Fact check: ಇಂಡಿಗೋ ವಿಮಾನದಲ್ಲಿ ಕುಶನ್‌ಲೆಸ್ ಸೀಟ್: ಇದರ ಹಿಂದಿನ ಸತ್ಯವೇನು?
ಇತ್ತೇಚೆಗೆ ವಿಮಾನದ ವಿಡಿಯೋವೊಂದು ವೈರಲ್ ಆಗಿದೆ. ವೈರಲ್ ಆಗಿರುವ ವಿಡಿಯೋದಲ್ಲಿ ಇಂಡಿಯೋ ವಿಮಾನದಲ್ಲಿ ಕುಳಿತುಕೊಳ್ಳುವ ಸೀಟ್ ಮೇಲೆ ಕುಶನ್ ಕಾಣುವುದಿಲ್ಲ. ಈ ವಿಡಿಯೋ ಕಂಡು ಜನ ಆಶ್ಚರ್ಯಗೊಂಡಿದ್ದಾರೆ. ಈ ವಿಡಿಯೋದ ಹಿಂದಿನ ಸತ್ಯವೇನು ಎನ್ನುವುದನ್ನು ಈಗ ನೋಡೋಣ.
ಜನರು ಸೌಕರ್ಯ, ಉತ್ತಮ ಆತಿಥ್ಯ ಮತ್ತು ಸಮಯ ಉಳಿತಾಯಕ್ಕಾಗಿ ವಿಮಾನಗಳನ್ನು ಆಯ್ಕೆ ಮಾಡುತ್ತಾರೆ. ಅವರು ನಿರೀಕ್ಷಿತ ಸೇವೆಗಳನ್ನು ಪಡೆಯದಿದ್ದಾಗ ವಿವಾದ ಉಂಟಾಗುತ್ತದೆ. ಆದರೆ ಫ್ಲೈಟ್ ನಲ್ಲಿ ನಡೆಯುವ ಕೆಲ ಘಟನೆಗಳು ಕಾಡ್ಗಿಚ್ಚಿನಂತೆ ಅಂತರ್ಜಾಲದಲ್ಲಿ ವೈರಲ್ ಆಗುತ್ತವೆ.
Beautiful @IndiGo6E — I do hope I land safely! :)
— Yavanika Raj Shah (@yavanika_shah) March 6, 2024
This is your flight from Bengaluru to Bhopal 6E 6465. pic.twitter.com/DcPJTq3zka
ಇದೇ ಧಾಟಿಯಲ್ಲಿ ಒಂದು ವಿಚಿತ್ರವಾದ ಚಿತ್ರ ಎಲ್ಲಾ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ವೈರಲ್ ಆಗಿದ್ದು, ನೆಟಿಜನ್‌ಗಳನ್ನು ಗೊಂದಲಕ್ಕೀಡುಮಾಡಿದೆ. ಜೊತೆಗೆ ನಗು ಕೂಡ ತರಿಸಿದೆ. ಬೆಂಗಳೂರಿನಿಂದ ಭೋಪಾಲ್‌ಗೆ ಇಂಡಿಗೋ ವಿಮಾನದಲ್ಲಿ ತೆಗೆದ ವೈರಲ್ ಚಿತ್ರದಲ್ಲಿ, ಎರಡು ಸೀಟುಗಳಲ್ಲಿ ಕುಶನ್ ಇಲ್ಲ. ಈ ಚಿತ್ರವನ್ನು ಸೆರೆಹಿಡಿದ ಪ್ರಯಾಣಿಕ ಅದನ್ನು ಎಕ್ಸ್ (ಹಿಂದೆ ಟ್ವಿಟರ್) ನಲ್ಲಿ ಹಂಚಿಕೊಂಡಿದ್ದಾರೆ. ಈ ಆಸಕ್ತಿದಾಯಕ ಪೋಸ್ಟ್ ನೆಟ್ಟಿಗರ ಗಮನ ಸೆಳೆದು ವೈರಲ್ ಆಗಿದೆ.

"ಇದು ಬೆಂಗಳೂರಿನಿಂದ ಭೋಪಾಲ್ @IndiGo6E 6465 ವಿಮಾನವಾಗಿದೆ" ಎಂದು ಯವನಿಕಾ ಬರೆದಿದ್ದಾರೆ. ಇದರೊಂದಿಗೆ ಅವರು ಆಸನಗಳ ಮೇಲೆ ಕುಶನ್ ಇಲ್ಲದ ಚಿತ್ರಗಳನ್ನು ಸಹ ಹಂಚಿಕೊಂಡಿದ್ದಾರೆ.
ಸತ್ಯ ಪರಿಶೀಲನೆ
ಪೋಸ್ಟ್‌ಗೆ ಪ್ರತಿಕ್ರಿಯಿಸಿದ ಇಂಡಿಗೋ, ಆಸನಗಳು ಚಿತ್ರದಲ್ಲಿ ತೋರಿಸಿರುವ ರೀತಿಯಲ್ಲಿಲ್ಲ. ಸೀಟ್ ಕುಶನ್‌ಗಳು ಇಲ್ಲದೇ ಇರುವ ಈ ದೃಶ್ಯ ಶುಚಿಗೊಳಿಸುವ ಕಾರ್ಯವಿಧಾನದ ಭಾಗವಾಗಿದೆ ಎಂದು ವಿವರಿಸಿದೆ. ವಿಮಾನ ನಿರ್ಗಮನದ ಮೊದಲು ಶುಚಿಗೊಳಿಸುವ ಸಿಬ್ಬಂದಿಗಳು ಶುಚಿಗೊಳಿಸುವ ಉದ್ದೇಶಗಳಿಗಾಗಿ ಆಸನ ಕುಶನ್‌ಗಳನ್ನು ತೆಗೆದುಹಾಕುತ್ತಾರೆ ಎಂದಿದೆ.

Fact Check
ಕ್ಲೇಮು
ಸಾಮಾಜಿಕ ಜಾಲತಾಣದಲ್ಲಿ ಇಂಡಿಗೋ ವಿಮಾನದಲ್ಲಿ ಕುಶನ್‌ಲೆಸ್ ಸೀಟ್ ವೈರಲ್ ಆಗಿದೆ.
ಪರಿಸಮಾಪ್ತಿ
ಇಂಡಿಗೋ ವಿಮಾನದಲ್ಲಿ ಕುಶನ್‌ಲೆಸ್ ಸೀಟ್ ಇರುವ ಫೋಟೋಕ್ಕೆ ಇಂಡಿಗೋ ಪ್ರತಿಕ್ರಿಯೆ ನೀಡಿದೆ.












Click it and Unblock the Notifications