ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Fact Check: ದೇಶದಲ್ಲಿ ಹಿಂದೂ ದೇವಾಲಯ ಮಾತ್ರ ಜಿಎಸ್‌ಟಿ ಪಾವತಿಸಬೇಕೆ?

|
Google Oneindia Kannada News

ಹೈದಾರಾಬಾದ್, ಸೆಪ್ಟೆಂಬರ್‌ 30: "ಭಾರತದಲ್ಲಿ ಹಿಂದೂ ದೇವಾಲಯಗಳು ಮಾತ್ರ ತೆರಿಗೆಯನ್ನು ಪಾವತಿ ಮಾಡುತ್ತಿದೆ, ಉಳಿದ ಧರ್ಮದ ದೇವಾಲಯಗಳು ಭಾರತದಲ್ಲಿ ತೆರಿಗೆ ಪಾವತಿ ಮಾಡಬೇಕಾಗಿಲ್ಲ," ಎಂದು ಯೂಟ್ಯೂಬರ್‌‌ ಎಲ್ವೀಶ್ ಯಾದವ್‌ ವಾದ ಮಾಡಿದ್ದಾರೆ. ಈ ವಿಷಯದ ಸತ್ಯಾಸತ್ಯತೆಯ ಬಗ್ಗೆ ತಿಳಿದು ಈಗ ನೆಟ್ಟಿಗರು ಯೂಟ್ಯೂಬರ್‌‌ ಎಲ್ವೀಶ್ ಯಾದವ್‌ ವಿರುದ್ದ ವಾಗ್ದಾಳಿ ನಡೆಸುತ್ತಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಯೂಟ್ಯೂಬರ್‌‌ ಎಲ್ವೀಶ್ ಯಾದವ್‌ "ಎಲ್ಲಾ ಧರ್ಮದ ಜನರು ತಮ್ಮ ಧರ್ಮವನ್ನು ಆನಂದಿಸುತ್ತಾರೋ ಆ ದೇಶದಲ್ಲಿ ಯಾಕೆ ಕೇವಲ ಹಿಂದೂ ದೇವಾಲಯಗಳು ತೆರಿಗೆಯನ್ನು ಪಾವತಿ ಮಾಡಬೇಕು," ಎಂದು ಪ್ರಶ್ನಿಸಿದ್ದಾರೆ. ಈ ಟ್ವೀಟ್ ಅನ್ನು ಯೂಟ್ಯೂಬರ್‌ ಎಲ್ವೀಶ್ ಯಾದವ್‌ ಮಾಡುತ್ತಿದ್ದಂತೆಯೇ ಸುಮಾರು ಇಪ್ಪತ್ತು ಸಾವಿರ ಮಂದಿ ಲೈಕ್ ಮಾಡಿದ್ದಾರೆ ಹಾಗೂ 7500 ಜನರು ರೀಟ್ವೀಟ್ ಮಾಡಿದ್ದಾರೆ.

Fact Check: ನ್ಯೂಯಾರ್ಕ್ ಟೈಮ್ಸ್‌ ಮುಖಪುಟದಲ್ಲಿ ಮೋದಿ ಬಗ್ಗೆ ವರದಿ ಮಾಡಿಲ್ಲFact Check: ನ್ಯೂಯಾರ್ಕ್ ಟೈಮ್ಸ್‌ ಮುಖಪುಟದಲ್ಲಿ ಮೋದಿ ಬಗ್ಗೆ ವರದಿ ಮಾಡಿಲ್ಲ

ಆದರೆ ನಿಜವಾಗಿ ಯೂಟ್ಯೂಬರ್‌‌ ಎಲ್ವೀಶ್ ಯಾದವ್‌ ಅವರ ಈ ಆರೋಪವು ಸುಳ್ಳಾಗಿದೆ ಎಂದು ತಿಳಿದು ಬಂದಿದೆ. ಈ ಬಗ್ಗೆ 2017 ರಲ್ಲಿ ಪತ್ರಿಕಾ ಮಾಹಿತಿ ಬ್ಯೂರೋದಲ್ಲೇ ಸ್ಪಷ್ಟಣೆಯನ್ನು ನೀಡಿದೆ. 2017 ರಲ್ಲಿ ಈ ರೀತಿಯೇ ಸುಳ್ಳು ಮಾಹಿತಿಯು ಹರಡುತ್ತಿತ್ತು. ಈ ಹಿನ್ನೆಲೆ ಈ ಬಗ್ಗೆ ಸರ್ಕಾರವು ಸ್ಪಷ್ಟನೆಯನ್ನು ನೀಡಿತ್ತು. ಇದು ಸುಳ್ಳು ಸುದ್ದಿ ಎಂದು ಹೇಳಿತ್ತು. ಇದನ್ನು ಹಂಚದಂತೆಯೂ ತಿಳಿಸಿತ್ತು.

ಈ ಸುದ್ದಿ ಸುಳೆಂದು 2017 ರಲ್ಲೇ ಸರ್ಕಾರ ಸ್ಪಷ್ಟನೆ ನೀಡಿತ್ತು

"ದೇವಾಲಯದ ಟ್ರಸ್ಟುಗಳು ಜಿಎಸ್ ಟಿಯನ್ನು ಪಾವತಿ ಮಾಡಬೇಕಾಗುತ್ತದೆ. ಆದರೆ ಚರ್ಚು ಹಾಗೂ ಮಸೀದಿಗಳು ಯಾವುದೇ ಜಿಎಸ್‌ಟಿ ಪಾವತಿ ಮಾಡಬೇಕಾಗಿಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಸಂದೇಶವೊಂದು ಹರಿದಾಡುತ್ತಿದೆ. ಇದು ಸಂಪೂರ್ಣವಾಗಿ ಸುಳ್ಳು ಸುದ್ದಿ. ಯಾಕೆಂದರೆ ಯಾವುದೇ ಜಿಎಸ್‌ಟಿ ಕಾನೂನಿನ ಅಡಿಯಲ್ಲಿ ಧರ್ಮದ ಆಧಾರದಲ್ಲಿ ವಿಂಗಡನೆ ಮಾಡಲಾಗಿಲ್ಲ. ಆದ್ದರಿಂದ ಇಂತಹ ಸುಳ್ಳು ಮಾಹಿತಿಯನ್ನು ಜನರು ಹಂಚ ಬಾರದು ಎಂದು ನಾವು ಈ ಮೂಲಕ ವಿನಂತಿ ಮಾಡುತ್ತೇವೆ," ಎಂದು ಪತ್ರಿಕಾ ಮಾಹಿತಿ ಬ್ಯೂರೋ ತಿಳಿಸಿತ್ತು. ಇನ್ನು ಹಣಕಾಸು ಸಚಿವಾಲಯವು ಕೂಡಾ ಇದೇ ಮಾಹಿತಿಯನ್ನು ಟ್ವೀಟ್‌ ಮಾಡಿದೆ.

 ನಿಜವಾಗಿ ಎಲ್ಲಾ ಧಾರ್ಮಿಕ ಸಂಸ್ಥೆಗಳು ಜಿಎಸ್‌ಟಿ ಅಡಿಯಲ್ಲಿ ಬರುತ್ತದೆ

ನಿಜವಾಗಿ ಎಲ್ಲಾ ಧಾರ್ಮಿಕ ಸಂಸ್ಥೆಗಳು ಜಿಎಸ್‌ಟಿ ಅಡಿಯಲ್ಲಿ ಬರುತ್ತದೆ

ಸರಕು ಹಾಗೂ ಸೇವೆ ತೆರಿಗೆ ನಿಯಮದ ಪ್ರಕಾರ ಯಾವುದೇ ವ್ಯಾಪಾರ ಸಂಸ್ಥೆಗಳು, ಧಾರ್ಮಿಕ ಕೇಂದ್ರಗಳು ಕಡ್ಡಾಯವಾಗಿ ನೋಂದಾವಣಿ ಮಾಡಿಕೊಳ್ಳಬೇಕು. ಹಾಗೆಯೇ ಯಾವುದೇ ಧಾರ್ಮಿಕ ಕೇಂದ್ರಗಳು ಆಗಲಿ ವ್ಯಾಪಾರ ನಡೆಸುವ ಸಂಸ್ಥೆಗಳು ಆಗಲಿ ಜಿಎಸ್‌ಟಿಯಿಂದ ಹೊರತಾಗಿಲ್ಲ. ಜಿಎಸ್‌ಟಿಯಲ್ಲಿ ನೋಂದಾವಣಿ ಮಾಡಿಕೊಳ್ಳಬೇಕಾಗುತ್ತದೆ. ಆ ಬಳಿಕ ಸರಿಯಾದ ದಾಖಲೆಯನ್ನು ಸಲ್ಲಿಸಬೇಕಾಗುತ್ತದೆ. ಬಳಿಕ ತೆರಿಗೆ ವಿನಾಯಿತಿ ಇರುತ್ತದೆ.

Fact Check: ವಿಪಕ್ಷ ನಾಯಕರ ಸಭೆಗೆ ಸುಬ್ರಮಣಿಯನ್ ಸ್ವಾಮಿ ಭಾಗಿಯಾಗಿದ್ರಾ?Fact Check: ವಿಪಕ್ಷ ನಾಯಕರ ಸಭೆಗೆ ಸುಬ್ರಮಣಿಯನ್ ಸ್ವಾಮಿ ಭಾಗಿಯಾಗಿದ್ರಾ?

ಜಿಎಸ್‌ಟಿ ನಿಯಮ ಏನು ಹೇಳುತ್ತದೆ?

ನಿಯಮದ ಪ್ರಕಾರ, "ದತ್ತಿ ಸಂಸ್ಥೆಗಳು ಹಾಗೂ ಧಾರ್ಮಿಕ ಟ್ರಸ್ಟ್‌ಗಳು ಈ ಹಿಂದಿನ ತೆರಿಗೆಯ ವ್ಯವಸ್ಥೆಯ ಪ್ರಕಾರ ತೆರಿಗೆ ವಿನಾಯಿತಿಯನ್ನು ಪಡೆದಿರಬಹುದು. ಆದರೆ ಅವುಗಳಿಗೆ ತೆರಿಗೆ ವಿನಾಯತಿಯು ಈಗ ಬರುವುದಿಲ್ಲ. ದತ್ತಿ ಸಂಸ್ಥೆಗಳು ಹಾಗೂ ಧಾರ್ಮಿಕ ಟ್ರಸ್ಟ್‌ಗಳು ಜಿಎಸ್‌ಟಿ ಅಡಿಯಲ್ಲಿ ಬರಬಹುದು. ಅದು ದತ್ತಿ ಸಂಸ್ಥೆ ಎಂಬುವುದನ್ನು ಸ್ಪಷ್ಟಪಡಿಸಬೇಕು ," ಎಂದು ಉಲ್ಲೇಖವಾಗಿದೆ. ಅಂದರೆ ದೇಶದಲ್ಲಿ ಎಲ್ಲಾ ಧಾರ್ಮಿಕ ಸಂಸ್ಥೆಗಳು ಜಿಎಸ್‌ಟಿ ಅಡಿಯಲ್ಲಿ ಬರುತ್ತದೆ.

 ಯೂಟ್ಯೂಬರ್‌‌ ಎಲ್ವೀಶ್ ಯಾದವ್‌ ವಿರುದ್ದ ವಾಗ್ದಾಳಿ

ಯೂಟ್ಯೂಬರ್‌‌ ಎಲ್ವೀಶ್ ಯಾದವ್‌ ವಿರುದ್ದ ವಾಗ್ದಾಳಿ

ಇನ್ನು ಯೂಟ್ಯೂಬರ್‌‌ ಎಲ್ವೀಶ್ ಯಾದವ್‌ ಮಾಡಿರುವ ಟ್ವೀಟ್‌ಗೆ ಹಲವಾರು ಮಂದಿ ಪ್ರತಿಕ್ರಿಯೆ ನೀಡಿದ್ದಾರೆ. ಒಬ್ಬರು ಈ ಬಗ್ಗೆ ವರದಿಯನ್ನು ಮಾಡುವಂತೆ ಮಾಧ್ಯಮಗಳು ಟ್ಯಾಗ್‌ ಮಾಡಿದರೆ, ಇನ್ನೂ ಕೆಲವರು ಇದು ಸುಳ್ಳು ಎಂದು ತಿಳಿದು ಯೂಟ್ಯೂಬರ್‌‌ ಎಲ್ವೀಶ್ ಯಾದವ್‌ ವಿರುದ್ದ ಹೌಹಾರಿದ್ದಾರೆ. "ಇಂತಹ ಹಲವಾರು ಜನರು ಇರುತ್ತಾರೆ, ಅವರು ಮಾಹಿತಿಯೇ ಇಲ್ಲದೇ ಏನೇನೋ ಮಾತನಾಡುತ್ತಾರೆ," ಎಂದು ಕೂಡಾ ಕೆಲವರು ಪ್ರತಿಕ್ರಿಯಿಸಿದ್ದಾರೆ. ಇನ್ನು ಕೆಲವರು, "ಈ ಸುದ್ದಿಯು ಸುಳ್ಳು ಎಂದು ಯಾಕೆ ಟ್ವೀಟರ್‌ ಇನ್ನೂ ಮಾರ್ಕ್ ಮಾಡಿಲ್ಲ," ಎಂದು ಪ್ರಶ್ನಿಸಿದ್ದಾರೆ. ಇನ್ನೂ ಕೆಲವರು ಈ ಸುಳ್ಳು ಸುದ್ದಿಗೂ 20 ಸಾವಿರ ಮಂದಿ ಲೈಕ್‌ ಮಾಡಿರುವುದಕ್ಕೆ ದೇಶದ ಜನರು ಎಲ್ಲವನ್ನೂ ಹೇಗೆ ನಂಬಿ ಬಿಡುತ್ತಾರೆ ಎಂದು ಆತಂಕ ಪಟ್ಟಿದ್ದಾರೆ. ಕೆಲವರು 2017 ರಲ್ಲಿ ಕೇಂದ್ರ ಸರ್ಕಾರ ನೀಡಿದ ಸ್ಪಷ್ಟಣೆಯನ್ನು ಉಲ್ಲೇಖ ಮಾಡಿದ್ದಾರೆ.

(ಒನ್‌ಇಂಡಿಯಾ ಸುದ್ದಿ)

Fact Check

ಕ್ಲೇಮು

ದೇಶದಲ್ಲಿ ಹಿಂದೂ ದೇವಾಲಯ ಮಾತ್ರ ಜಿಎಸ್‌ಟಿ ಪಾವತಿಸಬೇಕಾಗಿದೆ.

ಪರಿಸಮಾಪ್ತಿ

ಇದು ಸುಳ್ಳು ಸುದ್ದಿ ಎಂದು 2017 ರಲ್ಲಿ ಸರ್ಕಾರ ಸ್ಪಷ್ಟಪಡಿಸಿದೆ.

Rating

False
ಗಾಗಿ ನಿಮ್ಮ ಮನವಿಯನ್ನು ಕಳಿಸಲು [email protected] ಗೆ ಇಮೇಲ್ ಮಾಡಿ
English summary
Fact Check: Do Hindu Temples Only Come Under The GST in India?. Explained, Read on.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X