಾಹಸಮಯ ಚಟುವಟಿಕೆ ಮಾಡಲು ಮುಂದಾದರೆ ನಗರದ ಅತ್ಯುತ್ತಮ ಟ್ರಯಲ್ ಉತ್ತರಿ ಬೆಟ್ಟದ ಮೂಲಕ ಪಾದಯಾತ್ರೆ ಮಾಡಬಹುದು. ಇದು ಇರುವುದು ಬೆಂಗಳೂರು ಸಮೀಪದ ರಾಮನಗರ ಜಿಲ್ಲೆಯಲ್ಲಿ. ಇದು ಹಚ್ಚ ಹಸಿರಿನ ದೃಶ್ಯದಿಂದ ಸುತ್ತುವರೆದಿರುವ ಸರಿಸುಮಾರು 5 ಕಿಲೋಮೀಟರ್ ಚಾರಣ ಪ್ರದೇಶವಾಗಿದೆ.

ಕಾಫಿ ಪೇಂಟಿಂಗ್ ವರ್ಕ್‌ಶಾಪ್‌:

ಇದು ಕಲಾಭಿಮಾನಿಗಳಿಗೆ ಉತ್ತಮ ಆಯ್ಕೆ. ನಿಮ್ಮಲ್ಲಿ ಅಡಗಿರುವ ಕಲೆ ಪ್ರತಿಭೆಯನ್ನು ಹೊರಹಾಕಲು ಅನುವು ಮಾಡಿಕೊಡುವ ಕಾರ್ಯಾಗಾರಕ್ಕೆ ಹೋಗಬಹುದು. ಈ ಕಾರ್ಯಾಗಾರದಲ್ಲಿ, ಕಾಫಿ ಬಳಸಿ ಹೇಗೆ ಚಿತ್ರಿಸಬೇಕೆಂದು ನೀವು ಕಲಿಯಬಹುದು. ಇದು ಇಂದಿರಾನಗರದ ಕಾನ್ಸು ಎಂಬಲ್ಲಿ ನಡೆಯಲಿದೆ.

ಭಾರತೀಯ ಸಂಗೀತ ಅನುಭವ ಮ್ಯೂಸಿಯಂ:

ನೀವು ಸಂಗೀತ ಪ್ರೇಮಿಗಳಾಗಿದ್ದರೆ ನಗರದಲ್ಲಿ ಭೇಟಿ ನೀಡಲೇಬೇಕಾದ ಸ್ಥಳಗಳಲ್ಲಿ ಇದು ಒಂದಾಗಿದೆ. ಈ ಮ್ಯೂಸಿಕ್ ಮ್ಯೂಸಿಯಂನಲ್ಲಿ ಭಾರತದ ಶ್ರೀಮಂತ ಸಂಗೀತ ಪರಂಪರೆಯನ್ನು ಅರ್ಥಮಾಡಿಸುತ್ತದೆ. ಇದು ಜೆಪಿ ನಗರದಲ್ಲಿದೆ. ಇದು ಮಂಗಳವಾರದಿಂದ ಶುಕ್ರವಾರದವರೆಗೆ ಬೆಳಿಗ್ಗೆ 10 ರಿಂದ ಸಂಜೆ 6 ರವರೆಗೆ, ಶನಿವಾರ ಮತ್ತು ಭಾನುವಾರ ಬೆಳಿಗ್ಗೆ 11 ರಿಂದ ಸಂಜೆ 7 ರವರೆಗೆ ತೆರೆದಿರುತ್ತದೆ.

ದಾಂಡಿಯಾ ಮತ್ತು ಗರ್ಬಾ ಕಾರ್ಯಾಗಾರ:

ನವರಾತ್ರಿ ಮತ್ತು ಇತರ ಹಬ್ಬಗಳ ಹಿನ್ನೆಲೆಯಲ್ಲಿ ದಾಂಡಿಯಾ ಮತ್ತು ಗರ್ಬಾ ಕಲಾ ಉತ್ಸಾಹವು ನಗರದಲ್ಲಿ ನಡೆಯಲಿದೆ. ಈ ವರ್ಷದ ಹಬ್ಬದ ಋತುವಿನಲ್ಲಿ ಸಾಂಸ್ಕೃತಿಕ ನೃತ್ಯವನ್ನು ನೋಡಲು ನೀವು ಮುಂದಾಗಬಹುದು. ಇದು ಝೆಸ್ಟ್ ಫಿಟ್ನೆಸ್ ಸ್ಟುಡಿಯೋದಲ್ಲಿ ಅಕ್ಟೋಬರ್‌ 8 ರಂದು ನಡೆಯಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+