Fact Check: ಬೇಸಿಗೆಯಲ್ಲಿ ಪೆಟ್ರೋಲ್ ತುಂಬಿಸಿದರೆ ವಾಹನಕ್ಕೆ ಬೆಂಕಿ ಬೀಳುತಂತೆ

ಹೊಸದಿಲ್ಲಿ ಎಪ್ರಿಲ್ 11: ಬೇಸಿಗೆಯ ಸುಡುಗಾಳಿ ಮತ್ತು ಇಂಧನದ ಬೆಲೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ವಾಹನದೊಳಗೆ ಎಷ್ಟು ಪೆಟ್ರೋಲ್ ತುಂಬಿಸಬೇಕು ಎಂಬ ಚರ್ಚೆ ನಡೆಯುತ್ತಿದೆ. ಇದರ ಮಧ್ಯೆ ತಾಪಮಾನ ಹೆಚ್ಚಳದ ಕಾರಣದಿಂದಾಗಿ ವಾಹನಗಳ ಟ್ಯಾಂಕ್‌ಗೆ ಪೆಟ್ರೋಲ್ ಅನ್ನು ಹೆಚ್ಚು ತುಂಬಿಸಬೇಡಿ ಎಂದು ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್‌ ಹೇಳಿದೆ ಎಂಬ ಪೋಸ್ಟರ್‌ವೊಂದು ವೈರಲ್ ಮಾಡಲಾಗಿದೆ. ಜೊತೆಗೆ ವಾಹನದ ಟ್ಯಾಂಕ್‌ನಲ್ಲಿ ಹೆಚ್ಚು ಇಂಧನ ತುಂಬಿಸುವುದರಿಂದ ಇಂಧನ ಟ್ಯಾಂಕ್‌ನಲ್ಲಿ ಸ್ಫೋಟ ಸಂಭವಿಸುತ್ತದೆ. ಹೀಗಾಗಿ ವಾಹನದಲ್ಲಿ ಕೇವಲ ಅರ್ಧ ಟ್ಯಾಂಕ್ ಪೆಟ್ರೋಲ್ ತುಂಬಿಸಿ ಎಂದು ವೈರಲ್ ಸಂದೇಶ ಹೇಳುತ್ತದೆ.

ಆದರೆ ತಾನು ಅಂತಹ ಯಾವುದೇ ಹೇಳಿಕೆ ನೀಡಿಲ್ಲ ಎಂದು ಇಂಡಿಯನ್ ಆಯಿಲ್ ಸ್ಪಷ್ಟಪಡಿಸಿದೆ. ಇಂಡಿಯನ್ ಆಯಿಲ್ ಈ ಹೇಳಿಕೆಯನ್ನು ನಿರಾಕರಿಸುತ್ತದೆ ಎಂದು ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ ಟ್ವೀಟ್ ಮಾಡಿದೆ. "ಆಟೋಮೊಬೈಲ್ ತಯಾರಕರು ತಮ್ಮ ವಾಹನಗಳ ಅಗತ್ಯತೆಗಳು ಮತ್ತು ಸಮಸ್ಯೆಗಳು ಎಲ್ಲಾ ಅಂಶಗಳನ್ನು ಸುರಕ್ಷತಾ ಅಂಶಗಳೊಂದಿಗೆ ಪರಿಗಣಿಸಿ ವಿನ್ಯಾಸಗೊಳಿಸುತ್ತಾರೆ. ಜೊತೆಗೆ ವಾಹನಗಳನ್ನು ಪೆಟ್ರೋಲ್/ಡೀಸೆಲ್ ಟ್ಯಾಂಕ್‌ನಲ್ಲಿ ಎಷ್ಟು ತುಂಬಿಸಬೇಕು ಎನ್ನುವ ವಿಚಾರವೂ ಇದಕ್ಕೆ ಹೊರತಾಗಿಲ್ಲ. ತಯಾರಕರು ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ವಾಹನ ತಯಾರಿಸಿರುತ್ತಾರೆ ಹೀಗಾಗಿ ಇಂಧನವನ್ನು ತುಂಬಲು ಇದು ಸಂಪೂರ್ಣವಾಗಿ ಸುರಕ್ಷಿತವಾಗಿದೆ. ಚಳಿಗಾಲ ಅಥವಾ ಬೇಸಿಗೆಯನ್ನು ಲೆಕ್ಕಿಸಿಯೇ ತಯಾರಕರು ಪೆಟ್ರೋಲ್ ಡೀಸೆಲ್ ಸಾಮಾರ್ಥ್ಯವನ್ನು ನಿರ್ದಿಷ್ಟಪಡಿಸಿರುತ್ತಾರೆ ಎಂದು ಇಂಡಿಯನ್ ಆಯಿಲ್ ತಿಳಿಸಿದೆ.

Fact Check: Filling petrol tank to maximum limit in summers could cause explosion

ಹಾಗಾಗಿ ಪೆಟ್ರೋಲ್ ಪೂರ್ತಿಯಾಗಿ ಟಾಪ್ ಅಪ್ ಮಾಡಿದರೆ ವಾಹನಕ್ಕೆ ಬೆಂಕಿ ಹತ್ತಿಕೊಳ್ಳುತ್ತದೆ ಎಂಬ ಸಾಮಾಜಿಕ ಜಾಲತಾಣಗಳಲ್ಲಿ ಕೇಳಿಬರುತ್ತಿರುವ ಮಾತು ಸುಳ್ಳಾಗಿದೆ.

Fact Check

ಕ್ಲೇಮು

ಬೇಸಿಗೆಯಲ್ಲಿ ನಿಮ್ಮ ವಾಹನದ ಟ್ಯಾಂಕ್ ಫುಲ್ ಪೆಟ್ರೋಲ್ / ಡೀಸೆಲ್ ಹಾಕಿದರೆ ವಾಹನಕ್ಕೆ ಬೆಂಕಿ ಹೊತ್ತುಕೊಳ್ಳುತ್ತದೆ.

ಪರಿಸಮಾಪ್ತಿ

ಬೇಸಿಗೆಯಾಗಲಿ/ಮಳೆಗಾಲವೇ ಆಗಲಿ ನಿಮ್ಮ ವಾಹನದ ಟ್ಯಾಂಕ್ ಫುಲ್ ಪೆಟ್ರೋಲ್ / ಡೀಸೆಲ್ ಹಾಕಿದರೆ ವಾಹನಕ್ಕೆ ಬೆಂಕಿ ಹೊತ್ತುಕೊಳ್ಳುವುದಿಲ್ಲ ಎಂದು ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ ಸ್ಪಷ್ಟಪಡಿಸಿದೆ.

Rating

Misleading
ಗಾಗಿ ನಿಮ್ಮ ಮನವಿಯನ್ನು ಕಳಿಸಲು [email protected] ಗೆ ಇಮೇಲ್ ಮಾಡಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+