Fact check: ಕಾಶ್ಮೀರ್ ಫೈಲ್ಸ್ ಎಫೆಕ್ಟ್: ಕಾಶ್ಮೀರದವರಿಗೆ ದೆಹಲಿಯಲ್ಲಿ ಸಿಗಲ್ವಾ ರೂಮ್ಸ್?
ನವದೆಹಲಿ, ಮಾರ್ಚ್ 24: ಜಮ್ಮು ಮತ್ತು ಕಾಶ್ಮೀರದ ಜನರಿಗೆ ಹೋಟೆಲ್ ಕೊಠಡಿ ನೀಡದಂತೆ ದಿಲ್ಲಿ ಪೊಲೀಸರು ಹೋಟೆಲ್‌ಗಳಿಗೆ ಸೂಚನೆ ನೀಡಿದ್ದಾರೆ ಎಂಬ ವಿಡಿಯೋ ವೈರಲ್ ಆಗಿದೆ. ಸೈಯದ್ ಎಂದು ಗುರುತಿಸಲಾಗಿರುವ ಶ್ರೀನಗರದ ನಿವಾಸಿಯೊಬ್ಬರು ವೆಬ್‌ಸೈಟ್ ಮೂಲಕ ಬುಕ್ ಮಾಡಿದ್ದ ಕೊಠಡಿಯನ್ನು ನಿರಾಕರಿಸಿದ ವೈರಲ್ ವಿಡಿಯೊವನ್ನು ಹಂಚಿಕೊಂಡಿದ್ದಾರೆ.
ವಿಡಿಯೊದಲ್ಲಿ ರಿಸಪ್ಶನಿಸ್ಟ್ ಇನ್ನೊಬ್ಬ ವ್ಯಕ್ತಿಗೆ ಕರೆ ಮಾಡಿ 'ಅತಿಥಿಗೆ ಏನು ಹೇಳಬೇಕು' ಎಂದು ಕೇಳುವುದನ್ನು ಕಾಣಬಹುದು. ಅತಿಥಿ ರೆಕಾರ್ಡ್ ಮಾಡಿರುವ ವಿಡಿಯೋದಲ್ಲಿ ರಿಸಪ್ಶನಿಸ್ಟ್ ಜಮ್ಮು ಮತ್ತು ಕಾಶ್ಮೀರದಿಂದ ಬಂದವರಿಗೆ ನಾವು ಕೊಠಡಿಗಳನ್ನು ನೀಡುವುವಿಲ್ಲ. ಜಮ್ಮು ಮತ್ತು ಕಾಶ್ಮೀರದಿಂದ ಬಂದವರಿಗೆ ರೂಂ ನೀಡಲು ಪೊಲೀಸರು ನಿರಾಕರಿಸಿದ್ದಾರೆ ಎಂದು ರಿಸಪ್ಶನಿಸ್ಟ್ ಹೇಳಿರುವುದು ರೆಕಾರ್ಡ್ ಆಗಿದೆ.
J&K ವಿದ್ಯಾರ್ಥಿಗಳ ಸಂಘದ ರಾಷ್ಟ್ರೀಯ ವಕ್ತಾರ ನಾಸಿರ್ ಖುಹಮಿ ಟ್ವಿಟ್ಟರ್‌ನಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ ಸಾಮಾಝಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಜೊತೆಗೆ ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ಬೀರಿದ ಪರಿಣಾಮ ಇದು ಎಂದು ಬರೆದಿದ್ದಾರೆ. ಐಡಿ ಮತ್ತು ಇತರ ದಾಖಲೆಗಳನ್ನು ಒದಗಿಸಿದ್ದರೂ ದೆಹಲಿ ಹೋಟೆಲ್ ಕಾಶ್ಮೀರಿ ವ್ಯಕ್ತಿಗೆ ವಸತಿ ನಿರಾಕರಿಸಿದೆ. ಇದು KashmirFiles ಪರಿಣಾಮ ಎಂದಿದ್ದಾರೆ. ಇವರು ಕಾಶ್ಮೀರಿಯಾಗಿರುವುದು ಅಪರಾಧ ಎಂದು ಅವರು ಟ್ವಿಟರ್‌ನಲ್ಲಿ ಬರೆದಿದ್ದಾರೆ.
Impact of #KashmirFiles on ground.
— Nasir Khuehami (ناصر کہویہامی) (@NasirKhuehami) March 23, 2022
Delhi Hotel denies accommodation to kashmiri man, despite provided id and other documents. Is being a kashmiri a Crime. @Nidhi @ndtv @TimesNow @vijaita @zoo_bear @kaushikrj6 @_sayema @alishan_jafri @_sayema @manojkjhadu @MahuaMoitra pic.twitter.com/x2q8A5fXpo
ಈ ಆರೋಪದ ಬಗ್ಗೆ ದೆಹಲಿ ಪೊಲೀಸರು ಟ್ವಿಟರ್‌ನಲ್ಲಿ ಸ್ಪಷ್ಟನೆ ನೀಡಿದ್ದಾರೆ. 'ಸಾಮಾಜಿಕ ಮಾಧ್ಯಮದಲ್ಲಿ ಉದ್ದೇಶಪೂರ್ವಕವಾಗಿ ವಿಡಿಯೊ ವೈರಲ್ ಆಗಿದೆ. ಇದರಲ್ಲಿ ಜಮ್ಮು ಮತ್ತು ಕಾಶ್ಮೀರ ID ಹೊಂದಿರುವ ವ್ಯಕ್ತಿಗೆ ಹೋಟೆಲ್ ಮೀಸಲಾತಿಯನ್ನು ನಿರಾಕರಿಸಲಾಗಿದೆ. ಪೊಲೀಸರು ಯಾರಿಗೂ ಹೋಟಲ್ ರೂಂಗಳನ್ನು ನೀಡದಿರಲು ನಿರ್ದೇಶ ನೀಡಿಲ್ಲ. ಅಂತಹ ಯಾವುದೇ ನಿರ್ದೇಶನವನ್ನು ದೆಹಲಿ ಪೊಲೀಸರು ನೀಡಿಲ್ಲ' ಎಂದು ಸ್ಪಷ್ಟಪಡಿಸಿದ್ದಾರೆ.
A purported video is viral on social media wherein a person is being denied hotel reservation due to his J&K ID. The reason for cancellation is being given as direction from police.
— Delhi Police (@DelhiPolice) March 23, 2022
It is clarified that no such direction has been given by Delhi Police.(1/3)@ANI @PTI_News
ಯೂಟ್ಯೂಬ್‌ನಲ್ಲಿ ಈ ವಿಡಿಯೋ ಪೋಸ್ಟ್ ಮಾಡಿದ ನೊಂದ ವ್ಯಕ್ತಿ ಅದೇ ಪ್ರದೇಶದಲ್ಲಿ ಮತ್ತೊಂದು ಹೋಟೆಲ್‌ನಲ್ಲಿ ಉಳಿದುಕೊಂಡಿದ್ದಾರೆ. ಇದು ಹೋಟೆಲ್ ನೀಡಿದ ಕುಂಟು ನೆಪ ಎಂದು ಬರೆದಿದ್ದಾರೆ. ಆದರೆ ಕೆಲವು ನೆಟಿಜನ್‌ಗಳು ವೈರಲ್ ವಿಡಿಯೊವನ್ನು ಉದ್ದೇಶಪೂರ್ವಕವಾಗಿ ತಪ್ಪಾಗಿ ಪ್ರತಿನಿಧಿಸುವ ಮೂಲಕ ದೆಹಲಿ ಪೊಲೀಸರನ್ನು ಅಪಖ್ಯಾತಿ ಮಾಡಲು ಪ್ರಯತ್ನಿಸುತ್ತಿದ್ದಾರೆ. ಇದು ದಂಡಕ್ಕೆ ಆಹ್ವಾನವಾಗಿದೆ ಎಂದು ದೆಹಲಿ ಪೊಲೀಸರು ಟ್ವಿಟ್ಟರ್‌ನಲ್ಲಿ ತಿಳಿಸಿದ್ದಾರೆ.

Recommended Video
ಹೋಟೆಲ್ ಸಂಗ್ರಾಹಕ ಓಯೋ ರೂಮ್ಸ್ ಟ್ವಿಟ್ಟರ್‌ನಲ್ಲಿ, ನಮ್ಮ ಕೊಠಡಿಗಳನ್ನು ಪಡೆಯಲು ಯಾರೇ ಬಂದರು ನಾವು ನಮ್ಮ ಮನಸ್ಸಿನಿಂದ ನೀಡುತ್ತೇವೆ. ಅವರನ್ನು ಸ್ವಾಗತಿಸುತ್ತೇ ಎಂದು ಬರೆದಿದ್ದಾರೆ. ಇದು ನಾವು ಎಂದಿಗೂ ರಾಜಿ ಮಾಡಿಕೊಳ್ಳುವ ವಿಷಯವಲ್ಲ. ಈ ವಿಚಾರವನ್ನು ಪರಿಶೀಲಿಸುತ್ತೇವೆ. ಜೊತೆಗೆ ಏನು ನಡೆದಿದೆ ಎಂಬುದನ್ನು ನಾವು ಶೀಘ್ರವೇ ಮಾಹಿತಿ ನೀಡಲಿದ್ದೇವೆ ಎಂದಿದೆ. ಇದನ್ನು ನಮ್ಮ ಗಮನಕ್ಕೆ ತಂದಿದ್ದಕ್ಕಾಗಿ ನಾವು ನಿಮಗೆ ಧನ್ಯವಾದಗಳನ್ನು ತಿಳಿಸುತ್ತೇವೆ ಎಂದಿದೆ.

Fact Check
ಕ್ಲೇಮು
ದೆಹಲಿ ಪೋಲೀಸರು J&K ಜನರಿಗೆ ಕೊಠಡಿಗಳನ್ನು ನೀಡದಂತೆ ಹೋಟಲ್‌ಗಳಿಗೆ ನಿರ್ದೇಶನಗಳನ್ನು ನೀಡಿದ್ದಾರೆ.
ಪರಿಸಮಾಪ್ತಿ
ಹೋಟೆಲ್ ಗಳಿಗೆ ಅಂತಹ ಯಾವುದೇ ತೀರ್ಮಾನ ತೆಗೆದುಕೊಳ್ಳಲು ನಿರ್ದೇಶನವನ್ನು ನೀಡಲಾಗಿಲ್ಲ ಎಂದು ದೆಹಲಿ ಪೊಲೀಸರು ಸ್ಪಷ್ಟಪಡಿಸಿದ್ದಾರೆ.











Click it and Unblock the Notifications