Fact check: ಕೇದಾರನಾಥದಲ್ಲಿ ಡ್ರೆಸ್ ಕೋಡ್, ದಕ್ಷಿಣೆ, ಮೊಬೈಲ್ ಫೋನ್‌ಗಳಿಗೆ ನಿಷೇಧ? ಇದು ನಿಜವೇ..?
ಉತ್ತರಾಖಂಡದ ಪವಿತ್ರ ದೇಗುಲ ಕೇದಾರನಾಥದಲ್ಲಿ ಕೆಲ ನಿರ್ಬಂಧ ಹೇರಲಾಗಿದೆ ಎಂಬ ತಪ್ಪು ಸಂದೇಶಗಳನ್ನು ಹರಡಲಾಗಿದೆ. ಈ ವೈರಲ್ ಸಂದೇಶದ ಹಿಂದಿರುವ ಸತ್ಯವೇನು ತಿಳಿಯಿರಿ
ಉತ್ತರಾಖಂಡದ ಪವಿತ್ರ ದೇಗುಲ ಕೇದಾರನಾಥದಲ್ಲಿ ಹೊಸ ನಿರ್ಬಂಧಗಳ ಬಗ್ಗೆ ವರದಿಗಳು ಪ್ರಸಾರವಾಗುತ್ತಿವೆ. ಕೇದಾರನಾಥ ದೇವಸ್ಥಾನದಲ್ಲಿ ನಿಗದಿತ ಡ್ರೆಸ್ ಕೋಡ್ ನಿಷೇಧಿಸಲಾಗಿದೆ. ಜೊತೆಗೆ ದಕ್ಷಿಣೆ ನಿಷೇಧ ಮಾಡಲಾಗಿದೆ ಮತ್ತು ಮೊಬೈಲ್ ಫೋನ್‌ಗಳನ್ನು ನಿಷೇಧಿಸಲಾಗಿದೆ ಎಂಬಿತ್ಯಾದಿ ಸಂದೇಶಗಳೊಂದಿಗೆ ಸುದ್ದಿಗಳು ಹರಿದಾಡುತ್ತಿವೆ. ಆದರೆ ಈ ವರದಿಗಳು ತಪ್ಪಾಗಿದ್ದು ಇಂತಹ ಸಂದೇಶಗಳನ್ನು ನಂಬದಿರಲು ಸೂಚಿಸಲಾಗಿದೆ. ಈ ಕುರಿತು ದೇವಸ್ಥಾನ ಸಮಿತಿ ಸ್ಪಷ್ಟನೆ ನೀಡಿದೆ.
ಈ ಹೇಳಿಕೆಗೆ ಪ್ರತಿಕ್ರಿಯಿಸಿರುವ ಬದ್ರಿ ಕೇದಾರ್ ದೇವಾಲಯ ಸಮಿತಿ (ಬಿಕೆಟಿಸಿ) ಅಧ್ಯಕ್ಷ ಅಜೇಂದ್ರ ಅಜಯ್ ಈ ಸುದ್ದಿ ತಪ್ಪಾಗಿದೆ. ಜೊತೆಗೆ ಆಧಾರರಹಿತ ಎಂದು ಹೇಳಿದ್ದಾರೆ. ವಾಸ್ತವವಾಗಿ BKTC ಭಾರತದ ನಾಲ್ಕು ಪ್ರಮುಖ ದೇವಾಲಯಗಳನ್ನು ಅಧ್ಯಯನ ಮಾಡಲು ತಂಡವನ್ನು ಕಳುಹಿಸಿತ್ತು. ಚಾರ್ ಧಾಮ್ ಯಾತ್ರೆಯನ್ನು ಭಕ್ತರಿಗೆ ಹೆಚ್ಚು ಸುಲಭವಾಗಿ ಮತ್ತು ಅನುಕೂಲಕರವಾಗಿಸುವುದು ಅಧ್ಯಯನದ ಉದ್ದೇಶವಾಗಿದೆ. ವರದಿಯ ಆಧಾರದ ಮೇಲೆ ಬದರಿನಾಥ್ ಮತ್ತು ಕೇದಾರನಾಥದಲ್ಲಿ ವ್ಯವಸ್ಥೆಗಳನ್ನು ಸುಧಾರಿಸಲು ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ.

ಯಾತ್ರೆಯಲ್ಲಿ ದಕ್ಷಿಣೆಗೆ ಯಾವುದೇ ನಿಷೇಧವಿಲ್ಲ. ತೀರ್ಥ ಪುರೋಹಿತರು ಮತ್ತು ಪಂಡಿತರ ಹಕ್ಕಾಗಿರುವುದರಿಂದ ಬಿಕೆಟಿಸಿಯು ದಕ್ಷಿಣದಲ್ಲಿ ಯಾವುದೇ ರೀತಿಯಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ದೇವಾಲಯದ ಸಿಬ್ಬಂದಿ ಸಂಬಳ ಪಡೆಯುವ ನೌಕರರಾಗಿದ್ದು, ಭಕ್ತರಿಂದ ಯಾವುದೇ ಹಣವನ್ನು ತೆಗೆದುಕೊಳ್ಳುವುದಿಲ್ಲ. ಬದಲಿಗೆ ಭಕ್ತರಿಗಾಗಿ ದೇವಸ್ಥಾನಗಳಲ್ಲಿ ಕಾಣಿಕೆ ಪೆಟ್ಟಿಗೆಗಳನ್ನು ಅಳವಡಿಸಲಾಗುವುದು. ಆ ಕಾಣಿಕೆ ಪೆಟ್ಟಿಗಳಲ್ಲಿ ಅವರು ಕಾನೀಕೆ ಹಾಕಬಹುದು. ಆದರೂ ಬಿಕೆಟಿಸಿ ಭಕ್ತರ ಮೇಲೆ ದೇಣಿಗೆಗಾಗಿ ಒತ್ತಡ ಹೇರುವುದಿಲ್ಲ, ಏಕೆಂದರೆ ಇದು ನಂಬಿಕೆಯ ವಿಷಯವಾಗಿದೆ ಎಂದು ಅಜಯ್ ಭರವಸೆ ಹೇಳಿದ್ದಾರೆ.

ಡ್ರೆಸ್ ಕೋಡ್ ವಿಚಾರವಾಗಿ ಮಾತನಾಡಿದ ಅವರು, ಸಮಿತಿಯ ಸಂಬಳ ಪಡೆಯುವ ನೌಕರರಿಗೆ ನಿಗದಿತ ಡ್ರೆಸ್ ಕೋಡ್ ಇರುತ್ತದೆ ಎಂದರು. ಸೂಕ್ತ ಚರ್ಚೆಯ ನಂತರವೇ ಇದನ್ನು ಜಾರಿಗೊಳಿಸಲಾಗುವುದು. ಭಕ್ತಾದಿಗಳು ನೌಕರರನ್ನು ಸುಲಭವಾಗಿ ಗುರುತಿಸಲು ಮತ್ತು ಸಹಾಯ ಮತ್ತು ಮಾಹಿತಿಯನ್ನು ಪಡೆಯಲು ಸುಲಭವಾಗಲಿ ಎಂಬ ಉದ್ದೇಶದಿಂದ ನೌಕರರಿಗೆ ನಿಗದಿತ ಡ್ರೆಸ್ ಕೋಡ್ ಇರುತ್ತದೆ ಎಂದರು.
ಮೊಬೈಲ್ ಮತ್ತು ಯೂಟ್ಯೂಬ್ ನಿಷೇಧದ ಬಗ್ಗೆ, BKTC ಅಧ್ಯಕ್ಷರು ಸದ್ಯಕ್ಕೆ ಅಂತಹ ಯಾವುದೇ ನಿರ್ಧಾರವನ್ನು ತೆಗೆದುಕೊಂಡಿಲ್ಲ ಎಂದು ಹೇಳಿದ್ದಾರೆ. ಇದು ಇನ್ನೂ ಚರ್ಚೆಯಲ್ಲಿದೆ ಎಂದು ಅವರು ಹೇಳಿದರು. ಚಾರ್ ಧಾಮ್ ಯಾತ್ರೆಯಲ್ಲಿ ದರ್ಶನ್ ಕುರಿತು ಶೀಘ್ರದಲ್ಲೇ ಎಸ್‌ಒಪಿ ನೀಡಲಾಗುವುದು ಎಂದು ಅವರು ಮಾಹಿತಿ ನೀಡಿದರು.
ಈಗಾಗಲೇ ಕೇದಾರನಾಥ ಮತ್ತು ಬದರಿನಾಥ ದೇವಾಲಯಗಳನ್ನು ತೆರೆಯಲಾಗಿದೆ. ಏಪ್ರಿಲ್ 25 ಮತ್ತು ಏಪ್ರಿಲ್ 27 ರಂದು ಕ್ರಮವಾಗಿ ಯಮುನೋತ್ರಿ ಮತ್ತು ಗಂಗೋತ್ರಿ ದೇವಾಲಯಗಳು ತೆರೆಯಲಿವೆ. ಈ ಬಾರಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಚಾರ್ ಧಾಮ್‌ಗೆ ಭೇಟಿ ನೀಡುವ ಸಾಧ್ಯತೆ ಇದೆ.

Fact Check
ಕ್ಲೇಮು
ಕೇದಾರನಾಥದಲ್ಲಿ ಡ್ರೆಸ್ ಕೋಡ್, ದಕ್ಷಿಣೆ, ಮೊಬೈಲ್ ಫೋನ್‌ಗಳಿಗೆ ನಿಷೇಧ ಮಾಡಲಾಗಿದೆ.
ಪರಿಸಮಾಪ್ತಿ
ಕೇದಾರನಾಥದಲ್ಲಿ ಡ್ರೆಸ್ ಕೋಡ್, ದಕ್ಷಿಣೆ, ಮೊಬೈಲ್ ಫೋನ್‌ಗಳನ್ನು ನಿಷೇಧಿಸಲಾಗಿಲ್ಲ ಎಂದು ದೇವಸ್ಥಾನ ಸಮಿತಿ ಸ್ಪಷ್ಟನೆ ನೀಡಿದೆ.












Click it and Unblock the Notifications