ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Fact Check: ಟಿ20 ವಿಶ್ವಕಪ್: ಪಾಕ್ ಸೋಲು, ಕ್ರಿಕೆಟಿಗ ಹಸನ್ ಅಲಿ ಮನೆ ಮೇಲೆ ದಾಳಿ?

|
Google Oneindia Kannada News

ಇಸ್ಲಾಮಾಬಾದ್, ನವೆಂಬರ್ 15: ಐಸಿಸಿ ಟಿ 20 ವಿಶ್ವಕಪ್‌ ಟೂರ್ನಿಯಲ್ಲಿ ಕಳೆದ ಗುರುವಾರ ನಡೆದ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಆಸ್ಟ್ರೇಲಿಯಾ ಐದು ವಿಕೆಟ್ ಗೆಲುವು ದಾಖಲಿಸುವ ಮೂಲಕ ಫೈನಲ್ ಪ್ರವೇಶಿಸಿತು. ಆಸ್ಟ್ರೇಲಿಯಾ ಆಟಗಾರ ಮ್ಯಾಥ್ಯೂ ವೇಡ್ ಅವರ ನಿರ್ಣಾಯಕ ಕ್ಯಾಚ್ ಅನ್ನು ಕೈಬಿಟ್ಟು ಆಸ್ಟ್ರೇಲಿಯಾದ ರೋಚಕ ಗೆಲುವಿಗೆ ಅವಕಾಶ ಮಾಡಿಕೊಟ್ಟ ಪಾಕ್ ಆಲ್‌ರೌಂಡರ್ ಹಸನ್ ಅಲಿ ಆನ್‌ಲೈನ್‌ನಲ್ಲಿ ತೀವ್ರ ಟೀಕೆಗೆ ಗುರಿಯಾಗಿದ್ದರು. ಈ ಹಿನ್ನೆಲೆಯಲ್ಲಿ ಹಸನ್ ಅಲಿ ಅವರ ಮನೆಗೆ ಪಾಕಿಸ್ತಾನದ ಕ್ರಿಕೆಟ್ ಅಭಿಮಾನಿಗಳು ಕಲ್ಲು ತೂರಾಟ ನಡೆಸಿದ್ದಾರೆ ಎಂಬ ಹೇಳಿಕೆಯೊಂದಿಗೆ ಕಿಟಕಿ ಒಡೆದ ಮನೆಯ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡತೊಡಗಿದೆ. ದಾಳಿಯಿಂದಾಗಿ ಹಸನ್ ಅಲಿ ಅವರ ನಿವಾಸಕ್ಕೆ ಭದ್ರತೆಯನ್ನು ಬಿಗಿಗೊಳಿಸಲಾಗಿದೆ ಎಂದು ವೈರಲ್ ಫೋಟೋದ ಸಂದೇಶ ಹೇಳುತ್ತದೆ.

Fact Check: Pak cricketer Hasan Alis house was attacked after T20 World Cup defeat?

ಇಂಡಿಯಾ ಟುಡೇ ಆಂಟಿ ಫೇಕ್ ನ್ಯೂಸ್ ವಾರ್ ರೂಮ್ (ಎಎಫ್‌ಡಬ್ಲ್ಯೂಎ) ಈ ಸಂದೇಶ ಸುಳ್ಳು ಎಂದು ಕಂಡುಹಿಡಿದಿದೆ. ಹಸನ್ ಅಲಿ ಅವರ ಕುಟುಂಬದ ಮೂಲಗಳು ಮತ್ತು ಪಾಕಿಸ್ತಾನದ ಪತ್ರಕರ್ತರು ಕ್ರಿಕೆಟಿಗನ ಮನೆ ಮೇಲೆ ದಾಳಿ ಮಾಡಿಲ್ಲ ಎಂದು ಖಚಿತಪಡಿಸಿದ್ದಾರೆ. ಅಲ್ಲದೆ ವೈರಲ್ ಫೋಟೋ ಪಾಕಿಸ್ತಾನದ್ದಲ್ಲ ಬದಲಿಗೆ ಅದು ಕರ್ನಾಟಕದ್ದಾಗಿದೆ.

AFWA ತನಿಖೆ

ಹಸನ್ ಅಲಿ ಅವರ ಮನೆಯ ಮೇಲೆ ಕಲ್ಲು ತೂರಾಟದ ಬಗ್ಗೆ ಯಾವುದೇ ವಿಶ್ವಾಸಾರ್ಹ ವರದಿಗಳು ಕಂಡುಬಂದಿಲ್ಲ. ಜೊತೆಗೆ ಭಾರತದಲ್ಲಿ ಹಸನ್ ಅಲಿ ಅವರ ಪತ್ನಿ ಸಮಿಯಾ ಹಸನ್ ಅಲಿ ಅವರ ಕುಟುಂಬವನ್ನು ದಾಳಿಯ ಬಗ್ಗೆ ಪ್ರಶ್ನಿಸಿದಾಗ ಅನಾಮಧೇಯತೆಯ ಆಪ್ತರೊಬ್ಬರು ಹಸನ್ ಅಲಿ ಅವರ ಮನೆಯ ಮೇಲೆ ಅಂತಹ ಯಾವುದೇ ದಾಳಿ ನಡೆದಿಲ್ಲ ಮತ್ತು ವೈರಲ್ ಸಂದೇಶ ತಪ್ಪು ಎಂದು ದೃಢಪಡಿಸಿದರು. ಜೊತೆಗೆ ಹಾನಿಗೊಳಗಾದ ಮನೆಯ ಚಿತ್ರ ಕ್ರಿಕೆಟಿಗನಿಗೆ ಸೇರಿದ್ದಲ್ಲ ಎಂದು ವ್ಯಕ್ತಿ ಸ್ಪಷ್ಟಪಡಿಸಿದ್ದಾರೆ. ಈ ಹಿಂದೆ ಹಸನ್ ಅಲಿ ಅವರ ಪತ್ನಿ ಸಮಿಯಾ ಅವರು ತಮ್ಮ ಇನ್‌ಸ್ಟಾಗ್ರಾಮ್ ಪುಟದಲ್ಲಿ 'ತಮಗೆ ಪಾಕಿಸ್ತಾನದ ಜನರಿಂದ ಬೆದರಿಕೆಗಳು ಬಂದಿವೆ' ಎನ್ನುವ ನಕಲಿ ಟ್ವಿಟ್ಟರ್ ಹ್ಯಾಂಡಲ್ ಅನ್ನು ಹಾಕಿದ್ದರು. ಜೊತೆಗೆ ಇದರೊಂದಿಗೆ ಕುಟುಂಬವು ಸುರಕ್ಷಿತವಾಗಿದೆ. ತನಗೆ ಅಥವಾ ತನ್ನ ಪತಿ ಅಥವಾ ಮಗಳಿಗೆ ಪಾಕಿಸ್ತಾನದ ಜನರಿಂದ ಯಾವುದೇ ಬೆದರಿಕೆಗಳು ಬಂದಿಲ್ಲ ಎಂದು ಸಮಿಯಾ ಸ್ಪಷ್ಟಪಡಿಸಿದ್ದರು.

ಸ್ಥಳೀಯರ ಸ್ಪಷ್ಟನೆ

ಈ ವಿಷಯದ ಬಗ್ಗೆ ಪಾಕಿಸ್ತಾನದ ಕೆಲವು ಸ್ಥಳೀಯ ವರದಿಗಾರರನ್ನು ಸಹ ಪರಿಶೀಲಿಸಲಾಗಿದ್ದು ವೈರಲ್ ಸಂದೇಶವನ್ನು ಸ್ಥಳೀಯ ವರದಿಗಾರರು ತಳ್ಳಿಹಾಕಿದ್ದಾರೆ. ಹಸನ್ ಅಲಿ ಅವರ ಮನೆ ಲಾಹೋರ್ ಬಳಿಯ ಗುಜ್ರಾನ್‌ವಾಲಾ ನಗರದಲ್ಲಿದೆ. ಅಂತಹ ಯಾವುದೇ ಘಟನೆಯ ಈ ಸಂದರ್ಭದಲ್ಲಿ ನಡೆದಿಲ್ಲ. ಒಂದು ವೇಳೆ ನಡೆದಿದ್ದರೆ ಅದನ್ನು ಹೈಲೈಟ್ ಮಾಡಲಾಗುತ್ತಿತ್ತು ಎಂದು ಹೇಳಿದರು.

Fact Check: Pak cricketer Hasan Alis house was attacked after T20 World Cup defeat?

ಈ ಬಗ್ಗೆ ಮಾತನಾಡುತ್ತಾ, 'ದಿ ಡಾನ್' ಪತ್ರಿಕೆಯಲ್ಲಿ ಕೆಲಸ ಮಾಡುವ ಲಾಹೋರ್ ಮೂಲದ ಅಪರಾಧ ವರದಿಗಾರ ಇಮ್ರಾನ್ ಗಬೂಲ್, "ಅಂತಹ ಯಾವುದೇ ಘಟನೆ ನಡೆದಿಲ್ಲ. ನಾನು ಪೊಲೀಸರ ಮೂಲಗಳೊಂದಿಗೆ ದೃಢಪಡಿಸುತ್ತಿದ್ದೇನೆ. ಹಸನ್ ಅಲಿ ಮನೆಯಲ್ಲಿ ದಾಳಿಯ ಬಗ್ಗೆ ಪೊಲೀಸರಿಗೆ ಯಾವುದೇ ದೂರುಗಳು ಬಂದಿಲ್ಲ" ಎಂದು ದೃಢಪಡಿಸಿದ್ದಾರೆ.

ಉರ್ದು ನ್ಯೂಸ್‌ನಲ್ಲಿ ಕೆಲಸ ಮಾಡುವ ಲಾಹೋರ್ ಮೂಲದ ಮತ್ತೊಬ್ಬ ಪತ್ರಕರ್ತ ರಾಯ್ ಶಹನವಾಜ್ ಕೂಡ ಈ ಹಕ್ಕನ್ನು ತಳ್ಳಿಹಾಕಿದರು, "ನಾನು ಪಂಜಾಬ್‌ನ ಗುಜ್ರಾನ್‌ವಾಲಾ ವಿಭಾಗದಲ್ಲಿ ಹಸನ್‌ನ ಸ್ಥಳೀಯ ಗ್ರಾಮವನ್ನು ಪರಿಶೀಲಿಸಿದ್ದೇನೆ. ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ಹೇಳಿಕೊಂಡಂತೆ ಏನೂ ನಡೆದಿಲ್ಲ" ಎಂದಿದ್ದಾರೆ.

Fact Check: Pak cricketer Hasan Alis house was attacked after T20 World Cup defeat?

ವೈರಲ್ ಫೋಟೋ ಯಾವುದು?

ಪಾಕ್ ಆಲ್‌ರೌಂಡರ್ ಹಸನ್ ಅಲಿ ಅವರ ಮನೆ ಎಂದು ವೈರಲ್ ಮಾಡಲಾದ ಫೋಟೋ ಅಕ್ಟೋಬರ್ 2021 ರಲ್ಲಿ ಕರ್ನಾಟಕದ ಅನೇಕ ಸುದ್ದಿ ವರದಿಗಳಿಂದ ಪ್ರಸಾರ ಮಾಡಲಾಗಿದೆ. ಈ ವರದಿಗಳ ಪ್ರಕಾರ ಈ ಮನೆ ಪಾಂಡವಪುರ ಜೆಡಿಎಸ್ ಶಾಸಕ ಹಾಗೂ ಮಾಜಿ ಸಚಿವ ಸಿ ಎಸ್ ಪುಟ್ಟರಾಜು ಅವರದ್ದು. ಅಕ್ಟೋಬರ್ ಆರಂಭದಲ್ಲಿ ಕರ್ನಾಟಕದ ಮಂಡ್ಯ ಜಿಲ್ಲೆಯ ಪಾಂಡವಪುರ ನಗರದಲ್ಲಿ ಸಿ ಎಸ್ ಪುಟ್ಟರಾಜು ಸೇರಿದಂತೆ ಹಲವಾರು ಮನೆಗಳು ಮತ್ತು ವಾಹನಗಳ ಮೇಲೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದರು. ಪ್ರಸಾರವಾದ ಚಿತ್ರದಲ್ಲಿರುವ ಮನೆ ಸಿ ಎಸ್ ಪುಟ್ಟರಾಜು ಅವರದ್ದು ಎಂದು ಮಂಡ್ಯ ವರದಿಗಾರರು ಖಚಿತಪಡಿಸಿದ್ದಾರೆ. ಹಾಗಾಗಿ ಪಾಕ್ ಕ್ರಿಕೆಟಿಗ ಹಸನ್ ಅಲಿ ಅವರ ಮನೆಗೆ ಕಲ್ಲು ತೂರಾಟ ನಡೆದಿದೆ ಎಂಬ ಹೇಳಿಕೆ ಸುಳ್ಳು ಎಂಬುದು ಸ್ಪಷ್ಟವಾಗಿದೆ.

Fact Check

ಕ್ಲೇಮು

ಟಿ20 ವಿಶ್ವಕಪ್ ಸೋಲಿಗೆ ಪಾಕ್ ಕ್ರಿಕೆಟಿಗ ಹಸನ್ ಅಲಿ ಮನೆ ಮೇಲೆ ದಾಳಿ

ಪರಿಸಮಾಪ್ತಿ

ವೈರಲ್ ಫೋಟೋ ಪಾಕ್ ಕ್ರಿಕೆಟಿಗ ಹಸನ್ ಅಲಿ ಅವರ ಮನೆಯದಲ್ಲ ಬದಲಿಗೆ ಪಾಂಡವಪುರ ಜೆಡಿಎಸ್ ಶಾಸಕ ಹಾಗೂ ಮಾಜಿ ಸಚಿವ ಸಿ ಎಸ್ ಪುಟ್ಟರಾಜು ಅವರ ಮನೆಯದ್ದಾಗಿದೆ.

Rating

False
ಗಾಗಿ ನಿಮ್ಮ ಮನವಿಯನ್ನು ಕಳಿಸಲು [email protected] ಗೆ ಇಮೇಲ್ ಮಾಡಿ
English summary
After Pakistan's semi-final defeat to Australia in the ICC T20 World Cup, Pak all-rounder Hasan Ali was subjected to severe online criticism for dropping a crucial catch by Matthew Wade that allowed Australia's thrilling victory.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X