keyboard_backspace

Covid-22: ಡೆಲ್ಟಾಗಿಂತ ಅಪಾಯಕಾರಿ ಹೊಸ ಕೊರೊನಾ ರೂಪಾಂತರ: ತಜ್ಞರ ಎಚ್ಚರಿಕೆ

Google Oneindia Kannada News

ನವದೆಹಲಿ, ಆಗಸ್ಟ್‌ 25: ಭಾರತವು ಪ್ರಸ್ತುತ ಕೊರೊನಾ ವೈರಸ್‌ ಸೋಂಕಿನ ಮೂರನೇ ಅಲೆ ಆತಂಕದಲ್ಲಿದ್ದು, ಈ ಹಿನ್ನೆಲೆ ಈಗಾಗಲೇ ಅಗತ್ಯ ಕ್ರಮಗಳನ್ನು ಕೈಗೊಂಡಿದೆ. ಕೋವಿಡ್‌ನ ಮೂರನೇ ಅಲೆಯನ್ನು ಎದುರಿಸಲು ಬೇಕಾದ ಎಲ್ಲಾ ಅಗತ್ಯ ಮುನ್ನೆಚ್ಚರಿಕೆಯನ್ನು ಭಾರತ ಕೈಗೊಳ್ಳುತ್ತಿದೆ. ಈ ನಡುವೆ ಕೋವಿಡ್‌ನ ಹೊಸ ರೂಪಾಂತರದ ಬಗ್ಗೆ ತಜ್ಞರು ಎಚ್ಚರಿಕೆಯನ್ನು ನೀಡಿದ್ದಾರೆ.

ಕೊರೊನಾ ವೈರಸ್‌ ಸೋಂಕಿನ ಮೂರನೇ ಅಲೆಯ ಭೀತಿ ಮಧ್ಯೆ 2022 ರಲ್ಲಿ ಕೊರೊನಾ ವೈರಸ್‌ ಸೋಂಕಿನ ಹೊಸ ರೂಪಾಂತರವೊಂದು ಕಾಣಿಸಿಕೊಳ್ಳುವ ಸಾಧ್ಯತೆಗಳ ಬಗ್ಗೆ ಎಚ್ಚರಿಕೆ ನೀಡಿರುವ ತಜ್ಞರು, ಈ ಕೊರೊನಾ ವೈರಸ್‌ನ ಹೊಸ ರೂಪಾಂತರವು ಅತೀ ದೊಡ್ಡ ರೂಪಾಂತರವಾಗಲಿದೆ ಎಂದು ಹೇಳಿದ್ದಾರೆ. ಹಾಗೆಯೇ ಈ ಸಂಭವನೀಯ ರೂಪಾಂತರವನ್ನು ಕೋವಿಡ್‌-22 ಎಂದು ತಜ್ಞರು ಕರೆದಿದ್ದಾರೆ.

ಆಫ್ಘಾನ್‌ನಿಂದ ಬರುವ ಎಲ್ಲರಿಗೂ 14 ದಿನ ಕ್ವಾರಂಟೈನ್‌ ಕಡ್ಡಾಯ: ಆರೋಗ್ಯ ಸಚಿವಾಲಯಆಫ್ಘಾನ್‌ನಿಂದ ಬರುವ ಎಲ್ಲರಿಗೂ 14 ದಿನ ಕ್ವಾರಂಟೈನ್‌ ಕಡ್ಡಾಯ: ಆರೋಗ್ಯ ಸಚಿವಾಲಯ

ಈಗಾಗಲೇ ಕೊರೊನಾ ವೈರಸ್‌ನ ಮೂರನೇ ಅಲೆಯು ಯಾವ ತಿಂಗಳಿನಲ್ಲಿ ದೇಶದಲ್ಲಿ ಉಂಟಾಗಬಹುದು ಎಂಬ ಬಗ್ಗೆ ತಜ್ಞರು ತಮ್ಮ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಕೋವಿಡ್‌ ಮೂರನೇ ಅಲೆಯು ಅಕ್ಟೋಬರ್‌ ವೇಳೆಗೆ ದೇಶದಲ್ಲಿ ಕಾಣಿಸಿಕೊಳ್ಳಲಿದ್ದು, ಈ ಸಂದರ್ಭದಲ್ಲೇ ಕೋವಿಡ್‌ ಪ್ರಕರಣಗಳ ಸಂಖ್ಯೆ ಉತ್ತುಂಗಕ್ಕೆ ಏರಲಿದೆ ಎಂದು ತಜ್ಞರು ಹೇಳಿದ್ದಾರೆ. ಈ ನಡುವೆ ಕೊರೊನಾ ವೈರಸ್‌ನ ಮೂರನೇ ಅಲೆಯು ನವೆಂಬರ್‌ ವೇಳೆಗೆ ಉತ್ತುಂಗಕ್ಕೆ ಏರಲಿದೆ ಎಂದು ಕೂಡಾ ಕೆಲವು ಸೂಕ್ಷ್ಮ ರೋಗಾಣುಶಾಸ್ತ್ರಜ್ಞರು ಎಚ್ಚರಿಕೆ ನೀಡಿದ್ದಾರೆ. ಈ ನಡುವೆ ಹೊಸ ಕೋವಿಡ್‌ ರೂಪಾಂತರದ ಬಗ್ಗೆ ಎಚ್ಚರಿಕೆ ನೀಡಿರುವ ತಜ್ಞರು, ಕೋವಿಡ್‌ ಲಸಿಕೆ ಹಾಕಿಸಿಕೊಳ್ಳದ ಜನರು ಅಧಿಕ ಕೋವಿಡ್‌ ಸೋಂಕಿಗೆ ಒಳಗಾಗುತ್ತಾರೆ, ಅವರಿಂದ ಅಧಿಕ ಮಂದಿಗೆ ಹರಡುವ ಸಾಧ್ಯತೆಯಿದೆ ಎಂದು ಕೂಡಾ ತಿಳಿಸಿ‌ದ್ದಾರೆ

 ಹೊಸ ಕೋವಿಡ್‌ರೂಪಾಂತರ ಸೃಷ್ಟಿ ಬಗ್ಗೆ ತಜ್ಞರ ಎಚ್ಚರಿಕೆ

ಹೊಸ ಕೋವಿಡ್‌ರೂಪಾಂತರ ಸೃಷ್ಟಿ ಬಗ್ಗೆ ತಜ್ಞರ ಎಚ್ಚರಿಕೆ

2020 ರಲ್ಲಿ ಕೊರೊನಾ ವೈರಸ್‌ ಸೋಂಕಿನ ಹೊಸ ರೂಪಾಂತರವೊಂದು ಕಾಣಿಸಿಕೊಳ್ಳುವ ಸಾಧ್ಯತೆಗಳ ಬಗ್ಗೆ ಈಗಲೇ ಎಚ್ಚರಿಕೆಯನ್ನು ನೀಡಿರುವ ತಜ್ಞರು ಇದು ಭಾರೀ ಅಪಾಯಕಾರಿ ರೂಪಾಂತರವಾಗಲಿದೆ ಎಂದು ಹೇಳಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿರುವ ಜ್ಯೂರಿಚ್‌ನ ರೋಗನಿರೋಧಕ ತಜ್ಞ ಪ್ರೋಫೆಸರ್‌ ಸಾಯ್‌ ರೆಡ್ಡಿ, "ಪ್ರಸ್ತುತ ಎರಡು ಕೋವಿಡ್‌ ತಳಿಗಳ ಮಿಶ್ರಣವು ಇನ್ನೂ ಅಧಿಕ ಅಪಾಯಕಾರಿ, ಪ್ರಬಲ ಕೋವಿಡ್‌ ರೂಪಾಂತರದ ಸೃಷ್ಟಿಗೆ ಕಾರಣವಾಗಬಹುದು," ಎಂದು ಹೇಳಿರುವುದಾಗಿ ಮಾಧ್ಯಮಗಳು ವರದಿ ಮಾಡಿದೆ. "ಕೊರೊನಾ ವೈರಸ್‌ನ ಮೂಲ ತಳಿಯು ಹೊಸ ರೂಪಾಂತರಗಳ ಮಿಶ್ರಣಕ್ಕೆ ಕಾರಣವಾಗುವ ಹಿನ್ನೆಲೆ ಕೋವಿಡ್‌-22 ಎಂದು ಕರೆಯಲಾಗುವ ಹೊಸ, ಅತ್ಯಂತ ಅಪಾಯಕಾರಿ ಕೋವಿಡ್‌ ರೂಪಾಂತರದ ಸೃಷ್ಟಿಯಾಗುವ ಸಾಧ್ಯತೆ ಅತೀ ಅಧಿಕವಾಗಿದೆ," ಎಂದು ಕೂಡಾ ತಿಳಿಸಿದ್ದಾರೆ.

 ಡೆಲ್ಟಾಗಿಂತ ಅಧಿಕ ಪ್ರಬಲ ರೂಪಾಂತರ

ಡೆಲ್ಟಾಗಿಂತ ಅಧಿಕ ಪ್ರಬಲ ರೂಪಾಂತರ

"ನಾವು ಪ್ರಸ್ತುತ ದೇಶದಲ್ಲಿ ಕೋವಿಡ್‌ ಪರಿಸ್ಥಿತಿಯನ್ನು ಹೇಗೆ ನೋಡುತ್ತಿದ್ದೆವೆಯೋ ಅದಕ್ಕಿಂತ ಈ ಕೊರೊನಾ ವೈರಸ್‌ನ ಹೊಸ ರೂಪಾಂತರವಾಗಿರಲಿದೆ," ಎಂದು ಕೂಡಾ ಜ್ಯೂರಿಚ್‌ನ ರೋಗನಿರೋಧಕ ತಜ್ಞ ಪ್ರೋಫೆಸರ್‌ ಸಾಯ್‌ ರೆಡ್ಡಿ ತಿಳಿಸಿದ್ದಾರೆ. ಹಾಗೆಯೇ ಈ ಕೋವಿಡ್‌ನ ಹೊಸ ರೂಪಾಂತರವು ತೀವ್ರ ಅಪಾಯಕಾರಿ, ಇದು ಕೋವಿಡ್‌ನ ಡೆಲ್ಟಾ ರೂಪಾಂತರಕ್ಕಿಂತ ಅಧಿಕ ಅಪಾಯಕಾರಿ ಆಗಿರಲಿದೆ ಎಂದು ಕೂಡಾ ವರದಿ ತಿಳಿಸಿದೆ. "ಈ ಕೊರೊನಾ ವೈರಸ್‌ ಸೋಂಕಿನ ಹೊಸ ರೂಪಾಂತರದ ವಿರುದ್ದ ಜನರು ಹೋರಾಡ ಬೇಕಾದರೆ ಒಂದಕ್ಕಿಂತ ಅಧಿಕ ಡೋಸ್‌ ಕೋವಿಡ್‌ ಲಸಿಕೆಯನ್ನು ಪಡೆಯುವುದು ಅತ್ಯಗತ್ಯ," ಎಂದು ಕೂಡಾ ರೋಗನಿರೋಧಕ ತಜ್ಞ ಪ್ರೋಫೆಸರ್‌ ಸಾಯ್‌ ರೆಡ್ಡಿ ಹೇಳಿದ್ದಾರೆ.

ವಾಟ್ಸಾಪ್‌ನಲ್ಲಿ ಕೋವಿಡ್‌ ಲಸಿಕೆ ಸ್ಲಾಟ್‌ ಬುಕ್‌ ಮಾಡುವುದು ಹೇಗೆ!?ವಾಟ್ಸಾಪ್‌ನಲ್ಲಿ ಕೋವಿಡ್‌ ಲಸಿಕೆ ಸ್ಲಾಟ್‌ ಬುಕ್‌ ಮಾಡುವುದು ಹೇಗೆ!?

 ಜೀವನದುದ್ದಕ್ಕೂ ಕೋವಿಡ್‌ ಲಸಿಕೆಯೇ ಆಸರೆಯಾದೀತು!

ಜೀವನದುದ್ದಕ್ಕೂ ಕೋವಿಡ್‌ ಲಸಿಕೆಯೇ ಆಸರೆಯಾದೀತು!

ಕೊರೊನಾ ವೈರಸ್‌ ಸೋಂಕು ಆರಂಭವಾದಾಗ ವಿಶ್ವದಾದ್ಯಂತ ಕೋವಿಡ್‌ ವಿರುದ್ದದ ಹೋರಾಟಕ್ಕೆ ಲಸಿಕೆ, ಮದ್ದುಗಳನ್ನು ಕಂಡು ಹಿಡಿಯುವ ನಿಟ್ಟಿನಲ್ಲಿ ವಿಜ್ಞಾನಿಗಳು ಅಧಿಕ ಪ್ರಯತ್ನ ಮಾಡಿದ್ದಾರೆ. ಭಾರತ ದೇಶದಲ್ಲೂ ವಿಜ್ಞಾನಿಗಳು ಹಲವಾರು ಪ್ರಯೋಗಗಳನ್ನು ನಡೆಸಿದ್ದಾರೆ. ಇದರ ಪ್ರಯತ್ನವಾಗಿ ಈಗ ದೇಶದಲ್ಲಿ ಕೊರೊನಾ ವೈರಸ್‌ ಸೋಂಕಿನ ವಿರುದ್ದ ಕೋವಿಡ್‌ ಲಸಿಕೆಯನ್ನು ನೀಡಲಾಗುತ್ತಿದೆ. ಆದರೆ ಲಸಿಕೆ ನೀಡಿದ್ದಂತೆ ಕೋವಿಡ್‌ನ ರೂಪಾಂತರಗಳು ಕೂಡಾ ಸೃಷ್ಟಿಯಾಗಿದೆ. ಪ್ರಸ್ತುತ ಡೆಲ್ಟಾ ಕೋವಿಡ್‌ ವೈರಸ್‌ ವಿಶ್ವದಾದ್ಯಂತ ಕೋವಿಡ್‌ ಸೋಂಕು ಹೆಚ್ಚಳಕ್ಕೆ ಕಾರಣವಾಗಿದೆ. ಆದರೆ ಈಗ ತಜ್ಞರು ಡೆಲ್ಟಾಗಿಂತ ಪ್ರಬಲವಾದ ಹೊಸ ಕೋವಿಡ್‌ ರೂಪಾಂತರ ಇನ್ನು ಬರಲಿದೆ ಎಂದು ಹೇಳಿದ್ದಾರೆ. ಹಾಗೆಯೇ ತಜ್ಷರು ಈ ನಿಟ್ಟಿನಲ್ಲಿ ಕೋವಿಡ್‌ ಲಸಿಕೆಯನ್ನು ಪಡೆಯುವುದು ಅತ್ಯಗತ್ಯ ಎಂದಿದ್ದಾರೆ. ಹಾಗೆಯೇ ನಾವು ನಮ್ಮ ಜೀವನದುದ್ದಕ್ಕೂ ಕೋವಿಡ್‌ ಲಸಿಕೆಗೆ ಅವಲಂಭಿಸಬೇಕಾದ ಸ್ಥಿತಿ ಉಂಟಾಗುತ್ತದೆ ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ. ಆದರೆ ನಾವು ನಮ್ಮ ಜೀವನದುದ್ದಕ್ಕೂ ಲಸಿಕೆಯ ಮೇಲೆ ಅವಂಬಿತವಾಗಿ ಇರಲು ಸಾಧ್ಯವಿಲ್ಲ ಎಂದು ಕೂಡಾ ತಜ್ಞರು ಹೇಳಿದ್ದಾರೆ.

 ಈಗಿನ ಪರಿಸ್ಥಿತಿಗಿಂತ ಅಧಿಕ ಕೆಟ್ಟ ಪರಿಸ್ಥಿತಿ ಉಂಟಾಗಲಿದೆ

ಈಗಿನ ಪರಿಸ್ಥಿತಿಗಿಂತ ಅಧಿಕ ಕೆಟ್ಟ ಪರಿಸ್ಥಿತಿ ಉಂಟಾಗಲಿದೆ

''ಕೊರೊನಾ ವೈರಸ್‌ ಸೋಂಕಿನ ಹೊಸ ರೂಪಾಂತರ ಕೋವಿಡ್‌-22 ಪ್ರಸ್ತುತ ಪರಿಸ್ಥಿತಿಗಿಂತ ಅಧಿಕ ಕೆಟ್ಟದಾದ ಪರಿಸ್ಥಿತಿಯನ್ನು ತಂದೊಡ್ಡಲಿದೆ,'' ಎಂಬ ಎಚ್ಚರಿಕೆಯನ್ನು ರೋಗನಿರೋಧಕ ತಜ್ಞ ಪ್ರೋಫೆಸರ್‌ ಸಾಯ್‌ ರೆಡ್ಡಿ ನೀಡಿದ್ದಾರೆ. ಪ್ರಸ್ತುತ ಡೆಲ್ಟಾ ಕೋವಿಡ್‌ ರೂಪಾಂತರ ಅಧಿಕ ಪ್ರಸರಣಕ್ಕೆ ಕಾರಣವಾಗುತ್ತಿದೆ. ಕೋವಿಡ್‌ ಸೋಂಕನ್ನು ಹಿಮ್ಮೆಟ್ಟಿಸಿ ಕೋವಿಡ್‌ ನಿಯಮಗಳನ್ನು ಸಡಿಲಿಕೆ ಮಾಡಿದ್ದ ದೇಶಗಳು ಪ್ರಸ್ತುತ ಕೋವಿಡ್‌ನ ಡೆಲ್ಟಾ ದಾಳಿಗೆ ತುತ್ತಾಗಿರುವ ವರದಿಗಳನ್ನು ನಾವು ನೋಡಿದ್ದೇವೆ. ಈ ನಡುವೆ ಈಗಿನ ಪರಿಸ್ಥಿತಿಗಿಂತ ಅಧಿಕ ಕೆಟ್ಟ ಪರಿಸ್ಥಿತಿಯನ್ನು ಹೊಸ ಕೋವಿಡ್‌ ರೂಪಾಂತರ ಸೃಷ್ಟಿ ಮಾಡಲಿದೆ ಎಂದು ತಜ್ಞರು ಹೇಳಿದ್ದಾರೆ. "ನಾವು ಮುಂದಿನ ಹಲವು ವರ್ಷಗಳ ಕಾಲ ಕೋವಿಡ್‌ ಲಸಿಕೆ ನೀಡಿಕೆ ಅಭಿಯಾನವನ್ನು ಮುಂದುವರಿಸಬೇಕಾಗುತ್ತದೆ. ಆದರೆ ಕೋವಿಡ್‌ ರೂಪಾಂತರಗಳ ಸೃಷ್ಟಿ ಆಗುತ್ತಲ್ಲೇ ಇರುತ್ತದೆ," ಎಂದು ಪ್ರೋಫೆಸರ್‌ ಸಾಯ್‌ ರೆಡ್ಡಿ ಅಭಿಪ್ರಾಯಿಸಿದ್ದಾರೆ.

ಎಲ್ಲಾ ಕೋವಿಡ್‌ ರೂಪಾಂತರದಿಂದ ರಕ್ಷಿಸಬಲ್ಲ SARS2-38 ಪ್ರತಿಕಾಯ ಪತ್ತೆಎಲ್ಲಾ ಕೋವಿಡ್‌ ರೂಪಾಂತರದಿಂದ ರಕ್ಷಿಸಬಲ್ಲ SARS2-38 ಪ್ರತಿಕಾಯ ಪತ್ತೆ

"ಕೋವಿಡ್‌-22 ಅತ್ಯಧಿಕ ಅಪಾಯಕಾರಿ ಆದ ಹಿನ್ನೆಲೆ ವಿಶ್ವದ ಎಲ್ಲಾ ದೇಶಗಳು ಈಗಲೇ ಕೊರೊನಾ ವೈರಸ್‌ನ ಹೊಸ ರೂಪಾಂತರವನ್ನು ಎದುರಿಸಲು ಎಲ್ಲಾ ಸಿದ್ದತೆಯನ್ನು ಮಾಡಿಕೊಳ್ಳಬೇಕು. ಇಂತಹ ಹೊಸ ರೂಪಾಂತರವು ಬಂದರೆ, ಅದನ್ನು ಸಾಧ್ಯವಾದಷ್ಟು ಬೇಗ ನಾವು ಕಂಡು ಹಿಡಿಯಬೇಕು. ಹಾಗೆಯೇ ಕೋವಿಡ್ ಲಸಿಕೆ ತಯಾರಿಕ ಸಂಸ್ಥೆಗಳು ಕೋವಿಡ್‌ ಲಸಿಕೆ ಉತ್ಪಾದನಾ ವೇಗವನ್ನು ಇನ್ನಷ್ಟು ಅಧಿಕಗೊಳಿಸಬೇಕು. ಹೊಸ ಕೋವಿಡ್‌ ರೂಪಾಂತರವು ಅಪಾಯಕಾರಿ," ಎಂದು ಪ್ರೋಫೆಸರ್‌ ಸಾಯ್‌ ರೆಡ್ಡಿ ತಿಳಿಸಿದ್ದಾರೆ.

 ಈ ಕೋವಿಡ್‌-22 ರೂಪಾಂತರದ ಲಕ್ಷಣಗಳೇನು?

ಈ ಕೋವಿಡ್‌-22 ರೂಪಾಂತರದ ಲಕ್ಷಣಗಳೇನು?

ಇನ್ನು ಕೊರೊನಾ ವೈರಸ್‌ ಸೋಂಕಿನ ಈ ಹೊಸ ರೂಪಾಂತರ ಕೋವಿಡ್‌-22 ಈಗಿನ ಸ್ಥಿತಿಗಿಂತ ಅಧಿಕ ಘೋರವಾಗಿರಲಿದೆ ಎಂದು ತಜ್ಞರು ಹೇಳಿದ್ದಾರೆ. ಇನ್ನು ಕೋವಿಡ್‌ನ ಈ ಹೊಸ ಸಂಭವನೀಯ ರೂಪಾಂತರದ ಲಕ್ಷಣಗಳು ಸಾಮಾನ್ಯ ಕೋವಿಡ್‌ ರೋಗಿಗಳಲ್ಲಿ ಕಂಡು ಬರುವಂತೆ ಇರಲಿದೆ ಎನ್ನಲಾಗಿದೆ. ಜ್ವರ, ಕೆಮ್ಮು, ನೆಗಡಿ, ಶೀತ, ಮೈ ಕೈ ನೋವು, ತಲೆ ನೋವು ಇದರ ಸಾಮಾನ್ಯ ಲಕ್ಷಣವಾಗಿರಲಿದೆ. ಈ ಸೋಂಕು ಗಂಭೀರವಾದರೆ ಉಸಿರಾಟದ ಸಮಸ್ಯೆ ಕಾಣಿಸಿಕೊಳ್ಳಲಿದೆ ಎನ್ನಲಾಗಿದೆ. ಹಾಗೆಯೇ ಈ ಹೊಸ ರೂಪಾಂತರವು ಅಧಿಕ ಸಾಂಕ್ರಾಮಿಕವಾಗಿರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

(ಒನ್‌ ಇಂಡಿಯಾ ಸುದ್ದಿ)

English summary
Experts warn of new coronavirus variant COVID-22, says to be Risky than Delta. Read on.
Related News
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X