Fact check: ಕೇಜ್ರಿವಾಲ್ ಮತ್ತು ಭಗವಂತ್ ಮಾನ್ ಒಟ್ಟಿಗೆ ಮದ್ಯ ಸೇವನೆ

ನವದೆಹಲಿ ಏಪ್ರಿಲ್ 12: ಪಂಜಾಬ್ ಮುಖ್ಯಮಂತ್ರಿ ಭಗವಂತ್ ಅವರು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರೊಂದಿಗೆ ಇರುವ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ವೈರಲ್ ಆಗುತ್ತಿದೆ. ಈ ಫೋಟೋದಲ್ಲಿ ಕೇಜ್ರಿವಾಲ್ ಮತ್ತು ಭಗವಂತ್ ಮಾನ್ ಒಟ್ಟಿಗೆ ಕುಳಿತು ಆಹಾರ ಸೇವಿಸುತ್ತಿರುವುದು ಕಂಡುಬರುತ್ತದೆ. ಫೋಟೋದಲ್ಲಿ ಆಹಾರ ಮತ್ತು ಪಾನೀಯ ಭಕ್ಷ್ಯಗಳ ನಡುವೆ ಮದ್ಯ ಮತ್ತು ಮಾಂಸವನ್ನು ಸಹ ಕಾಣಬಹುದು. ಈ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡುವ ಮೂಲಕ ಕೇಜ್ರಿವಾಲ್ ಮತ್ತು ಭಗವಂತ್ ಮಾನ್ ಒಟ್ಟಿಗೆ ಕುಳಿತು ಮಾಂಸ ತಿನ್ನುತ್ತಿದ್ದಾರೆ ಮತ್ತು ಮದ್ಯ ಸೇವಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಫೋಟೋದ ಸತ್ಯ ಏನು?

ಇಂಡಿಯಾ ಟುಡೇ ವರದಿ ಪ್ರಕಾರ ವೈರಲ್ ಫೋಟೋವನ್ನು ಎಡಿಟ್ ಮಾಡಲಾಗಿದೆ. ಈ ಫೋಟೋ ಅಸಲಿಯಲ್ಲ ನಕಲಿಯಾಗಿದೆ ಎನ್ನುವುದನ್ನು ದೃಢಪಟ್ಟಿದೆ. ಕೇಜ್ರಿವಾಲ್ ಮತ್ತು ಭಗವಂತ್ ಅವರ ಈ ಫೋಟೋ ನವೆಂಬರ್ 2021 ರದ್ದಾಗಿದೆ. ಇಬ್ಬರು ನಾಯಕರು ಆಟೋರಿಕ್ಷಾ ಚಾಲಕನ ಮನೆಯಲ್ಲಿ ಆಹಾರ ಸೇವಿಸಿದಾಗ ಈ ಫೋಟೋವನ್ನು ತೆಗೆಯಲಾಗಿದೆ. ಕಳೆದ ತಿಂಗಳಷ್ಟೇ ಭಗವಂತ್ ಮಾನ್ ಪಂಜಾಬ್ ಮುಖ್ಯಮಂತ್ರಿಯಾದರು. ಅವರು ಮುಖ್ಯಮಂತ್ರಿಯಾದಾಗಿನಿಂದಲೂ ಅವರಿಗೆ ಸಂಬಂಧಿಸಿದ ಹಲವು ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಇದರಿಂದ ಅವರ ವರ್ಚಸ್ಸು ಕೆಡಿಸುವ ಪ್ರಯತ್ನಗಳು ನಡೆಯುತ್ತಿವೆ.

ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ ಪಂಜಾಬ್‌ ಎಎಪಿ ಅಭ್ಯರ್ಥಿ ಭಗವಂತ್‌ ಮಾನ್‌ 58,206 ಮತಗಳ ಅಂತರದಲ್ಲಿ ಭರ್ಜರಿ ಗೆಲುವು ಸಾಧಿಸಿದ್ದಾರೆ. ಜೊತೆಗೆ ಪಂಜಾಬ್ ಸಿಎಂ ಪಟ್ಟವನ್ನು ಅಲಂಕರಿಸಿದ್ದಾರೆ.

Fact check: Kejriwal and Bhagwant Mann are drinking together

ಪಂಜಾಬ್‌ ವಿಧಾನಸಭೆ ಚುನಾವಣೆಯು ಫೆಬ್ರವರಿ 20ರಂದು ನಡೆದಿದೆ. ಮಾರ್ಚ್ 10ರಂದು ಫಲಿತಾಂಶ ಹೊರಬಿದ್ದಿದೆ. 2017 ರ ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ, 117 ವಿಧಾನಸಭೆ ಕ್ಷೇತ್ರಗಳ ಪೈಕಿ ಕಾಂಗ್ರೆಸ್ 77 ಸ್ಥಾನಗಳನ್ನು ಗೆದ್ದುಕೊಂಡಿದೆ. ಭಾರತೀಯರ ಜನತಾ ಪಾರ್ಟಿ (ಬಿಜೆಪಿ) ಕೇವಲ ಮೂರು ಸ್ಥಾನಗಳನ್ನು ತನ್ನದಾಗಿಸಿಕೊಂಡಿತ್ತು.

Fact check: Kejriwal and Bhagwant Mann are drinking together

ಜೊತೆಗೆ 2016ರಲ್ಲಿ ನಡೆದ ಪಠಾಣ್‌ಕೋಟ್‌ ದಾಳಿಯ ವೇಳೆ ಪಂಜಾಬ್‌ಗೆ ಸೇನೆ ಕಳುಹಿಸಿದ್ದಕ್ಕಾಗಿ 7.5 ಕೋಟಿ ರೂಪಾಯಿ ನೀಡುವಂತೆ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪಂಜಾಬ್‌ಗೆ ಕೇಳಿತ್ತು ಎಂದು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಏಪ್ರಿಲ್ 2 ರಂದು ಹೇಳಿಕೆ ನೀಡಿ ವಿವಾದವನ್ನು ಹುಟ್ಟುಹಾಕಿದ್ದರು.

Fact Check

ಕ್ಲೇಮು

ಪಂಜಾಬ್ ಮುಖ್ಯಮಂತ್ರಿ ಭಗವಂತ್ ಅವರು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರೊಂದಿಗೆ ಮದ್ಯೆ ಸೇವನೆ ಮಾಡಿದ್ದಾರೆ

ಪರಿಸಮಾಪ್ತಿ

ಪಂಜಾಬ್ ಮುಖ್ಯಮಂತ್ರಿ ಭಗವಂತ್ ಅವರು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರೊಂದಿಗೆ ಮದ್ಯೆ ಸೇವನೆ ಮಾಡಿದ್ದಾರೆನ್ನುವ ಫೋಟೋವನ್ನು ಎಡಿಟ್ ಮಾಡಲಾಗಿದೆ.

Rating

Misleading
ಗಾಗಿ ನಿಮ್ಮ ಮನವಿಯನ್ನು ಕಳಿಸಲು [email protected] ಗೆ ಇಮೇಲ್ ಮಾಡಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+