Fact Check: ಡಿಸೆಂಬರ್ 28ರಿಂದ ಆರ್‌ಎನ್‌ಬಿ ಎನ್‌ಟಿಪಿಸಿ ಪರೀಕ್ಷೆ ಆರಂಭ?
ನವದೆಹಲಿ, ಡಿಸೆಂಬರ್ 04: ರೈಲ್ವೆ ನೇಮಕಾತಿ ಮಂಡಳಿಯು ಬಹುನಿರೀಕ್ಷಿತ ಎನ್‌ಟಿಪಿಸಿ ಪರೀಕ್ಷೆಯ ವೇಳಾಪಟ್ಟಿಯನ್ನು ಪ್ರಕಟಿಸಿದೆ ಎನ್ನುವ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ.
ಹೌದು ರೈಲ್ವೆ ನೇಮಕಾತಿ ಮಂಡಳಿಯು ಎನ್‌ಟಿಪಿಸಿ ಪರೀಕ್ಷೆಯನ್ನು ಡಿಸೆಂಬರ್ 28 ರಿಂದ ಮಾರ್ಚ್ 21ರವರೆಗೆ ಪರೀಕ್ಷೆ ನಡೆಯಲಿದೆ ಎಂದು ಪಿಎನ್‌ಬಿ ಫ್ಯಾಕ್ಟ್‌ಚೆಕ್‌ನಲ್ಲಿ ತಿಳಿಸಲಾಗಿದೆ.
ಆರ್‌ಆರ್‌ಬಿಯು ನಾನ್ ಟೆಕ್ನಿಕಲ್ ಪಾಪ್ಯುಲರ್ ಕೆಟಗರಿ ಅಡಿಯಲ್ಲಿ ಸೀನಿಯರ್ ಟೈಮ್ ಕೀಪರ್, ಕಮರ್ಷಿಯಲ್ ಅಪ್ರೆಂಟಿಸ್, ಸ್ಟೇಷನ್ ಮಾಸ್ಟರ್, ಟ್ರ್ಯಾಫಿಕ್ ಅಸಿಸ್ಟಂಟ್, ಸೀನಿಯರ್ ಕಮರ್ಷಿಯಲ್ ಕಮ್ ಟಿಕೆಟ್ ಕ್ಲರ್ಕ್, ಗೂಡ್ಸ್ ಗಾರ್ಡ್, ಜೂನಿಯರ್ ಕ್ಲರ್ಕ್ ಕಮ್ ಟೈಪಿಸ್ಟ್, ಅಕೌಂಟ್ಸ್ ಕ್ಲರ್ಕ್ ಕಮ್ ಟೈಪಿಸ್ಟ್, ಜೂನಿಯರ್ ಟೈಮ್ ಕೀಪರ್, ಟ್ರೈನ್ ಕ್ಲರ್ಕ್, ಕಮರ್ಷಿಯಲ್ ಕಮ್ ಟಿಕೆಟ್ ಕ್ಲರ್ಕ್, ಸೀನಿಯರ್ ಕ್ಲರ್ಕ್ ಕಮ್ ಟೈಪಿಸ್ಟ್, ಜೂನಿಯರ್ ಅಕೌಂಟ್ ಅಸಿಸ್ಟಂಟ್ ಕಮ್ ಟೈಪಿಸ್ಟ್ ಮತ್ತು ಇತರೆ ಹುದ್ದೆಗಳು ಸೇರಿದಂತೆ ಒಟ್ಟು 35,208 ಹುದ್ದೆಗಳನ್ನು ಭರ್ತಿ ಮಾಡಲಿದೆ.

1.03 ಲಕ್ಷ ಅಭ್ಯರ್ಥಿಗಳು ಸಿಬಿಟಿ ಪರೀಕ್ಷೆಗೆ ಹಾಜರಾಗುವ ಸಾಧ್ಯತೆ ಇದೆ. ಈ ಪರೀಕ್ಷೆಗಳಿಗೆ ಪ್ರವೇಶ ಪತ್ರವನ್ನು ಸಂಬಂಧಿಸಿದ ಆರ್‌ಆರ್‌ಬಿ ವೆಬ್‌ಸೈಟ್‌ನಲ್ಲಿ ಪರೀಕ್ಷೆಗೆ 10 ದಿನಗಳ ಮುಂಚೆಯೇ ಬಿಡುಗಡೆ ಮಾಡುವ ಸಾಧ್ಯತೆ ಇದೆ.
ಐಸೋಲೇಟೆಡ್ ಮತ್ತು ಮಿನಿಸ್ಟ್ರೇರಿಯಲ್ ಕೆಟಗರಿ ಅಡಿಯಲ್ಲಿ 1663 ಹುದ್ದೆಗಳ ಭರ್ತಿಗೆ ಪರೀಕ್ಷೆಯು ಡಿಸೆಂಬರ್ 15 ರಿಂದ ಆರಂಭಗೊಳ್ಳಲಿದೆ. ಡಿಸೆಂಬರ್ 23, 2020 ರಂದು ಕೊನೆಗೊಳ್ಳುವ ಸಾಧ್ಯತೆ ಇದೆ.
ಅಧಿಕೃತ ಮೂಲಗಳ ಪ್ರಕಾರ ಈ ಹುದ್ದೆಗಳಿಗೆ 1.15 ಕೋಟಿ ಅರ್ಜಿಗಳನ್ನು ಆರ್‌ಆರ್‌ಬಿ ಸ್ವೀಕರಿಸಿದೆ. ರೈಲ್ವೆ ನೇಮಕಾತಿ ಮಂಡಳಿಯು ಗ್ರೂಪ್ ಡಿ ಕೆಟಗರಿ ಅಡಿಯಲ್ಲಿ ಟ್ರ್ಯಾಕ್ ಮೇಂಟೆನರ್ಸ್, ಪಾಯಿಂಟ್ಸ್‌ಮನ್ ಮತ್ತು ಇತರೆ ಹುದ್ದೆಗಳು ಸೇರಿದಂತೆ ಒಟ್ಟು 1,03,749 ಹುದ್ದೆಗಳನ್ನು ನೇಮಕ ಮಾಡಲಿದೆ.

Fact Check
ಕ್ಲೇಮು
ಡಿಸೆಂಬರ್ 28 ರಿಂದ ಎನ್‌ಟಿಪಿಸಿ ಪರೀಕ್ಷೆ ಆರಂಭ
ಪರಿಸಮಾಪ್ತಿ
ಹೌದು ಆರ್‌ಎನ್‌ಬಿ ಎನ್‌ಟಿಪಿಸಿ ಪರೀಕ್ಷೆ ಡಿಸೆಂಬರ್ 28ರಿಂದ ಆರಂಭವಾಗಲಿದೆ












Click it and Unblock the Notifications