ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒಡಿಶಾದಲ್ಲಿ 26 ಮಕ್ಕಳಿಗೆ ಟೊಮೇಟೊ ಜ್ವರ: ಇದೇನಪ್ಪಾ ಹೊಸ ರೋಗ?

|
Google Oneindia Kannada News

ಭುವನೇಶ್ವರ್, ಮೇ 25: ಒಡಿಶಾದಲ್ಲಿ ಒಟ್ಟು 26 ಮಕ್ಕಳಿಗೆ ಕೈ, ಕಾಲು ಮತ್ತು ಬಾಯಿ ರೋಗ (ಎಚ್‌ಎಫ್‌ಎಂಡಿ) ಇರುವುದು ಪತ್ತೆಯಾಗಿದ್ದು, ಅವರ ಸ್ಥಿತಿ ಸ್ಥಿರವಾಗಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸಾಮಾನ್ಯವಾಗಿ 'ಟೊಮ್ಯಾಟೊ ಜ್ವರ' ಎಂದು ಕರೆಯಲ್ಪಡುವ ಸಾಂಕ್ರಾಮಿಕ ರೋಗವು ಕರುಳಿನ ವೈರಸ್‌ಗಳಿಂದ ಉಂಟಾಗುತ್ತದೆ. ಈ ರೋಗವು ಮಕ್ಕಳಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ವಯಸ್ಕರಲ್ಲಿ ಈ ರೋಗವು ತೀರಾ ಅಪರೂಪವಾಗಿದೆ, ಏಕೆಂದರೆ ಅವರಲ್ಲಿ ಸಾಮಾನ್ಯವಾಗಿ ವೈರಸ್‌ನಿಂದ ರಕ್ಷಿಸಿಕೊಳ್ಳಲು ಬೇಕಾಗುವಷ್ಟು ಪ್ರತಿರಕ್ಷಣಾ ವ್ಯವಸ್ಥೆಯನ್ನು ಹೊಂದಿರುತ್ತಾರೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.

ಕೇರಳದ ಟೊಮ್ಯಾಟೋ ಜ್ವರ: ಧಾರವಾಡ ಜಿಲ್ಲಾಡಳಿತ ಅಲರ್ಟ್..!ಕೇರಳದ ಟೊಮ್ಯಾಟೋ ಜ್ವರ: ಧಾರವಾಡ ಜಿಲ್ಲಾಡಳಿತ ಅಲರ್ಟ್..!

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಈ ಟೊಮೇಟೊ ಜ್ವರ ಎಂದು ಕರೆಯಲ್ಪಡುವ ವೈರಲ್ ಕಾಯಿಲೆಯು ಜ್ವರ, ಬಾಯಿಯಲ್ಲಿ ನೋವಿನ ಹುಣ್ಣು ಮತ್ತು ಕೈಗಳು, ಪಾದಗಳು ಮತ್ತು ಪೃಷ್ಠದ ಮೇಲೆ ಗುಳ್ಳೆಗಳೊಂದಿಗೆ ದದ್ದುಗಳಂತಹ ಲಕ್ಷಣಗಳನ್ನು ಹೊಂದಿರುತ್ತದೆ. ಒಡಿಶಾದಲ್ಲಿ ಟೊಮೇಟೊ ಜ್ವರದ ಪ್ರಕರಣಗಳು ಎಷ್ಟು?, ಈ ಟೊಮೇಟೊ ಜ್ವರವು ಮಕ್ಕಳನ್ನು ಹೆಚ್ಚಾಗಿ ಬಾಧಿಸುವುದು ಏಕೆ?, ಈ ಕಾಯಿಲೆಗೆ ಚಿಕಿತ್ಸೆ ಪಡೆಯುವುದು ಹೇಗೆ?, ತಮ್ಮ ಮಕ್ಕಳನ್ನು ಈ ರೋಗದಿಂದ ರಕ್ಷಿಸಲು ಪೋಷಕರು ಯಾವೆಲ್ಲ ರೀತಿ ಜಾಗೃತಿ ವಹಿಸಬೇಕು ಎಂಬುದನ್ನು ಈ ವರದಿಯಲ್ಲಿ ತಿಳಿದುಕೊಳ್ಳೋಣ.

5 ವರ್ಷದೊಳಿಗಿನ ಮಕ್ಕಳಿಗೆ ಅಂಟುವ 5 ವರ್ಷದೊಳಿಗಿನ ಮಕ್ಕಳಿಗೆ ಅಂಟುವ

ಒಡಿಶಾದಲ್ಲಿ 26 ಮಕ್ಕಳಿಗೆ ಟೊಮೇಟೊ ಜ್ವರ ಪತ್ತೆ

ಒಡಿಶಾದಲ್ಲಿ 26 ಮಕ್ಕಳಿಗೆ ಟೊಮೇಟೊ ಜ್ವರ ಪತ್ತೆ

ಭುವನೇಶ್ವರದ ಪ್ರಾದೇಶಿಕ ವೈದ್ಯಕೀಯ ಸಂಶೋಧನಾ ಕೇಂದ್ರದಲ್ಲಿ 36 ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷಿಸಲಾಗಿದ್ದು, 26 ಮಕ್ಕಳಲ್ಲಿ ಸೋಂಕು ತಗುಲಿರುವುದು ಖಚಿತವಾಗಿದೆ ಎಂದು ಆರೋಗ್ಯ ಸೇವೆಗಳ ನಿರ್ದೇಶಕ ಬಿಜಯ್ ಮೊಹಾಪಾತ್ರ ತಿಳಿಸಿದ್ದಾರೆ. ಎಚ್‌ಎಫ್‌ಎಂಡಿ-ಸೋಂಕಿತ ಮಕ್ಕಳಲ್ಲಿ 19 ಮಂದಿ ಭುವನೇಶ್ವರ, ಮೂವರು ಪುರಿ ಮತ್ತು ಇಬ್ಬರು ಕಟಕ್ ಮೂಲದವರು ಎಂದು ಮೊಹಾಪಾತ್ರ ಹೇಳಿದ್ದಾರೆ. "ಸೋಂಕಿತರು 1-9 ವಯಸ್ಸಿನವರಾಗಿದ್ದು, ಐದರಿಂದ ಏಳು ದಿನಗಳ ಕಾಲ ಪ್ರತ್ಯೇಕವಾಗಿರಲು ಸೂಚಿಸಲಾಗಿದೆ," ಎಂದು ಅಧಿಕಾರಿ ತಿಳಿಸಿದ್ದಾರೆ.

ಕೊಲ್ಲಂ ಜಿಲ್ಲೆಯಲ್ಲೇ 82 ಟೊಮೇಟೊ ಜ್ವರದ ಪ್ರಕರಣ

ಕೊಲ್ಲಂ ಜಿಲ್ಲೆಯಲ್ಲೇ 82 ಟೊಮೇಟೊ ಜ್ವರದ ಪ್ರಕರಣ

ಕೇರಳದ ಕೊಲ್ಲಂ ಜಿಲ್ಲೆಯೊಂದರಲ್ಲೇ ಬರೋಬ್ಬರಿ 82 ಸೋಂಕಿತ ಪ್ರಕರಣಗಳು ವರದಿಯಾಗಿವೆ. ಈ ಸೋಂಕು ತಗುಲಿದವರೆಲ್ಲ 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಾಗಿದ್ದು, ವಾಸ್ತವ ಸ್ಥಿತಿಯ ಬಗ್ಗೆ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ನಿಗಾ ವಹಿಸಿದೆ. ಆದರೆ ಟೊಮೇಟೊ ಜ್ವರ ಅಂಟಿಕೊಂಡವರೆಲ್ಲ 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳೇ ಆಗಿರುವುದು ಆತಂಕವನ್ನು ಹುಟ್ಟಿಸುತ್ತಿದೆ. ಎಲ್ಲ ಸೋಂಕಿತರನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

ಟೊಮೇಟೊ ಜ್ವರ ಎಂದರೇನು?

ಟೊಮೇಟೊ ಜ್ವರ ಎಂದರೇನು?

ಟೊಮೇಟೊ ಜ್ವರ ಎನ್ನುವುದು ಅಪರೂಪ ರೀತಿಯ ವೈರಲ್ ಸೋಂಕು ಆಗಿದೆ. ಇದು ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ. ಈಗ ಗುರುತಿಸಲಾಗದ ಟೊಮೇಟೊ ಜ್ವರವು ವೈರಲ್ ಜ್ವರವೇ ಅಥವಾ ಚಿಕೂನ್‌ಗುನ್ಯಾ ಅಥವಾ ಡೆಂಗ್ಯೂ ಜ್ವರದ ನಂತರದ ಪರಿಣಾಮವೇ ಎಂಬುದು ಇನ್ನೂ ದೃಢಪಟ್ಟಿಲ್ಲ. ಹೆಚ್ಚಾಗಿ ಈ ಜ್ವರದಿಂದ ಬಳಲುತ್ತಿರುವ ಮಕ್ಕಳಲ್ಲಿ ದದ್ದು ಮತ್ತು ಚರ್ಮದ ಕಿರಿಕಿರಿ ಮತ್ತು ನಿರ್ಜಲೀಕರಣ ಕಂಡು ಬರುತ್ತಿದೆ. ಇದರಿಂದ ದೇಹದ ಹಲವು ಭಾಗಗಳಲ್ಲಿ ಗುಳ್ಳೆಗಳನ್ನು ಉಂಟಾಗುತ್ತಿವೆ. ಈ ಗುಳ್ಳೆಗಳು ಸಾಮಾನ್ಯವಾಗಿ ಕೆಂಪು ಬಣ್ಣದ ದುಂಡಗಿನ ಆಕಾರದಲ್ಲಿ ಇರುವುದರಿಂದ ಇದನ್ನು ಟೊಮೇಟೊ ಜ್ವರ ಎಂಬ ಹೆಸರಿನಲ್ಲಿ ಕರೆಯಲಾಗುತ್ತಿದೆ. ಕೊಲ್ಲಂ ಜಿಲ್ಲೆಯ ಕೆಲವು ಭಾಗಗಳಲ್ಲಿ ಮಾತ್ರ ಈ ರೀತಿಯ ಜ್ವರದ ಪ್ರಕರಣಗಳು ವರದಿಯಾಗಿದ್ದು, ಇದು ಇತರ ಪ್ರದೇಶಗಳಿಗೂ ಹರಡಬಹುದು ಎಂದು ರಾಜ್ಯ ಆರೋಗ್ಯ ಅಧಿಕಾರಿಗಳು ಎಚ್ಚರಿಸಿದ್ದಾರೆ.

ಟೊಮೇಟೊ ಜ್ವರದ ಲಕ್ಷಣಗಳನ್ನು ತಿಳಿಯಿರಿ

ಟೊಮೇಟೊ ಜ್ವರದ ಲಕ್ಷಣಗಳನ್ನು ತಿಳಿಯಿರಿ

* ಮುಖ್ಯ ಲಕ್ಷಣಗಳಲ್ಲಿ ದದ್ದುಗಳು ಮತ್ತು ಚರ್ಮದ ಕಿರಿಕಿರಿ ಮತ್ತು ನಿರ್ಜಲೀಕರಣ ಆಗಿದೆ

* ಟೊಮೇಟೊ ಜ್ವರ ಪೀಡಿತ ಮಕ್ಕಳಲ್ಲಿ ಟೊಮೇಟೊ ಗಾತ್ರದ ಕೆಂಪು ದದ್ದುಗಳು ಕಂಡು ಬಂದಿವೆ

* ಅಧಿಕ ಜ್ವರ, ದೇಹದ ನೋವು, ಕೀಲು ಊತ ಮತ್ತು ಸುಸ್ತು ಇತರ ಕೆಲವು ಲಕ್ಷಣ

* ಅಲ್ಲದೆ, ಸೋಂಕಿತ ಮಗು ನಿರ್ಜಲೀಕರಣದ ಕಾರಣದಿಂದಾಗಿ ಬಾಯಿಯಲ್ಲಿ ಕಿರಿಕಿರಿ ಅನುಭವಿಸುತ್ತದೆ

* ಕೈಗಳು, ಮೊಣಕಾಲುಗಳು, ಪೃಷ್ಠದ ಬಣ್ಣವು ಇತರ ಕೆಲವು ಲಕ್ಷಣಗಳಾಗಿವೆ

* ದದ್ದುಗಳ ಮೇಲೆ ಉಂಟಾಗುವ ಹುಣ್ಣುಗಳಿಂದ ಹುಳುಗಳು ಹೊರಬರುತ್ತವೆ ಎಂದು ಕೆಲವು ರೋಗಿಗಳು ಹೇಳುತ್ತಾರೆ

ಟೊಮೇಟೊ ಜ್ವರದ ಮುನ್ನೆಚ್ಚರಿಕೆ ಕ್ರಮಗಳು

ಟೊಮೇಟೊ ಜ್ವರದ ಮುನ್ನೆಚ್ಚರಿಕೆ ಕ್ರಮಗಳು

* ನಿಮ್ಮ ಮಗುವಿನಲ್ಲಿ ರೋಗದ ಲಕ್ಷಣಗಳು ಕಂಡು ಬರುತ್ತಿದ್ದಂತೆ ವೈದ್ಯರನ್ನು ಸಂಪರ್ಕಿಸಬೇಕು

* ಸೋಂಕಿತ ಮಕ್ಕಳಿಗೆ ಹೆಚ್ಚು ಹೆಚ್ಚು ಕುದಿಸಿದ ನೀರನ್ನು ಕುಡಿಸುವ ಮೂಲಕ ನೀರಿನಂಶವನ್ನು ಕಾಪಾಡಿಕೊಳ್ಳಬೇಕು

* ಗುಳ್ಳೆಗಳು ಅಥವಾ ದದ್ದುಗಳನ್ನು ತುರಿಸುವುದು ಅಥವಾ ಒಡೆದುಕೊಳ್ಳದಂತೆ ನೋಡಿಕೊಳ್ಳಬೇಕು

* ಸರಿಯಾದ ರೀತಿಯಲ್ಲಿ ಶುಚಿತ್ವ ಮತ್ತು ನೈರ್ಮಲ್ಯತೆಯನ್ನು ಕಾಪಾಡಿಕೊಳ್ಳಬೇಕು

* ಬಿಸಿ ನೀರಿನಲ್ಲಿಯೇ ಸ್ನಾನ ಮಾಡುವುದು

* ಟೊಮೇಟೊ ಜ್ವರದ ಸೋಂಕಿತ ವ್ಯಕ್ತಿಯೊಂದಿಗೆ ನಿಕಟ ಸಂಪರ್ಕವನ್ನು ತಪ್ಪಿಸಬೇಕು

* ಜ್ವರದ ದೀರ್ಘಕಾಲೀನ ಪರಿಣಾಮಗಳನ್ನು ತಪ್ಪಿಸಲು ಸರಿಯಾಗಿ ವಿಶ್ರಾಂತಿ ತೆಗೆದುಕೊಳ್ಳಬೇಕು

ಟೊಮೇಟೋ ಜ್ವರ"

English summary
26 Tomato Flu Cases Reported In Odisha: Know Symptoms, Signs, Treatment and Prevention in kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X