ಭವ್ಯಾ ಗೌಡ & ಕಿರಣ್ ರಾಜ್ ಅಭಿನಯದ ಕರ್ಣ ಧಾರಾವಾಹಿ 1 ವಾರದಲ್ಲೇ... Kannada Serial

ಕನ್ನಡ ಸೀರಿಯಲ್ ಲೋಕದಲ್ಲಿ ಹೊಸ ಹೊಸ ಧಾರಾವಾಹಿಗಳು ಬರುತ್ತಾ, ಹೊಸ ಹವಾ ಕ್ರಿಯೇಟ್ ಆಗಿ ಗಮನ ಸೆಳೆಯುತ್ತಿದೆ. 50 ವರ್ಷಗಳಿಗೂ ಹೆಚ್ಚು ಇತಿಹಾಸ ಹೊಂದಿರುವ ಕನ್ನಡ ಕಿರುತೆರೆ ಲೋಕದಲ್ಲಿ, ಕನ್ನಡ ಸೀರಿಯಲ್ ಬಗ್ಗೆ ಸಿಕ್ಕಾಪಟ್ಟೆ ಆಸಕ್ತಿ ಇದೆ. ಕನ್ನಡಿಗರು ಮಾತ್ರವಲ್ಲದೆ ತೆಲುಗು, ತಮಿಳು ಹಾಗೂ ಹಿಂದಿ ಭಾಷಿಕರು ಕೂಡ ಕನ್ನಡ ಧಾರಾವಾಹಿಗಳನ್ನು ನೋಡುತ್ತಾರೆ. ಅದರಲ್ಲೂ ಇತ್ತೀಚೆಗೆ ಶುರುವಾಗಿದ್ದ ಭವ್ಯಾ ಗೌಡ & ಕಿರಣ್ ರಾಜ್ ಅಭಿನಯದ ಕರ್ಣ ಸೀರಿಯಲ್ ಸಾಕಷ್ಟು ಗಮನ ಸೆಳೆಯುತ್ತಿದೆ. ಹೀಗಿದ್ದಾಗಲೇ, ಭವ್ಯಾ ಗೌಡ & ಕಿರಣ್ ರಾಜ್ ಅಭಿನಯದ ಕರ್ಣ ಧಾರಾವಾಹಿ 1 ವಾರದಲ್ಲೇ...

ಕನ್ನಡ ಸಿನಿಮಾ ಲೋಕವನ್ನು ಮೀರಿಸಿ, ಮುಂದೆ ಹೋಗುತ್ತಿದೆ ಕನ್ನಡ ಸೀರಿಯಲ್ ಅಂದ್ರೆ ಧಾರಾವಾಹಿ ಲೋಕ. ಯಾಕಂದ್ರೆ ಕನ್ನಡ ಸೀರಿಯಲ್ ಲೋಕದಲ್ಲಿ ಭಾರಿ ದೊಡ್ಡ ಮಟ್ಟದಲ್ಲಿ ಅವಕಾಶಗಳು ಇದ್ದು, ಸಾವಿರಾರು ಕುಟುಂಬಗಳು ಬದುಕುತ್ತಿವೆ. ಹಾಗೇ ಕನ್ನಡ ಸಿನಿಮಾಗಳಲ್ಲಿ ಅಭಿನಯ ಮಾಡಬೇಕು ಅಂತಾ ಬಯಸುವ ಎಷ್ಟೋ ಜನರಿಗೆ ಕನ್ನಡದ ಸೀರಿಯಲ್ ಮೂಲಕ ಅವಕಾಶ ಸಿಗುತ್ತದೆ ಮತ್ತೆ ಮುಂದೆ ಸಿನಿಮಾ ಮಾಡಲು ಕೂಡ ಬಲ ನೀಡುತ್ತದೆ. ಇಂತಹ ಸಮಯದಲ್ಲೇ ಭವ್ಯಾ ಗೌಡ & ಕಿರಣ್ ರಾಜ್ ಜೋಡಿ ಇದೀಗ ಕನ್ನಡದಲ್ಲಿ 'ಕರ್ಣ' ಸೀರಿಯಲ್ ಮೂಲಕ ಅಬ್ಬರಿಸುತ್ತಿದ್ದಾರೆ. ಹೀಗಿದ್ದಾಗಲೇ...

Zee Kannada Serial Karna Created New Record In First Week

ಕರ್ಣ ಧಾರಾವಾಹಿ 1 ವಾರದಲ್ಲೇ...

ಬಿಗ್‌ಬಾಸ್ ಮೂಲಕ ಭವ್ಯಾ ಗೌಡ ದೊಡ್ಡ ಹೆಸರು ಮಾಡಿಕೊಂಡು ಇದೀಗ ಹೊಸ ಹಾದಿಯಲ್ಲಿ ಸಾಗುತ್ತಾ ಇದ್ದಾರೆ. ಹಾಗೇ ಸಿನಿಮಾ ಮಾಡಲು ಹೋಗಿ ಕೈಸುಟ್ಟುಕೊಂಡ ಕಿರಣ್ ರಾಜ್ ಅವರು ಕೂಡ ಮತ್ತೊಮ್ಮೆ ಧಾರಾವಾಹಿ ಲೋಕಕ್ಕೆ ವಾಪಸ್ ಬಂದಿದ್ದಾರೆ. ಹೀಗೆ ಕನ್ನಡದ ಅತಿದೊಡ್ಡ ಚಾನಲ್ ಪೈಕಿ ಒಂದಾಗಿರುವ ಜೀ ಕನ್ನಡ ಸ್ಕ್ರೀನ್ ಮೇಲೆ 'ಕರ್ಣ' ಧಾರಾವಾಹಿ ಹೊಸ ಮಿಂಚು ಹರಿಸುತ್ತಿದೆ. 'ಕರ್ಣ' ಧಾರಾವಾಹಿ ಶುರು ಮಾಡುವ ಮೊದಲು ಹಲವರು ಅಡ್ಡಗಾಲು ಹಾಕಿ, ಕೆಡಿಸಲು ನೋಡಿದ್ದರು. ಇದೆಲ್ಲವನ್ನೂ ಮೀರಿ ಇದೀಗ 'ಕರ್ಣ' ಧಾರಾವಾಹಿ ಶುರು ಆಗಿರುವಾಗಲೇ ಏನಾಗಿದೆ ಗೊತ್ತಾ?

'ಕರ್ಣ' ಧಾರಾವಾಹಿ ಅಭಿಮಾನಿಗಳಿಗೆ ಇಲ್ಲಿ ಗಮನಿಸಿ...

ಹೌದು, ಭವ್ಯಾ ಗೌಡ & ಕಿರಣ್ ರಾಜ್ ಜೋಡಿ ಜೊತೆಗೆ ನಮ್ರತಾ ಗೌಡ ಕೂಡ ಮುಖ್ಯ ಭೂಮಿಕೆಯಲ್ಲಿ ನಟನೆ ಮಾಡಿರುವ 'ಕರ್ಣ' ಧಾರಾವಾಹಿ ರಿಲೀಸ್ ಆಗಿ 1 ವಾರದಲ್ಲೇ ಹೊಸ ಇತಿಹಾಸ ನಿರ್ಮಾಣ ಮಾಡಿದೆ. ಅಂದಹಾಗೆ ಜೂನ್‌ 16 ರಿಂದ ಪ್ರಾರಂಭ ಆಗಬೇಕಿದ್ದ 'ಕರ್ಣ' ಧಾರಾವಾಹಿಗೆ ಕೆಲವರು ಕೆಡಕು ಬಯಸಿ, ಅಡ್ಡಗಾಲು ಹಾಕಿದ್ದರು. ಆದರೆ ಕೊನೆಗೂ ಎಲ್ಲಾ ಅಡ್ಡಿ & ಆತಂಕ ಎದುರಿಸಿ 'ಕರ್ಣ' ಧಾರಾವಾಹಿ ಜುಲೈ 3ಕ್ಕೆ ಶುರುವಾಗಿತ್ತು, ಹೀಗೆ 'ಕರ್ಣ' ಧಾರಾವಾಹಿ ರಿಲೀಸ್ ಆದ 1 ವಾರದಲ್ಲಿ ಭಾರಿ ಭರ್ಜರಿ 10.2 ಟಿವಿಆರ್ ದಾಖಲಿಸಿ ಕನ್ನಡದ ನಂಬರ್ 1 ಸೀರಿಯಲ್ ಎನಿಸಿಕೊಂಡಿದೆ. ಅಲ್ಲದೆ ಭವ್ಯಾ ಗೌಡ & ಕಿರಣ್ ರಾಜ್ ಜೋಡಿ ಜೊತೆಗೆ ನಮ್ರತಾ ಗೌಡಗೆ ಕೂಡ ಭರ್ಜರಿ ಯಶಸ್ಸು ತಂದು ಕೊಡುತ್ತಿದೆ...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+