Fake: ಸರ್ಕಾರದಿಂದ ವಿದ್ಯಾರ್ಥಿಗಳಿಗೆ ಸ್ಮಾರ್ಟ್ ಫೋನ್ ?
ನವದೆಹಲಿ, ಆ. 27: ಕೊರೊನಾವೈರಸ್ ದೆಸೆಯಿಂದ ಶಾಲೆ, ಕಾಲೇಜುಗಲು ಬಂದ್ ಆಗಿದ್ದು, ಆನ್ ಲೈನ್ ಶಿಕ್ಷಣಕ್ಕೆ ಹೊಂದಿಕೊಳ್ಳಲು ವಿದ್ಯಾರ್ಥಿಗಳು ಕಷ್ಟಪಡುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಕೇಂದ್ರ ಸರ್ಕಾರದಿಂದ ವಿದ್ಯಾರ್ಥಿಗಳಿಗೆ ಸ್ಮಾರ್ಟ್ ಫೋನ್ ನೀಡಲಾಗುತ್ತದೆ ಎಂಬ ಸುಳ್ಳು ಸುದ್ದಿಯೊಂದು ಸಾಮಾಜಿಕ ಜಾಲ ತಾಣಗಳಲ್ಲಿ ಹಬ್ಬಿಸಲಾಗುತ್ತಿದೆ.
Recommended Video
ಸಾಮಾಜಿಕ ಜಾಲ ತಾಣಗಳಲ್ಲಿ ಸುದ್ದಿ ಪ್ರಕಾರ, ಕೊವಿಡ್ 19 ಸಾಂಕ್ರಾಮಿಕದಿಂದಾಗಿ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಸಮಸ್ಯೆ ಉಂಟಾಗಿದೆ. ಲಾಕ್ಡೌನ್ ನಿಂದಾಗಿ ವ್ಯಾಸಂಗ ಸಾಧ್ಯವಾಗಿಲ್ಲ. ಹೀಗಾಗಿ, ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಕೇಂದ್ರ ಸರ್ಕಾರವು ವಿದ್ಯಾರ್ಥಿಗಳಿಗೆ ಸ್ಮಾರ್ಟ್ ಫೋನ್ ವಿತರಿಸಲಿದೆ ಎಂದು ಹೇಳಲಾಗಿದೆ.
ಮಾರ್ಚ್ ತಿಂಗಳಿನಿಂದ ಶಾಲೆ, ಕಾಲೇಜುಗಳು ಬಂದ್ ಆಗಿದ್ದು, ಹಲವು ರಾಜ್ಯಗಳಲ್ಲಿ ಬಾಕಿ ಉಳಿದಿದ್ದ ಪರೀಕ್ಷೆಗಳನ್ನು ನಡೆಸಲಾಯಿತು. ಕೊವಿಡ್ 19 ಸುರಕ್ಷತೆ ನಿಯಮಗಳನ್ನು ಪಾಲಿಸಲಾಗಿತ್ತು. ಹಲವೆಡೆ ಆನ್ ಲೈನ್ ಶಾಲೆ ಆರಂಭಿಸಲು ಯತ್ನಿಸಿದರೂ ವಿದ್ಯಾರ್ಥಿಗಳ ಬಳಿ ಸೂಕ್ತ ಸಾಧನ, ಇಂಟರ್ನೆಟ್ ಸಂಪರ್ಕ ಕೊರತೆ ಎದ್ದು ಕಾಣತೊಡಗಿತು. ಹೀಗಾಗಿ ಸರ್ಕಾರವೇ ಇದಕ್ಕೆ ಪರಿಹಾರ ರೂಪದಲ್ಲಿ ಸ್ಮಾರ್ಟ್ ಫೋನ್ ವಿತರಿಸಲು ಮುಂದಾಗಿದೆ ಎಂದು ಸುದ್ದಿ ಹಂಚಿಕೊಳ್ಳಲಾಗಿದೆ.

ಈ ಸುದ್ದಿ ಜೊತೆಗೆ ಲಿಂಕ್ ನೀಡಲಾಗಿದ್ದು, ವಿದ್ಯಾರ್ಥಿಗಳು ನೋಂದಣಿ ಮಾಡಿಕೊಳ್ಳಲು ಕೋರಲಾಗಿದೆ. ಆದರೆ, ಈ ಸುದ್ದಿ ಹಾಗೂ ಲಿಂಕ್ ಎಲ್ಲವೂ ಸುಳ್ಳು, ನಕಲಿ ಎಂದು ಶಿಕ್ಷಣ ಇಲಾಖೆ ಹೇಳಿದೆ. ಈ ಲಿಂಕ್ ಕ್ಲಿಕ್ ಮಾಡಿದರೆ ನಕಲಿ ವೆಬ್ ಸೈಟ್ ಗಳಿಗೆ ಕರೆದೊಯ್ದು ನಿಮ್ಮ ಖಸಗಿ ಮಾಹಿತಿ, ಹಣ ದೋಚಬಹುದು ಎಂದು ಸರ್ಕಾರ ಎಚ್ಚರಿಸಿದೆ.
दावा: कोरोना वायरस के कारण स्कूल और कॉलेज बंद होने के कारण छात्रों की शिक्षा प्रभावित हुई है, इसलिए सरकार सभी छात्रों को मुफ्त एंड्रॉइड स्मार्टफोन दे रही है #PIBfactcheck: यह दावा फर्जी है, केंद्र सरकार ने ऐसी कोई घोषणा नहीं की है. pic.twitter.com/LkFA2rMtSn
— PIB Fact Check (@PIBFactCheck) August 24, 2020
Fact Check: 2000 ರೂಪಾಯಿ ನೋಟುಗಳನ್ನು ಆರ್‌ಬಿಐ ನಿಷೇಧಿಸಿದೆ
ಪ್ರೆಸ್ ಇನ್ಫಾರ್ಮೇಷನ್ ಬ್ಯೂರೋ(PIB) ತನ್ನ ಸತ್ಯ ಸಂಶೋಧನಾ ತಂಡದ ಮೂಲಕ ಇಂಥ ಸುದ್ದಿ ಹಬ್ಬಿಸಿರುವ ಕೆಲವು ಪೋಸ್ಟ್ ಗಳನ್ನು ಗುರುತಿಸಿ, ಸ್ಕ್ರೀನ್ ಶಾಟ್ ಹಾಕಿ ಟ್ವೀಟ್ ಮಾಡಿದೆ. ಈ ಮೂಲಕ ಇಂಥ ಸುದ್ದಿ ನಂಬಬೇಡಿ, ಸರ್ಕಾರದ ಅಧಿಕೃತ ವಕ್ತಾರರು, ವೆಬ್ ಸೈಟಿನಲ್ಲಿ ಬರುವ ಮಾಹಿತಿಯನ್ನು ಮಾತ್ರ ನಂಬಿ ಎಂದು ಕೋರಿದೆ.

Fact Check
ಕ್ಲೇಮು
ಕೇಂದ್ರ ಸರ್ಕಾರದಿಂದ ವಿದ್ಯಾರ್ಥಿಗಳಿಗೆ ಸ್ಮಾರ್ಟ್ ಫೋನ್ ನೀಡಲಾಗುತ್ತದೆ
ಪರಿಸಮಾಪ್ತಿ
ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಕೇಂದ್ರ ಸರ್ಕಾರವು ವಿದ್ಯಾರ್ಥಿಗಳಿಗೆ ಸ್ಮಾರ್ಟ್ ಫೋನ್ ವಿತರಿಸಲಿದೆ ಎಂಬುದು ಸುಳ್ಳು ಸುದ್ದಿ ಸರ್ಕಾರ ಸ್ಪಷ್ಟಪಡಿಸಿದೆ












Click it and Unblock the Notifications