Fact Check: ಹೆಂಡತಿ ಒಲ್ಲೆ ಎಂದಿದ್ದಕ್ಕೆ ತಾನೇ ಮೆಟರ್ನಿಟಿ ಫೋಟೊಶೂಟ್ ಮಾಡಿಸಿಕೊಂಡ ಪತಿ
ಹೆಂಡತಿ ನಿರಾಕರಿಸಿದ್ದಕ್ಕೆ ಎಂದಿದ್ದಕ್ಕೆ ಪತಿಯೊಬ್ಬ ತಾನೇ ಮೆಟರ್ನಿಟಿ ಫೋಟೊ ಶೂಟ್ ಮಾಡಿಸಿಕೊಂಡಿದ್ದಾರೆ ಎನ್ನುವ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಸಕತ್ ವೈರಲ್ ಆಗುತ್ತಿದೆ.
ಹೆಣ್ಣು ತಾನು ಗರ್ಭಿಣಿ ಎಂದು ತಿಳಿಸಿದ ಸಂದರ್ಭದಿಂದಲೇ ತಾಯ್ತನದ ಅನುಭವ ಪಡೆಯಲು ಆರಂಭಿಸಿದರೆ ಪುರುಷನು ಕೂಡ ತಂದೆಯಾಗುತ್ತಿರುವ ಆನಂದವನ್ನು ಪ್ರತಿ ಕ್ಷಣವೂ ಅನುಭವಿಸಲು, ಸಂಭ್ರಮಿಸಲು ಬಯಸುತ್ತಾನೆ.
ಹೆಂಡತಿ ತನ್ನ ಬೇಬಿ ಬಂಪ್ ಜೊತೆ ಫೋಟೋ ಶೂಟ್ ಮಾಡಿಸಿದರೆ ಗಂಡ ಆಕೆಯ ಜೊತೆಗೆ ನಿಂತು ಫೋಟೋಗಳನ್ನು ತೆಗೆಸಿಕೊಳ್ಳುವುದು ಸಹಜ.

ಆದರೆ ಮೆಟರ್ನಿಟಿ ಫೋಟೋ ಶೂಟ್ ಹೆಂಡತಿಯಿಲ್ಲದೆ ಗಂಡ ಮಾತ್ರ ಮಾಡಿಸಿಕೊಂಡ ಎಷ್ಟೋ ಉದಾಹರಣೆಗಳಿವೆ.
ಹೆಂಡತಿ ಮೆಟರ್ನಿಟಿ ಶೂಟ್ ಮಾಡಿಸುವುದು ಬೇಡ ಎಂದಿದ್ದಕ್ಕೆ ಪತಿ ಮೆಟರ್ನಿಟಿ ಫೋಟೊ ಶೂಟ್ ಮಾಡಿಸಿದ್ದಾನೆ ಎಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ಹಾಗೆಯೇ ಫೋಟೊಗ್ರಾಫರ್‌ಗೆ ಆಗಲೇ ಹಣ ನೀಡಲಾಗಿತ್ತು, ಹೆಂಡತಿ ಫೋಟೊಶೂಟ್‌ಗೆ ನಿರಾಕರಿಸಿದ ಕಾರಣ ತಾನೇ ಫೋಟೊಶೂಟ್ ಮಾಡಿಕೊಳ್ಳಲು ಮುಂದಾಗಿದ್ದರು ಎಂಬ ಊಹಾಪೋಹಗಳು ಹರಿದಾಡಿತ್ತು.
ಆದರೆ ಅದು ಸತ್ಯವಲ್ಲ, ಈತನ ಹೆಂಡತಿ ಗರ್ಭಿಣಿಯೂ ಅಲ್ಲ ಆತನ ಸ್ನೇಹಿತ ಫೋಟೊಗ್ರಾಫರ್ ಆಗಿದ್ದು, ಹಾಗೆಯೇ ಖುಷಿಗಾಗಿ ಇಂತಹ ಚಿತ್ರಗಳನ್ನು ಸೆರೆಹಿಡಿದಿದ್ದಾರೆ.
ಇದು ನಾಲ್ಕು ವರ್ಷಗಳ ಹಳೆಯ ಚಿತ್ರವಾಗಿದ್ದು, ಅಂದೇ ಡೈಲಿ ಮೇಲ್‌ನಲ್ಲಿ ಚಿತ್ರ ಪ್ರಕಟವಾಗಿತ್ತು. ಆ ಫೋಟೊ ಶೂಟ್ ಮಾಡಿಸುವಾಗ ಪೆರೇಜ್‌ಗೆ 51 ವರ್ಷ ವಯಸ್ಸು ಆಗಿತ್ತು.
ಹಾಗೆಯೇ ಅವರು ಇಬ್ಬರು ಮಕ್ಕಳ ತಂದೆಯಾಗಿದ್ದರು. ಮತ್ತೊಂದು ಮಗುವಿನ ನಿರೀಕ್ಷೆಯಲ್ಲಿರಲಿಲ್ಲ. ಆದರೆ ಫೋಟೊಗ್ರಾಫರ್ ತಮ್ಮ ಆಲ್ಬಮ್‌ನ್ನು ಇತ್ತೀಚೆಗೆ ಅಪ್‌ಡೇಟ್ ಮಾಡಿದ್ದು ಇಷ್ಟೆಲ್ಲಾ ಊಹಾಪೋಹಗಳಿಗೆ ಕಾರಣವಾಗಿದೆ. ಈ ಫೋಟೋಗನ್ನು ಮಾರ್ಟಿನ್ ವಿಲ್ಕೀಸ್ ಎಂಬುವವರು ಕ್ಲಿಕ್ಕಿಸಿದ್ದಾರೆ.

Fact Check
ಕ್ಲೇಮು
ಹೆಂಡತಿ ನಿರಾಕರಿಸಿದ್ದಕ್ಕೆ ತಾನೇ ಮೆಟರ್ನಿಟಿ ಫೋಟೊಶೂಟ್ ಮಾಡಿಸಿಕೊಂಡ ಪತಿ
ಪರಿಸಮಾಪ್ತಿ
ಪೆರೆಜ್ ಎಂಬುವವರು ಫೋಟೊಶೂಟ್ ಮಾಡಿಸಿಕೊಂಡಿದ್ದು ಅತ್ಯ ಆದರೆ ಅವರ ಸ್ನೇಹಿತ ಫೋಟೊಗ್ರಾಫರ್ ಆಗಿದ್ದು, ಖುಷಿಗಾಗಿ ಇಂತಹ ಫೋಟೊಶೂಟ್ ಮಾಡಿದ್ದಾರೆ












Click it and Unblock the Notifications