Get Updates
Get notified of breaking news, exclusive insights, and must-see stories!

60 ವರ್ಷದ ಕೇರಳದ ದಿನಗೂಲಿ ಕಾರ್ಮಿಕ ಈಗ ಫೇಮಸ್‌ ಮಾಡೆಲ್‌!

ತಿರುವನಂತಪುರಂ, ಫೆಬ್ರವರಿ 15: ಕೇರಳದ 60 ವರ್ಷದ ದಿನಗೂಲಿ ಕಾರ್ಮಿಕ ಈಗ ಮಾಡೆಲ್‌ ಆಗಿದ್ದಾರೆ. ಕೋಯಿಕ್ಕೋಡ್‌ನ ಈ ವ್ಯಕ್ತಿ ತನ್ನ ಮಸುಕಾದ ಲುಂಗಿ ಮತ್ತು ಶರ್ಟ್‌ ಧರಿಸಿಯೇ ತನ್ನ ಸ್ಥಳೀಯ ಪ್ರದೇಶದಲ್ಲಿ ಚಿರಪರಿಚಿತರಾಗಿದ್ದರು. ಆದರೆ ಈಗ ತನ್ನ ಸೂಪರ್ ಗ್ಲಾಮ್ ಮೇಕ್ ಓವರ್‌ನೊಂದಿಗೆ ಸಾಮಾಜಿಕ ಮಾಧ್ಯಮದಲ್ಲಿ ಫೇಮಸ್‌ ಮಾಡೆಲ್‌ ಆಗಿದ್ದಾರೆ.

ಮಮ್ಮಿಕ್ಕಾ ಎಂಬ ದಿನಗೂಲಿ ಕಾರ್ಮಿಕ ಇತ್ತೀಚೆಗೆ ಸ್ಥಳೀಯ ಸಂಸ್ಥೆಯೊಂದರ ಪ್ರಚಾರದ ಫೋಟೋಶೂಟ್‌ನಲ್ಲಿ ಸೂಟ್ ಧರಿಸಿ ಮತ್ತು ಐಪ್ಯಾಡ್‌ನೊಂದಿಗೆ ಪೋಸ್ ನೀಡಿದ್ದಾರೆ. ಈ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ನೆಟ್ಟಿಗರು ಫೋಟೋಗ್ರಾಫರ್‌ನ ಕೈಚಳಕ ಎಂದು ಕೊಂಡಾಡಿದ್ದಾರೆ.

ಅಂದ ಹಾಗೆ ಈ ದಿನಗೂಲಿ ಕಾರ್ಮಿಕನ ಮಾಡೆಲಿಂಗ್ ಪ್ರತಿಭೆಯನ್ನು ಗುರುತಿಸಿದವರು ಛಾಯಾಗ್ರಾಹಕ ಶರೀಕ್ ವಯಾಲಿಲ್. ಈ ಹಿಂದೆ ಛಾಯಾಗ್ರಾಹಕ ಶರೀಕ್ ವಯಾಲಿಲ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಮಮ್ಮಿಕ್ಕಾರ ಫೋಟೋವನ್ನು ಪೋಸ್ಟ್‌ ಮಾಡಿದ್ದರು. ಈ ಫೋಟೋವನ್ನು ನಟ ವಿನಾಯಕನ್ ಜೊತೆ ಹೋಲಿಕೆ ಮಾಡಲಾಗಿತ್ತು. ಹಾಗೆಯೇ ಸಖತ್‌ ವೈರಲ್‌ ಆಗಿತ್ತು.

60 Year Old Daily Wage Labourer From Kerala Is Now a Model, All Thanks to This Photographer

ಆ ಬಳಿಕ ಯಾವುದೇ ಮಾಡೆಲ್‌ಗಳನ್ನು ಆಯ್ಕೆ ಮಾಡಬೇಕಾದಾಗ ಪರಿಸ್ಥಿತಿ ಬಂದಾಗ ಛಾಯಾಗ್ರಾಹಕ ಶರೀಕ್ ವಯಾಲಿಲ್ ದಿನಗೂಲಿ ಕಾರ್ಮಿಕ ಮಮ್ಮಿಕ್ಕಾರನ್ನೇ ಆಯ್ಕೆ ಮಾಡಿದ್ದಾರೆ. ಇನ್ನು ಮಮ್ಮಿಕ್ಕಾಗೆ ಮೇಕಪ್ ಮಾಡಿದ್ದು ಕಲಾವಿದ ಮಜ್ನಾಸ್. ಆಶಿಕ್ ಫುವಾದ್ ಮತ್ತು ಶಬೀಬ್ ವಯಾಲಿಲ್ ಪ್ರಸಾದನ ಸಹಾಯಕರಾಗಿದ್ದರು.

ಸಹಜ ಸೌಂದರ್ಯಕ್ಕೆ ಕಳೆ ನೀಡಿದ ಛಾಯಾಗ್ರಾಹಕ

ಯಾವ ವಯಸ್ಸಿನಲ್ಲಿ ನಮ್ಮ ಜೀವನದಲ್ಲಿ ಏನು ಬದಲಾವಣೆ ಆಗುತ್ತದೆ ಎಂದು ನಮಗೂ ಕೂಡಾ ಊಹೆ ಮಾಡಲು ಸಾಧ್ಯವಾಗದು. ಅಂತಹ ಬದಲಾವಣೆ ಕೇರಳದ 60 ವರ್ಷದ ದಿನಗೂಲಿ ಕಾರ್ಮಿಕ ಮಮ್ಮಿಕ್ಕಾ ಬಾಳಿನಲ್ಲಿ ಆಗಿದೆ. 60 ವರ್ಷದ ದಿನಗೂಲಿ ಕಾರ್ಮಿಕ ಮಮ್ಮಿಕ್ಕಾರ ದೈಹಿಕ ಸೌಂದರ್ಯಕ್ಕೆ ಛಾಯಾಗ್ರಾಹಕ ಇನ್ನಷ್ಟು ಕಳೆ ನೀಡಿ ಈಗ ರೂಪದರ್ಶಿಯನ್ನಾಗಿ ಮಾಡಿದ್ದಾರೆ. ಇದಕ್ಕೆ ಪ್ರಸಾಧನ (ಮೇಕಪ್‌) ಕಲಾವಿದ ಮಜ್ನಾಸ್ ಕೂಡಾ ಕೈಜೋಡಿಸಿದ್ದಾರೆ.

ಇನ್‌ಸ್ಟಾಗ್ರಾಂ ಖಾತೆ ತೆರೆದಿರುವ ಮಮ್ಮಿಕ್ಕರ

ಮಮ್ಮಿಕ್ಕ ಈಗ ತನ್ನದೇ ಆದ ಇನ್‌ಸ್ಟಾಗ್ರಾಂ ಖಾತೆಯನ್ನು ಕೂಡಾ ಹೊಂದಿದ್ದಾರೆ. ಅಲ್ಲಿ ಅವರು ಸಾಮಾನ್ಯ ಬಟ್ಟೆ ಮತ್ತು ಮೇಕ್ ಓವರ್‌ನಲ್ಲಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಅವರು ಈಗ ತಮ್ಮ ಹುಟ್ಟೂರಾದ ಕೋಯಿಕ್ಕೋಡ್‌ನ ಕೊಡಿವಳ್ಳಿಯ ವೆನ್ನಕ್ಕಾಡ್‌ನಲ್ಲಿ ಹೀರೋ ಆಗಿದ್ದಾರೆ. ಈ ಯಶಸ್ಸಿನಿಂದ ಖುಷಿಯಾಗಿರುವ ಮಮ್ಮಿಕ್ಕ ನಿತ್ಯದ ಕೆಲಸದ ಜೊತೆಗೆ ಆಫರ್‌ಗಳು ಬಂದರೆ ಮಾಡೆಲಿಂಗ್‌ನಲ್ಲಿ ಮುಂದುವರಿಯುವುದಾಗಿ ಹೇಳಿದ್ದಾರೆ.

ಛಾಯಾಗ್ರಾಹಕ ಶರೀಕ್ ವಯಾಲಿಲ್‌ಗೆ ನೆಟ್ಟಿಗರ ಶಭಾಸ್‌ಗಿರಿ

ಈ ನಡುವೆ ಕೇರಳದ 60 ವರ್ಷದ ದಿನಗೂಲಿ ಕಾರ್ಮಿಕ ಈಗ ಮಾಡೆಲ್‌ ಆಗಲು ಕಾರಣೀಭೂತರಾದ ಛಾಯಾಗ್ರಾಹಕ ಶರೀಕ್ ವಯಾಲಿಲ್‌ಗೆ ನೆಟ್ಟಿಗರು ಶಭಾಷ್‌ ಎಂದಿದ್ದಾರೆ. ದಿನಗೂಲಿ ಕಾರ್ಮಿಕರಿಗೂ ಕಲೆ ಇದೆ ಎಂದು ತೋರಿಸಿಕೊಟ್ಟ ನಿಮಗೆ ಧನ್ಯವಾದ ಎಂದು ನೆಟ್ಟಿಗರು ಹೇಳಿದ್ದಾರೆ. ಉತ್ತಮ ಕೆಲಸ, ಉತ್ತಮ ಛಾಯಾಗ್ರಹಣ ಎಂದು ಹೇಳಿದ್ದಾರೆ. ಇನ್ನು ಕೆಲವರು ನೀವು ಅತ್ಯುತ್ತಮ ಛಾಯಾಗ್ರಾಹಕ ಎಂದು ಹೊಗಳಿದ್ದಾರೆ. (ಒನ್‌ಇಂಡಿಯಾ ಸುದ್ದಿ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+